ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಳತಿ ಪವಿತ್ರಾಗೌಡ ಯುಗಾದಿ ಹಬ್ಬಕ್ಕೆ ತಮ್ಮ ನಿವಾಸದಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ. ಪುರೋಹಿತರೊಬ್ಬರನ್ನು ಕರೆಸಿ ಚಿಕ್ಕದಾಗಿ ಹೋಮ ಮಾಡಿಸಿ ಒಬ್ಬರೇ ಕುಳಿತು ಅಗರಬತ್ತಿ ಹಚ್ಚಿ.. ಹೂ ಹಾಕಿ.. ಹೋಮದ ಕುಂಡಕ್ಕೆ ತುಪ್ಪವನ್ನೂ ಸುರಿದು.. ಭಕ್ತಿಯಿಂದ ನಮಿಸಿ ಪೂಜೆ ನೆರವೇರಿಸಿದ್ದಾರೆ. ಈ ಪೂಜೆಯಲ್ಲೂ ಪವಿತ್ರಾಗೌಡ ತುಂಬಾ ಆಕರ್ಷಣೀಯವಾಗಿ ಕಾಣಿಸುತ್ತಿದ್ದಾರೆ. ರೇಷ್ಮೆ ಬಣ್ಣದ ಡ್ರೆಸ್ ಹಾಕಿಕೊಂಡು ಹಣೆಗೆ ಕುಂಕುಮವಿಟ್ಟು.. ತುಟಿಗೆ ಲಿಪ್ಸ್ಟಿಕ್ ಹಚ್ಚಿಕೊಂಡು ಭಕ್ತಿಯಿಂದ ಪೂಜೆ ಮಾಡುತ್ತಿದ್ರೂ ಆ ಕಿರುನಗೆ ಮತ್ತಿನ್ನೇನೋ ಹೇಳಿದಂತಿತ್ತು. ಈ ಪೂಜೆಯ ವಿಡಿಯೋ ಜೊತೆಗೆ ಮತ್ತಷ್ಟು ಕುತೂಹಲ ಮೂಡಿಸಿದ್ದು ಪವಿತ್ರಾಗೌಡ ಹಾಕಿದ ಆ ಒಂದು ಸಾಲಿನ ಪೋಸ್ಟ್.
‘‘The evil eye is always watching, but it can’t touch me, in a world full of negativity, let your evil eye shine with positivity. Happy Ugadi. ಅಂತಾ ಪೋಸ್ಟ್ ಹಾಕಿರೋದು ಸಾಕಷ್ಟು ಮರ್ಮದಿಂದ ಕೂಡಿದೆ. “ಕೆಟ್ಟ ಕಣ್ಣು ಯಾವಾಗಲೂ ನೋಡುತ್ತಿರುತ್ತದೆ. ಆದರೆ ಅದು ನನ್ನನ್ನು ಟಚ್ ಮಾಡಲಾಗೋದಿಲ್ಲ. ಈ ನೆಗೆಟಿವಿಟಿ ತುಂಬಿರುವ ಜಗತ್ತಿನಲ್ಲಿ ನಿಮ್ಮ ಕೆಟ್ಟ ಕಣ್ಣು ಕೂಡ ಪಾಸಿಟಿವಿಯಿಂದ ಮಿಂಚಲಿ. ಯುಗಾದಿ ಹಬ್ಬದ ಶುಭಾಶಯಗಳು” ಅಂತಾ ಪವಿತ್ರಾ ಗೌಡ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದು ಯಾರಿಗೋ ಟಕ್ಕರ್ ಕೊಟ್ಟಂತಿದೆ.
ಈ ಪೋಸ್ಟ್‌ಗೆ ಪವಿತ್ರಾ ಹಾಗೂ ದರ್ಶನ್ ಅಭಿಮಾನಿಗಳೂ ಕೂಡ ಕಮೆಂಟ್ ಹಾಕಿದ್ದಾರೆ. ಅಕ್ಕ.. ಬಾಸ್ ಎಲ್ಲಿ.. ಒಬ್ರೇ ಚೆನಾಗಿ ಕಾಣ್ತಿಲ್ಲ..? ಅಕ್ಕಾ.. ಬಾಸ್ ಇಲ್ಲದೇ ಪೂಜೆ ಮಾಡಿದ್ರೆ ವೇಸ್ಟ್.. ಅಕ್ಕಾ.. ನೀವೊಬ್ರೇ ಹೇಗಿರ್ತೀರಿ..?.. ಅಂತೆಲ್ಲಾ ಕಮೆಂಟ್ ಹಾಕಿದ್ದಾರೆ. ಅಷ್ಟೇ ಅಲ್ಲ, “2025ರ ಯುಗಾದಿಯು ವಿಶ್ವಾವಸು ನಾಮ ಸಂವತ್ಸರವನ್ನು ಹೊತ್ತು ತರಲಿದೆ. ಹಿಂದಿನ ವರ್ಷ ಕಳೆದ ನೋವು, ದುಃಖಗಳೆಲ್ಲಾ ಮಾಯವಾಗಿ, ಹೊಸ ವರ್ಷದ ಈ ಯುಗಾದಿ ನಿಮಗೆ ಸಂತೋಷ, ಶಾಂತಿ, ಸಮೃದ್ಧಿಯನ್ನು ತರಲಿ.. ಸರ್ವರಿಗೂ 2025ರ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು” ಅಂತಾ ನೆಟ್ಟಿಗರು ಪವಿತ್ರಾ ಗೌಡ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.
ಆದ್ರಿಲ್ಲಿ, ಪವಿತ್ರಾಗೌಡ ಹೇಳಿರೋ ಆ ಕೆಟ್ಟ ಕಣ್ಣು ಯಾರು..? ಅಂತಾನೂ ಕೆಲವರು ಪ್ರಶ್ನೆ ಮಾಡಿದ್ದಾರೆ. ಇನ್ನು ನನ್ನನ್ನ ಟಚ್ ಮಾಡೋಕೆ ಆಗೋದಿಲ್ಲ ಅಂತಾನೂ ಹೇಳಿರೋದ್ರಿಂದ ದರ್ಶನ್ ಪತ್ನಿ ವಿಜಯಲಕ್ಷ್ಮೀಗೆ ಏನಾದ್ರೂ ಮೆಸೇಜ್ ಕೊಟ್ರಾ ಅಂತಾನೂ ಪ್ರಶ್ನೆ ಮೂಡುತ್ತಿದೆ. ಕೆಲ ದಿನಗಳ ಹಿಂದೆ ಪವಿತ್ರಾ ಗೌಡ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವಿಶೇಷವಾದ ವಿಡಿಯೋ ಶೇರ್ ಮಾಡಿದ್ದರು.
2024 ಜೂನ್ 8 ರಂದು ನಡೆದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಆಗಿರುವ ಪವಿತ್ರಾಗೌಡ ನಟ ದರ್ಶನ್ ಸೇರಿದಂತೆ ಇತರೆ 17 ಜನರು ಜೈಲು ಸೇರಿದ್ದರು. ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರಬಂದಿರೋ ಪವಿತ್ರಾಗೌಡ ಮತ್ತು ದರ್ಶನ್ ಗ್ಯಾಂಗ್ ಈ ಕೇಸ್ನಿಂದ ಹೊರಬರೋಕೆ ಸರ್ಕಸ್ ಮಾಡ್ತಿದೆ. ಇದರ ಮಧ್ಯೆ ನಟ ದರ್ಶನ್ ಪವಿತ್ರಾಗೌಡರನ್ನು ಮತ್ತೆ ಭೇಟಿ ಮಾಡದೇ ಪತ್ನಿ ವಿಜಯಲಕ್ಷ್ಮಿ ಜೊತೆಗೇ ಇರೋದ್ರಿಂದ ಪವಿತ್ರಾಗೌಡ ಒಬ್ಬಂಟಿಯಾಗಿದ್ದಾರೆ.