(ಬಿಹಾರ್ ಮೂಲ) ಚಿತ್ರಗಳ ಬೆಡಗಿ ನಮ್ರತಾ, ಬಾಲಿವುಡ್ ಗೆ ಕಾಲಿಟ್ಟು ಇದೀಗ ಇಲ್ಲಿನ ಪಡ್ಡೆಗಳ ಹೃದಯದಲ್ಲಿ ಜನಪ್ರಿಯಗೊಳ್ಳುತ್ತಿದ್ದಾಳೆ! ಇವಳ ಕುಣಿತಕ್ಕೆ ಮಾರುಹೋಗದವರೇ ಇಲ್ಲ. ಹೊಸ ಚಿತ್ರದಲ್ಲಿ ಇವಳ ಹಾಡಿಗೆ ಹುಚ್ಚು ಕುಣಿತ ಕಂಡು ಈ ಚಿತ್ರ ಮೈ ಕೊಡವಿಕೊಂಡು ಏಳುವಂತೆ ಆಗಿದೆ. ನೂರಾ ಫತೇಹಿ, ಮಲೈಕಾ ಅರೋರಾ, ಸನಿ ಲಿಯೋನ್ ಹಾಗೂ ಎಲೀ ಆ್ಯರಾಮ್ ಮುಂತಾದವರ ಹೃದಯ ಇದೀಗ ಬಾಯಿಗೆ ಬರುವಂತಾಗಿದೆ. ಬಿಹಾರಿನವಳು ನಮ್ಮಂಥ ಮುಂಬೈ ಗ್ಲಾಮರ್ ಗೆ ಸಡ್ಡೇ ಎಂದು ಹುಬ್ಬೇರಿಸಿದ್ದಾರೆ. ಬಾಲಿವುಡ್ ನಲ್ಲಿ ನಮ್ರತಾಳ ಈ ಪಯಣ ಖಂಡಿತಾ ಸುಲಭವಲ್ಲ, ಪೈಪೋಟಿ ಹಾಗಿದೆ!
ರಿಜೆಕ್ಟ್ ಆದವಳು ಮೋದೀಜಿ ಬೇಟಿ
ಶೀರ್ಷಿಕೆ ಓದಿ ನೀವು ಏನೇನೋ ಊಹಿಸಿಕೊಳ್ಳಬೇಡಿ! ಇಲ್ಲಿ ಹೇಳುತ್ತಿರುವ ವಿಷಯ `ಮೋದೀಜಿ ಕೀ ಬೇಟಿ' ಚಿತ್ರದ ಕುರಿತು. ಇದರ ನಾಯಕಿ ಅನಿ ಮೋದಿ. ಈಕೆ ಬಾಲಿವುಡ್ ಗೆ ಬರುವ ಮೊದಲು ಗುಜರಾತಿ, ದಕ್ಷಿಣದ ಚಿತ್ರಗಳಲ್ಲೂ ಗೆದ್ದು ಬಂದಳು. ಮಧು ಭಂಡಾರ್ಕರ್ ಈಕೆಯನ್ನು ಮೊದಲೇ ರಿಜೆಕ್ಟ್ ಮಾಡಿರದೆ ಇದ್ದಿದ್ದರೆ, ಅನಿ ಇಷ್ಟು ಹೊತ್ತಿಗೆ ಬಾಲಿವುಡ್ ನಲ್ಲಿ ಹಳಬಳಾಗಿರುತ್ತಿದ್ದಳು. ಅದಕ್ಕೆ ಸಡ್ಡು ಹೊಡೆದು ಇವಳು ಹೇಗೋ ಬಾಲಿವುಡ್ ನಲ್ಲಿ ಅವಕಾಶ ಗಿಟ್ಟಿಸಿಕೊಂಡೇ ಬಿಟ್ಟಳು! ವೆರಿಗುಡ್ ಅನಿ.... ಆಲ್ ದಿ ಬೆಸ್ಟ್!
ಜಗ್ಗು ಕೇ ಲಾಲ್ ಟೇನ್
ರಘುವೀರ್ ಯಾದವ್ ನ ಅದ್ಭುತ ನಟನೆಯ `ಜಗ್ಗು ಕೇ ಲಾಲ್ ಟೇನ್' ಬಹಳ ಶ್ರಮಪಡುವವರ ಕುರಿತದ್ದಾಗಿದೆ. ಇವರ ಬೆಳಗು ಆರಂಭವಾಗುವುದೇ ಕಷ್ಟಗಳಿಂದ, ಸಂಜೆ ಮುಳುಗುವುದೇ ನಷ್ಟಗಳಿಂದ. ಕತ್ತಲೆ ಹರಡಿದಾಗ ಮನೆಯಲ್ಲಿ ಕರೆಂಟ್ ಇಲ್ಲದೆ ಲಾಲ್ ಟೇನ್ ಅಂದ್ರೆ ಕೆಂಪು ಲಾಂದ್ರ ಉರಿಯ ತೊಡಗುತ್ತದೆ. ಸ್ವಲ್ಪ ಹೊತ್ತಿನವರೆಗೂ ಚೆನ್ನಾಗಿ ಉರಿಯುವ ಇದು, ನಂತರ ಮಂದ ಆಗ ತೊಡಗುತ್ತದೆ. ಮನುಷ್ಯರ ಆಶಾಭಾವನೆಗಳೂ ಹೀಗೇ! ರಘುವೀರ್ ಈ ಚಿತ್ರದಲ್ಲಿ ತನ್ನ ತಾತನ ಕಾಲದಿಂದ ಬಂದಂಥ ಈ ಲಾಂದ್ರವನ್ನು ಸದಾ ಎದೆಗೆ ಅಪ್ಪಿಹಿಡಿದು, ಕೆಲಸ ಮಾಡುತ್ತಾನೆ. ಎಂಥ ಕಷ್ಟ ಬಂದರೂ ಅದನ್ನು ಮಾರುವುದಿಲ್ಲ. ಇಂದಿನ ಆಧುನಿಕ ಗ್ಲಾಮರ್ ಲೋಕದ ಮಧ್ಯೆ ಇದು ತುಸು ಫೇಡ್ ಅನಿಸಿದರೂ, ಉತ್ತಮ ಕಥೆ ನಿರ್ದೇಶನ ಹೊಂದಿದೆ.
OTT ಯಲ್ಲಿ ಈಗ ಎಲ್ಲ ಮುಕ್ತ ಮುಕ್ತ
ನಿಮ್ಮ ತುಸು ಬೆಳೆದ ಮಕ್ಕಳು ಅಂದ್ರೆ ಟಿವಿ ರಿಮೋಟ್ ಚಲಾಯಿಸುವಂಥವರು, OTT ನೋಡಿಕೊಳ್ಳಲಿ ಎಂದು ಬಿಟ್ಟರೆ, ಅಲ್ಲಿನ ಅಶ್ಲೀಲ ಡೈಲಾಗ್ ಕೇಳಿ ನೀವೇ ಓಡಿಬಂದು ಅವರ ಕೈಯಿಂದ ರಿಮೋಟ್ ಕಿತ್ತು ಬೇರೆ ಬದಲಾಯಿಸುತ್ತೀರಿ! ಮಕ್ಕಳಂತೂ ಪೂರ್ತಿ ಕಕ್ಕಾಬಿಕ್ಕಿ! ಹಿಂದೆಲ್ಲ OTTಯಲ್ಲಿ ಅಶ್ಲೀಲ ಬೈಗುಳಗಳಿಗಷ್ಟೇ ಅದು ಖ್ಯಾತಗೊಂಡಿತ್ತು, ಈಗಂತೂ ಎಂಥ ನಗ್ನ ದೃಶ್ಯಗಳು ಇದರಲ್ಲಿ ದಿಢೀರ್ ಸುಳಿಯುತ್ತಲೇ ಹೇಳಲಾಗದು! ಇತ್ತೀಚೆಗೆ ಮೂಡಿಬರುತ್ತಿರುವ ಇದರಲ್ಲಿ ಶೋ, ಚಿತ್ರಗಳು ಖಂಡಿತಾ ಕುಟುಂಬ ಸಮೇತ ಕುಳಿತು ನೋಡಲು ಲಾಯಕ್ ಅಲ್ಲ. ಹೀಗಾಗಿ OTT ಚಿತ್ರ ಗಮನಿಸುವ ಮುನ್ನ ಜಾಗ್ರತೆ ವಹಿಸಿ.