ವಿದ್ಯೆ, ವಿವೇಕಕಿಂತಲೂ, ಧರ್ಮವೇ ಹೆಚ್ಚು ಎಂದು ದೇಶ ಮತ್ತು ಧರ್ಮದ ನಡುವಿನ ಅಂತರ ತಿಳಿಯದ 6 ಹೆಣ್ಣು ಮಕ್ಕಳಿಂದಾಗಿ ಇಡೀ ರಾಜ್ಯಕ್ಕೇ ಕೆಟ್ಟ ಹೆಸರು ತರುತ್ತಿರುವ ಈ ಸಂಧರ್ಭದಲ್ಲಿ 9 ದಶಕಗಳ ಹಿಂದೆ ಅತ್ಯಾಚಾರಕ್ಕೆ ಒಳಗಾಗಿಯೂ ತನ್ನ ವಿವೇಕ ಕಳೆದುಕೊಳ್ಳದೇ ವಿದ್ಯೆ ಕಲಿತು ಇಡೀ ಸಮಾಜವನ್ನೇ ಬದಲಾಯಿಸಿದಂತಹ  ಸಾಮಾಜಿಕ ಜಾಲತಾಣದಲ್ಲಿ ಓದಿದ್ದ ಹೃದಯಸ್ಪರ್ಶಿ ಕಥೆಯೊಂದರ ಭಾವಾನುವಾದವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

doctor1

ಅದು 1943, ಹುಬ್ಬಳ್ಳಿಯ ಮೂಲದ 22 ವರ್ಷದ ಯುವ ವೈದ್ಯರಾಗಿದ್ದ ಡಾ. ಆರ್. ಎಚ್. ಕುಲಕರ್ಣಿಯವರು ಮಹಾರಾಷ್ಟ್ರ-ಕರ್ನಾಟಕ ಗಡಿ ಸಮೀಪದ ಚಂದ್‌ಗಢ ಗ್ರಾಮದ ಸರ್ಕಾರೀ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುತ್ತಾರೆ. ದಟ್ಟ ಅರಣ್ಯಗಳ ನಡುವಿದ್ದ ಆ ಊರು ತೀರಾ ಕುಗ್ರಾಮವೆಂದರೂ ತಪ್ಪಾಗದು. ಅದೊಂದು ಮಳೆಗಾಲದ ಸಮಯದಲ್ಲಿ ಹೊರಗೆ ಭಾರೀ ಬಿರುಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದ ಕಾರಣ, ಬೆಚ್ಚಗೆ ಕಂಬಳಿಯೊಂದನ್ನು ಹೊದ್ದಿಕೊಂಡು ಡಾ ಕುಲಕರ್ಣಿ ಪುಸ್ತಕವೊಂದನ್ನು ಓದುತ್ತಿದ್ದರು. ಇದ್ದಕ್ಕಿದ್ದಂತೆ, ಅವರ ಮನೆಯ ಬಾಗಿಲನ್ನು ಯಾರೋ ಜೋರಾಗಿ ಬಡಿಯುವ ಶಬ್ದ ಕೇಳಿ, ಅರೇ ಇಷ್ಟು ಹೊತ್ತಿನಲ್ಲಿ ಯಾರಿರಬಹುದು ಎಂದು ಯೋಚಿಸಿ, ಒಂದು ಕ್ಷಣ ಭಯವಾದರೂ, ಅದಕ್ಕೆ ಅಂಜದೇ, ಅವರು ಬಾಗಿಲು ತೆರೆದು ನೋಡಿದರೆ, ಕೈಯ್ಯಲ್ಲಿ ದೊಣ್ಣೆ ಹಿಡಿದು ಮುಖ ಮುಚ್ಚಿಕೊಂಡಿದ್ದ ನಾಲ್ಕು ಜನ ದಾಂಡಿಗರು ಮರಾಠಿಭಾಷೆಯಲ್ಲಿ ವೈದ್ಯರೇ, ನಿಮ್ಮ ವೈದ್ಯಕೀಯ ಚೀಲದೊಂದಿಗೆ ಈ ಕೂಡಲೇ ಹೊರಡಿ ಎಂದು ಆಜ್ಞಾಪಿಸುತ್ತಾರೆ.

ತಲೆ ಗಟ್ಟಿಗಿದೆ ಎಂದು ಬಂಡೆಗೆ ಚೆಚ್ಚಿಕೊಂಡರೆ ನಮ್ಮ ತಲೆಗೇ ಪೆಟ್ಟಾಗುತ್ತದೆಯೇ ಹೊರತು ಬಂಡೆ ಕಲ್ಲಿಗೆ ಏನೂ ಆಗುವುದಿಲ್ಲ ಎಂಬುದಾಗಿ ಯೋಚಿಸಿದ ಆ ವೈದ್ಯರು. ಸದ್ದಿಲ್ಲದೆ ತಮ್ಮ ಚೀಲವನ್ನು ತೆಗೆದುಕೊಂಡು ಅವರು ತಂದಿದ್ದ ವಾಹನದಲ್ಲಿ ಕುಳಿತುಕೊಳ್ಳುತ್ತಾರೆ, ಹಾಗೆ ಹೋಗುವ ದಾರಿಯಲ್ಲಿ ಭಯದಿಂದಲೇ, ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ? ಎಂದು ಕೇಳಿದ್ದಕ್ಕೆ ಉತ್ತರ ಸಿಗದಿದ್ದಾಗ ಮೌನವಾಗುತ್ತಾರೆ. ಸುಮಾರು ಒಂದೂವರೆ ಗಂಟೆಗಳ ಸುದೀರ್ಘ ಪಯಣದ ನಂತರ ಆ ವಾಹನ ಒಂದು ಕಡೆ ನಿಂತಾಗ ಆ ಕಡು ಕತ್ತಲೆಯಲ್ಲಿ ಲಾಟೀನಿನ ಬೆಳಕಿನಲ್ಲಿ ವೈದ್ಯರನ್ನು ಒಂದು ಕೋಣೆಗೆ ಕರೆದುಕೊಂಡು ಹೋಗುತ್ತಾರೆ. ಆಲ್ಲೊಂದು ಮಂಚದ ಮೇಲೆ ತುಂಬು ಗರ್ಭಿಣಿಯೊಬ್ಬಳು ಮಲಗಿದ್ದು ಅವರಳ ಆರೈಕೆಗೆಂದು ಆಕೆಯ ಪಕ್ಕದಲ್ಲಿ ಹಣ್ಣು ಹಣ್ಣು ಮುದುಕಿಯೊಬ್ಬರು ಕುಳಿತಿರುತ್ತಾರೆ. ವೈದ್ಯರು ಅಲ್ಲಿನ ಪರಿಸ್ಥಿತಿಯನ್ನು ಮನವರಿಕೆ ಮಾಡುಕೊಳ್ಳುವಷ್ಟರಲ್ಲಿಯೇ ಆ ಅಜ್ಜಿ ವೈದ್ಯರೇ ಹೆರಿಗೆಯ ಬೇನೆಯಿಂದ ಬಹಳ ನರಳುತ್ತಿದ್ದಾಳೆ. ದಯವಿಟ್ಟು ಸುಸೂತ್ರವಾಗಿ ಹೆರಿಗೆ ಮಾಡಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಬೇಡಿಕೊಳ್ಳುತ್ತಾಳೆ.

doc2

ಆಗಷ್ಟೇ ವೈದ್ಯಕೀಯ ಪದವಿಯನ್ನು ಮುಗಿಸಿ ಕೆಲಸಕ್ಕೆ ಸೇರಿದ್ದ ಕಾರಣ ಅವರು ಎಂದೂ ಹೆರಿಗೆಯನ್ನು ಮಾಡಿಸಿದ ಅನುಭವ ಇಲ್ಲದಿದ್ದರೂ, ನೋವಿನಿಂದ ನರಳುತ್ತಿದ್ದ ಆ ಹುಡುಗಿಯನ್ನು ನೋಡಿ ವೈದ್ಯರ ಮನಸ್ಸು ಕರಗಿ ಆ ಹುಡುಗಿಗೆ ಸಹಾಯ ಮಾಡಲು ನಿರ್ಧರಿಸಿ ಆಕೆಯ ನೋವನ್ನು ಮರೆಸುವ ಸಲುವಾಗಿ ತಂಗೀ, ನೀನು ಯಾರು? ಇಲ್ಲಿಗೆ ಹೇಗೆ ಬಂದೇ ಎಂದು ಕೇಳುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ