ದೆಹಲಿಯ ಘಟನೆ. ಚಹಾ ಮಾಡೇ ಎಂದು ಗಂಡ ಹೇಳಿದ್ದಕ್ಕೆ ಹಾಲಿಲ್ಲ ಮಾಡಲಾಗದು ಎಂದಳು ಪತ್ನಿ. ಪಿತ್ತ ನೆತ್ತಿಗೇರಿದ ಮಹರಾಯ ಅವಳನ್ನು ಹೊಡೆದು ಕೊಂದೇಬಿಡುದೇ?

``ಹೋಗಿ ಹಾಲು ತಾ,'' ಎಂದು ಅವಳು ಹೇಳಿದ್ದಕ್ಕೆ ಕೋಪದಿಂದ ಬುಸುಗುಡುತ್ತಾ ಕಿಟಕಿ ಮುರಿದು, ಅದೇ ಗಾಜಿನಿಂದ ಅವಳನ್ನು ಇರಿದೇಬಿಟ್ಟ. ತಾಯಿಯನ್ನು ರಕ್ಷಿಸಲು ಧಾವಿಸಿದ ಮಗಳಿಗೂ ಎಗ್ಗಾಮುಗ್ಗಾ ಗಾಯಗಳಾಗಿ ರಕ್ತ ಹರಿಯಿತು, ಅವಳೂ ಸತ್ತಳು. ಈ ಮಹರಾಯ 3 ಹೆಣ್ಣುಮಕ್ಕಳ ತಂದೆ, ದೊಡ್ಡ ಮಗಳು ಕೂಲಿ ಮಾಡಿ ಸಂಪಾದಿಸಿದ್ದರಿಂದ ಬೇರೆಯವರು ಅನ್ನ ಕಾಣುತ್ತಿದ್ದರು. ಕೊನೆಯವಳು 12ನೇ ಕ್ಲಾಸ್‌. ಪತ್ನಿಯ ಮೇಲೆ ಹಲ್ಲೇ ಮಾಡುವುದು ತನ್ನ ಹಕ್ಕು ಎಂದು ತಿಳಿದಿದ್ದ ಈ ಭೂಪತಿ!

ಪತ್ನಿಯರ ಮೇಲೆ ಇಂಥ ಹಿಂಸೆ ವಿಶ್ವವ್ಯಾಪಿ. ಸಮಾಜ ಇದನ್ನೇ ಗಂಡಸ್ತನ ಎನ್ನುತ್ತದೆ. ಇತ್ತೀಚಿನ `ಪಂಜಾಬ್‌ ಕೇಸರಿ' ದೈನಿಕದಲ್ಲಿ ಪ್ರಕಟಿತ ಒಂದು ವಿಶೇಷ ಲೇಖನದಲ್ಲಿ ತಿಳಿಸಿರುವುದೆಂದರೆ, ವೇದವ್ಯಾಸರು ಹಣ್ಣಿಗೆ ಸದಾ ತನು, ಮನ, ಚನ, ಕರ್ಮಗಳಿಂದ ಪತಿ ಸೇವೆಯೇ ಪಾರಮ್ಯ ಅಂತ. ದೇಶವಿಡೀ ಸಮರ್ಥಕರಿರು ಗಾಯತ್ರಿ ಪರಿವಾರದಲ್ಲಿ ಒಂದೆಡ ಹೀಗೆ ಉಲ್ಲೇಖವಿದೆ : ಪತಿವ್ರತಾ ಧರ್ಮದ ಅರ್ಥ ಪತ್ನಿಯು ಪತಿಗೆ ಸದಾ ಸಂಪೂರ್ಣ ಆತ್ಮ ಸಮರ್ಪಣೆ ಮಾಡಿಕೊಳ್ಳಬೇಕು. ಪತಿವ್ರತಾ ಧರ್ಮದಲ್ಲಿ ನಿಷ್ಠೆಯುಳ್ಳ ಪತ್ನಿಯು ಯೋಗಿಯ ಹಾಗೆ ಜೀವನ್ಮುಕ್ತಳಾಗುತ್ತಾಳೆ. ಪತಿ ಸೇವೆಯೇ ಪರಮೇಶ್ವರ ಸಾಕ್ಷಾತ್ಕಾರ ಎಂದು ಭಾವಿಸುತ್ತಾಳೆ. ತನ್ನ ಆರಾಧ್ಯ ದೈವದ ಆತ್ಮೋತ್ಸರ್ಗ ಮಾಡಿಕೊಳ್ಳುವುದರಲ್ಲಿ ಅನಿವಾರ್ಯ ಆನಂದ ಕಾಣುತ್ತಾಳೆ. ಪತಿವ್ರತೆಯ ವಿಶೇಷ ಲಕ್ಷಣವೆದರೆ, ಸ್ವತಂತ್ರಳಾಗಿ ಬಾಳುವ ಆಸೆ ತ್ಯಜಿಸುವುದು, ಭಾವನೆ ಇರಿಸಿಕೊಳ್ಳದಿರುವುದು. ಮಹಾ ಪತಿವ್ರತಾ ನಾರಿ ತನ್ನ ಸೇವಾ ಮನೋಭಾವದಿಂದ ಎಂಥ ಕುಡುಕ, ವಿಷಯಲಂಪಟ ಪತಿಯನ್ನೂ ಬದಲಿಸುತ್ತಾಳಂತೆ. ಹೆಣ್ಣು ಎಂದೂ ಗಂಡಿನ ಮನದಲ್ಲಿ ಚಿಂತೆಗೆ ಕಾರಣಳಾಗಬಾರದು.... ಇತ್ಯಾದಿ ಅಖಂಡ ಗುಣಗಳಿವೆ.

gharelu-hinsa-2

ಈ ವಿಷಯವನ್ನು ಸೋಶಿಯಲ್ ಮೀಡಿಯಾದಿಂದ ತೆಗೆದುಕೊಳ್ಳಲಾಗಿದೆ. ಅಂದ್ರೆ ಇಂದಿನ ಕಾಲದಲ್ಲೂ ಇದು ಪ್ರಚಲಿತ ಮಾತ್ರವಲ್ಲ, ಭಾರಿ ಪ್ರಚಾರ ನಡೆಯುತ್ತಿದೆ. ಹೀಗಿರುವಲ್ಲಿ ಕುಡುಕ ಗಂಡ ಪತ್ನಿಗೆ ಟೀ ಮಾಡಲು ಹೇಳಿ, ಹಾಲು ತಾ ಎಂದರೆ ಅವಳನ್ನೇ ಕೊಂದು ಹಾಕಿದರೆ, ಈ ಮಹರಾಯನನ್ನು ದೋಷಿ ಎನ್ನಲಾದೀತೇ? ಇಂಥ ಜ್ಞಾನ ಬೋಧಿಸುವ, ಲಕ್ಷಾಂತರ ವಾಟ್ಸ್ ಆ್ಯಪ್‌ ಮೆಸೇಜ್‌ ಗಳು, FB ‌ಪೋಸ್ಟುಗಳು, ಆನ್‌ ಲೈನ್‌ ಬ್ಲಾಗುಗಳು, ಸೈಟುಗಳಲ್ಲಿ ಹಗಲೂ ರಾತ್ರಿ ಪತಿವ್ರತಾ ಧರ್ಮ ಬೋಧಿಸುತ್ತಿದ್ದರೆ, ಹೀಗಾಗದೆ ಇನ್ನೇನಾದೀತು?

ಧರ್ಮದ ಹಿನ್ನೆಲೆಯಲ್ಲಿ ಇಂಥ ಅಗಾಧ ನಿಷ್ಠೆ ಮೆರೆಯುವಲ್ಲಿ ಹೆಣ್ಣಿನ ನಿರಂತರ ಶೋಷಣೆ ಇದೆ. ಧರ್ಮ ತಾನೇ ಮುಂದಾಗಿ ಹೆಣ್ಣನ್ನು ಹಿಂದುಳಿದವರು, ದಲಿತರು ಎಂಬಂತೆ ಶೋಷಿಸಲು ಲೈಸೆನ್ಸ್ ನೀಡುತ್ತದೆ. ಸಾಲದು ಎಂಬಂತೆ ಹಿಂದುತ್ವದ ಕಹಳೆ ಮೊಳಗಿಸಲಾಗುತ್ತಿದೆ. ಯಾರು ಇಂಥ ಧರ್ಮದ ಗುಟ್ಟು ರಟ್ಟು ಮಾಡುವರೋ ಅಂಥವರ ಬಾಯಿ ಬಡಿಯಲಾಗುತ್ತದೆ, ಧಾರ್ಮಿಕ ಭಾವನೆಗಳು ಅಪಾಯಕ್ಕೆ ದಾರಿ ಮಾಡುತ್ತಿವೆ. ಇದೇ ತತ್ವವನ್ನು ಕ್ರೈಸ್ತ, ಮುಸ್ಲಿಂ ಧರ್ಮಗಳಲ್ಲಿಯೂ ಪಾಲಿಸಲಾಗುತ್ತಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ