ಇತ್ತೀಚೆಗಷ್ಟೆ ನಡೆದ ಅಮೆರಿಕಾದ ಚುನಾವಣೆಯಲ್ಲಿ, ಅತಿ ಹೆಚ್ಚು ವಯಸ್ಸಿನ (78 ವರ್ಷ) ರಾಷ್ಟ್ರಪತಿ ಡೊನಾಲ್ಡ್ ಟ್ರಂಪ್‌ ತಮ್ಮ ಎದುರಾಳಿ, ಸದಾ ಸ್ತ್ರೀಪರ ಹಕ್ಕುಗಳ ಪರವಾಗಿ ನಿಲ್ಲುತ್ತಿದ್ದ ಕಮಲಾ ಹ್ಯಾರಿಸ್‌ ರನ್ನು ಸೋಲಿಸಿದ್ದಾರೆ. ಈ ಸೋಲು ಕೇಲ ಕಮಲಾರಿಗೆ ಮಾತ್ರ ಸಂಬಂಧಪಟ್ಟಿದ್ದೇ ಅಥವಾ ಅಮೆರಿಕಾದ ಎಲ್ಲಾ ಮಹಿಳೆಯರೂ ಇದರಿಂದ ಸೋತ ಹಾಗಾಯ್ತೇ? ವಿಶ್ವದ ಅತಿ ಶಕ್ತಿಶಾಲಿ ದೇಶದ ಹೆಂಗಸರು ತಮ್ಮ ಇಷ್ಟದ ಪ್ರತಿನಿಧಿಯನ್ನು ರಾಷ್ಟ್ರಪತಿ ಆಗಿಸುವಲ್ಲಿ ವಿಫಲರಾಗಿದ್ದಾರೆ. ಮುಂದಿನ 4 ವರ್ಷ ವಿಧಿಯಿಲ್ಲದೆ ಹೆದರಿ ನಡುಗುತ್ತಾ ಬಾಳಬೇಕಿದೆ.

ಅವರಲ್ಲಿ ಇಷ್ಟು ಮಾತ್ರ ಒಗ್ಗಟ್ಟು ಇರಲಿಲ್ಲವೇ? ಒಬ್ಬ ಲಂಪಟ, ಹೆಂಗಸರ ಹಕ್ಕುಗಳನ್ನು ನಿರ್ಲಕ್ಷಿಸುವ, ಬಣ್ಣ/ಕೋಮುವಾದಿ ತಾರತಮ್ಯದ ಬೇಜಾಬ್ದಾರಿಯುತ, ಅತಿ ವಿಲಾಸಪ್ರಿಯ ಸಿಡುಕವ ವೃದ್ಧನನ್ನು ಈ ಹುದ್ದೆಗೆ ಬಾರದಂತೆ ತಡೆಯಲು ಸಮರ್ಥರಾಗಲಿಲ್ಲವೇ? ಸದಾ ಹೆಂಗಸರ ಪರವಾಗಿ ಹೋರಾಡುತ್ತಾ, ಅಲ್ಲಿನ ಹೆಂಗಳೆಯರ ಪ್ರತಿನಿಧಿಯಾದ ಕಮಲಾರನ್ನು ಈ ಹುದ್ದೆಗೆ ಆರಿಸಬಾರದಿತ್ತೇ?

ಸುಪ್ರೀಂ ಕೋರ್ಟಿನ ರೋಲ್ V/S ವೆಡ್ ಕೇಸಿನ ತೀರ್ಪು ಹಾಗೂ ಗರ್ಭಪಾತದ ಕುರಿತಾಗಿ ಸಾಂವಿಧಾನಿಕ ಹಕ್ಕುಗಳ ನಿರ್ಣಯವನ್ನು ಮಣ್ಣು ಮುಕ್ಕಿಸಿದ ನಂತರ, ಅಮೆರಿಕಾದ ಮೊದಲ ರಾಷ್ಟ್ರಪತಿ ಚುನಾವಣೆಯಲ್ಲಿ ಗೆದ್ದು ಬಂದ ಮಹಾ ಕಂದಾಚಾರಿ, ಹೆಂಗಸರನ್ನು ಒಂದು ನಿರ್ಜೀವ ವಸ್ತುವೊಂದೇ ಪರಿಗಣಿಸುವ ಟ್ರಂಪ್‌ ರನ್ನು ಗೆಲ್ಲಿಸಬೇಕೇ? ಗರ್ಭಪಾತದ ಹಗರಣದ ಕುರಿತಾಗಿ ಅಲ್ಲಿನ ಬಹುತೇಕ ಹೆಂಗಸರು ಕಮಲಾರ ಬೆಂಬಲಿಗರಾಗಿದ್ದರು. ಆದರೆ ಈಕೆ ಚುನಾವಣೆಗೆ ನಿಂತಾಗ, ಮೊದಲ ಮಹಿಳಾ ರಾಷ್ಟ್ರಪತಿ ಆಗುವ ಕನಸನ್ನು ಮಣ್ಣು ಮುಕ್ಕಿಸಿದರು.

ಗೆಲುವಿಗಾಗಿ ಅಭ್ಯರ್ಥಿಗೆ 270 ಎಲೆಕ್ಟೋರ್‌ ವೋಟುಗಳ ಅಗತ್ಯವಿತ್ತು. ಟ್ರಂಪ್‌ ಗೆ 312 ಎಲೆಕ್ಟೋರ್‌ ನ ವೇಟ್‌ ಸಿಕ್ಕ! ಡೆಮೋಕ್ರೇಟ್‌ ಪಕ್ಷದ ಕಮಲಾರಿಗೆ ಮಾತ್ರ ಕೇವಲ 226 ಎಲೆಕ್ಟೋರ್‌ ನದಷ್ಟೇ ವೋಟುಗಳು ದೊರಕಿದ್ದವು. ರಿಪಬ್ಲಿಕನ್‌ ಪಕ್ಷ ಸೆನೆಟ್‌ಪ್ರತಿನಿಧಿ ಸಭಾ ಎರಡರ ಗೆಲುವನ್ನು ಪಡೆಯಿತು.

Kamala-1

ಗರ್ಭಪಾತ ಬ್ಯಾನ್ಕುರಿತಾದ ಸಂಘರ್ಷ

ಅಮೆರಿಕಾದ ಚುನಾವಣಾ ಅಭಿಯಾನದ ಮೂಲಕ ಅಬಾರ್ಶನ್‌ ಕುರಿತಾದ ಹಕ್ಕು ಒಂದು ದೊಡ್ಡ ಪಾತ್ರ ವಹಿಸಿತು. ಅಮೆರಿಕಾದ ಬಹುತೇಕ ಹೆಂಗಸರು ಗರ್ಭಪಾತಕ್ಕೆ ಕಾನೂನಿನ ಅನುಮತಿ ಬೇಕೆಂದು ಒತ್ತಾಯಿಸುತ್ತಿದ್ದರು. ಅವರೆಲ್ಲ ಅದನ್ನು ಹೆಣ್ಣಿನ ಜನ್ಮಸಿದ್ಧ ಹಕ್ಕು ಎಂದೇ ವಿಶ್ಲೇಷಿಸುತ್ತಾರೆ. ಕಮಲಾ ಅವರಿಗೆಲ್ಲ ತುಂಬು ಭರವಸೆ ನೀಡಿ, ತನ್ನ ಪಕ್ಷ ಅಧಿಕಾರಕ್ಕೆ ಬಂದರೆ, ದೇಶವಿಡೀ ಗರ್ಭಪಾತಕ್ಕೆ ಲೀಗ್‌ ಲೈಸನ್ಸ್ ಕೊಡಿಸುವುದಾಗಿ ಭರವಸೆ ತುಂಬಿದ್ದರು. ಆದರೆ ಈಗ ಟ್ರಂಪಣ್ಣ ಗೆದ್ದಿರುವುದರಿಂದ, ಈಗ ಈ ಮಂದಿ ಬಾಯಿಗೆ ಬೀಗ ಹಾಕಿಕೊಳ್ಳಬೇಕಿದೆ.

ಅಸಲಿಗೆ ಅಲ್ಲಿನ ಸುಪ್ರೀಂಕೋರ್ಟ್‌ 2022ರ ಜೂನ್‌ ತಿಂಗಳಲ್ಲಿ ಗರ್ಭಪಾತಕ್ಕೆ ಅನುಮತಿ ನೀಡುವ, ಸುಮಾರು 5 ದಶಕಗಳ ಹಳೆಯ ತೀರ್ಪನ್ನು ನಿರಾಕರಿಸಿತ್ತು. ಕೋರ್ಟ್‌ ಗರ್ಭಪಾತಕ್ಕೆ ನೈತಿಕ ಹಾಗೂ ಧಾರ್ಮಿಕ ರೂಪ ನೀಡಿ, ಅದು ತಪ್ಪು ಎಂದು ಸಾರಿತು! ಕೋರ್ಟ್‌ `ಆ್ಯಂಟಿ ಅಬಾರ್ಶನ್‌ ಲಾ'ನ್ನು ತನ್ನ ತೀರ್ಪಿನ ಪ್ರಕಾರ ಇನ್ನಷ್ಟು ಕಠಿಣಗೊಳಿಸುವ ಮಾತನಾಡಿತ್ತು. ಹೀಗಾಗಿ ಆ ದೇಶಾದ್ಯಂತ ಬಹುತೇಕ ಅಬಾರ್ಶನ್‌ ಕ್ಲಿನಿಕ್‌ ಗಳ ಬಾಗಿಲಿಗೆ ಬೀಗ ಜಡಿಯಲಾಡಿತು. ಇದರಿಂದ ದಿಕ್ಕೆಟ್ಟ ಎಷ್ಟೋ ಹೆಂಗಸರು ಕಾನೂನು ಬಾಹಿರವಾಗಿ ಕದ್ದು ಮುಚ್ಚಿ ಎಲ್ಲೆಲ್ಲೋ ಅಬಾರ್ಶನ್‌ ಮಾಡಿಸಿಕೊಳ್ಳ ತೊಡಗಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ