*ಫ್ರಿಡ್ಜ್ ನಲ್ಲಿ ನಾವು ತರಕಾರಿಗಳು ಹಣ್ಣುಗಳು ಮತ್ತು ಇತರೆ ಆಹಾರ ಪದಾರ್ಥಗಳನ್ನು ಸ್ಟೋರ್ ಮಾಡುತ್ತೇವೆ. ಇಂದು ಬಹುತೇಕ ಮನೆಗಳಲ್ಲಿ ಫ್ರಿಡ್ಜ್ ಇಲ್ಲ ಎಂದರೆ ಆಗುವುದೇ ಇಲ್ಲ. ಯಾಕೆಂದರೆ ಹಾಲು ಮೊಸರಿನಿಂದ ಹಿಡಿದು ಅನೇಕ ಆಹಾರ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿ ಇಟ್ಟು ಅದು ಹೆಚ್ಚು ದಿನ ಬಾಳಿಕೆ ಬರುವಂತೆ ನೋಡಿಕೊಂಡು ಅಭ್ಯಾಸವಾಗಿ ಬಿಟ್ಟಿದೆ*

*ಹೀಗಾಗಿ ಫ್ರಿಡ್ಜ್ ನಲ್ಲಿ ಇಟ್ಟ ವಸ್ತುಗಳು ಹೆಚ್ಚು ದಿನ ಬಾಳಿಕೆ ಬರುತ್ತವೆ ಎನ್ನುವ ಕಾರಣಕ್ಕಾಗಿ ಇವುಗಳಿಗೆ ಡಿಮ್ಯಾಂಡ್ ಹೆಚ್ಚು. ಆದರೆ ಎಲ್ಲಾ ಪದಾರ್ಥಗಳನ್ನು ಕೂಡ ಈ ರೀತಿ ಫ್ರಿಡ್ಜ್ ಅಲ್ಲಿ ಇಡುವಂತಿಲ್ಲ. ಕೆಲವು ಆಹಾರ ಪದಾರ್ಥಗಳನ್ನು ಫ್ರಿಜ್ನಲ್ಲಿ ಇಟ್ಟು ತಿನ್ನುವುದರಿಂದ ಆರೋಗ್ಯ ಬೇಗ ಹಾಳಾಗುತ್ತದೆ ಮತ್ತು ಕೆಲವು ಪದಾರ್ಥಗಳು ಫ್ರಿಡ್ಜಲ್ಲಿ ಇಡುವುದರಿಂದಲೇ ಬೇಗ ಹಾಳಾಗುತ್ತವೆ*

Open Refrigerator Filled With Fresh Fruits And Vegetable

*ಫ್ರಿಡ್ಜ್ ಅಲ್ಲಿ ಟೊಮೊಟೊ* *ಹಣ್ಣನ್ನು ಎಲ್ಲರೂ ಇಡುತ್ತಾರೆ. ಯಾಕೆಂದರೆ ಟಮೋಟೋ ಹಣ್ಣಿನ ಬೆಲೆ ಯಾವಾಗಲೂ* *ವ್ಯತ್ಯಾಸವಾಗುತ್ತಿರುತ್ತದೆ. ಬೆಲೆ ಕಡಿಮೆ ಇದ್ದಾಗ ಹೆಚ್ಚು ತಂದು ಇಡುತ್ತಾರೆ, ಬೆಲೆ ಹೆಚ್ಚಾದಾಗ ಹಾಳಾಗದೆ ಇರಲಿ ಎನ್ನುವ ಕಾರಣಕ್ಕಾಗಿ ಇಡುತ್ತಾರೆ.*

*ಈ ರೀತಿ ಟೊಮೇಟೊ ಹಣ್ಣನ್ನು ಫ್ರಿಡ್ಜ್ ಒಳಗೆ ಇಡುವುದರಿಂದ ಅದು ಒಳಗಿನಿಂದ ಹಾಳಾಗುತ್ತಾ ಬರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಇವುಗಳನ್ನು ಫ್ರಿಡ್ಜ್ ಒಳಗೆ ಇಡಬಾರದು. ಫ್ರಿಡ್ಜ್ ಒಳಗೆ ಇಟ್ಟ ಟೊಮೇಟೊಗಳನ್ನು ಆಹಾರಕ್ಕೆ ಬಳಸುತ್ತಿದ್ದರೆ ನಮಗೆ ಗೊತ್ತಿಲ್ಲದೆ ಕೆಟ್ಟ ಟೊಮೊಟೊವನ್ನು ತಿನ್ನುತ್ತಿದ್ದೇವೆ ಎಂದರ್ಥ. ಇದೇ ರೀತಿ ಬ್ರೆಡ್ ಗಳನ್ನು ತಿಂದರೆ ಜೀರ್ಣಕ್ರಿಯೆ ನಿಧಾನ ಆಗುತ್ತದೆ ಆದ್ದರಿಂದ ಇದನ್ನು ಕೂಡ ಫ್ರಿಜ್ಜಲ್ಲಿ ಇನ್ನು ಮುಂದೆ ಇವುಗಳನ್ನು ಇಡಬೇಡಿ.*

fridge 2

*ಬಾಳೆಹಣ್ಣು ಪ್ರತಿದಿನ ನಾವು ಸೇವಿಸುವಂತಹ ಒಂದು ಹಣ್ಣು. ಈ ಬಾಳೆಹಣ್ಣನ್ನು ಕೂಡ ಅನೇಕರು ಕೆಡಬಾರದು ಎಂದು ಫ್ರಿಡ್ಜ್ ಒಳಗೆ ಇಡುತ್ತಾರೆ. ಆದರೆ ಫ್ರಿಡ್ಜ್ ಒಳಗೆ ಇಡುವ ಬಾಳೆಹಣ್ಣು ಬೇಗ ಕಪ್ಪಾಗುತ್ತದೆ ಜೊತೆಗೆ ಇದು ಎಥಲಿನ್ ಗ್ಯಾಸ್ ಅನ್ನು ಬಿಡುಗಡೆ ಮಾಡುವುದರಿಂದ ಇದರ ಜೊತೆಗೆ ಇರುವ ಇತರೆ ಹಣ್ಣುಗಳು ಕೂಡ ಹಾಳಾಗುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ಫ್ರಿಡ್ಜ್ ಒಳಗೆ ಬಾಳೆಹಣ್ಣನ್ನು ಇಡಬೇಡಿ.*

*ಜೇನುತುಪ್ಪವನ್ನು ಕೂಡ ಅನೇಕರು ಫ್ರಿಡ್ಜ್ ಒಳಗೆ ಇಡುತ್ತಾರೆ ಆದರೆ ಜೇನು ತುಪ್ಪ ಬಹಳ ಬೇಗ ಕೆಡುವಂತಹ ಆಹಾರ ಪದಾರ್ಥ ಅಲ್ಲ (ಜೇನು ತುಪ್ಪ 100, ವರ್ಷ ಕಾಲ ಇಟ್ಟರು ಕೆಡುವುದಿಲ್ಲ) ಇದನ್ನು ಫ್ರಿಜ್ ಅಲ್ಲಿ ಇಡುವುದರಿಂದ ಇದು ಸಣ್ಣ ಸಣ್ಣ ಹರಳುಗಳಾಗಿ ಬದಲಾಗುತ್ತದೆ. ಅದರ ಬದಲು ಒಂದು ಗಾಜಿನ ಸೀಸದಲ್ಲಿ ತುಂಬಿಸಿ ಇದನ್ನು ಹೊರಗೆ ಸ್ಟೋರ್ ಮಾಡಿಟ್ಟರೆ ಹೆಚ್ಚು ಸೂಕ್ತ.*

fridge 3

*ಆಲೂಗೆಡ್ಡೆಯನ್ನು ಕೂಡ ಅನೇಕ ಫ್ರಿಡ್ಜ್ ಒಳಗೆ ಇಡುತ್ತಾರೆ. ಆದರೆ ಇದನ್ನು ಸಹ ಫ್ರಿಡ್ಜ್ ಒಳಗೆ ಇಡುವ ಅವಶ್ಯಕತೆ ಇಲ್ಲ ಯಾಕೆಂದರೆ ಫ್ರಿಡ್ಜ್ ಒಳಗೆ ಇಟ್ಟ ಆಲೂಗೆಡ್ಡೆಯ ಪಿಷ್ಟವು ಸಕ್ಕರೆ ಆಗಿ ಬದಲಾಗುತ್ತದೆ. ಅನ್ನು ಬೇಯಿಸಿದಾಗ ಅಕ್ರಿಮಲೈಡ್ ಎನ್ನುವ ರಾಸಾಯನಿಕ ಬಿಡುಗಡೆ ಆಗುತ್ತದೆ, ಇದು ಆರೋಗ್ಯಕ್ಕೆ ಹಾನಿ ಮಾಡುತ್ತದೆ ಇದರ ಸೇವನೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆಗಳು ಕೂಡ ಇರುತ್ತವೆ ಆದ್ದರಿಂದ ಆಲೂಗೆಡ್ಡೆಯನ್ನು ಫ್ರಿಡ್ಜ್ ಒಳಗೆ ಇಡುವುದನ್ನು ತಪ್ಪಿಸಿ*

*ಅದೇ ರೀತಿ ಕಲ್ಲಂಗಡಿ ಹಣ್ಣುಗಳು ಹಾಗೂ ಕತ್ತರಿಸಿದ ಕಲ್ಲಂಗಡಿ ಹಣ್ಣುಗಳನ್ನು ಕೂಡ ಫ್ರಿಡ್ಜ್ ಒಳಗೆ ಇಡುತ್ತಾರೆ. ಈ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಗಳು ಹೇರಳವಾಗಿ ಇರುತ್ತವೆ. ಇವುಗಳನ್ನು ಫ್ರಿಡ್ಜ್ ನಲ್ಲಿ ಇರುವುದರಿಂದ ಅವು ನಾಶವಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಇವುಗಳನ್ನು ಫ್ರಿಡ್ಜ್ ಅಲ್ಲಿ ಇಡಬೇಡಿ*                                                              *ಧನ್ಯವಾದಗಳು*

*ಕೆ, ಶಾಂತರಾಜ್, ಮೇದಾರ್*

*ಹೊಸಪೇಟೆ, ವಿಜಯನಗರ*

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ