ತಮ್ಮ ಅಮೋಘ ಸಂಗೀತ ಸಾಧನೆಯ ಮೂಲಕ ಮಾನಸಿಕ ರೋಗಿಗಳ ಚಿಕಿತ್ಸೆಯ ಪವಾಡಕ್ಕೂ ಮುಂದಾಗಿರುವ ಸಿಂಚನಾ ಮೂರ್ತಿಯವರ ಸಾಧನೆಗಳ ಬಗ್ಗೆ ವಿವರವಾಗಿ ತಿಳಿಯೋಣವೇ......?

ಹೆಣ್ಣು ಅಕ್ಕರೆಯ ಮಗಳಾಗಿ, ನೆಚ್ಚಿನ ಸೊಸೆಯಾಗಿ, ನಲುಮೆಯ ಹೆಂಡತಿಯಾಗಿ, ಮಮತೆಯ ಮಾತೆಯಾಗಿ, ಅಕ್ಕ, ತಂಗಿ, ಸ್ನೇಹಿತೆ ಹೀಗೆ ಎಲ್ಲವೂ ಆಗಿ ಸಂಸಾರದ ಜೊತೆಗೆ ಹೊರಗೆ ಕೆಲಸಕ್ಕೆ ದುಡಿಯುವ ಉದ್ಯೋಗಸ್ಥ ವನಿತೆಯೂ ಆಗಿರುತ್ತಾಳೆ ಹಾಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುವ ಸಾಧಕಿಯೂ ಆಗಿರುತ್ತಾಳೆ. ಹೆಣ್ಣು ಎಂದರೆ ಶಕ್ತಿ, ಹೊರಗೆ ದುಡಿದು ಮತ್ತೆ ಮನೆಗೆ ಬಂದು ಆಯಾಸವನ್ನು ತೋರಿಸಿಕೊಳ್ಳದೆ ನಗು ಮೊಗ ಹೊತ್ತು ಮನೆಯ ಕೆಲಸವನ್ನು ಮಾಡಿ, ಮನೆಯವರ ನಗುವಲ್ಲಿ ತನ್ನ ಸಂತೋಷವನ್ನು ಕಾಣುವ ಹೆಣ್ಣಿಗೆ ಹೆಣ್ಣೇ ಸಾಟಿ!

ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಕನ್ನಡ ಅಮೋಘ ಸಾಧಕಿಯರ ಸಾಧನೆಯನ್ನು ನೆನೆದು, ಇಲ್ಲಿ ಹೇಳುತ್ತಿರುವುದು ಅಪ್ಪಟ ದೇಸಿ ಪ್ರತಿಭೆ, ಹೆಮ್ಮೆಯ ಕನ್ನಡತಿ ಸಿಂಚನಾ ಮೂರ್ತಿಯವರ ಬಗ್ಗೆ.

ಸಿಂಚನಾ ಮೂರ್ತಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಸಮೀಪವಿರುವ ಜೈಪುರ ಎಂಬ ಗ್ರಾಮದಲ್ಲಿ, ಜನವರಿ 1, 1982ರಂದು ಜನಿಸಿದರು. ಅವರು ಬಹುಮುಖ ಪ್ರತಿಭೆ, ಇವರು ಇಂಗ್ಲಿಷ್‌ ಲಿಟರೇಚರ್‌ ನಲ್ಲಿ ಗೋಲ್ಡ್ ಮೆಡಲಿಸ್ಟ್. ಆದರೂ ಕನ್ನಡದ ಬಗ್ಗೆ ಇವರಿಗಿರುವ ಪ್ರೀತಿ ಇವರ ಸಾಧನೆಯಿಂದ ಗೊತ್ತಾಗುತ್ತದೆ.

IMG-20240114-WA0005

ಅಸಾಧಾರಣ ಪ್ರತಿಭೆ

ಇವರು ಅತ್ಯುತ್ತಮ ಹಾಡುಗಾರ್ತಿ, ಅಷ್ಟೇ ಅಲ್ಲದೆ, ಭರತನಾಟ್ಯ ನೃತ್ಯದ ಜೊತೆಗೆ ಕಥಕ್‌ ನೃತ್ಯಗಾರ್ತಿಯೂ ಹೌದು. ಜೊತೆಗೆ ಅನೇಕ ಮಹಿಳಾಪರ ನೃತ್ಯ ಕಾರ್ಯಕ್ರಮ ನಿರ್ಮಿಸಿ ನಿರ್ದೇಶಿಸಿದ್ದಾರೆ.

ಇವರು ಸಂಗೀತದ ಮೂಲಕ ಮಾನಸಿಕ ರೋಗಗಳಿಗೆ ಚಿಕಿತ್ಸೆ ಕೊಡುತ್ತಾರೆ. ಇದನ್ನು ಸೈಕೋಥೆರಪಿ ಎನ್ನುತ್ತಾರೆ. ಇವರು ಶ್ರೀ ಮ್ಯೂಸಿಕಲ್ ಅಕಾಡೆಮಿ ಸಂಗೀತ ಶಾಲೆ ಹುಟ್ಟು ಹಾಕಿ ಅನೇಕರಿಗೆ ಸಂಗೀತ ತರಬೇತಿ ನೀಡುತ್ತಿದ್ದಾರೆ. ಹಾಗೆಯೇ ವಿದೇಶದಲ್ಲಿ ಇರುವವರಿಗೆ ಕೂಡ ಅನ್‌ ಲೈನ್‌ ಮೂಲಕ ತರಬೇತಿ ನೀಡುತ್ತಾರೆ. ಮನೆ ಮನಗಳಲ್ಲಿ ಸಂಗೀತ ಮೊಳಗಬೇಕು ಎನ್ನುವುದು ಇವರ ಮುಖ್ಯ ಧ್ಯೇಯ.

ಸಂಗೀತದ ಪರಿಪೂರ್ಣತೆಗಿಂತ ಆತ್ಮ ಸಂತೋಷವೇ ಮುಖ್ಯ ಎಂದು ಇವರು ಹೇಳುತ್ತಾರೆ. ಹಾಗಾಗಿ ಸಂಗೀತ ಕಲಿಯಲು ಆಸಕ್ತಿ ಇರುವ ಪ್ರತಿಯೊಬ್ಬರಿಗೂ ಸಂಗೀತ ಕಲಿಸುತ್ತಾರೆ. ಇವರ ಬಳಿ 80 ವರ್ಷದ ವೃದ್ಧರು ಸಂಗೀತ ಕಲಿಯುವ ವಿದ್ಯಾರ್ಥಿಗಳಾಗಿದ್ದಾರೆ.

IMG-20240114-WA0006

ಸಂಗೀತ ಸಾಧನೆ

ಸಿಂಚನಾ ಅವರ ಸಂಗೀತ ಸಾಧನೆಗೆ ಕನ್ನಡ ಸುಗಮ ಸಂಗೀತಕ್ಕೆ ರಾಜ್ಯ ಪ್ರಶಸ್ತಿ ಮತ್ತು ಯುವ ಚೇತನ ಪ್ರಶಸ್ತಿ ದೊರಕಿದೆ. ಇವರು ರೇಡಿಯೋ ಜಾಕಿ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಆಲ್ ಇಂಡಿಯಾ ರೇಡಿಯೋದಲ್ಲಿಯೂ ಕೂಡ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಭಾರತೀಯ ಭಾಷೆಗಳ, ದೇಸಿ ಕೀಬೋರ್ಡ್‌ ಕಣವಾದ ಫೋನೆಟಿಕ್ಸ್ ಪ್ರೈವೇಟ್‌ ಲಿಮಿಟೆಡ್‌ ನಲ್ಲಿ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇವರು ಒಂದು ಯೂಟ್ಯೂಬ್‌ ಚಾನೆಲ್ ಮಾಡಿ ಅದರಲ್ಲಿ ಓದಲು ಆಗದೇ ಇರುವಂತಹ ಜನರಿಗೆ ಅನುಕೂಲವಾಗುವಂತೆ ಇವರದೇ ಧ್ವನಿಯಲ್ಲಿ ಗುರುಚರಿತ್ರೆಯ ಅಧ್ಯಾಯಗಳನ್ನು ಹೊರ ತಂದಿದ್ದಾರೆ. ಪುಸ್ತಕವನ್ನು ಓದುವುದಕ್ಕಿಂತ ಇವರ ಧ್ವನಿಯಲ್ಲಿ ಕೇಳಿದಾಗ ಭಕ್ತಿ ತುಸು ಹೆಚ್ಚಾಗುತ್ತದೆ ಎಂದರೆ ತಪ್ಪಾಗಲಾರದು. ಜೊತೆಗೆ ನಾವೇ ಓದಿದಂತೆ ಅನಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ