ಶರತ್ ಚಂದ್ರ 

ವಿಕ್ರಾಂತ ರೋಣ ಚಿತ್ರ ಯಶಸ್ವೀ ಯಾದ ನಂತರ ನಿರ್ದೇಶಕ ಅನೂಪ್ ಬಂಡಾರಿ, ತನ್ನ ಬತ್ತಲಿಕೆಯಲ್ಲಿ  ಸುದೀಪ್ ಗಾಗಿ ‘ಬಿಲ್ಲ ರಂಗ ಭಾಷ ‘ ಎಂಬ ಅದ್ಭುತ ಸಬ್ಜೆಕ್ಟ್ ಇರುವ ಬಗ್ಗೆ ಹೇಳಿ ಅಭಿಮಾನಿಗಳು ಆ ಸಿನಿಮಾ ಯಾವಾಗ ಆರಂಭ ವಾಗುತ್ತೆ ಅಂತ ಕಾಯೋ ತರ ಮಾಡಿದ್ರು.ಸ್ಕ್ರಿಪ್ಟ್ ರೆಡಿ ಮಾಡಲು ವರ್ಷಾನುಗಟ್ಟಲೆ ತೆಗೆದು ಕೊಂಡ ಅನೂಪ್, ಈಗ ಭರದಿಂದ ಸಿನಿಮಾದ ಚಿತ್ರೀಕರಣ ನಡೆಸುತ್ತಿದ್ದಾರೆ. ತೆಲುಗಿನ ಬ್ಲಾಕ್ ಬ ಸ್ಟರ್ ‘ಹನುಮಾನ್’ ಚಿತ್ರದ ನಿರ್ಮಾಪಕರು ಚಿತ್ರಕ್ಕೆ ಬಂಡವಾಳ ಹೂಡಿರುವುದು ನಿಮಗೆಲ್ಲ ಗೊತ್ತಿದೆ.

ಇಷ್ಟು ದಿನ ಕಿಚ್ಚನ ಈ ಸಿನಿಮಾ ಲಾಂಚ್ ಯಾವಾಗ ಆಗುತ್ತೆ  ಅಂತ ಅಭಿಮಾನಿಗಳು  ಕಾಯುತ್ತಿದ್ದರೆ, ಈಗ ಚಿತ್ರದ ಹೀರೋಯಿನ್ ಯಾರು ಎಂಬ ಕುತೂಹಲ ಎಲ್ಲರನ್ನು ಕಾಡುತ್ತಿದೆ.  ಈ ಹಿಂದೆ ಬಿಡುಗಡೆಯಾದ ಸುದೀಪ್ ಅವರ ಕೋಟಿಗೊಬ್ಬ 3, ವಿಕ್ರಾಂತ್ ರೋಣ ಮತ್ತು ಮ್ಯಾಕ್ಸ್  ಚಿತ್ರಗಳನ್ನು ಗಮನಿಸಿದರೆ ಹೀರೋಯಿನ್ ಗಳಿಗೆ ಅವರ ಚಿತ್ರಗಳಲ್ಲಿ ಹೇಳಿಕೊಳ್ಳುವಂತಹ  ಅವಕಾಶ ಇರಲಿಲ್ಲ. ಇಡೀ ಚಿತ್ರವನ್ನು ತಮ್ಮ ಬೆನ್ನಲ್ಲಿ ಕಿಚ್ಚ ಹೊತ್ತುಕೊಂಡು ಹೋಗುತ್ತಾರೆ ಅನ್ನೋ ವಿಷಯ ಎಲ್ಲರಿಗೆ ಗೊತ್ತಿದೆ.

1000505920

ಆದರೂ ಕೂಡ’ ಬಿಲ್ಲ ರಂಗ ಭಾಷ’ ಚಿತ್ರದ ಹೀರೋಯಿನ್ ಬಗ್ಗೆ ಕೆಲವು ವಾರಗಳಿಂದ ಸಾಕಷ್ಟು ಚರ್ಚೆಗಳಾಗುತ್ತಿವೆ. ಅಸಲಿಗೆ ಚಿತ್ರದಲ್ಲಿ ಎಷ್ಟು ಹೀರೋಯಿನ್ಗಲ್ಲಿದ್ದಾರೆ ಅಂತ ಅನೂಪ್ ಇನ್ನೂ ಬಾಯಿ ಬಿಟ್ಟಿಲ್ಲ.

1000505928

ಸೋಶಿಯಲ್ ಮೀಡಿಯಾಗಳಲ್ಲಿ ಈಗಾಗಲೇ ರುಕ್ಮಿಣಿ ವಸಂತ್, ಪೂಜಾ ಹೆಗ್ಡೆ, ಶ್ರೀನಿಧಿ ಶೆಟ್ಟಿ ಹಾಗೂ ಮೃನಾಲ್ ಠಾಕೂರ್ ಹೆಸರುಗಳು ಹರಿದಾಡುತ್ತಿವೆ. ಈ ಪಟ್ಟಿಗೆ ಇನ್ನೊಂದು ಹೆಸರು ಸೇರ್ಪಡೆಯಾಗಿದೆ. ಆಕೆ ಬೇರೆ ಯಾರು ಅಲ್ಲ, 2024 ರ ಸೌಂದರ್ಯ ಸ್ಪರ್ಧೆಯಲ್ಲಿ ‘ಫೆಮಿನಾ ಮಿಸ್ ಇಂಡಿಯಾ ಟೈಟಲ್ ಮುಡಿಗೆರಿಸಿದ್ದ ನಿಖಿತಾ ಪೋರ್ವಾಲ್.

1000505909

ಈಗಾಗಲೇ ರಂಗಭೂಮಿಯಲ್ಲಿ 60ಕ್ಕಿಂತಲೂ ಹೆಚ್ಚಿನ ನಾಟಕಗಳಲ್ಲಿ ಅಭಿನಯಿಸಿ ಅನುಭವ ಇರುವ ನಿಖಿತಾ, ಕೃಷ್ಣ ಲೀಲಾ ಎಂಬ ನಾಟಕ ರಚಿಸಿರುವ ಪ್ರತಿಭಾವಂತೆ.ಈಗಾಗಲೇ ‘ಚಂಬಲ್ ಪಾರ್ ‘ ಎನ್ನುವ ಚಿತ್ರದಲ್ಲಿ ನಟಿಸಿರುವ ನಿಖಿತಾ ಮುಂದಿನ ವರ್ಷ ನಡೆಯಲಿರುವ ‘ಮಿಸ್ ವರ್ಲ್ಡ್ ‘ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಆ ಗ್ಯಾಪ್ ನಲ್ಲಿ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಾರ ಗೊತ್ತಿಲ್ಲ.

1000505914

ರುಕ್ಮಿಣಿ ವಸಂತ್ ಈಗ ಕನ್ನಡ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿ ಪರಿಚಿತರಾಗಿರುವುದರಿಂದ ನಾಯಕಿಯಾಗಿ ಆಯ್ಕೆಯಾಗುವ ಸಾಧ್ಯತೆ ತುಂಬಾ ಇದೆ ಎಂದು ಹೇಳಲಾಗುತ್ತಿದೆ ಸಧ್ಯಕ್ಕೆ ಶೂಟಿಂಗ್ ನಲ್ಲಿ ಬ್ಯುಸಿ ಇರುವ ಅನೂಪ್ ಬಂಡಾರಿ ಅಧಿಕೃತ ವಾಗಿ ಅನೌನ್ಸ್ ಮಾಡುವವರೆಗೆ ಅಭಿಮಾನಿಗಳು ಕುತೂಹಲದಿಂದ ಕಾಯಬೇಕಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ