ಮನಗೆಲ್ಲುವ ಧಾರಾವಾಹಿಗಳು, ಸೂಪರ್ ಹಿಟ್ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಗಳು ಮತ್ತು ಮನರಂಜಿಸುವ ರಿಯಾಲಿಟಿ ಶೋ ಗಳ ಮೂಲಕ ಕನ್ನಡಿಗರ ಹೃದಯಗೆದ್ದು ನಂಬರ್ 1 ಸ್ಥಾನವನ್ನು ಕಾಯ್ದಿರಿಸಿಕೊಂಡಿರುವ ಜೀ ಕನ್ನಡ ಈಗ ಮತ್ತೊಂದು ಸರ್ಪ್ರೈಸ್ ತಂದಿದೆ.ಜನಪ್ರಿಯ ರಿಯಾಲಿಟಿ ಶೋಗಳಾದ ಡ್ರಾಮಾ ಜೂನಿಯರ್ಸ್, ಕಾಮಿಡಿ ಕಿಲಾಡಿಗಳು, ಡಾನ್ಸ್ ಕರ್ನಾಟಕ ಡಾನ್ಸ್, ಸರಿಗಮಪ, ಮಹಾನಟಿ ಸೀಸನ್-1ರ ಮೂಲಕ ಈಗಾಗಲೆ ಸಾಕಷ್ಟು ನಟನಟಿಯರು, ಗಾಯಕ ಗಾಯಕಿಯರು ಹಾಗು ಕೊರಿಯೋಗ್ರಾಫರ್‌ಗಳನ್ನ ಕರುನಾಡಿಗೆ ಕೊಟ್ಟಿರುವ ಜೀ ಕನ್ನಡ ವಾಹಿನಿ ಇದೀಗ ಮಹಾನಟಿ ಸೀಸನ್-2 ನ ಹೊತ್ತುತರುತ್ತಿದೆ.
ಮಹಾನಟಿ ಸೀಸನ್ 1 ಈಗಾಗಲೇ ಯಶಸ್ವಿಯಾಗಿದ್ದು, ಗೆಲುವನ್ನು ಕಂಡ ವಿಜೇತ ನಟಿ ಪ್ರಿಯಾಂಕಾ ಬೆಳ್ಳಿತೆರೆಯಲ್ಲಿ ತನ್ನ ಚೊಚ್ಚಲ ನಟನೆಯನ್ನು ಆರಂಭಿಸಿದ್ದಾರೆ.
Judges ಆಗಿದ್ದ ತರುಣ್ ಸುಧೀರ್ ಹಾಗೂ ಮಹಾನಟಿ ಪ್ರೇಮ ಅವರ ನಟನೆಯ ಪಾಠಗಳು, ಮನೋಜ್ಞ ನಟಿ ನಿಶ್ವಿಕ ಅವರ ಸ್ಫೂರ್ತಿದಾಯಕ ಮಾತುಗಳು, ಮಾಸ್ಟರ್ ಮೈಂಡ್ ಎಂದೇ ಖ್ಯಾತರಾದ ರಮೇಶ್ ಅರವಿಂದ್ ಅವರು ಮಾಸ್ಟರ್ ಕ್ಲಾಸ್ ಮೂಲಕ ನಟಿಯರ ಅಭಿನಯವನ್ನು ತಿದ್ದಿ ತೀಡಿದ್ದಾರೆ. ಮಹಾನಟಿ ಮತ್ತಷ್ಟು ನಟನೆಯ ಹಸಿವಿರುವವರಿಗಾಗಿ ಅಗತ್ಯ ವೇದಿಕೆಯಾಗಿದೆ.
ಚಂದನವನದ ನಟಿ ಆಗಿ ಕನ್ನಡಿಗರ ಮನಕ್ಕೆ ಲಗ್ಗೆ ಇಡಬೇಕೆಂಬ ಕನಸು ಕಾಣುತ್ತಿದ್ದು ವೇದಿಕೆ ಸಿಗದೇ ವಂಚಿತರಾಗಿದ್ದೀರಾ? ಹಾಗಾದರೆ ಮಹಾನಟಿ ಸೀಸನ್-2 ನಿಮಗೆ ತಕ್ಕ ವೇದಿಕೆ. ಮಹಾನಟಿ ಸೀಸನ್-2 ಆಡಿಷನ್ 16 ಜಿಲ್ಲೆಗಳಲ್ಲಿ ನಡೆಯಲಿದ್ದು, 18 ರಿಂದ 28 ವರ್ಷದ ಒಳಗಿನ ಕಲಾಸಕ್ತ ಯುವತಿಯರು ಈ ಆಡಿಷನ್ನಲ್ಲಿ ಭಾಗವಹಿಸಬಹುದು. ಹಾಗೆಯೇ ಆಡಿಷನ್ನಲ್ಲಿ ಭಾಗವಹಿಸಲು ಬರುವಾಗ ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟೋ ಮತ್ತು ಅಡ್ರೆಸ್ ಪ್ರೂಫ್ ತರಲು ಮರೆಯದಿರಿ.
ಆಡಿಷನ್ ನಡೆಯುವ ಸ್ಥಳಗಳು:
ಏಪ್ರಿಲ್ 5 ಶನಿವಾರ ಮೈಸೂರು ಮತ್ತು ಬೆಳಗಾವಿ, ಏಪ್ರಿಲ್ 6 ಭಾನುವಾರ ಬೆಂಗಳೂರು ಮತ್ತು ಹುಬ್ಬಳ್ಳಿ, ಏಪ್ರಿಲ್ 12 ಶನಿವಾರ ಚಿಕ್ಕಮಗಳೂರು ಮತ್ತು ಬಿಜಾಪುರ, ಏಪ್ರಿಲ್ 13 ಭಾನುವಾರ ಮಡಿಕೇರಿ ಹಾಗು ಕೊಪ್ಪಳ, ಏಪ್ರಿಲ್ 19 ಶನಿವಾರ ಮಂಗಳೂರು ಮತ್ತು ಶಿರಸಿ, ಏಪ್ರಿಲ್ 20 ಭಾನುವಾರ ಹಾಸನ ಹಾಗು ದಾವಣಗೆರೆ, ಏಪ್ರಿಲ್ 26 ಶನಿವಾರ ತುಮಕೂರು ಹಾಗು ಬಳ್ಳಾರಿ, ಏಪ್ರಿಲ್ 27 ಭಾನುವಾರ ಶಿವಮೊಗ್ಗ ಹಾಗು ಚಿತ್ರದುರ್ಗದಲ್ಲಿ ಆಡಿಷನ್ ನಡೆಯಲಿದೆ.
ಮತ್ಯಾಕೆ ತಡ? ನಿಮ್ಮ ಕನಸು ನನಸಾಗಿಸಲು ಇರುವ ಸುವರ್ಣಾವಕಾಶ ಮಿಸ್ ಮಾಡಿಕೊಳ್ಳದೇ ಆಡಿಷನ್ ನಲ್ಲಿ ಭಾಗವಹಿಸಿ. ಅಂದಹಾಗೆ, ಜೀ ಕನ್ನಡ ವಾಹಿನಿಯಲ್ಲಿ ಆಡಿಷನ್‌ಗಳಿಗೆ ಯಾವುದೇ ರೀತಿಯ ಶುಲ್ಕ ಕಟ್ಟುವಂತಿಲ್ಲ.