ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಸೇರಿ ಒಟ್ಟು ನಾಲ್ವರೂ ಸೇಫ್ ಆಗಿ ಲ್ಯಾಂಡ್ ಆಗಿದ್ದಾರೆ. ಹೀಗೆ ಲ್ಯಾಂಡ್ ಆದ ಸುನಿತಾ ಅವರನ್ನೇ ಆಗ್ಲಿ, ವಿಲ್ಮೋರ್ ಅವರನ್ನೇ ಆಗ್ಲಿ ಲ್ಯಾಂಡ್ ಆದ್ಮೇಲೆ ಹೊರಗೆ ಮುಖ ತೋರಿಸಿಲ್ಲ. ಹೆಲ್ಮೆಟ್ ಕೂಡಾ ತೆಗೀಲಿಲ್ಲ. ಯಾಕಂದ್ರೆ.. ಅವರು ಈಗ ಭೂಮಿಗೆ ಹೊಸಬರು. ಹೌದು, ಒಂದು ಮಗುವನ್ನ ಹೇಗೆ ತಾಯಿಯ ಗರ್ಭದಿಂದ ಹೊರಗೆ ಬಂದಾಗ ಇಂಕ್ಯುಬಿಲೇಟರಿನಲ್ಲಿಟ್ಟು ಸೇಫ್ ಮಾಡಿ, ಆಮೇಲೆ ತಾಯಿಯ ಕೈಗೆ ಕೊಡ್ತಾರೋ.. ಅದಕ್ಕಿಂತ ಹೆಚ್ಚು ಕೇರ್ ತಗೋಬೇಕು. ಯಾಕೆ ಅಂದ್ರೆ ಅವರು ಒಂದಲ್ಲ.. ಎರಡಲ್ಲ.. 286 ದಿನ, ಭೂಮಿ ಮೇಲೆ ಇರಲಿಲ್ಲ. ಅವರನ್ನ ಡೈರೆಕ್ಟ್ ಆಗಿ ಹೂಸ್ಟನ್ ಸಿಟಿಯಲ್ಲಿರೋ ರಿ-ಹ್ಯಾಬಿಟೇಷನ್ ಸೆಂಟರ್‌ಗೆ ಕರ್ಕೊಂಡ್ ಹೋಗ್ತಾರೆ. ಅಲ್ಲಿ 45 ದಿನ ಎಕ್ಸ್ ಟ್ರಾ ಕೇರ್ ತಗೊಂಡು ನೋಡ್ಕೊಳ್ತಾರೆ.
ಕಾಲುಗಳಿಗೆ ಶಕ್ತಿ ಬೇಕು :
ಸುನಿತಾ ವಿಲಿಯಮ್ಸ್ ಅವರು ಗುರುತ್ವಾಕರ್ಷಣಾ ಶಕ್ತಿಯಲ್ಲಿ ಇಲ್ಲದೇ ಇದ್ದ ಕಾರಣ, ಅವರ ಕಾಲುಗಳಲ್ಲಿ ರಕ್ತ ಸಂಚಾರವೂ ಇರಲಿಲ್ಲ. ಕಾಲುಗಳಿಗೆ ಮೊದಲು ರಕ್ತ ಪೂರೈಕೆ ಆಗಬೇಕು. ಅಂಗಾಲುಗಳಿಗೆ, ಮಂಡಿಗಳಿಗೆ ಶಕ್ತಿ ತುಂಬಬೇಕು. ಅವರು ಮೊದಲು ಮೃದುವಾದ ನೆಲ ಅಥವಾ ಹೊದಿಕೆಯ ಮೇಲೆ ನಡೆಯಬೇಕು. ದೇಹವನ್ನ ಬ್ಯಾಲೆನ್ಸ್ ಮಾಡಬೇಕು. ವಾಕರ್ ಅಥವಾ ವಾಕಿಂಗ್ ಸ್ಟಿಕ್ಕುಗಳಲ್ಲಿ ನಡೆಯುವುದು ಪ್ರಾಕ್ಟೀಸ್ ಮಾಡಬೇಕು. ಮತ್ತೆ ಮೊದಲಿನಂತಾಗಲೂ ವರ್ಷಗಳೇ ಬೇಕು.
ನೀರು ಜಾಸ್ತಿ ಕುಡಿಯಂಗಿಲ್ಲ :
ಗುರುತ್ವಾಕರ್ಷಣೆ ಇಲ್ಲದ ಪ್ರದೇಶದಲ್ಲಿದ್ದ ನಾಲಗೆಯೇ ಬೇರೆ. ಇಲ್ಲಿನ ಭೂಮಿಯ ವಾತಾವರಣದ ನಾಲಗೆಯೇ ಬೇರೆ. ಸರಾಗವಾಗಿ ಮಾತನಾಡುವುದಕ್ಕೆ ಸಾಧ್ಯವಾಗುವಂತೆ ನಾಲಗೆ ಕ್ರಮಬದ್ಧಗೊಳ್ಳೋಕೆ ಕೆಲವು ದಿನಗಳೇ ಬೇಕು. ನೀರನ್ನೂ ಹನಿಹನಿಯಾಗಿ ಕುಡಿಸಬೇಕು. ಫುಡ್ ಕೂಡ ಅಷ್ಟೇ.
ಸಡನ್ ಆಗಿ ಜಾಸ್ತಿ ಸೌಂಡ್ ಆಗಲ್ಲ :
ಕಿವಿಯ ಒಳಪದರದ ಸಾಮರ್ಥ್ಯ ಪರೀಕ್ಷೆಯಾಗುತ್ತದೆ. ಅದು ಸರಿ ಹೋಗುವುದಕ್ಕೂ ಕೆಲವು ದಿನಗಳು ಬೇಕು. ಜೋರು ಧ್ವನಿಯ ಶಬ್ಧಗಳನ್ನ, ಕೇಳಿಸುವ ಪ್ರಕ್ರಿಯೆ ಹಂತ ಹಂತವಾಗಿ ನಡೆಯುತ್ತೆ.
ಕಣ್ಣುಗಳಿಗೆ ಚಿಕಿತ್ಸೆ:
ದಿನಕ್ಕೆ 16 ಸೂರ್ಯೋದಯ, 16 ಸೂರ್ಯಾಸ್ತ ನೋಡಿರುವ ಕಣ್ಣುಗಳು, ವಿಕಿರಣ ಮತ್ತು ಕೃತಕ ಬೆಳಕಿಗೆ ಫಿಕ್ಸ್ ಆಗಿರುತ್ತವೆ. ಆ ಕಣ್ಣುಗಳ ಶಕ್ತಿಯೂ ಹಿಂದಿನಂತಾಗುವುದಕ್ಕೆ ಕೆಲ ದಿನಗಳು ಬೇಕು. ಸೂರ್ಯನ ಕಿರಣಗಳು ಏಕಾಏಕಿ ಕಣ್ಣಿಗೆ ತಗುಲಬಾರದು.
ಚರ್ಮಕ್ಕೂ ಚಿಕಿತ್ಸೆ:
ಚರ್ಮದ ವಿಷಯಕ್ಕೆ ಬಂದರೆ, ಅದೂ ಕೂಡಾ ಸಮಸ್ಯೆಯೇ. ಚರ್ಮ ಸುಲಿಯುವುದಕ್ಕೆ ಶುರುವಾಗಿರುತ್ತದೆ. ಚರ್ಮದ ಆರೈಕೆ ತುಂಬಾ ಮುಖ್ಯ. ಹೊಸ ಚರ್ಮ ಬೆಳೆಯವುದಕ್ಕೆ ಕಾಲಾವಕಾಶ ಬೇಕು.
ಹೃದಯದ ಬಡಿತ ಚಿಕಿತ್ಸೆ :
ಬಾಹ್ಯಾಕಾಶದಲ್ಲಿ ಎದೆ ಬಡಿತ ಇಲ್ಲಿಗಿಂತ ಡಬಲ್ ಆಗಿರುತ್ತೆ. ಮತ್ತೆ ನಾರ್ಮಲ್ ಅಂದ್ರೆ 72ರಿಂದ 80ರಷ್ಟು ಮಿಡಿಯುವ ಹಂತಕ್ಕೆ ತರುವುದು ದೊಡ್ಡ ಚಾಲೆಂಜ್. ಅವರ ಹಾರ್ಟ್ ಬೀಟ್ಸ್, ನಾಡಿ ಮಿಡಿತ ಅಂದ್ರೆ ಪಲ್ಸ್ ಬೀಟ್‌ಗಳನ್ನ ಕ್ಷಣ ಕ್ಷಣವೂ ಮಾನಿಟರ್ ಮಾಡಬೇಕು.
ಮೂಳೆಗಳಿಗೂ ಟ್ರೀಟ್ಮೆಂಟ್ :
ಬಾಹ್ಯಾಕಾಶದಲ್ಲಿದ್ದವರಿಗೆ ತಿಂಗಳಿಗೆ ಶೇ.1ರಷ್ಟು ಮೂಳೆ ಅಥವಾ ಸ್ನಾಯುಗಳು ಸವೆಯುವುದು ಸಾಮಾನ್ಯ. ಸುನಿತಾ ಅವರು 9 ತಿಂಗಳು ಬಾಹ್ಯಾಕಾಶದಲ್ಲಿದ್ದು ಬಂದಿದ್ದಾರೆ. ಸಹಜವಾಗಿಯೇ ಶೇ.9ರಿಂದ ಶೇ.10ರಷ್ಟು ಮೂಳೆ ಸವೆತ ಆಗಿರುತ್ತೆ. ಆದರೆ ಗುರುತ್ವಾಕರ್ಷಣೆ ಇಲ್ಲದೆ ಇರೋ ಕಾರಣ, ಅದು ಗೊತ್ತಾಗಿರಲ್ಲ. ಈಗ ರಿ-ಹ್ಯಾಬಿಟೇಷನ್ ಸೆಂಟರಿನಲ್ಲಿ ಒಂದು ಹಂತದ ಚೇತರಿಕೆ ಆದ ಮೇಲೆ ದೇಹಕ್ಕೆ ಬಲ ತುಂಬುವ ಚಿಕಿತ್ಸೆಯೂ ಶುರುವಾಗುತ್ತದೆ. ವ್ಯಾಯಾಮ, ಆಹಾರ, ಔಷಧಿ ನೀಡಿ ಮತ್ತೆ ಮೊದಲಿನಂತೆ ಆಗಲು ಸಹಾಯ ಮಾಡಲಾಗುತ್ತೆ. ಸದ್ಯಕ್ಕೆ ಸುನಿತಾ ವಿಲಿಯಮ್ಸ್ ಅವರಿಂದ ಒಂದು ಪೇಪರ್ ಕೂಡಾ ಎತ್ತಿಕೊಳ್ಳೋದಿಕ್ಕೆ ಆಗೋದಿಲ್ಲ. ಇದೆಲ್ಲದರ ಜೊತೆಗೆ ಮಾನಸಿಕವಾಗಿಯೂ ಚಿಕಿತ್ಸೆ ನಿಡಬೇಕಿದೆ. ಹೀಗಾಗಿ ಈ ಎಲ್ಲಾ ಚಿಕಿತ್ಸೆ ಮುಗಿಯಬೇಕು ಅಂದ್ರೆ 45 ದಿನ ಬೇಕೇ ಬೇಕು.