ಇತ್ತೀಚೆಗಷ್ಟೇ ಪರಸ್ಪರ ಡಿವೋರ್ಸ್ ಪಡೆದ ಖ್ಯಾತ ಕ್ರಿಕೆಟಿಗ ಯುಜುವೇಂದ್ರ ಚಹಲ್​​ ಹಾಗೂ ಅವರ ಪತ್ನಿ ಧನಶ್ರೀ ವರ್ಮಾ ಮಧ್ಯೆ ಪರಿಹಾರ ಫಿಕ್ಸ್ ಆಗಿದೆ. ಚಹಲ್ ಅವರು ಪತ್ನಿ ಧನಶ್ರೀ ವರ್ಮಾಗೆ 4.75 ಕೋಟಿ ರೂಪಾಯಿಯನ್ನು ಶಾಶ್ವತ ಜೀವನಾಂಶ ನೀಡಲು ಒಪ್ಪಿಕೊಂಡಿದ್ದಾರೆ. ಇದರಲ್ಲಿ ಈಗಾಗಲೇ 2 ಕೋಟಿ 37 ಲಕ್ಷ ರೂಪಾಯಿಯನ್ನು ಕೊಡಲಾಗಿದೆ. ಉಳಿದ ಮೊತ್ತವನ್ನು ಪಾವತಿಸಲೇಬೇಕಿದೆ. ಒಂದು ವೇಳೆ ಪಾವತಿಸದೇ ಇದ್ದಲ್ಲಿ ಕುಟುಂಬ ನ್ಯಾಯಾಲಯದ ಆದೇಶದ ಉಲ್ಲಂಘನೆ ಎಂದೇ ಪರಿಗಣಿಸಲಾಗುತ್ತೆ.

ಬುಧವಾರವಷ್ಟೇ ಬಾಂಬೆ ಹೈಕೋರ್ಟ್​​ನಲ್ಲಿ ನಡೆದ ಅರ್ಜಿ ವಿಚಾರಣೆಯಲ್ಲಿ ನಿರ್ದೇಶನ ನೀಡಿದ ಕೋರ್ಟ್​​​​, ಇನ್ನೊಂದು ದಿನದಲ್ಲಿ ಡಿವೋರ್ಸ್ ಪ್ರಕರಣ ಬಗೆಹರಿಸಿಕೊಳ್ಳುವಂತೆ ಸೂಚನೆ ಕೊಟ್ಟಿದೆ. ಅಷ್ಟೇ ಅಲ್ಲ, ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13ಬಿ ಅಡಿಯಲ್ಲಿ ನೀಡಲಾಗಿದ್ದ ಕೂಲಿಂಗ್ ಪೀರಿಯಡ್​​​​ನ್ನು ರದ್ದು ಮಾಡಬೇಕು ಅಂತಾ ನಿರ್ದೇಶನ ನೀಡಿದೆ.

ಐಪಿಎಲ್ ಸದ್ಯದಲ್ಲೇ ಆರಂಭವಾಗಲಿದ್ದು, ಟೂರ್ನಿಯಲ್ಲಿ ಚಹಲ್ ಪಂಜಾಬ್ ಕಿಂಗ್ಸ್ ತಂಡದ ಪರ ಆಡಲು ತೆರಳಲಿದ್ದಾರೆ. ಹೀಗಾಗಿ ಮಾರ್ಚ್​ 20ರಂದೇ ನಿರ್ಧಾರ ಕೈಗೊಳ್ಳಬೇಕು ಅಂತಾ ಹೈಕೋರ್ಟ್ ಹೇಳಿದೆ. ಈ ಹಿಂದೆ ಮೊದಲ ಬಾರಿಗೆ ಚಹಲ್ ಮತ್ತು ಧನಶ್ರೀ ವರ್ಮಾ ವಿಚ್ಚೇದನ ವಿಚಾರ ಬಹಿರಂಗಗೊಂಡಾಗ ಧನಶ್ರೀ ವರ್ಮಾ ಸುಮಾರು 60 ಕೋಟಿ ರೂಗಳಷ್ಟು ಜೀವನಾಂಶ ಕೇಳಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದೀಗ ಈ ಪ್ರಕರಣ ಕೋರ್ಟ್ ಮೆಟ್ಟಿಲೇರುತ್ತಲೇ ವದಂತಿಗಳಿಗೆಲ್ಲಾ ಸರತಿ ಸಾಲಲ್ಲಿ ತೆರೆ ಬೀಳುತ್ತಿದೆ.

 

ಯುಜುವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಫೆಬ್ರವರಿ 5 ರಂದು ಬಾಂದ್ರಾದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಚೇದನ ತೆಗೆದುಕೊಳ್ಳುತ್ತಿದ್ದೇವೆ. ಹೀಗಾಗಿ ಪುನರ್ ಮಿಲನದ ಅವಧಿಯನ್ನು ರದ್ದುಗೊಳಿಸಬೇಕು ಅಂತಾ ಕೋರಿದ್ದರು. ಆದಾಗ್ಯೂ, ಫೆಬ್ರವರಿ 20 ರಂದು ಕೌಟುಂಬಿಕ ನ್ಯಾಯಾಲಯ, ಪುನರ್ ಮಿಲನಕ್ಕೆ ಅವಕಾಶವಾಗುವಂತಹ ಅವಧಿಯನ್ನು ರದ್ದುಗೊಳಿಸಲು ನಿರಾಕರಿಸಿತ್ತು. ನಂತರ ಇಬ್ಬರೂ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಏನಿದು ಕೂಲಿಂಗ್ ಆಫ್ ಪೀರಿಯಡ್..? :

ಡಿವೋರ್ಸ್‌ ಆಗುವುದಕ್ಕೆ ಗಂಡ ಹೆಂಡತಿ ಪರಸ್ಪರ ಒಪ್ಪಿಗೆ ಮೇಲೆ ಅರ್ಜಿ ಸಲ್ಲಿಸಿದಾಗ ಸಾಮಾನ್ಯವಾಗಿ ಕೋರ್ಟುಗಳು ಕೌನ್ಸೆಲಿಂಗ್ ಸಲಹೆ ನೀಡುತ್ತವೆ. ಗಂಡ ಹೆಂಡತಿ ಮದುವೆಯಾಗಿ ಒಂದು ವರ್ಷಕ್ಕೂ ಮೊದಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರೆ, ಆಗ ಕಡ್ಡಾಯವಾಗಿ ಕೂಲಿಂಗ್ ಆಫ್ ಪೀರಿಯಡ್ ಅಂದರೆ ಕೌನ್ಸೆಲಿಂಗ್ ಪ್ರಕ್ರಿಯೆ ಎದುರಿಸಬೇಕು. ಒಂದು ವರ್ಷದ ನಂತರ ವಿಚ್ಛೇದನಕ್ಕೆ  ಅರ್ಜಿ ಸಲ್ಲಿಸಿದರೆ ಪರಸ್ಪರ ಒಪ್ಪಿಗೆ ಇದ್ದರೆ ಡಿವೋರ್ಸ್ ಸರಳವಾಗಿ ಆಗುತ್ತದೆ. ಪ್ರತ್ಯೇಕ ಪ್ರಕರಣಗಳ ಮೇಲೆ ಕೂಲಿಂಗ್ ಆಫ್ ಪೀರಿಯಡ್ ಕೊಡಬೇಕಾ ಬೇಡವಾ ಅಂತಾ ಕೋರ್ಟ್ ನಿರ್ಧಾರ ಮಾಡುತ್ತದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ