ಬಾಲಿವುಡ್​​​ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಮತ್ತೆ ಫಿಲ್ಮ್ ಮಾಡ್ತಿದ್ದಾರೆ. ಮದುವೆಯಾದ ಬಳಿಕ ಅಷ್ಟಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದ ಪ್ರಿಯಾಂಕಾ ಚೋಪ್ರಾ ಗಂಡ, ಮಕ್ಕಳು ಅಂತಾ ಸುಖಸಂಸಾರ ಮಾಡ್ತಿದ್ದಾರೆ. ಅಷ್ಟೇ ಅಲ್ಲ, ಪತಿಯ ಕೆಲವೊಂದು ಬ್ಯುಸಿನೆಸ್​ ಕೂಡ ನೋಡಿಕೊಳ್ತಿದ್ದಾರೆ. ಆದ್ರೀಗ ಮತ್ತೆ ಸುದ್ದಿಯಲ್ಲಿರೋ ಪ್ರಿಯಾಂಕಾ ಹೊಸ ಫಿಲ್ಮ್ ಮಾಡ್ತಿದ್ದಾರೆ ಅನ್ನೋದು ಅದ್ರಲ್ಲೂ ದಕ್ಷಿಣ ಭಾರತದ ಚಲನಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ.

ಬಾಲಿವುಡ್​ ಬಿಟ್ಟು ಹಾಲಿವುಡ್​ಗೆ ಹಾರಿ ಅಲ್ಲೇ ಸೆಟ್ಲ್​ ಆಗಿರೋ ಪ್ರಿಯಾಂಕಾ ಚೋಪ್ರಾ ಮತ್ತೆ ಭಾರತೀಯ ಚಿತ್ರರಂಗದಲ್ಲಿ ಕಂಬ್ಯಾಕ್ ಮಾಡ್ತಿರೋದು ಖುಷಿ ಕೊಟ್ಟಿದೆ. ಹಾಗಂತ ಪ್ರಿಯಾಂಕಾ ಸಣ್ಣಪುಟ್ಟ ಸಿನಿಮಾಗಳಲ್ಲಿ ನಟಿಸುತ್ತಿಲ್ಲ.. ಚಿಕ್ಕ ಚಿಕ್ಕ ನಿರ್ದೇಶಕರ ಸಿನಿಮಾದಲ್ಲೂ ನಟಿಸುತ್ತಿಲ್ಲ. ಬದಲಿಗೆ ಪ್ರಿಯಾಂಕಾರನ್ನು ದಿ ಗ್ರೇಟ್​ ಬಾಹುಬಲಿ ಖ್ಯಾತಿಯಾ, ಸಖತ್ ಮಾಸ್​​ ಹಿಟ್ ಸಿನಿಮಾಗಳನ್ನ ಕೊಡ್ತಿರೋ ಫೇಮಸ್ ಡೈರೆಕ್ಟರ್ ಎಸ್​.ಎಸ್​ ರಾಜಮೌಳಿ ಅವರು ಪ್ರಿಯಾಂಕಾರನ್ನ ವಾಪಸ್ ಕರೆತರುತ್ತಿರೋದು ವಿಶೇಷ.

ಮತ್ತೊಂದು ವಿಶೇಷ ಅಂದ್ರೆ ಪ್ರಿಯಾಂಕಾ ಚೋಪ್ರಾ ತೆಲುಗಿನ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಅದ್ರಲ್ಲೂ ಪ್ರಿನ್ಸ್​ ಮಹೇಶ್​ಬಾಬು ಜೊತೆಗೆ ಆಕ್ಟ್ ಮಾಡ್ತಿರೋದು ಮತ್ತಷ್ಟು ಎಕ್ಸೈಟ್ ಕ್ರಿಯೇಟ್ ಮಾಡಿದೆ. ಮಹೇಶ್​ಬಾಬು ಜೊತೆಗಿನ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಪ್ರಿಯಾಂಕಾ ಚೋಪ್ರಾ, ಈಗಾಗಲೇ ಸಿನಿಮಾ ಚಿತ್ರೀಕರಣ ಕೂಡ ನಡೆಯುತ್ತಿದೆ. ಈ ಶೂಟಿಂಗ್ ಇನ್ನೂ ಒಂದು ವರ್ಷ ನಡೆಯಲಿದೆ ಎನ್ನಲಾಗ್ತಿದೆ.

ಇದೆಲ್ಲದರ ಮಧ್ಯೆ ಪಿಗ್ಗಿಗೆ ಮತ್ತೊಂದು ಸಿನಿಮಾದ ಆಫರ್ ಬಂದಿದೆ. ಅದ್ರಲ್ಲೂ ದಕ್ಷಿಣ ಭಾರತದ ಚಿತ್ರದಲ್ಲಿ ಅನ್ನೋದು ವಿಶೇಷ. ನಟ ಅಲ್ಲು ಅರ್ಜುನ್ ನಟನೆಯ ಅಟ್ಲಿ ನಿರ್ದೇಶನದ ಸಿನಿಮಾದಲ್ಲಿ ಪ್ರಿಯಾಂಕಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರಂತೆ. ಈ ಚಿತ್ರದಲ್ಲಿ ಪಿಗ್ಗಿ ಹೀರೋಯಿನ್ ಆಗಿದ್ರೆ, ಅಲ್ಲು ಅರ್ಜುನ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ ಅನ್ನೋ ಸುದ್ದಿ ಜೋರಾಗಿದೆ. ಇವೆರಡು ಸಿನಿಮಾಗಳ ಜೊತೆಗೆ ಹಾಲಿವುಡ್​​ನ ಎರಡು ಸಿನಿಮಾಗಳೂ ಕೂಡ ಪ್ರಿಯಾಂಕಾ ಕೈಯಲ್ಲಿವೆ. ಏನೇ ಆದ್ರೂ ಮತ್ತೆ ಪಿಗ್ಗಿಯನ್ನು ಭಾರತೀಯ ಸಿನಿಮಾಗಳಲ್ಲಿ ನೋಡೋದೇ ಅಭಿಮಾನಿಗಳ ಭಾಗ್ಯ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ