ಮತ್ತೆ ಮೋಡಿ ಮಾಡಲು ಸಜ್ಜಾದ ಸತೀಶ್‌-ರಚಿತಾ ಜೋಡಿ

ಕನ್ನಡದ ಸೂಪರ್‌ ಹಿಟ್‌ ನೋಡಿ ರಚಿತಾ ರಾಮ್ ಹಾಗೂ ಸತೀಶ್‌ ನೀನಾಸಂ ಮತ್ತೆ ಒಂದಾಗಿದ್ದಾರೆ. ಅಯೋಗ್ಯ ಸಿನಿಮಾ ಮೂಲಕ ಮೋಡಿ ಮಾಡಿದ್ದ ಈ ಜೋಡಿ, ಇದೀಗ 6 ವರ್ಷಗಳ ಬಳಿಕ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ. ಹೌದು, ಅಯೋಗ್ಯ ಸಿನಿಮಾದ ಪಾರ್ಟ್‌-2 ಸೆಟ್ಟೇರುತ್ತಿದ್ದು, ಈಗಾಗಲೇ ಮುಹೂರ್ತ ನೆರವೇರಿದೆ. ಪುನೀತ್‌ ರಾಜ್‌ ಕುಮಾರ್‌ ಪತ್ನಿ ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌ `ಅಯೋಗ್ಯ-2′ ಚಿತ್ರಕ್ಕೆ ಕ್ಲಾಪ್‌ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದರು. ಮುಹೂರ್ತ ಸಮಾರಂಭದಲ್ಲಿ ಇಡೀ ಸಿನಿಮಾ ತಂಡದ ಜೊತೆಗೆ ನೆನಪಿರಲಿ ಪ್ರೇಮ್, ನಟ ಶ್ರೇಯಸ್‌ ಮಂಜು, ಪ್ರಮೋದ್ ಸೇರಿದಂತೆ ಅನೇಕ ಕಲಾವಿದರು ಹಾಜರಿದ್ದು, ಸಿನಿಮಾ ತಂಡಕ್ಕೆ ಶುಭ ಹಾರೈಸಿದರು.

469958013_1182651893867588_1795445034185598817_n

6 ವರ್ಷದ ಹಿಂದೆ, ಅಂದರೆ 2018ರಲ್ಲಿ ಸಿದ್ದೇಗೌಡ ಹಾಗೂ ನಂದಿನಿ ಲವ್ ಸ್ಟೋರಿಗೆ ಕನ್ನಡ ಸಿನಿ ಪ್ರೇಮಿಗಳು ಶಹಬ್ಬಾಸ್ ಎಂದಿದ್ದರು.  ಇದೀಗ ಮತ್ತದೇ ತಂಡ `ಅಯೋಗ್ಯ-2′ ಸಿನಿಮಾ ಮೂಲಕ ಒಂದಾಗುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

ಅಯೋಗ್ಯ ಸಿನಿಮಾದ ಹಾಡುಗಳು ಕನ್ನಡ ಸಿನಿಮಾ ರಂಗದಲ್ಲಿಯೇ ಹೊಸ ಇತಿಹಾಸ ಬರೆದಿತ್ತು. ಈಗ ಮತ್ತಷ್ಟು ನಿರೀಕ್ಷೆಗಳೊಂದಿಗೆ ಚಿತ್ರತಂಡ ಹೊಸ ದಾಖಲೆ ಸೃಷ್ಟಿಸಲು ಸಜ್ಜಾಗಿದೆ. ಇನ್ನು `ಅಯೋಗ್ಯ-2′ ಸಿನಿಮಾ ಡಿಸೆಂಬರ್‌ 11ರಂದು ಸೆಟ್ಟೇರಿದ್ದು, ಚಿತ್ರಕ್ಕೆ ಮಹೇಶ್‌ ಕುಮಾರ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಎಂ. ಮುನೇಗೌಡ ಅಯೋಗ್ಯ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ನಿರ್ದೇಶನ ಇದೆ. ರಚಿತಾ ರಾಮ್, ಸತೀಶ್‌ ನೀನಾಸಂ, ರವಿಶಂಕರ್‌, ಶಿವರಾಜ್‌ ಕೆ.ಆರ್‌. ಪೇಟೆ ಸೇರಿದಂತೆ ಅಯೋಗ್ಯ ಸಿನಿಮಾದಲ್ಲಿ ಅಭಿನಯಿಸಿದ ಬಹುತೇಕ ಕಲಾವಿದರು `ಅಯೋಗ್ಯ-2’ನಲ್ಲಿ  ಮುಂದುವರಿಯುತ್ತಿರುವುದು ವಿಶೇಷ.

ಪ್ರತಿನಿಧಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ