ಸರಸ್ವತಿ*

ದಕ್ಷಿಣ ಭಾರತದ ಖ್ಯಾತ ಸಂಗೀತ ಸಂಸ್ಥೆ ‘ಲಹರಿ ಮ್ಯೂಸಿಕ್’ ಇದೀಗ ಇಬ್ಬರು ದಿಗ್ಗಜರನ್ನು ಮತ್ತೆ ಒಟ್ಟುಗೂಡಿಸುತ್ತಿದೆ. ಎ.ಆರ್. ರೆಹಮಾನ್ ಮತ್ತು ಪ್ರಭುದೇವ ಅವರನ್ನು ಬರೋಬ್ಬರಿ 29 ವರ್ಷಗಳ ನಂತರ ಲಹರಿ ಸಂಸ್ಥೆ ಕರೆತರುತ್ತಿದೆ. 'ಮೂನ್‌ವಾಕ್'‌ ಸಿನಿಮಾದ ಸಂಗೀತ ಹಕ್ಕುಗಳನ್ನು ಈ ಸಂಸ್ಥೆ ಅಧಿಕೃತವಾಗಿ ಪಡೆದುಕೊಂಡಿದೆ.

ಬಿಹೈಂಡ್‌ವುಡ್ಸ್‌ನ ಮನೋಜ್ ನಿರ್ಮಲಾ ಶ್ರೀಧರನ್ ಅವರ ನೇತೃತ್ವದಲ್ಲಿ 'ಮೂನ್‌ವಾಕ್' ಸಿನಿಮಾ ನಿರ್ಮಾಣವಾಗುತ್ತಿದೆ. ಸಂಗೀತ, ನೃತ್ಯ ಮತ್ತು ಕೌಟುಂಬಿಕ ಕಥಾಹಂದರದ ಸಿನಿಮಾ ಇದಾಗಿದ್ದು, ಆಸ್ಕರ್ ಪ್ರಶಸ್ತಿ ವಿಜೇತ ಮಾಂತ್ರಿಕ ಎ.ಆರ್. ರೆಹಮಾನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಆ ಕಾರಣಕ್ಕೂ ನಿರೀಕ್ಷೆ ದುಪ್ಪಟ್ಟಾಗಿದೆ. ‌

*ಲಹರಿ ಮನೋಹರನ್ ನಾಯ್ಡು ಹೇಳುವುದೇನು?*

ಈ ಸಹಯೋಗದ ಕುರಿತು ಮಾತನಾಡಿದ ಲಹರಿ ಮ್ಯೂಸಿಕ್ ಸಂಸ್ಥಾಪಕ ಮನೋಹರನ್ ನಾಯ್ಡು, “ಇದು ನಮ್ಮ ಸಂಗೀತ ಉದ್ಯಮದ 50ನೇ ವರ್ಷವಾಗಿದೆ. 'ಮೂನ್‌ವಾಕ್' ಚಿತ್ರದ ಸಂಗೀತ ಪಾಲುದಾರರಾಗಿರುವುದು ಸಂತೋಷ ತಂದಿದೆ. 'ಮೂನ್‌ವಾಕ್' ಸಿನಿಮಾದ ಹಾಡುಗಳು ಚಿತ್ರದ ಹೃದಯ ಬಡಿತದಂತಿವೆ. ಎ.ಆರ್. ರೆಹಮಾನ್ ಅವರ ಅಸಾಮಾನ್ಯ ಸಂಗೀತ ಜಗತ್ತಿನ ಮೂಲೆ ಮೂಲೆಗೆ ತಲುಪಲಿದೆ. ನಾನು 5 ಹಾಡುಗಳನ್ನು ಕೇಳಿದ್ದೇನೆ. ಅವೆಲ್ಲವೂ ವಿಭಿನ್ನ ಮತ್ತು ವಿಶಿಷ್ಟವಾಗಿವೆ. ಮನೋಜ್ ಎನ್.ಎಸ್. ಅವರ ಪ್ರಾಮಾಣಿಕ ಪರಿಶ್ರಮ ಮೆಚ್ಚುವಂಥದ್ದು. ಈ ಕಾಂಬಿನೇಷನ್‌ನ ಆಲ್ಬಂ ಬ್ಲಾಕ್‌ಬಸ್ಟರ್ ಆಗಲಿದೆ” ಎಂದರು.

moonwalk 1

*ನಿರ್ಮಾಪಕರ ಮಾತು*

ಬಿಹೈಂಡ್‌ವುಡ್ಸ್‌ ಸಂಸ್ಥಾಪಕ ಮತ್ತು ಸಿಇಒ ಮನೋಜ್ ನಿರ್ಮಲಾ ಶ್ರೀಧರನ್ ಮಾತನಾಡಿ, “ದಕ್ಷಿಣ ಭಾರತದ ಅತ್ಯಂತ ವಿಶ್ವಾಸಾರ್ಹ ಮತ್ತು ಪ್ರಸಿದ್ಧ ಸಂಗೀತ ಲೇಬಲ್‌ಗಳಲ್ಲಿ ಒಂದಾದ ಲಹರಿ ಮ್ಯೂಸಿಕ್, ಎ.ಆರ್. ರೆಹಮಾನ್ ಅವರ ಮೊದಲ ಆಲ್ಬಮ್ 'ರೋಜಾ' ಅನ್ನು ಪರಿಚಯಿಸಿದ ಹೆಗ್ಗಳಿಕೆ ಹೊಂದಿದೆ. ಅದು ಭಾರಿ ಯಶಸ್ಸು ಗಳಿಸಿ, ಭಾರತೀಯ ಸಂಗೀತದಲ್ಲಿ ದೊಡ್ಡ ಮೈಲಿಗಲ್ಲಾಯಿತು. ಇದೀಗ ಮತ್ತೆ ಅದೇ ಸಂಗೀತ ಮಾಂತ್ರಿಕರ ಜೊತೆಗೆ ಕೈ ಜೋಡಿಸಿದ್ದೇವೆ"

ಲಹರಿ ಈ ಹಿಂದೆ 'ಜೆಂಟಲ್‌ಮನ್' ಮತ್ತು 'ಕಾದಲನ್' ನಂತಹ ಮೈಲಿಗಲ್ಲು ಆಲ್ಬಮ್‌ಗಳನ್ನು ಸಹ ಬಿಡುಗಡೆ ಮಾಡಿತ್ತು. ಇದೀಗ ಎ.ಆರ್. ರೆಹಮಾನ್ ಮತ್ತು ಪ್ರಭುದೇವ ಅವರೊಂದಿಗಿನ ಮೂರನೇ ಸಹಯೋಗವಾಗಿದೆ.

*ಮೂನ್‌ಲೈಟ್‌ ಪಾತ್ರವರ್ಗ..*

ಈ ಚಿತ್ರದಲ್ಲಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಯೋಗಿ ಬಾಬು, ಅಜು ವರ್ಗೀಸ್, ಅರ್ಜುನ್ ಅಶೋಕನ್, ಸ್ಯಾಟ್ಜ್, ನಿಶ್ಮಾ ಚೆಂಗಪ್ಪ, ಸುಷ್ಮಿತಾ ನಾಯಕ್, ರೆಡಿನ್ ಕಿಂಗ್ಸ್ಲಿ, ಮೊಟ್ಟೈ ರಾಜೇಂದ್ರನ್, ಲೊಲ್ಲು ಸಭಾ ಸ್ವಾಮಿನಾಥನ್, ಡಾ. ಸಂತೋಷ್ ಜಾಕೋಬ್, ದೀಪಾ ಶಂಕರ್ ಮತ್ತು ರಾಮ್‌ಕುಮಾರ್ ನಟರಾಜನ್ ಸೇರಿ ಹಿರಿ ಕಿರಿ ಕಲಾವಿದರ ತಂಡವಿದೆ.

*ನವೆಂಬರ್‌ 19ಕ್ಕೆ ಮೊದಲ ಹಾಡು*

ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ವೇಗವಾಗಿ ನಡೆಯುತ್ತಿದ್ದು, 2026 ಲಹರಿ ಮ್ಯೂಸಿಕ್‌ನ ಸಹಯೋಗದೊಂದಿಗೆ ಚಿತ್ರದ ಆಡಿಯೋ ಬಿಡುಗಡೆ ಆಗಲಿದೆ. ಅದಕ್ಕೂ ಮೊದಲು ಈ ಚಿತ್ರದ ಮೊದಲ ಮ್ಯೂಸಿಕ್ ವಿಡಿಯೋ 'Storm - The Moonwalk’s Anthem' ಬುಧವಾರ, ನವೆಂಬರ್ 19 ರಂದು ಲಹರಿ ಮ್ಯೂಸಿಕ್ ಮತ್ತು ಬಿಹೈಂಡ್‌ವುಡ್ಸ್‌ ಟಿವಿ ಯೂಟ್ಯೂಬ್ ಚಾನೆಲ್‌ಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ