ಟಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಪ್ರಭಾಸ್‌ಗೆ ಮದುವೆ ಯಾವಾಗ ಅಂತಾ ಕೆಲ ವರ್ಷಗಳಿಂದ ಎಲ್ರೂ ಕೇಳ್ತಾನೆ ಇದ್ರು. ಪ್ರಭಾಸ್ ಯಾವುದೇ ಸಂದರ್ಶನದಲ್ಲಿ ಭಾಗಿಯಾದ್ರೂ ಕೂಡ ಅಲ್ಲೂ ಅದೇ ಪ್ರಶ್ನೆ. ಸೋಷಿಯಲ್ ಮಿಡಿಯಾದಲ್ಲಂತೂ ಸಿಕ್ಕಸಿಕ್ಕ ಹೀರೋಯಿನ್ಗಳ ಜೊತೆ ಸಿಕ್ಕ ಸಿಕ್ಕ ಸುಂದರಿಯರ ಜೊತೆ ಅದೆಷ್ಟೊ ಬಾರಿ ಮದುವೆ ಆಗೋಗಿದೆ. ಆದ್ರೀಗ ಅದೆಲ್ಲಾ ಗಾಳಿ ಸುದ್ದಿಗೆ ಗುನ್ನಾ ಹೊಡೆಯೋ ರೀತಿ ನಟ ಪ್ರಭಾಸ್‌ಗೆ ಕೊನೆಗೂ ಕಂಕಣಭಾಗ್ಯ ಕೂಡಿ ಬಂದಿದೆ.
ಸ್ನಿಗ್ದ ಸುಂದರಿ.. ಬಾಹುಬಲಿ ಖ್ಯಾತಿಯ ಅನುಷ್ಕಾ ಶೆಟ್ಟಿ ಜೊತೆ ಇನ್ನೇನು ಮದ್ವೆ ಆಗೋಗುತ್ತೆ ಅಂತಾನೇ ಎಲ್ರೂ ಮಾತನಾಡಿಕೊಳ್ತಿದ್ರು. ಜೊತೆಗೆ ಇಬ್ಬರ ಮ್ಯಾಚಿಂಗ್ ಕೂಡ ಸಖತ್ತಾಗೇ ಇತ್ತು. ಹಾಗಾಗಿ ಬಾಹುಬಲಿ ಸಿನಿಮಾ ತೆರೆಗೆ ಬಂದಾಗಿನಿಂದಲೂ ಇವರೇ ಫಿಕ್ಸ್ ಅಂತಾ ಟಾಲಿವುಡ್ ಕಲಾವಿದರೂ ಕೂಡ ಹಾಗೆ ಅಂದುಕೊಂಡಿದ್ರು. ಆದ್ರೆ, ಪ್ರಭಾಸ್, ಅನುಷ್ಕಾ ಶೆಟ್ಟಿ ಮಾತ್ರ ನಾವಿಬ್ಬರೂ ಫ್ರೆಂಡ್ಸ್ ಅಷ್ಟೇ ಅಂತಾ ಕ್ಲಾರಿಟಿ ಕೊಟ್ಟಿದ್ರು. ಇದೀಗ ಆ ಕ್ಲಾರಿಟಿ ಜೊತೆಗೆ ಪ್ರಭಾಸ್ ಯಾರನ್ನ ಮದ್ವೆ ಆಗ್ತಾರೆ ಅನ್ನೋ ಸುದ್ದಿ ಕನ್ಫರ್ಮ್ ಆಗಿದೆ. ಹೈದರಾಬಾದ್ ಮೂಲದ ದೊಡ್ಡ ಉದ್ಯಮಿಯೊಬ್ಬರ ಪುತ್ರಿಯನ್ನು ಕೈಹಿಡಿಯಲಿದ್ದಾರಂತೆ ಡಾರ್ಲಿಂಗ್ ಪ್ರಭಾಸ್. ಹೆಚ್ಚು ಆಡಂಬರವಿಲ್ಲದೇ ಸರಳವಾಗಿ, ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಮದುವೆ ನಡೆಯಲಿದೆ ಎಂದು ವರದಿಯಾಗಿದೆ.
ಪ್ರಭಾಸ್ ಮದುವೆ ಸೀಕ್ರೆಟ್ ಆಗಿ ನಡೆಯಲಿದ್ದು, ತೆಲುಗಿನ ರೆಬಲ್ ಸ್ಟಾರ್ ಕೃಷ್ಣಂ ರಾಜು ಅವರ ಪತ್ನಿ ಶ್ಯಾಮಲಾ ದೇವಿ ಅವರು ಮದುವೆಯ ಹೊಣೆ ಹೊತ್ತಿದ್ದಾರೆ ಎನ್ನಲಾಗಿದೆ. ಸದ್ಯ ಟಾಲಿವುಡ್‌ನಲ್ಲಿ ಎಲ್ಲೆಲ್ಲೂ 45 ವರ್ಷದ ಪ್ರಭಾಸ್ ಬೇಗ ಮದುವೆ ಆಗ್ತಾರೆ ಅಂತ ಸುದ್ದಿ ಹರಿದಾಡ್ತಿದೆ. ಸಾವಿರಾರು ಕೋಟಿ ಒಡೆತನದ ಬಿಗ್ ಉದ್ಯಮಿಯೊಬ್ಬರ ಪುತ್ರಿ ಜೊತೆ ಪ್ರಭಾಸ್ ನಿಶ್ಚಿತಾರ್ಥವಾಗಿರೋ ಸುದ್ದಿ ಕೇಳಿ ಅನುಷ್ಕಾ ಅಭಿಮಾನಿಗಳು ಬೇಸರದಲ್ಲಿದ್ದಾರಂತೆ
ನಟ ಕೃಷ್ಣಂ ರಾಜು ಅವರ ಉತ್ತರಾಧಿಕಾರಿಯಾಗಿ ಬೆಳ್ಳಿತೆರೆಗೆ ಬಂದು ತನಗೊಂದು ವಿಶೇಷ ಇಮೇಜ್ ಸೃಷ್ಟಿಸಿಕೊಂಡ ಪ್ರಭಾಸ್, ಕ್ರಮೇಣ ಪ್ಯಾನ್-ಇಂಡಿಯಾ ತಾರೆಯಾಗಿ ಮಿಂಚುತ್ತಿದ್ದಾರೆ. ಬಿಲ್ಲಾ, ಛತ್ರಪತಿ, ಮಿರ್ಚಿ, ಬಾಹುಬಲಿ, ಕಲ್ಕಿ, ಸಲಾರ್ನಂತಹ ಹತ್ತಾರು ಸಿನಿಮಾಗಳಿಂದ ಅವರು ವಿಶ್ವಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಸದ್ಯದಲ್ಲೇ ದಿ ರಾಜಾ ಸಾಬ್ ಚಿತ್ರ ಕೂಡ ರಿಲೀಸ್ ಆಗಲಿದ್ದು, ಈ ಮದ್ವೆ ವಿಚಾರದ ಜೊತೆ ಮತ್ತಷ್ಟು ಕ್ರೇಜ್ ಹೆಚ್ಚಾಗಲಿದೆ.