ಉತ್ತರಪ್ರದೇಶದ ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಮೊನಾಲಿಸಾ ಸಖತ್ ಫೇಮಸ್ ಆಗಿದ್ದಳು.  ಈಕೆ ಸೌಂದರ್ಯಕ್ಕೆ ವಿಶೇಷವಾಗಿ ಈಕೆಯ ಕಣ್ಣುಗಳಿಗೆ ಜನ ಮಾರು ಹೋಗಿದ್ರು. ಭಾರತದ ಮೊನಾಲಿಸಾ ಅಂತಲೇ ಸೋಷಿಯಲ್ ಮಿಡಿಯಾದಲ್ಲಿ ಸೆನ್ಸೆಷನ್ ಸ್ಟಾರ್ ಮಾಡಿದ್ರು. ನ್ಯಾಚುರಲ್ ಬ್ಯೂಟಿ, ಕಣ್ಣಿನಿಂದಲೇ ಹೃದಯಕ್ಕೆ ಕಲ್ಲು ಹೊಡೆದ ಮೊನಾಲಿಸಾಗೆ ಬಾಲಿವುಡ್ ನಿರ್ದೇಶಕ ಸನೋಜ್ ಮಿಶ್ರಾ ಸಿನಿಮಾ ಆಫರ್ ಕೊಟ್ಟಿದ್ರು. ಆದರೆ ಈಗ ನಿರ್ದೇಶಕ ಸನೋಜ್ ಮಿಶ್ರಾ ಅತ್ಯಾಚಾರ ಆರೋಪದಡಿ ಅರೆಸ್ಟ್ ಆಗಿದ್ದಾರೆ.

ಮೊನಾಲಿಸಾಳ ಸೌಂದರ್ಯ ಹಾಗು ಕಣ್ಸೆಳತಕ್ಕೆ ಸೋತು ಹೋಗಿದ್ದ ನಿರ್ದೇಶಕ ಸನೋಜ್ ಮಿಶ್ರಾ ಸಿನಿಮಾ ಅವಕಾಶ ನೀಡಿದ್ರು. ‘ದಿ ಡೈರಿ ಆಫ್ ಮಣಿಪುರ’ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ್ದು ಮಾತ್ರವಲ್ಲ, ನಟನಾ ಪಾಠಗಳನ್ನೂ ಕಲಿಸಲು ಪ್ರಾರಂಭಿಸಿದ್ರು. ಶೂಟಿಂಗ್ ಕೂಡ ಶುರುವಾಗಿದೆ ಅಂತ ಹೇಳಲಾಗಿತ್ತು. ಇದೀಗ ಅತ್ಯಾಚಾರ ಆರೋಪದಡಿ ಡೈರೆಕ್ಟರ್ ಸನೋಜ್ ಮಿಶ್ರಾ ಪೊಲೀಸರ ಅತಿಥಿಯಾಗಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿ ದೂರು ನೀಡಿದ ಆಧಾರದ ಮೇಲೆ ದೆಹಲಿ ಪೊಲೀಸರು ಸನೋಜ್ ಮಿಶ್ರಾರನ್ನ ಅರೆಸ್ಟ್ ಮಾಡಿ ವಿಚಾರಣೆ ನಡೆಸ್ತಿದ್ದಾರೆ.

ಸಿನಿಮಾದಲ್ಲಿ ನಟಿಸಬೇಕೆಂಬ ಕನಸು ಕಂಡಿದ್ದ ಝಾನ್ಸಿ ಎಂಬ ಪುಟ್ಟ ಊರಿನ ಯುವತಿ ದೂರಿನ ಪ್ರಕಾರ 2020ರಲ್ಲಿ ಇಬ್ಬರಿಗೂ ಪರಿಚಯವಾಗಿದೆ. ಅದು ಟಿಕ್ಟಾಕ್ ಹಾಗು ಇನ್ಸ್​ಟಾಗ್ರಾಂ ಮೂಲಕ. 2021ರಲ್ಲಿ ಸಿನಿಮಾದಲ್ಲಿ ಚಾನ್ಸ್ ಕೊಡುವ ನೆಪದಲ್ಲಿ ನಾನು ಝಾನ್ಸಿ ರೈಲ್ವೆ ಸ್ಟೇಷನ್ನಲ್ಲಿದ್ದೀನಿ ಬಂದು ಭೇಟಿ ಮಾಡು ಅಂತ ಹೇಳಿದ್ದಾರೆ. ಇದಕ್ಕೆ ನಿರಾಕರಿಸಿದ್ದಕ್ಕೆ ನಾನು ಆತ್ಮಹತ್ಯೆ ಮಾಡಿಕೊಳ್ತೀನಿ ಅಂತ ಬೆದರಿಸಿದ್ರಂತೆ. ನಂತರ ಒಪ್ಪಿದ ಆ ಯುವತಿ ಮರುದಿನ ಭೇಟಿಯಾಗಲು ಡಿಸೈಡ್ ಮಾಡಿದ್ದಾಳೆ.

ಡೈರೆಕ್ಟರ್ ಸನೋಜ್ ಮಿಶ್ರಾ ಭೇಟಿಯಾದ ಯುವತಿಯನ್ನ ಸೀದಾ ರೆಸಾರ್ಟ್​ಗೆಕರ್ಕೊಂಡು ಹೋಗಿದ್ದಾರೆ. ಅಲ್ಲಿ ಮದ್ದು ಬರುವ ಔಷಧಿ ನೀಡಿ ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಅಷ್ಟೆಯಲ್ಲ, ಪ್ರಜ್ಞಾವಸ್ಥೆಯಲ್ಲಿದ್ದಾಗ ಸಂತ್ರಸ್ತೆಯ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿಕೊಂಡು ನಾನು ಹೇಳಿದಾಗೆಲ್ಲಾ ಸಹಕರಿಸದೇ ಹೋದ್ರೆ ವಿಡಿಯೋ ರಿಲೀಸ್ ಮಾಡುವುದಾಗಿ ಹೆದರಿಸಿದ್ದಾರೆ. ಬ್ಲಾಕ್​ಮೇಲ್ ಮಾಡ್ತಾ ಮೂರ್ನಾಲ್ಕು ಬಾರಿ ಅತ್ಯಾಚಾರ ಮಾಡಿದ್ದಲ್ದೆ, ಮೂರು ಬಾರಿ ಗರ್ಭಪಾತ ಮಾಡಿಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಇನ್ನು ಯುವತಿ ಪೊಲೀಸರಿಗೆ ದೂರು ನೀಡ್ತಿದ್ದಂತೆ ನಿರ್ದೇಶಕ ಸನೋಜ್ ಮಿಶ್ರಾ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ರು. ಯುವತಿ ಮಾಡಿರುವ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದ್ದು, ಒಂದ್ವೇಳೆ ಆರೋಪಿಗೆ ಜಾಮೀನು ನೀಡಿದ್ರೆ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಕೋರ್ಟ್ ಜಾಮೀನು ನಿರಾಕರಿಸಿದೆ. ಇದರ ಬೆನ್ನಲೇ ಪೊಲೀಸರು ಸನೋಜ್ ಮಿಶ್ರಾರನ್ನ ವಶಕ್ಕೆ ಪಡೆದಿದ್ದಾರೆ. ಆ ಯುವತಿ ದೂರು ನೀಡದಿದ್ದಿದ್ರೆ ಮುಂದೊಂದು ದಿನ ಮೊನಾಲಿಸಾಗೆ ಅನ್ಯಾಯವಾಗ್ತಿತ್ತೇನೋ ಅಂತ ಕೆಲವರು ಹೇಳ್ತಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ