ಬಾಲಿವುಡ್ನ ಎವರ್ಗ್ರೀನ್ ಬ್ಯೂಟಿ ಕ್ವೀನ್.. ಈಗಲೂ ಹಾಟ್ ಹಾಟ್ ಕೇಕ್ನಂತಿರುವ ನಟಿ ಮಲೈಕಾ ಅರೋರಾ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಮಾಜಿ ಕ್ರಿಕೆಟಿಗ ಕುಮಾರ ಸಂಗಕ್ಕರ ಜೊತೆ ಕೆಲ ಫೋಟೋಗಳಲ್ಲಿ ಪೋಸು ಕೊಟ್ಟು ಇನ್ನೇನು ಮತ್ತೊಬ್ಬ ಬಾಯ್ಫ್ರೆಂಡ್ ಸಿಕ್ಕಿದ್ದಾರೆ ಅನ್ನೋ ಸುದ್ದಿ ಬೆನ್ನಲ್ಲೇ ಮತ್ತೊಮ್ಮೆ ಈ ಸೌಂದರ್ಯದ ಖನಿ ಪಡ್ಡೆ ಹುಡುಗರು ತಲೆಕೆರೆದುಕೊಳ್ಳುವಂತೆ ಮಾಡಿದ್ದಾರೆ.
ಬಾಲಿವುಡ್ನಲ್ಲಿ ಛಯ್ಯಾ ಛಯ್ಯಾ ಸಾಂಗ್ಗೆ ಮೈಚಳಿ ಬಿಟ್ಟು ಕುಣಿಯೋ ಮೂಲಕ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ ಮಲೈಕಾ ಅರೋರಾ ಅದೆಷ್ಟೋ ಫಿಲ್ಮ್ಗಳಲ್ಲಿ ದೊಡ್ಡ ದೊಡ್ಡ ಸಾಂಗ್ಸ್ಗೆ ಹೆಜ್ಜೆ ಹಾಕಿ ಕೋಟಿ ಕೋಟಿ ಅಭಿಮಾನಿಗಳನ್ನ ಹೊಂದಿದ್ದಾರೆ. ಅಷ್ಟೇ ಅಲ್ಲ, ಸಿಕ್ಕಾಪಟ್ಟೆ ಡಿಮ್ಯಾಂಡ್ ಇರೋ ಐಟಂ ಡ್ಯಾನ್ಸರ್ ಅಂತಾ ಕರೆಸಿಕೊಂಡಿದ್ದಾರೆ. ನಟ ಸಲ್ಮಾನ್ಖಾನ್ ಸಹೋದರ ನಟ ಅರ್ಬಾಜ್ ಖಾನ್ ಜೊತೆಗಿನ ಡಿವೋರ್ಸ್ ಬಳಿಕ ನಟ ಅರ್ಜುನ್ ಕಪೂರ್ ಜೊತೆಗಿನ ಗೆಳೆತನದಲ್ಲಿರೋ ನಟಿ ಮಲೈಕಾ ಅರೋರಾ ನಡೆದಾಡಿದರೇ ಮನಮೋಹಕ ಅನ್ನೋ ಲೆವೆಲ್ಗೆ ಇದ್ದಾರೆ. ಈಗಲೂ ಕೂಡ ಮಲೈಕಾ ನಿತ್ಯ ಜಿಮ್ ಗೆ ಹೋಗುವ ಮತ್ತು ಬರುವ ದೃಶ್ಯಗಳನ್ನ ಸೆರೆ ಹಿಡಿಯೋ ಸೋಷಿಯಲ್ ಮೀಡಿಯಾಗಳು ಅವುಗಳನ್ನೇ ಅಪ್ಲೋಡ್ ಮಾಡಿ ಮಿಲಿಯನ್ಗಟ್ಟಲೇ ವೀವ್ಸ್ ಪಡೆಯುತ್ತಿದ್ದಾರೆ. ಅಂತದ್ರದಲ್ಲಿ ಇದೀಗ ಮಲೈಕಾ ಹೊಸ ಫೋಟೋಗಳು ಹತ್ತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ನಟಿ ಮಲೈಕಾ ಅರೋರಾ ತೆಗೆದುಕೊಂಡಿರೋ ಹೊಸ ಫೋಟೋ ಸಖತ್ ವೈರಲ್ ಆಗಿದೆ. ಆ ಫೋಟೋಗಳಲ್ಲಿ ಹೊಸ ಟ್ಯಾಟೂ ಹಾಕಿಕೊಂಡಿರೋದು ಮತ್ತೊಂದು ಕಥೆ ಹೇಳೋಕೆ ಹೊರಟಂತಿದೆ. ತಮ್ಮ ತೋಳಿನ ಮೇಲೆ ‘ಸಬ್ರ್ ಶುಕ್ರ್’ ಅನ್ನೋ ಟ್ಯಾಟೂ ಹಾಕಿಸಿಕೊಂಡಿರುವ ನಟಿ ಮಲೈಕಾ, ಆ ಟ್ಯಾಟೂವನ್ನೇ ಹೈಲೈಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರೋದು ಕುತೂಹಲಕ್ಕೆ ಎಡೆಮಾಡಿದೆ.
ಈ ಟ್ಯಾಟೂ ಫೋಟೋ ನೋಡಿದ ಅಸಂಖ್ಯಾತ ಅಭಿಮಾನಿಗಳು ಈ ಟ್ಯಾಟೂ ಅರ್ಥವೇನು ಅಂತಾ ಕೇಳಿದ್ದಾರೆ. ಆದ್ರೆ, ಅದ್ಯಾವ ಪ್ರಶ್ನೆಗೂ ಮಲೈಕಾ ಉತ್ತರ ಕೊಟ್ಟಿಲ್ಲ. ಅಸಲಿಗೆ ಹಿಂದಿಯಲ್ಲಿರೋ ಈ ಟ್ಯಾಟೂ ಅರ್ಥ ‘ತಾಳ್ಮೆ ಕೃತಜ್ಞತೆ’ ಅನ್ನೋದಾಗಿದ್ದು, ಯಾಕಾಗಿ ಹೀಗೆ ಅನ್ನೋದು ಇನ್ನೂ ಗೊತ್ತಾಗಿಲ್ಲ. ಸಾಮಾನ್ಯವಾಗಿ ಮಲೈಕಾ ಕೆಲವೊಂದು ಸ್ವೀಟ್ ಮೆಮೋರಿಗಳನ್ನು ನೆನಪಿನಲ್ಲಿಟ್ಟುಕೊಳ್ಳೋದ್ರ ಸಲುವಾಗಿ ಹೀಗೆ ಟ್ಯಾಟೂ ಹಾಕಿಸಿಕೊಳ್ತಾರೆ.
ಅಚ್ಚರಿ ಅಂದ್ರೆ, ಇತ್ತೀಚೆಗೆ ನಟ ಅರ್ಜುನ್ ಕಪೂರ್ ಜೊತೆಗೆ ಬ್ರೇಕಪ್ ಮಾಡಿಕೊಂಡಿರುವ ಮಲೈಕಾ ಈಗಲೂ ಕೂಡ ಖುಷಿಯಾಗಿದ್ದೇನೆ ಅಂತಾ ಹೇಳಿರೋದ್ರಿಂದ ಮಲೈಕಾಗೆ ಹೊಸ ಬಾಯ್ಫ್ರೆಂಡ್ ಸಿಕ್ಕಿದ್ದಾರಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಆದ್ರೂ ತಮಗೆ ಯಾವುದೇ ರೀತಿಯ ಹೊಸ ಪ್ರೀತಿಯ ಬಗ್ಗೆ ಒಲವು ಇನ್ನೂ ಬಂದಿಲ್ಲ ಅಂತಾ ಹೇಳಿದ್ದಾರೆ. ಏನೇ ಆದ್ರೂ ಈ ಟ್ಯಾಟೂ ಮತ್ತು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಕುಮಾರ ಸಂಗಕ್ಕಾರ ಜೊತೆಗಿನ ಫೋಟೋ ಮತ್ತಿನ್ನೇನೋ ಹೇಳಿದಂತಿದೆ.