ರಾಜ್ಯದ ಜನರಿಗೆ ವಿಶೇಷವಾಗಿ ಸಾಮಾನ್ಯ ಜನರಿಗೆ ಮತ್ತು ಬ್ಯಾಚುಲರ್‌ಗಳಿಗೆ ಕರ್ನಾಟಕ ಹಾಲು ಮಹಾಮಂಡಳಿ (KMF) ಭರ್ಜರಿ ಸಿಹಿಸುದ್ದಿ ನೀಡಿದೆ. ನಂದಿನಿ ಬ್ರ್ಯಾಂಡ್‌ನ ಹಾಲು ಮತ್ತು ಮೊಸರು ಇನ್ನು ಮುಂದೆ ಕೇವಲ 10 ರೂಪಾಯಿಗೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಲಿನ ಸಣ್ಣ ಪ್ಯಾಕೆಟ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಕೆಎಂಎಫ್ ಗ್ರಾಹಕ ಸ್ನೇಹಿ ಕ್ರಮಕ್ಕೆ ಮುಂದಾಗಿದೆ. ಈ ನೂತನ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಂಕೇತಿಕವಾಗಿ ಲೋಕಾರ್ಪಣೆ ಮಾಡಿದ್ದಾರೆ.

ಈ ಮೊದಲು ಮಾರುಕಟ್ಟೆಯಲ್ಲಿ ಕನಿಷ್ಠ 200 ML ಹಾಲಿನ ಪ್ಯಾಕೆಟ್‌ಗಳು ಲಭ್ಯವಿದ್ದವು. ಆದರೆ ಈಗ ಗ್ರಾಹಕರ ಅನುಕೂಲಕ್ಕಾಗಿ ಕೆಎಂಎಫ್ ಸಣ್ಣ ಪ್ಯಾಕೆಟ್‌ಗಳನ್ನು ಪರಿಚಯಿಸಿದೆ.

ನಂದಿನಿ ಹಾಲು: 160 ML ಪಾಕೆಟ್‌ಗೆ ಕೇವಲ 10 ರೂಪಾಯಿ.

ನಂದಿನಿ ಮೊಸರು: 140 ML ಪಾಕೆಟ್‌ಗೆ ಕೇವಲ 10 ರೂಪಾಯಿ.

ಲಸ್ಸಿ ಪ್ರಿಯರಿಗೂ ಗುಡ್ ನ್ಯೂಸ್: ಹಾಲು ಮತ್ತು ಮೊಸರಿನ ಜೊತೆಗೆ ನಂದಿನಿ ಲಸ್ಸಿ ಪ್ರಿಯರಿಗೂ ಕೆಎಂಎಫ್ ಸಖತ್ ಆಫರ್ ನೀಡಿದೆ. ಮಾವಿನ ಲಸ್ಸಿ (Mango Lassi) ಮತ್ತು ಸ್ಟ್ರಾಬೆರಿ ಲಸ್ಸಿ (Strawberry Lassi) ಪ್ಯಾಕೆಟ್‌ಗಳು ಕೇವಲ 15 ರೂಪಾಯಿಗೆ ಲಭ್ಯವಾಗಲಿವೆ.

ಯಾರಿಗೆ ಅನುಕೂಲ

ಕೆಎಂಎಫ್‌ನ ಈ ನಿರ್ಧಾರವು ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ವಾಸಿಸುವ ಬ್ಯಾಚುಲರ್‌ಗಳಿಗೆ, ಪ್ರವಾಸ ಮಾಡುವವರಿಗೆ ಮತ್ತು ಮನೆಯಲ್ಲಿ ಒಬ್ಬರೇ ಇರುವವರಿಗೆ ಹೆಚ್ಚು ಸಹಕಾರಿಯಾಗಲಿದೆ. ದೊಡ್ಡ ಪ್ಯಾಕೆಟ್ ಖರೀದಿಸಿ  ಹಾಲು ಅಥವಾ ಮೊಸರು ವ್ಯರ್ಥವಾಗುವುದನ್ನು ಈ ಸಣ್ಣ ಪ್ಯಾಕೆಟ್‌ಗಳು ತಡೆಯಲಿವೆ.

ಶೀಘ್ರದಲ್ಲೇ ಲಭ್ಯ: ಈಗಾಗಲೇ ಮುಖ್ಯಮಂತ್ರಿಗಳಿಂದ ಚಾಲನೆ ಸಿಕ್ಕಿದ್ದು, ಮುಂದಿನ ಕೆಲವೇ ದಿನಗಳಲ್ಲಿ ರಾಜ್ಯದಾದ್ಯಂತ ಇರುವ ಎಲ್ಲಾ ನಂದಿನಿ ಪಾರ್ಲರ್‌ಗಳು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಈ 10 ರೂಪಾಯಿ ಬೆಲೆಯ ಹಾಲು ಮತ್ತು ಮೊಸರಿನ ಪ್ಯಾಕೆಟ್‌ಗಳು ಗ್ರಾಹಕರಿಗೆ ಸಿಗಲಿವೆ.

ಕಡಿಮೆ ದರದಲ್ಲಿ ಗುಣಮಟ್ಟದ ಉತ್ಪನ್ನಗಳನ್ನು ನೀಡುವ ಮೂಲಕ ಕೆಎಂಎಫ್ ತನ್ನ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಲು ಈ ಹೊಸ ಪ್ಲ್ಯಾನ್ ರೂಪಿಸಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ