ಕ್ರಾಪ್ಟಾಪ್ಕ್ಯಾರಿ ಮಾಡುವ ಆಧುನಿಕ ವಿಧಾನ ತಿಳಿದುಕೊಂಡು, ನಿಮ್ಮ ಸಂಗಾತಿ ಜೊತೆ ಸಲದ ವ್ಯಾಲೆಂಟೈನ್ಸ್ ಡೇ ಸಂಭ್ರಮಾಚರಣೆ ಸ್ಮರಣೀಯವಾಗಿರುವಂತೆ ಮಾಡಿಕೊಳ್ಳಿ....!

ಕ್ರಾಪ್‌ ಟಾಪ್‌ ಅಂದ್ರೆ ಹಾಫ್‌ ಶರ್ಟ್‌, ಬೆಲ್ಲಿ ಶರ್ಟ್‌ ಯಾ ಕಟ್‌ ಆಫ್‌ ಶರ್ಟ್‌. ಈ ಕ್ರಾಪ್‌ ಟಾಪ್‌ ನಿಂದಾಗಿ ಧರಿಸುವ ಹೆಣ್ಣಿನ ಸೊಂಟ, ಹೊಟ್ಟೆಯ ಆಕಾರ ಆಕರ್ಷಕವಾಗಿರುವಂತೆ ಎಲ್ಲರಿಗೂ ಗೋಚರಿಸುತ್ತದೆ. ಹೆಣ್ಣಿನ ದೇಹದ ನಡುಭಾಗದ ಆಕರ್ಷಣೆ ಹೆಚ್ಚಿಸುವ ಡ್ರೆಸ್ಸೇ ಕ್ರಾಪ್‌ ಟಾಪ್‌ ಎಂದರೂ ಅಡ್ಡಿಯಿಲ್ಲ. ಯಾವ ಹುಡುಗಿಯರಿಗೆ ತಮ್ಮ ದೇಹದ ಈ ಭಾಗವನ್ನು ಹೈಲೈಟ್ ಮಾಡಬೇಕೆನಿಸುತ್ತದೋ ಅಂಥವರು ಬಿಂದಾಸ್‌ ಆಗಿ ಕ್ರಾಪ್‌ ಟಾಪ್‌ ಧರಿಸಿ ಫ್ಲಾಂಟ್‌ಮಾಡಬಹುದು.

1980ರ ದಶಕದಿಂದ ಈ ಕ್ರಾಪ್‌ ಟಾಪ್‌, ಫ್ಯಾಷನ್‌ ಲೋಕದ ಸ್ಟೈಲಿಶ್‌ ಪ್ರತೀಕ ಎನಿಸಿದೆ. ಅಂತಾರಾಷ್ಟ್ರೀಯ ಗಾಯಕಿ ಮೆಡೋನಾ ಮೊದಲ ಬಾರಿಗೆ ಇದನ್ನು ಧರಿಸಿ, ಶೋ ನೀಡಿದ್ದಲ್ಲದೆ, ತನ್ನ `ಲಕೀ ಸ್ಟಾರ್‌' ಆಲ್ಬಂನಲ್ಲೂ ಇಂಥ ನೆಟೆಡ್‌ ಡ್ರೆಸ್‌ ಧರಿಸಿ ಮಿಂಚಿದ್ದಾಳೆ.

Crop-Top

ಆರಂಭದ ದಿನಗಳು

ಸ್ಲೀವ್ ಲೆ‌ಸ್‌ ಬ್ಲೌಸ್‌ ಧರಿಸಿ ಬೋರಾದ ಹೆಂಗಸರು, ಹೊಸತೇನನ್ನೋ ಬಯಸಿ, ಈ ತರಹದ ಕ್ರಾಪ್‌ ಟಾಪ್‌ ಧರಿಸಿ ತಮ್ಮ ಹೊಟ್ಟೆ, ಸೊಂಟದ ಪ್ರದರ್ಶನಕ್ಕೆ ಮುಂದಾಗಿ ಗ್ಲಾಮರ್‌ ಗೆ ಹೊಸ ವ್ಯಾಖ್ಯಾನ ಬರೆದರು. 1970-80ರ ದಶಕದಲ್ಲಿ ಪಾಪ್‌ ಕಲ್ಚರ್ ಹೆಚ್ಚುತ್ತಿದ್ದಂತೆ, ಕ್ರಾಪ್‌ ಟಾಪ್‌ ಎಲ್ಲೆಡೆ ಭವ್ಯ ಸ್ವಾಗತ ಪಡೆಯಿತು. ಇದರ ಆರಂಭದ ದಿನಗಳಲ್ಲಿ ಗಂಡಸರು ಸಹ ಇದನ್ನು ಹೆಮ್ಮೆಯಿಂದ ಜಿಮ್ ನಲ್ಲಿ ಧರಿಸುತ್ತಿದ್ದರು. ತಮ್ಮ ಹೊಟ್ಟೆಯ 6 ಪ್ಯಾಕ್‌ ಪ್ರದರ್ಶನಕ್ಕೆ ಇದು ಅವರಿಗೆ ಬೇಕಾಗಿತ್ತು. ಕೆಲವರು ಶರ್ಟ್ ಲೆಸ್‌ ಆಗಿ ಜಿಮ್ ನಲ್ಲಿ  ವರ್ಕ್‌ ಔಟ್‌ ಮಾಡುವುದೂ ಇತ್ತು. ಅಂಥವರಿಗೆ ಅನುಕೂಲಲಾಗಲೆಂದೇ ಲೆಂತ್‌ ಶರ್ಟ್‌ ನ ಕೆಳಭಾಗ ಕತ್ತರಿಸಿ, ಅದಕ್ಕೆ ಆಧುನಿಕ ಕ್ರಾಪ್‌ ಟಾಪ್‌ ರೂಪ ನೀಡಲಾಯಿತು. ಮುಂದೆ ಅದೇ ಫ್ಯಾಷನ್‌ ಎನಿಸಿ, ಹೆಂಗಸರೂ ಇದನ್ನೇ ಫಾಲೋ ಮಾಡತೊಡಗಿದರು.

ಬಾಲಿವುಡ್‌ ನಲ್ಲಿ ಕ್ರಾಪ್‌ ಟಾಪ್‌ ಎಂಟ್ರಿ ಬಹಳ ಹಿಂದಕ್ಕಾಯಿತು. 1973ರ `ಬಾಬಿ' ಚಿತ್ರದಲ್ಲಿ ಡಿಂಪಲ್ ಕಪಾಡಿಯಾ ಇದನ್ನು ಮೊದಲ ಬಾರಿಗೆ ಧರಿಸಿ, ಪಡ್ಡೆ ಹುಡುಗರಿಗೆ ಹುಚ್ಚೆಬ್ಬಿಸಿದಳು. ಹಾಗಾಗಿ ಅಂದಿನ ಕಾಲೇಜು ಹುಡುಗಿಯರು ಇದಕ್ಕೆ ಬಲು ಬೇಗ ಮಾರುಹೋಗಿ, ಮುಂಬೈ ದೆಹಲಿಯಲ್ಲಿ ವ್ಯಾಪಕ ಪ್ರಚಾರ ಪಡೆಯಿತು. ಮುಂದೆ ಅದು ಕ್ರಮೇಣ 80ರ ಹೊತ್ತಿಗೆ ಎಲ್ಲಾ ಮಹಾನಗರಗಳಲ್ಲೂ ಎಂಟ್ರಿ ಪಡೆಯಿತು. ಕೆಲವೊಂದು ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಫ್ಯಾಷನ್‌ ಮರುಕಳಿಸುತ್ತಲೇ ಇರುತ್ತದೆ. ಹಾಗೆಯೇ ಕ್ರಾಪ್‌ ಟಾಪ್‌ ಜೊತೆಗೂ ಆಯ್ತು. ಈಗಂತೂ ಇದು ಎಲ್ಲರ ಅಚ್ಚುಮೆಚ್ಚಿನ ಡ್ರೆಸ್‌ ಆಗಿದೆ.

ಬಗೆ ಬಗೆಯ ಕ್ರಾಪ್‌ ಟಾಪ್ಸ್ 200-800 ರೂ.ಗಳವರೆಗಿನ ರೇಂಜ್‌ ನಲ್ಲಿ ಕ್ರಾಪ್‌ ಟಾಪ್‌ ಎಲ್ಲೆಡೆ ಲಭ್ಯ. ನಿಮ್ಮ ನಗರದ ಸಣ್ಣಪುಟ್ಟ ಅಂಗಡಿಗಳಿಂದ ಮಹಾ ಮಾಲ್ ವ‌ರೆಗೂ ಎಲ್ಲೆಲ್ಲೂ ಸಿಗುತ್ತದೆ. ಎಲ್ಲಾ ದೊಡ್ಡ ದೊಡ್ಡ ಫ್ಯಾಷನ್‌ ಬ್ರಾಂಡ್‌ ಗಳಲ್ಲೂ ಲಭ್ಯ. ಇದು ಹಲವು ಡಿಸೈನ್‌ ಗಳಲ್ಲಿ ಲಭ್ಯ. ಸ್ಲೀವೇ ಲೆ‌ಸ್‌ ಕ್ರಾಪ್‌ ಟಾಪ್‌, ಲಾಂಗ್‌ ಸ್ಲೀವ್ ಕ್ರಾಪ್‌ಟಾಪ್‌, ಬ್ಯಾಕ್‌ ಲೆಸ್‌ ಕ್ರಾಪ್‌ ಟಾಪ್‌, ಬ್ಯಾಗೀ ಕ್ರಾಪ್‌ ಟಾಪ್‌, ಆಫ್‌ ಶೋಲ್ಡರ್‌ ಕ್ರಾಪ್‌ ಟಾಪ್‌, ವಿಂಟರ್‌ ಕ್ರಾಪ್‌ ಟಾಪ್‌, ಟರ್ಟಲ್ ನೆಕ್‌ ಕ್ರಾಪ್‌ ಟಾಪ್‌ ಇತ್ಯಾದಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ