– ರಾಘವೇಂದ್ರ ಅಡಿಗ ಎಚ್ಚೆನ್.
ಹೆಸರಿನಲ್ಲೆ ನಗು ತರಿಸುವ ’ತಿಕ್ಲು ರಾಮ’ ಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್‌ನ್ನು ಆ ದಿನಗಳು ಚೇತನ್ ಸಂಕ್ರಾಂತಿ ಹಬ್ಬದ ಶುಭದಿನದಂದು ಎಂಎಂಬಿ ಲೆಗಸಿದಲ್ಲಿ ತುಂಬಿದ ಆಹ್ವಾನಿತರ ಮುಂದೆ ಅನಾವರಣಗೊಳಿಸಿದರು. ಕರಿಷ್ಮ-ಶ್ರಾವ್ಯ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ, ಶೃತಿ.ಜಿ.ಬಿ ಮತ್ತು ಕೋಮಲ ನಟರಾಜು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಮಂಜುಕವಿ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಇದೇ ಕಾಡಿನಲ್ಲಿ ನಾನು ನಿನ್ನ ಉಸಿರು ನಿಲ್ಲಸದೆ ಹೋದರೆ ನನ್ನ ಹೆಸರು ಅಂತ ಗರ್ಜಿಸುತ್ತಾ ನಗುವ ಸುಚೇಂದ್ರ ಪ್ರಸಾದ್ ಹಿನ್ನಲೆ ಧ್ವನಿಯ ಒಂದು ನಿಮಿಷದ ಟೈಟಲ್ ಟೀಸರ್ ಗಮನ ಸೆಳೆಯಿತು. ಇದೇ ಸಂದರ್ಭದಲ್ಲಿ ಡಾ.ರಾಜ್‌ಕುಮಾರ್ ಮೊಮ್ಮಗ ಷಣ್ಮುಗ ಗೋವಿಂದರಾಜ್ ಮತ್ತು ’ಬಡವರ ಮಕ್ಕಳು ಬೆಳೀಬೇಕು ಕಂಡ್ರಯ್ಯ’ ಚಿತ್ರದ ನಿರ್ಮಾಪಕ ಸಿ.ಎಸ್.ವೆಂಕಟೇಶ್ ಉಪಸ್ತಿತರಿದ್ದರು. *ತಾರಾಗಣದಲ್ಲಿ* ಡಾ.ರಾಜ್‌ವೀರ್, ಸಂಗೀತ, ಮಿತ್ರ, ಭಾಗ್ಯಶ್ರೀ, ಶೃತಿ.ಬಿ, ಗೋವಿಂದೇಗೌಡ, ವಿನೋದ್ ಗೊಬ್ಬರಗಾಲ, ಸುಚೇಂದ್ರ ಪ್ರಸಾದ್, ಮಂಡ್ಯ ಸಿದ್ದು, ಪವಿತ್ರ ಇನ್ನು ಅನೇಕ ಕಲಾವಿದರು ನಟಿಸುತ್ತಿದ್ದಾರೆ

ಹಿನ್ನಲೆ ಸಂಗೀತ ವಿನು ಮನಸು, ಛಾಯಾಗ್ರಹಣ ರಾಜ್ ಕಡೂರು-ನಾಗರಾಜಮೂರ್ತಿ, ಸಂಕಲನ ವೆಂಕಿ.ಯುಡಿವಿ, ಸಾಹಸ ಅಲ್ಟಿಮೇಟ್ ಶಿವು, ನೃತ್ಯ ಜಗ್ಗು ಅವರದಾಗಿದೆ. ಅಂದಹಾಗೆ ಮೋಷನ್ ಪೋಸ್ಟರ್ ಎಂ.ಕೆ.ಆಡಿಯೋದಲ್ಲಿ ರಿಲೀಸ್ ಆಗಿದೆ. ನಂತರ ಮಾತನಾಡಿದ ಚೇತನ್, ಸಂಪೂರ್ಣ ಕಲಾವಿದರು, ಸಾಹಿತ್ಯ ಒಲವು ಇರುವ ಮಂಜುಕವಿ ಅವರಿಂದ ಮಾತ್ರ, ಇಂತಹ ಚಿತ್ರ ಮಾಡಲು ಸಾಧ್ಯ. ಚಿತ್ರರಂಗ ಅಭಿವೃದ್ದಿಗೊಳ್ಳಬೇಕಾದರೆ ಕ್ರಿಯಾಶೀಲತೆ ಇರುವ ತಂಡದಿಂದ ಆಗುತ್ತದೆ. ಅಂತಹುದೆ ಟೀಂನ್ನು ಅವರು ಕಟ್ಟಿಕೊಂಡಿದ್ದಾರೆ ತಿಕ್ಲು ರಾಮ ಹಾಸ್ಯಾಸ್ಪದ ಸಿನಿಮಾ ಅನಿಸಿದರೂ, ಸಮಾಜಕ್ಕೆ ಸಂದೇಶ, ಕುಟುಂಬ ಹಾಗೂ ಭಾವನಾತ್ಮಕ ವಿಷಯಗಳನ್ನು ಹೇಳ ಹೊರಟಿದ್ದಾರೆ. ಇವುಗಳು ಜನರ ಮನಸ್ಸಿಗೆ ನಾಟಲಿ ಎಂದರು. ನಿರ್ದೇಶಕರು ಹೇಳುವಂತೆ, ಸಮಾಜಕ್ಕೆ ಬೆನ್ನಲುಬಾಗಿ ಇರ‍್ತಾರೆ ಎನ್ನುವುದಕ್ಕೆ ಸಾಕ್ಷಿ ಚೇತನ್ ಸರ್.

ನಾಯಕ ಡಾ.ರಾಜ್ ವೀರ್ ಕಥೆಗೆ ಪೋಷಣೆ ಮಾಡುತ್ತಿದ್ದೇನೆ. ಮೊದಲರ್ಧ ಹಳ್ಳಿ ಸೊಗಡು ಇರಲಿದ್ದು, ದ್ವಿತೀಯಾರ್ಧ ನೋಡುಗರನ್ನು ಬೇರೆ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಎಲ್ಲೆಲ್ಲಿ ಪ್ರಾಣಿಗಳ ಅವಶ್ಯಕತೆ ಇದೆಯೋ, ಅದನ್ನು ಉತ್ತಮವಾದ ತಂತ್ರಜ್ಘಾನ ಬಳಸಿಕೊಂಡು, ನಿಜವಾದ ಪ್ರಾಣಿಗಳನ್ನೇ ನೋಡ್ರಿದಂತೆ ಭಾಸವಾಗುವ ದೃಶ್ಯಗಳು ಇರಲಿದೆ. ಸತ್ಯ ಘಟನೆಯಲ್ಲಿ ಆತ ಶ್ರೀರಾಮ. ಮುಂದೆ ತಿಕ್ಲು ರಾಮ ಆಗುವುದಕ್ಕೆ ಕಾರಣ ಏನು ಎಂಬುದಕ್ಕೆ ಉತ್ತರ ಚಿತ್ರಮಂದಿರಕ್ಕೆ ಬರಬೇಕು. ಹಾಸನ, ಫಲವತ್ತಾದ ಹಸಿರು ಇರುವ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ.

ಮೊದಲಬಾರಿಗೆ ತಿಕ್ಲು ರಾಮ ಪ್ರಾಣಿಗಳ ಜತೆ ಇರುವ ಒಡನಾಟವನ್ನು ಪ್ರೇಕ್ಷಕರ ಗಮನ ಸೆಳಯುವಂತೆ ಬಿಂಬಿಸಲಾಗುತ್ತಿದೆ. ಮಕ್ಕಳಿಂದ ವೃದ್ದರವರೆಗೂ ನೋಡುವ ಕೌಟಂಬಿಕ ಚಿತ್ರ ಎಂದು ಮಂಜುಕವಿ ಮಾಹಿತಿ ನೀಡಿದರು. ಬಾಲ್ಯದಲ್ಲಿ ಬುದ್ದನನ್ನು ಹುಚ್ಚ ಅಂತಲೂ, ಸ್ವಾಮಿ ವಿವೇಕಾನಂದರನ್ನು ಪಾಗಲ್ ಬಿಲ್ಲೆ ಎಂದು ಕರೆಯುತ್ತಿದ್ದು, ಮುಂದೆ ಅವರುಗಳು ದೇಶಕ್ಕೆ ಮಾದರಿಯಾದರು. ಇವರ ಸ್ಪೂರ್ತಿಯಿಂದಲೇ ಇದೇ ಹೆಸರನ್ನು ಇಡಲಾಯಿತು.

ಚಿತ್ರದಲ್ಲಿ ಪರಿಸರ, ಸಾಮಾಜಿಕ ಕಳಕಳಿ, ಸಂಸಾರ ನಡೆಸುವ ಹೆಣ್ಣು ಮಕ್ಕಳಿಗೆ ಒಂದಾಗಿ ಬಾಳುವಂತ ಸನ್ನಿವೇಶಗಳು ಇರಲಿದೆ. ಸೈಲೆಂಟ್ ಆಗಿದ್ದರೆ ರಾಮ, ಕೊಡಲಿ ಹಿಡಿದರೆ ತಿಕ್ಲು ರಾಮ. ಹಾಗಂತ ರಕ್ತಪಾತವನ್ನು ವೈಭವಿಕರಿಸುವುದಿಲ್ಲ. ಪ್ರಸಕ್ತ ಎಷ್ಟೋ ಜನ ವಿದ್ಯಾವಂತರಾಗಿದ್ದರೂ, ಅವಿದ್ಯಾವಂತರಾಗಿ ವರ್ತಿಸುತ್ತಿದ್ದಾರೆ. ಇಂತಹ ವಿಷಯಗಳನ್ನು ಅರ್ಥಪೂರ್ಣ ದೃಶ್ಯಗಳೊಂದಿಗೆ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ನಾನು ಕೇಳಿದಂತ, ನೋಡಿದಂತ ಘಟನೆಗಳನ್ನು ಕಥೆಯಲ್ಲಿ ದಾಖಲಿಸಿದ್ದೇನೆಂದು ನಾಯಕ ಡಾ.ರಾಜ್ ವೀರ್ ಹೇಳಿದರು.





