ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಪುತ್ರಿ ಐಶ್ವರ್ಯ ಡಿಕೆಎಸ್‌ ಹೆಗಡೆ ತಮ್ಮ ಹೊಸ ಯೂಟ್ಯೂಬ್‌ ಚಾನೆಲ್‌ ಶುರುಮಾಡಿದ್ದಾರೆ. ‘ಬಡ್ಡೀಸ್‌ ಬೆಂಚ್‌’ ಅನ್ನೋ ಕಾರ್ಯಕ್ರಮದ ಮೂಲಕ ಹೊಸ ಟಾಕ್‌ ಶೋ ಶುರು ಮಾಡಿದ್ದು ಮೊಟ್ಟ ಮೊದಲನೇ ಅತಿಥಿಯಾಗಿ ಸ್ವಾಂಡಲ್‌ವುಡ್‌ ಕ್ವೀನ್‌ ರಮ್ಯಾ ಬಂದಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್‌ ಅವರು ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲೂ ಮಿಂಚುತ್ತಿದ್ರೆ, ಡಿಕೆ ಶಿವಕುಮಾರ್ ಅವರ ಮೊದಲನೇ ಮಗಳು ಐಶ್ವರ್ಯ ಹೆಗಡೆ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಹೆಸರು ಮಾಡಿದ್ದಾರೆ. ಎಸ್ಎಂ ಕೃಷ್ಣ ಅವರ ಮೊಮ್ಮಗ, ಕೆಫೆ ಕಾಫಿ ಡೇ ಸಂಸ್ಥಾಪಕ, ದಿವಂಗತ ಸಿದ್ಧಾರ್ಥ ಅವರ ಪುತ್ರ ಅಮರ್ಥ್ಯ ಅವರ ಕೈ ಹಿಡಿದ ಐಶ್ವರ್ಯ ತನ್ನದೇ ಒಡೆತನದ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ.

ಇದೀಗ ‘ಬಡ್ಡೀಸ್‌ ಬೆಂಚ್‌’ ಅನ್ನೋ ಹೊಸ ಟಾಕ್‌ ಶೋ ಮೂಲಕ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಜೊತೆ ಸಖತ್ತಾಗಿ ಹರಟೆ ಹೊಡೆದಿದ್ದಾರೆ. ಐಶ್ವರ್ಯಾ ಜೊತೆ ನಡೆದ ಕಾರ್ಯಕ್ರಮದ ಬಗ್ಗೆ ಫೋಟೋಗಳನ್ನು ನಟಿ ರಮ್ಯಾ ಪೋಸ್ಟ್ ಮಾಡಿದ್ದು ಚಿಕ್ಕವಯಸ್ಸಿನಲ್ಲೇ ಸಾಧನೆ ಶಿಖರವೇರಿದ ಐಶ್ವರ್ಯಾ ಅವರನ್ನು ಕೊಂಡಾಡಿದ್ದಾರೆ.

‘‘ಮೈ ಸ್ವೀಟ್​ ಐಶು ನೀನು ಅದ್ಭುತ ಮಹಿಳೆಯಾಗಿ ಬದಲಾಗಿರುವುದನ್ನು ನೋಡಿ ನನಗೆ ತುಂಬಾ ಹೆಮ್ಮೆ ಅನಿಸಿದೆ. ನಿನಗೆ ಸ್ವಿಮ್ಮಿಂಗ್​ ಕಲಿಸಿದ್ದು, ಒಟ್ಟಿಗೆ ಶಾಪಿಂಗ್ ಮಾಡಿದ್ದು, ನನ್ನ ಚಿತ್ರವನ್ನ ಥಿಯೇಟರ್​ ನಲ್ಲಿ ನೋಡಿ ಕೂಗಿದ್ದು ನೆನಪಾಗ್ತಿದೆ. ಇಂದು ನಿನ್ನೊಂದಿಗೆ ವೇದಿಕೆ ಹಂಚಿಕೊಳ್ಳುವುದು ಮತ್ತು ನೀನು ಅನೇಕ ಯುವತಿಯರಿಗೆ ಸ್ಫೂರ್ತಿ ಆಗಿರುವುದನ್ನ ನೋಡುವುದು, ಎಲ್ಲವೂ ಒಂದು ಒಳ್ಳೆಯ ಕ್ಷಣವಾಗಿದೆ. ನಿನಗೆ ಯಾವಾಗಲೂ ಒಬ್ಬ ಸ್ನೇಹಿತೆ ಆಗಿರುತ್ತೇನೆ ಐಶು’’ ಎಂದು ನಟಿ ರಮ್ಯಾ ತಮ್ಮ ಇನ್ಸ್​ಟಾಗ್ರಾಮ್​ ನಲ್ಲಿ ಬರೆದಿದ್ದಾರೆ.

ಇತ್ತ ಐಶ್ವರ್ಯಾ ಕೂಡ ಕಾರ್ಯಕ್ರಮದ ಪ್ರೋಮೋವನ್ನು ಇನ್ಸ್​ಟಾದಲ್ಲಿ ಶೇರ್ ಮಾಡಿದ್ದಾರೆ. ‘‘ಕೆಲವು ಸಂಭಾಷಣೆಗಳು ನಿಮ್ಮನ್ನು ಯೋಚಿಸುವಂತೆ ಮಾಡುತ್ತದೆ ಮತ್ತು ಕೆಲವು ನಿಮ್ಮನ್ನು ನಗುವಂತೆ ಮಾಡುತ್ತದೆ, ಆದರೆ ಅತ್ಯುತ್ತಮವಾದವು ಎರಡನ್ನೂ ಮಾಡುತ್ತದೆ. ಈ ಬಡ್ಡಿ ಬೆಂಚ್ ಟಾಕ್ ಅವುಗಳಲ್ಲಿ ಒಂದು’’ ಎಂದು ಬರೆದಿದ್ದಾರೆ. ‘‘ಆಧ್ಯಾತ್ಮಿಕತೆಯಿಂದ ಪುಸ್ತಕಗಳವರೆಗೆ, ಜೀವನದ ತಿರುವುಗಳಿಂದ ಮೋಜಿನವರೆಗೆ, ಈ ಸಂಚಿಕೆಯು ಎಲ್ಲವನ್ನೂ ಹೊಂದಿತ್ತು. ಆದರೆ ಅದನ್ನು ನಿಜವಾಗಿಯೂ ವಿಶೇಷವಾಗಿಸಿದ್ದು ನಟಿಯಾಗಿ ಮಾತ್ರವಲ್ಲದೆ ಮಾದರಿಯ ನಿರ್ಭೀತ, ಸಬಲೀಕೃತ ಮಹಿಳೆಯಾಗಿ ಹೇಗೆ ಬೆಳೆದಿದ್ದಾರೆ ಎಂಬುದನ್ನು ನೋಡುವುದು. ಇದು ಕೇವಲ ಸಂಭಾಷಣೆಗಿಂತ ಹೆಚ್ಚಿನದಾಗಿತ್ತು ಪೂರ್ಣ ಸಂಚಿಕೆಯು ನನ್ನ YouTube ಚಾನಲ್‌ನಲ್ಲಿ ಶೀಘ್ರದಲ್ಲೇ ಬರಲಿದೆ; ಟ್ಯೂನ್ ಆಗಿರಿ!’’ ಎಂದು ಐಶ್ವರ್ಯಾ ಬರೆದಿದ್ದಾರೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ