ಮದ್ರಾಸ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ನಡೆದ ಎಫ್ಐಎ ಏಷ್ಯಾ ಪೆಸಿಫಿಕ್ ಚಾಂಪಿಯನ್‌ ಶಿಪ್ ಇಂಡಿಯಾದಲ್ಲಿ (APRC) ಕರ್ಣ ಕಡೂರ್, ಮೂಸಾ ಶರೀಫ್ ಜೋಡಿ ಜಯಗಳಿಸಿದ್ದಾರೆ.

ಅರ್ಕಾ ಮೋಟಾರ್‌ಸ್ಪೋರ್ಟ್ಸ್ ಜೋಡಿಯಾದ ಕಡೂರ್ ಮತ್ತು ಶೆರಿಫ್ ದಿನದ ಮೊದಲ ಹಂತದಲ್ಲೇ  ಮುನ್ನಡೆ ಸಾಧಿಸಿದ್ದರು. ಕರ್ಣ ಕಡೂರ್  ಕೊನೆಯ ದಿನದಂದು ಇತರ ಮೂರು ಹಂತಗಳನ್ನು 1 ನಿಮಿಷ 50.8 ಸೆಕೆಂಡುಗಳ ಮುನ್ನಡೆಯೊಂದಿಗೆ ವಿಜಯ ಸಾಧಿಸಿದರು.

ಬೆಂಗಳೂರಿನ 36 ವರ್ಷದ ಕರ್ಣ ಕಡೂರ್ 2022 ರಲ್ಲಿ ದಕ್ಷಿಣ ಭಾರತ rallyಯಲ್ಲಿ APRC ಸುತ್ತನ್ನು ಗೆದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ಚೊಚ್ಚಲ ಪ್ರವೇಶ ಮಾಡಿದ ಬಳಿಕ ಇದು ಅವರಿಗೆ ಮೂರನೇ ಅಂತರರಾಷ್ಟ್ರೀಯ ಗೌರವವಾಗಿದೆ.  ಈ ಪ್ರಶಸ್ತಿ, ಕೇರಳದ ಮುಸಾ ಶೆರಿಫ್ ಅವರ ಜೊತೆಗೆ ಭಾರತೀಯ ರಾಷ್ಟ್ರೀಯ rally ಚಾಂಪಿಯನ್‌ಶಿಪ್ (INRC) 2025 ರ ಟೈಟಲ್ ಉಳಿಸಿಕೊಳ್ಳುವ ಹೋರಾಟಕ್ಕೆ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ.

ಎರಡು ಬಾರಿಯ ರಾಷ್ಟ್ರೀಯ ಚಾಂಪಿಯನ್ ಕೋಲ್ಕತ್ತಾದ ಅಮಿತ್ರಜಿತ್ ಘೋಷ್ ಮತ್ತು ಮಂಗಳೂರಿನ ಅಶ್ವಿನ್ ನಾಯಕ್ ಅವರು ದೆಹಲಿಯ ಹರಿಕೃಷ್ಣನ್ ವಾಡಿಯಾ ಮತ್ತು ಶಿಮ್ಲಾದ ಕುನಾಲ್ ಕಶ್ಯಪ್ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನ ಪಡೆದರು. ವಾಡಿಯಾ ಹಾಗೂ  ಕಾಶ್ಯಪ್ ತಂಡವು ತೃತೀಯ ಸ್ಥಾನವನ್ನು ಪಡೆಯಿತು.

ಹರಿಕೃಷ್ಣನ್ ವಾಡಿಯಾ 28 ವರ್ಷಕ್ಕಿಂತ ಕಡಿಮೆ ವಯಸ್ಸಿನ ಚಾಲಕರಿಗೆ ನೀಡುವ ಜೂನಿಯರ್ APRC ಪ್ರಶಸ್ತಿಯನ್ನು ಪಡೆದುಕೊಂಡರು.

ಫಲಿತಾಂಶಗಳು:

  1.  ಕರ್ಣ ಕಡೂರ್ / ಮುಸಾ ಶೆರಿಫ್ (ಅರ್ಕಾ ಮೋಟಾರ್‌ಸ್ಪೋರ್ಟ್ಸ್) – (02:03:44.0 s)
  2. ಅಮಿತ್ರಜಿತ್ ಘೋಷ್ / ಅಶ್ವಿನ್ ನಾಯಕ್ (ಅರ್ಕಾ ಮೋಟಾರ್‌ಸ್ಪೋರ್ಟ್ಸ್)–  (02:04:35.8 s)
  3. ಹರ್ ಕೃಷ್ಣ ವಾಡಿಯಾ / ಕುನಾಲ್ ಕಾಶ್ಯಪ್ (ಅರ್ಕಾ ಮೋಟಾರ್‌ಸ್ಪೋರ್ಟ್ಸ್)– (02:07:38.5 s)
  4. ಅರ್ಣವ ಪ್ರತಾಪ್ ಸಿಂಗ್/ ರೋಹಿತ್ ಏನ್ (ಸ್ನ್ಯಾಪ್ ರೇಸಿಂಗ್)- (02:09:25.9 s)
  5. ಅಭಿನ್ ರೈ/ ಮೊಯಿದೀನ್ ಜಾಶೀರ್ ಕೆಎಂ (ಪಿವಿಟಿ)
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ