– ರಾಘವೇಂದ್ರ ಅಡಿಗ ಎಚ್ಚೆನ್ 

ಚಿತ್ರ: ಮನದ ಕಡಲು.

ನಿರ್ಮಾಣ: ಇ. ಕೃಷ್ಣಪ್ಪ.

ನಿರ್ದೇಶನ: ಯೋಗರಾಜ್ ಭಟ್.

ತಾರಾಗಣ: ಸುಮುಖ, ರಾಶಿಕಾ ಶೆಟ್ಟಿ, ಅಂಜಲಿ ಅನೀಶ್, ರಂಗಾಯಣ ರಘು, ದತ್ತಣ್ಣ ಮುಂತಾದವರು.

ರೇಟಿಂಗ್: 3.5/5

ಮುಂಗಾರುಮಳೆ’ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಬರೆದಿತ್ತು. ಆ ಸಿನಿಮಾಗೆ ಬಂಡವಾಳ ಹೂಡಿದ್ದ ಇ. ಕೃಷ್ಣಪ್ಪ ಹಾಗೂ ನಿರ್ದೇಶನ ಮಾಡಿದ್ದ ಯೋಗರಾಜ್ ಭಟ್ ಅವರು ಮತ್ತೆ ಜೊತೆಯಾಗಿ ‘ಮನದ ಕಡಲು’ ಸಿನಿಮಾ ಮಾಡಿದ್ದಾರೆ. ಚಿತ್ರ ಹೇಗಿದೆ ತಿಳಿಯಲು ಮುಂದೆ ಓದಿ…

ಮೂರು ವರ್ಷ ಎಂಬಿಬಿಎಸ್ ಓದಿ, ಕೊನೇ ವರ್ಷದಲ್ಲಿ ಏಕಾಏಕಿ ಕಾಲೇಜು ಬಿಟ್ಟು ಊರು ಸುತ್ತಲು ಹೋಗುವ ಸುಮುಖ ಎನ್ನುವ ಪಾತ್ರ ಸಿನಿಮಾದ ಕೇಂದ್ರಬಿಂದು. ದೋಣಿದುರ್ಗ ಎಂಬ ಊರಿನಲ್ಲಿ ಈ ಸಿನಿಮಾದ ಬಹುಪಾಲು ಕಥೆ ಸಾಗುತ್ತದೆ.

IMG-20250328-WA0120

ನಾಯಕಿಯರಲ್ಲಿ ಒಬ್ಬಳಿಗೆ ಅಪರೂಪದ ಕಾಯಿಲೆ, ಇನ್ನೊಬ್ಬ ಪಾಳು ಕೋಟೆಯಲ್ಲಿ ಸಂಶೋಧಕಿ. ಕಾಡು ಮೇಡು ಅಲೆದು ಭೀಮ ದ್ರೌಪದಿಗೆ ಸೌಗಂಧಿಕಾ ಪುಷ್ಪ ತಂದುಕೊಟ್ಟ ಹಾಗೆ ಇಲ್ಲಿ ನಾಯಕ ನಾಯಕಿಗೆ ಮಧುವಂತಿ ಬಳ್ಳಿ ತರುತ್ತಾನೆ.

ಈ ಮಧ್ಯೆ ಸಮುದ್ರ, ಅಲೆಗಳು, ಧನ್ವಂತರಿ ಚಿಕಿತ್ಸೆ, ಕಾಯಿಲೆ-ಕಸಾಲೆ, ಬುಡಕಟ್ಟು ಜನಗಳು, ಇಬ್ಬರು ಹುಡುಗಿಯರು,  ಎಳೆ ಪ್ರೇಮದಾಟ, ಕಡೆಗೆ ನಡು ಸಮುದ್ರದಲ್ಲಿ ಮುಳುಗೇಳುವ ಪ್ರಸಂಗ ಇದು ಮನದ ಕಡಲು ಚಿತ್ರದ ಸ್ಥೂಲ ಪರಿಚಯ.

ಭಟ್ರು ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನು ಮತ್ತೆ ರೂಪಿಸಲು ಪ್ರಯತ್ನಿಸಿದ್ದಾರೆ..

ಸುಮುಖ ಅದ್ಭುತ ನಟನೆ ಮಾಡಿದ್ದಾರೆ.ಕಥೆ ಪಾತ್ರ ಚಿತ್ರಣ ಗೋಲ್ಡನ್ ಸ್ಟಾರ್ ಗಣೇಶ್ ಯುವ ಆವೃತ್ತಿಯನ್ನು ನೆನೆಯುವಂತೆ ಮಾಡುತ್ತದೆ.. ಚಿತ್ರದಲ್ಲಿ ಅದ್ಭುತ ದೃಶ್ಯಗಳು, ಉತ್ತಮ ನಟನೆ, ಉತ್ತಮ ಕಥೆ, ಉತ್ತಮ ಸಂಗೀತವಿದೆ.. ಕ್ಲೈಮ್ಯಾಕ್ಸ್ ನಲ್ಲಿ ಬದುಕು ಪ್ರೀತಿ ಪ್ರೇಮ ಎಲ್ಲಕ್ಕಿಂತ ದೊಡ್ಡದು ಎನ್ನುವ ಭಟ್ರು ಅವರ ಅದುವರೆಗಿನ ನಿರೂಪಣೆಗೆ ಹೊಂದಿಕೆಯಾಗುವುದಿಲ್ಲ! ಒಟ್ಟಾರೆಯಾಗಿ  ಇದು ಖಂಡಿತವಾಗಿಯೂ ಕೆಟ್ಟ ಚಿತ್ರವಲ್ಲ, ಇದು ಚಿತ್ರದುದ್ದಕ್ಕೂ ನಿಮ್ಮನ್ನು ತೊಡಗಿಸಿಕೊಳ್ಳುತ್ತದೆ! (ಅಲ್ಲಲ್ಲಿ ಸ್ವಲ್ಪ ನಗುವಿನೊಂದಿಗೆ) ಆದರೆ ರಂಗಾಯಣ ರಘು ಪಾತ್ರ ಮತ್ತು ಅವರ ಹಾಸ್ಯ ನಮಗೆ ಕಡೆಯವರೆಗೂ ಅರ್ಥವಾಗುವುದಿಲ್ಲ… ಸುಮುಖ, ರಾಶಿಕಾ ಮತ್ತು ಅಂಜಲಿ  ಅದ್ಭುತವಾಗಿ ಅಭಿನಯಿಸಿದ್ದಾರೆ.,  ಇದೊಂದು ತಾತ್ವಿಕ ಪ್ರೇಮ ಕಥೆ. ಹರಿಕೃಷ್ಣ ಸಂಗೀತ ಉತ್ತಮ ಆಗಿದ್ದರು ಹಾಡುಗಳು ಮನದಲ್ಲಿ ಉಳಿಯುವುದಿಲ್ಲ. ಭಟ್ರು ಅದೇ ಹಳೇ ಮಾಡೆಲ್ ಅನುಸರಿಸಿ ಚಿತ್ರ ಕಟ್ಟಿಕೊಟ್ಟಿದ್ದಾರೆ. ಆದರೆ ಇದು ಈ ಇಪ್ಪತ್ತು ವರ್ಷಗಳ ನಂತರ ಪ್ರೇಕ್ಷಕರನ್ನು ಹೇಗೆ ಬೆಳೆಯಬಹುದು ಎಂಬುದು ಪ್ರಶ್ನೆ.

ಇನ್ನು ನೀವು ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಇಷ್ಟ ಪಡುವುದಾದರೆ ಒಮ್ಮೆ ಮನದ ಕಡಲು ನೋಡಿ..

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ