ಜನಪ್ರಿಯ ಬಾಲಿವುಡ್ ಹಾಗೂ ಸೌತ್ ಸಿನಿ ಇಂಡಸ್ಟ್ರಿಯ ದಿ ಬೆಸ್ಟ್ ನಟಿ ಅಂತಾನೇ ಕರೆಸಿಕೊಳ್ಳುವ ಕರುನಾಡಿನ ಮೂಲದ ಮಾದಕ ಹಾಗೂ ಮೋಹಕ ನಟಿ ಅಂತಾನೇ ಫೇಮಸ್ ಆಗಿರೋ ನಟಿ ಪೂಜಾ ಹೆಗ್ಡೆ ಮತ್ತೊಮ್ಮೆ ಸಖತ್ ಸುದ್ದಿಯಲ್ಲಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಇತ್ತೀಚೆಗಂತೂ ಸಿಕ್ಕಾಪಟ್ಟೆ ಆಕ್ಟೀವ್ ಆಗಿರೋ ಪೂಜಾ ಹೆಗ್ಡೆ ದೊಡ್ಡ ದೊಡ್ಡ ಸ್ಟಾರ್ಗಳ ಜೊತೆ ಸ್ಕ್ರೀನ್ ಹಂಚಿಕೊಂಡು ತಮ್ಮದೇ ಆದ ವಿಭಿನ್ನ ನಟನೆಯಿಂದಲೇ ಜನಮನ್ನಣೆ ಗಳಿಸಿದ್ದಾರೆ. ಪೂಜಾ ಹೆಗ್ಡೆ ಹಾಕೋ ಡ್ರೆಸ್ಗಳಾಗಲಿ.. ಸೀರೆಯಾಗಲಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ. ಇದೀಗ ಪೂಜಾ ಹೆಗ್ಡೆ ಹಾಕಿರೋ ಡ್ರೆಸ್ನಿಂದ ಈ ನಟಿ ಇಷ್ಟೊಂದು ಬೋಲ್ಡಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.
ನೀವಿಲ್ಲಿ ನೋಡ್ತಿರೋ ನಟಿ ಪೂಜಾ ಹೆಗ್ಡೆಯ ಫೋಟೋ ಇತ್ತೀಚೆಗೆ ಅಪ್ಲೋಡ್ ಮಾಡಿದ್ದು. ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರೋ ನಟಿಯ ಈ ಫೋಟೋಗೆ ಸಿಕ್ಕಾಪಟ್ಟೆ ಕಮೆಂಟ್ ಬರೋಕೆ ಶುರುವಾಗಿದೆ. ಮುತ್ತು ಕೊಡುವ ಪೋಸಿನಲ್ಲಿ ಡೀಪ್ ನೆಕ್ ಕಾಣಿಸೋ ಡ್ರೆಸ್ನಲ್ಲಿರೋದು ಟ್ರೋಲಿಗರ ಟೀಕೆಗೆ ಗುರಿಯಾಗಿದೆ. ಪೂಜಾ ಹೆಗ್ಡೆ ಹಂಚಿಕೊಂಡಿರೋ ಈ ಫೋಟೋಗಳು ತುಂಬಾನೇ ವೈರಲ್ ಆಗಿವೆ.
ಪೂಜಾ ಹೆಗ್ಡೆ ಹಲವು ಬಾರಿ ತುಂಡುಡುಗೆ ಹಾಕಿದ್ರೂ ಕೂಡ ಇಷ್ಟು ಗ್ಲಾಮರಸ್ ಆಗಿ ಕಾಣ್ತಿರ್ಲಿಲ್ಲ. ಆದ್ರೀಗ ಶಾರ್ಟ್ ಡ್ರೆಸ್ ಜೊತೆ ಡೀಪ್ ನೆಕ್ ಇರೋ ಡ್ರೆಸ್ ಹಾಕಿರೋದ್ರಿಂದ ನೆಟ್ಟಿಗರು ಈ ಫೋಟೋದಲ್ಲಿ ಗ್ಲಾಮರ್ ಅತಿಯಾಯ್ತು.. ಇಷ್ಟೊಂದು ಬೋಲ್ಡ್ ಬೇಕಿತ್ತಾ ಅಂತಾನೂ ಕಮೆಂಟ್ ಹಾಕುತ್ತಿದ್ದಾರೆ. ಅಷ್ಟೇ ಅಲ್ಲ, ಬಾಲಿವುಡ್ನಲ್ಲಿ ಅವಕಾಶ ಕಡಿಮೆ ಆಗಿದ್ದಕ್ಕೆ ಇಷ್ಟೆಲ್ಲಾ ಸರ್ಕಸ್ ಮಾಡ್ತಿದ್ದೀರಾ ಅಂತಾನೂ ಜನ ಪ್ರಶ್ನೆ ಮಾಡ್ತಿದ್ದಾರೆ.
ಅಸಲಿಗೆ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ನಟಿ ಪೂಜಾ ಹೆಗ್ಡೆ ತುಂಬಾನೇ ಫೇಮಸ್ ನಟಿಯಾಗಿದ್ದಾರೆ. ಇಂಥಾ ನಟಿ ಇಂಥಾ ಫೋಟೋಗಳನ್ನು ಹಾಕಿರೋದ್ರಿಂದ ಪೂಜಾ ಫ್ಯಾನ್ಸ್ ಕೂಡ ಅಸಮಾಧಾನಗೊಂಡಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಪೂಜಾ ಹೆಗ್ಡೆ ಸ್ಟಾರ್ ನಟ ಸಿನಿಮಾಗಳಿಗೆ ಹೀರೋಯಿನ್ ಆಗಿದ್ದಾರೆ. ಬಾಲಿವುಡ್ ಅಷ್ಟೇ ಅಲ್ಲದೇ ಸೌತ್ ಇಂಡಸ್ಟ್ರಿಯಲ್ಲೂ ದಿ ಬೆಸ್ಟ್ ನಟಿ ಅಂತಾ ಕರೆಸಿಕೊಳ್ಳೋ ಪೂಜಾ ಹೆಗ್ಡೆ ಇತ್ತೀಚೆಗೆ ಬಾಲಿವುಡ್ನ ನಟ ಶಾಹಿದ್ ಕಪೂರ್ ಜೊತೆಗೆ ‘ದೇವಾ’ ಚಿತ್ರದಲ್ಲಿ ನಟಿಸಿದ್ದರು. ಅಷ್ಟೇ ಅಲ್ಲ, ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕೂಲಿ’ಯಲ್ಲೂ ಅಭಿನಯಿಸುತ್ತಿದ್ದಾರೆ.