ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ಕನ್ನಡದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮತ್ತೆರಡು ದಾಖಲೆಗೆ ಭಾಜನರಾಗಿದ್ದಾರೆ. ಸದ್ಯ ಬಾಲಿವುಡ್​​ನ ಭಾಯಿಜಾನ್​ ನಟ ಸಲ್ಮಾನ್ ಖಾನ್ ಜೊತೆಗೆ ನಟಿಸಿದ್ದ ‘ಸಿಕಂದರ್’ ಚಿತ್ರ ಸಖತ್ತಾಗೇ ಓಡ್ತಿದೆ. ಕೆಲವೆಡೆ ಕಡಿಮೆ ರೆಸ್ಪಾನ್ಸ್ ಬರ್ತಿದ್ರೂ ಇನ್ನು ಕೆಲವೆಡೆ ಸಖತ್ತಾಗೇ ಸೌಂಡ್ ಮಾಡ್ತಿದೆ. ಕಲೆಕ್ಷನ್​​​​​ ವಿಷ್ಯದಲ್ಲೂ ಕೊಂಚ ಕಡಿಮೆ ಆಗಿದ್ರೂ ಕೂಡ ನಿಧಾನವಾಗಿ ಏರ್ತಿದೆ. ಇಂಥಾ ಹೊತ್ತಿನಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲೂ ಒಳ್ಳೆ ಹೆಸರು ಮಾಡಿದ್ದ ಕನ್ನಡದ ಸಾನ್ವಿ ಅಂತಾನೇ ಫೇಮಸ್ ಆಗಿರೋ ರಶ್ಮಿಕಾ ಮಂದಣ್ಣ ಮತ್ತೊಂದೆರಡು ಹೆಸರು ಮಾಡಿರೋದು ಅಭಿಮಾನಿಗಳಲ್ಲಿ ಖುಷಿ ತಂದಿದೆ. ಭಾರತದ ಯಾವ ನಟಿಯೂ ಮಾಡಿರದ ಸಾಧನೆಗಳೆರಡನ್ನು ರಶ್ಮಿಕಾ ಮಾಡಿದ್ದಾರೆ.

ಬಹುಭಾಷೆಯಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣಗೆ ಸದ್ಯ ಪ್ರತಿಭೆ ಮತ್ತು ಲಕ್​ ಎರಡೂ ಕೈ ಹಿಡಿದಿದೆ. ಖುಷಿಯ ವಿಚಾರ ಅಂದ್ರೆ ರಶ್ಮಿಕಾ ಮುಟ್ಟಿದ್ದೆಲ್ಲಾ ಚಿನ್ನ ಅನ್ನೋ ರೀತಿ ರಶ್ಮಿಕಾ ನಟಿಸಿದ ಸಿನಿಮಾಗಳೆಲ್ಲವೂ ಹೊಸ ಹೊಸ ರೆಕಾರ್ಡ್ ಮಾಡ್ತಿವೆ. ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸುತ್ತಿವೆ. ಇದೆಲ್ಲದರ ಮಧ್ಯೆ ಒಂದು ಅಪರೂಪದ ಸಾಧನೆಗೆ ರಶ್ಮಿಕಾ ಮಂದಣ್ಣ ಪಾತ್ರರಾಗಿದ್ದಾರೆ. ಇಂತಹ ಸಾಧನೆಯನ್ನು ಈಚೆಗೆ ಭಾರತದ ಯಾವ ನಟಿಯೂ ಮಾಡಿಲ್ವಂತೆ.

ರಶ್ಮಿಕಾ ಮಾಡಿರೋ ಸಾಧನೆ ಅದ್ಯಾವುದಪ್ಪಾ ಅಂತಾ ಪ್ರಶ್ನೆ ಕೇಳೋರಿಗೆ ಇಲ್ಲಿದೆ ನೋಡಿ ಉತ್ತರ. ರಶ್ಮಿಕಾ ಮಂದಣ್ಣ ನಟನೆಯ ಮೂರು ಸಿನಿಮಾಗಳು ಸತತವಾಗಿ 500 ಕೋಟಿ ರೂಪಾಯಿಯ ಕ್ಲಬ್ ಸೇರಿವೆ. ಇದು ಹೊಸ ದಾಖಲೆಯಾಗಿದೆ. 2023ರ ಡಿಸೆಂಬರ್​ನಲ್ಲಿ ತೆರೆಗೆ ಬಂದ ‘ಅನಿಮಲ್’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದರು. ಆ ಚಿತ್ರವೂ ಕೂಡ 500 ಕೋಟಿ ರೂಪಾಯಿ ಕ್ಲಬ್​ಗೆ ಸೇರಿದ್ದಲ್ಲದೇ ಅಂತಿಮವಾಗಿ ಬರೋಬ್ಬರಿ 900 ಕೋಟಿ ರೂಪಾಯಿಯನ್ನು ಬಾಕ್ಸ್​​ ಆಫೀಸ್​​ನಲ್ಲಿ ಕೊಳ್ಳೆ ಹೊಡೆದಿತ್ತು.

 

ಇನ್ನು ‘ಪುಷ್ಪ 2’ ಸಿನಿಮಾ. 2024ರ ಡಿಸೆಂಬರ್​ 5ರಂದು ತೆರೆಕಂಡ ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ ಸಿನಿಮಾವೂ ಕೂಡ 500 ಕೋಟಿ ರೂಪಾಯಿಯ ಕ್ಲಬ್ ಸೇರಿತ್ತು. ನಟ ಅಲ್ಲು ಅರ್ಜುನ್ ಜೊತೆಗೆ ಅಭಿನಯಿಸಿದ್ದ ಈ ಸಿನಿಮಾವೂ ಅಂತಿಮವಾಗಿ 1800 ಕೋಟಿ ರೂಪಾಯಿಗಳನ್ನು ವಿಶ್ವಾದ್ಯಂತ ಬಾಚಿಕೊಂಡಿತ್ತು.

ಮತ್ತೊಂದು ವಿಶೇಷ ಅಂದ್ರೆ, ಇತ್ತೀಚೆಗೆ ಬಿಡುಗಡೆಯಾದ ‘ಛಾವಾ’ ಸಿನಿಮಾ. ಈ ವರ್ಷ ಫೆಬ್ರವರಿಯಲ್ಲಿ ತೆರೆಕಂಡ ‘ಛಾವಾ’ ಸಿನಿಮಾದಲ್ಲೂ ರಶ್ಮಿಕಾ ಮಂದಣ್ಣ ಅವರು ಯೇಸುಬಾಯಿ ಬೋನ್ಸಲೇ ಪಾತ್ರವನ್ನು ಮಾಡಿದ್ದಾರೆ. ಈ ಸಿನಿಮಾವೂ ಕೂಡ ಬ್ಲಾಕ್​ ಬ್ಲಸ್ಟರ್​ ಅನ್ನೋ ಖ್ಯಾತಿಗೆ ಪಾತ್ರವಾಗಿದೆ. ಇದೂ ಕೂಡ ಬಾಕ್ಸ್​ ಆಫೀಸ್​ನಲ್ಲಿ 500 ಕೋಟಿ ಕ್ಲಬ್ ಸೇರಿದ್ದಲ್ಲದೇ ಬರೋಬ್ಬರಿ 780 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಹೀಗೆ ಮೂರು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಹಿಟ್ ಆಗಿ 500 ಕೋಟಿ ಕ್ಲಬ್​​ನಲ್ಲಿ ಹೆಸರು ಮಾಡಿರೋದ್ರಿಂದ ರಶ್ಮಿಕಾ ಹೊಸ ರೆಕಾರ್ಡ್ ಮಾಡಿದಂತಾಗಿದೆ. ಇನ್ನು ಇತ್ತೀಚೆಗಷ್ಟೇ ತೆರೆಕಂಡಿರೋ ನಟ ಸಲ್ಮಾನ್ ಖಾನ್ ಜೊತೆಗೆ ನಟಿಸಿರೋ ‘ಸಿಕಂದರ್’ ಮೂವೀ ಕೂಡ 500 ಕೋಟಿ ಕ್ಲಬ್ ಸೇರಿದಲ್ಲಿ ಮತ್ತೊಂದು ಹೊಸ ದಾಖಲೆ ನಿರ್ಮಾಣವಾಗಲಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ