– ರಾಘವೇಂದ್ರ ಅಡಿಗ ಎಚ್ಚೆನ್.

ಆರಂಭದಲ್ಲಿ ಶೈನ್ ಶೆಟ್ಟಿ ಬೆಂಗಳೂರಿನ ಬನಶಂಕರಿಯಲ್ಲಿ ಈ ಫುಡ್ ಟ್ರಕ್ ಆರಂಭಿಸಿದ್ದರು. ಬಿಗ್ ಬಾಸ್ ಗೆ ಹೋಗಿದ್ದ ಸಮಯದಲ್ಲಿ ಅವರ ತಾಯಿ ಇದನ್ನು ನಡೆಸಿಕೊಂಡಿದ್ದರು. ಗಲ್ಲಿ ಕಿಚನ್ ಎರಡು ಬ್ರಾಂಚ್‌ಗಳು ಬೆಂಗಳೂರಿನಲ್ಲಿವೆ. ಆದರೆ ದಿಢೀರನೆ ತನ್ನ ಗಲ್ಲಿ ಕಿಚನ್ ರೆಸ್ಟೋರೆಂಟ್‌ಗೆ ನಟ ಶೈನ್ ಶೆಟ್ಟಿ ಗುಡ್‌ಬೈ ಹೇಳಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 7ರ (Bigg Boss Kannada 7) ಸ್ಪರ್ಧಿ ಶೈನ್ ಶೆಟ್ಟಿ ನಟನಾಗಿ ಮಾತ್ರವಲ್ಲದೆ ಹೋಟೆಲ್ ಉದ್ಯಮ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡು ಇದರಲ್ಲಿ ಯಶಸ್ಸು ಕಂಡವರು. ಚಿಕ್ಕದಾಗಿ ಶುರು ಮಾಡಿದ್ದ ಗಲ್ಲಿ ಕಿಚನ್ ನೋಡ ನೋಡುತ್ತಲೇ ದೊಡ್ಡದಾಗಿ ಬೆಳೆದಿತ್ತು. ಸಿನಿಮಾ ನಾಯಕನಾಗಬೇಕೆಂದು ಸೀರಿಯಲ್ ಬಿಟ್ಟು ಹೊರ ಬಂದವನಿಗೆ ಸಿನಿಮಾ ನಾಯಕನಾಗುವ ಅವಕಾಶ ಸಿಗದೇ ಇದ್ದಾಗ ಕೈ ಹಿಡಿದದ್ದು ಗಲ್ಲಿ ಕಿಚನ್. ಗಲ್ಲಿ ಕಿಚನ್ ಒಂದು ಫುಡ್ ಟ್ರಕ್ ಆಗಿದ್ದು, ಅವಕಾಶಗಳು ಸಿಗದೆ ಕಂಗಾಲಾಗಿದ್ದ ಶೈನ್ ಕೈ ಹಿಡಿಯಿತು. ಇದೀಗ ದಿಢೀರನೆ ಗಲ್ಲಿ ಕಿಚನ್ ಅನ್ನು ಕ್ಲೋಸ್ ಮಾಡಲು ಮುಂದಾಗಿದ್ದಾರೆ.

1000358858

ಆರಂಭದಲ್ಲಿ ಶೈನ್ ಶೆಟ್ಟಿ ಬೆಂಗಳೂರಿನ ಬನಶಂಕರಿಯಲ್ಲಿ ಈ ಫುಡ್ ಟ್ರಕ್ ಆರಂಭಿಸಿದ್ದರು. ಬಿಗ್ ಬಾಸ್ ಗೆ ಹೋಗಿದ್ದ ಸಮಯದಲ್ಲಿ ಅವರ ತಾಯಿ ಇದನ್ನು ನಡೆಸಿಕೊಂಡಿದ್ದರು. ಗಲ್ಲಿ ಕಿಚನ್ ಎರಡು ಬ್ರಾಂಚ್‌ಗಳು ಬೆಂಗಳೂರಿನಲ್ಲಿವೆ. ಆದರೆ ದಿಢೀರನೆ ತನ್ನ ಗಲ್ಲಿ ಕಿಚನ್ ರೆಸ್ಟೋರೆಂಟ್‌ಗೆ ನಟ ಶೈನ್ ಶೆಟ್ಟಿ ಗುಡ್‌ಬೈ ಹೇಳಿದ್ದಾರೆ. ಗಲ್ಲಿ ಕಿಚನ್‌ಗೆ ಯಾಕೆ ವಿದಾಯ ಹೇಳುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪತ್ರ ಬರೆದು ತಿಳಿಸಿದ್ದಾರೆ.

ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ, ಜೀವನದ ಕೆಲವೊಂದು ಪ್ರಯಾಣ ನಮ್ಮ ಅಸ್ತಿತ್ವವನ್ನು ತೋರಿಸಿ ನಮ್ಮ ವ್ಯಕ್ತಿತ್ವವನ್ನು ಎತ್ತಿ ಹಿಡಿಯುತ್ತೆ ನನ್ನ ಲೈಫ್ ಅಲ್ಲಿ ಅದು ಗಲ್ಲಿ ಕಿಚನ್. ಜೀವನ ಸಾಗಿಸೋಕೆ ಅಂತ ಶುರು ಮಾಡಿದ ಒಂದು ಪುಟ್ಟ ದೋಸೆ ಕ್ಯಾಂಪ್ ನೀವೆಲ್ಲ ಇಷ್ಟಪಟ್ಟು ಕೊಂಡಾಡಿ ಎರಡು ಬ್ರಾಂಚ್‌ಗಳ ಹೋಟೆಲ್ ಮಟ್ಟಕ್ಕೆ ಪ್ರೀತಿಯಿಂದ ಬೆಳೆಸಿದ್ರಿ. ಆ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರಋಣಿ ಎಂದು ಶೈನ್ ಪತ್ರ ಬರೆದಿದ್ದಾರೆ.

“ಬೆಳೀತಾ ಬೆಳಸ್ತಾ ಮುಂದಕ್ಕೆ ಸಾಗೋದೆ ಜೀವನ ಅಲ್ವಾ. ಹಾಗಾಗಿ, ಮುಂದೊಂದಿಷ್ಟು ಕೆಲಸ ಮಾಡೋದ್ ಇದೆ. ಅದಕ್ಕಾಗಿ ಹೊಸದೊಂದು ಪ್ರಯಾಣ ಶುರು ಮಾಡಬೇಕಾಗಿದೆ. ಹಾಗಾಗಿ 6 ವರ್ಷಗಳ ಗಲ್ಲಿ ಕಿಚನ್ ಪ್ರಯಾಣಕ್ಕೆ ವಿದಾಯ ಹೇಳೋ ಸಮಯ. ವಿದಾಯ ಹೇಳೋದು ಇಲ್ಲಿ ಬರದಷ್ಟು ಸುಲಭ ಅಲ್ಲ ನಿಮ್ಮ ಗೊತ್ತು. ಆದ್ರೆ, ಜೀವನದಲ್ಲಿ ದಿಕ್ಕು ಮತ್ತು ಗುರಿ ಬದಲಾದಾಗ ಅದಕ್ಕೆ ಹೊಂದಿಕೊಂಡು ಹೋಗೋದು ಅನಿವಾರ್ಯ. ಗಲ್ಲಿ ಕಿಚನ್ ಅನ್ನು ನನ್ನಂತೆ ಆಸಕ್ತಿ ಇರೋ ಯುವ ಪ್ರತಿಭೆಗೆ ಹಸ್ತಾಂತರ ಮಾಡಿದೀನಿ” ಎಂದು ತಿಳಿಸಿದ್ದಾರೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ