ರಾಘವೇಂದ್ರ ಅಡಿಗ ಎಚ್ಚ್ದೆನ್.

ಚಲನಚಿತ್ರ ನಟರು ಹಾಗೂ ಮಾಜಿ ಶಾಸಕರಾದ ಕುಮಾರ ಬಂಗಾರಪ್ಪ ಹಾಗೂ ನಟಿ ರಾಗಿಣಿ ದ್ವಿವೇದಿ  ಮುಖ್ಯ ಭೂಮಿಕೆಯಲ್ಲಿರುವ “ಸರ್ಕಾರಿ ನ್ಯಾಯಬೆಲೆ ಅಂಗಡಿ” ಚಲನಚಿತ್ರದ ಮುಹೂರ್ತ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನ ಹೊಸಹಳ್ಳಿಯ ಆದಿಚುಂಚನಗಿರಿ ಶಾಖಾ ಮಠದಲ್ಲಿ ನೆರವೇರಿದೆ.  ಹಿರಿಯ ನಟರಾದ ಪ್ರಣಯರಾಜ ಶ್ರೀನಾಥ್ ಚಿತ್ರಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ ಎಚ್ ಮುನಿಯಪ್ಪ , ಶಾಸಕರಾದ ಎಲ್.ಆರ್. ಶಿವರಾಮೇಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಭಾ ಮ ಹರೀಶ್, ಹಿರಿಯ ನಟರಾದ ದೊಡ್ಡಣ್ಣ, ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷರಾದ  ಕೆ.ಕೆ.ಕೃಷ್ಣಪ್ಪ ಉಪಸ್ಥಿತರಿದ್ದರು.
ಚಿತ್ರದ ನಾಯಕ ನಟರಾದ ಕುಮಾರ ಬಂಗಾರಪ್ಪ ಮಾತನಾಡಿ ” ನಮ್ಮ ತಂದೆಯವರ ಬಹಳ ಆತ್ಮೀಯರಾಗಿದ್ದಂತಹಾ ಇಬ್ಬರು ಇದ್ದಾರೆ ಮುನಿಯಪ್ಪನವರು ಮತ್ತೆ ನಮ್ಮ ಶಿವರಾಮಗೌಡರು ಮತ್ತು ನಮ್ಮ ಹಿರಿಯ ನಟರಾದ ನಮ್ಮ ಚಿತ್ರರಂಗದ ಮುಂಚೂಣಿಯಲ್ಲಿ ನಡೆಸಿಕೊಂಡು ಹೋಗಿ ಬಂದಿರುವ ದೊಡ್ಡಣ್ಣವರು ಮತ್ತು ನಮ್ಮ ಮೊದಲನೇ ಚಿತ್ರದಲ್ಲಿ ನಾವಿಬ್ಬರು ಜೊತೆಯಾದವರು ವಿಜಯೋತ್ಸವ ಸಿನಿಮಾದಲ್ಲಿ ನಾನು ಮತ್ತು ರಾಮಮೂರ್ತಿ ನನ್ನ ಆದವರು ಸುಮಾರು 35 40 ವರ್ಷಗಳ ಮೇಲೆ ನಮ್ಮವರ ಸಂಬಂಧ ಇವತ್ತು ಅವರ ಸಿನಿಮದಲ್ಲಿ ನಮಗೆ ಒಂದು ಅವಕಾಶ ಕೊಟ್ಟಿರೋದಕ್ಕೆ ನಾನು ಕೃತಜ್ಞತನಾಗಿದ್ದೇನೆ ಮತ್ತು ನಾನು ಅವರಿಗೆ ಶರಣಾಗಿದ್ದೇನೆ. ನ್ಯಾಯಬೆಲೆ ಅಂಗಡಿಯ ಬಗ್ಗೆ ಮತ್ತು ವಿಶೇಷವಾಗಿ ನಮ್ಮ ಸೋದರಿಯಾದ ರಾಗಿಣಿ ಅವರು ಇವತ್ತು ನಮ್ಮ ಸಹಕಲಾವಿದೆಯಾಗಿರುವುದು ಒಂದು ಶುಭ ಅಂತಹೇಳಿ ಆಶಿಸು್ತ್ತೇನೆ ಐ ವಿಶ್ ಯು ಆಲ್ ದ ಬೆಸ್ಟ್ ವಿ ವಿಲ್ ವರ್ಕ್ ವೆರಿ ಹಾರ್ಡ್ ಅಂಡ್ ವಿ ವಿಲ್ ಗಿವ್ ಯು ದ ಬೆಸ್ಟ್ ಫಾರ್ ದಿಸ್ ಫಿಲಂ್ ನಮ್ಮ ಅನ್ನದಾತರು ನಮ್ಮ ಇಬ್ಬರು ಸಹೋದರಿಯರು ನಮ್ಮ ನಿರ್ಮಾಪಕಿಯರು ಅವರಿಗೆ ಯಾವುದೇ ರೀತಿನಲ್ಲೂ ಕೊರತೆ ಆಗದೆ ಇರುವ ರೀತಿನಲ್ಲಿ ದಿನಗಳು ಹಾಳಾಗದೆ ರೀತಿನಲ್ಲಿ ಅವರ ಕ್ಷಣ ಕ್ಷಣಕ್ಕೂ ಕೂಡನು ಇಲ್ಲಿ ಖರ್ಚಾಗುತ್ತೆ ಅದನ್ನ ಉಳಿಸಿ ಅವರಿಗೆ ಚಿತ್ರವನ್ನ ಆದಷ್ಟು ಬೇಗ ಮುಗಿಸಿ ಕೊಡುವಂತಹಾ  ಕೆಲಸವನ್ನ ನಮ್ಮ ತಂಡ ರಾಮಮೂರ್ತಿ ಅವರ ನೇತೃತ್ವದಲ್ಲಿ ನಾವು ಮಾಡಿಕೊಡ್ತೀವಿ
“ಹಿರಿಯರು ಹೇಳಿದ ಹಾಗೆ ಮುದ್ದಣ್ಣ ಮನೋಹರ ಕಥೇ;ಲಿಊಟದ ಪಕ್ಕದಲ್ಲಿ ಒಂದು ಸೂಜಿನ ಇಟ್ಟಿರ್ತಾರೆ ಯಾಕಂದ್ರೆ ಅಗಳು ಬಿದ್ದಾಗ ಕೂಡನು ಕೈನಿಂದ ತೆಗೆಯಕೆ ಆಗಲಿಲ್ಲ ಅಂದ್ರೆ ಸೂಜಿನಲ್ಲಿ ಹಿಂಗೆ ತಗೊಂಡುಬಿಟ್ಟು ಹಾಕೊಬೇಕು, ಹಾಗಾಗಿ ರಾಜಕುಮಾರ್ ಅವರು ಅಣ್ಣವರು ಅವರನ್ನ ನೋಡಿ ನಾವು ಕಲಿತವರು ಎಲೆಮೇಲೆ ಸಾರಿಸಿದಂತಿರೋದು,  ಒಂದು ಅಗಳನ್ನು ಕೂಡನು ಬಿಡ್ತಿರಲಿಲ್ಲ ಹಾಕಿಸ್ಕೊಬೇಕಾದ್ರೆನೆ ತೀರ್ಮಾನ ಮಾಡೋರು ತನ್ನ ಹೊಟ್ಟೆಗೆ ಎಷ್ಟು ಬೇಕು ಅಂತ ಹೇಳಿ ಯಾಕಂದ್ರೆ ಅದು ಮತ್ತೊಬ್ಬನ ರೈತನ ದುಡಿಮೆಯನ್ನ ಮತ್ತೊಬ್ಬನ ಹಸಿವಾಗಿರತಕಂತವನ ತುತ್ತನ್ನ ನಾವು ನೆಲಕ್ಕೆ ಹಾಕಬಾರದು ಅನ್ನೋ ಉದ್ದೇಶದಿಂದ ಅವರನ್ನ ನೋಡಿ ನಾವು ಕಲಿತುಕೊಂಡು ಬಂದಿರತಕಂತವರು ನಮ್ಮ ದೊಡ್ಡಣ್ಣವರು ಬಹಳಷ್ಟು ವಿಚಾರಗಳನ್ನ ಅದರ ಬಗ್ಗೆ ಮಾತನಾಡಿದ್ದಾರೆ ಮತ್ತು ತಿಳ್ಕೊಂಡಿದ್ದಾರೆ ಹಾಗಾಗಿ ಇವತ್ತುಒಂದು ಈ ಚಿತ್ರ ನ್ಯಾಯಬೆಲೆ ಅಂಗಡಿ ಬಗ್ಗೆ ಮಾಡ್ತಾ ಇರತಕಂತ ಚಿತ್ರ ಸರ್ವರಿಗೂ ತಲುಪಬೇಕು ಮತ್ತು ಇದು ಒಳ್ಳೆಯಸಮಾಜಕ್ಕೆ ಮಾರ್ಗದರ್ಶವಾಗಿ ಇರಬೇಕು “ಎಂದರು.

495099034_4133078026923183_4965025481499136402_n
ನಟಿ ರಾಘಿಣಿ ಮಾತನಾಡಿ ” ಈ ಕಥೆಯನ್ನು ರಾಮಮೂರ್ತಿಯವರು ಹೇಳಿದಾಗ ನನಗೆ ಈ ಥರದ ಕಥೆಯನ್ನು ನಾವು ಸಮಾಜಕ್ಕೆ ತೋರಿಸಬೇಕು ಎನಿಸಿತು. ಈ ಸಿನಿಮಾದ ಮೇಲೆ ನಿಮ್ಮ ಶೀರ್ವಾದ, ಬೆಂಬಲ ಇರಲಿ” ಎಂದು ಮನವಿ ಮಾಡಿದರು.
ಇದುವರೆಗೂ ಹೆಚ್ಚಾಗಿ ಗ್ಲಾಮರಸ್‌ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ರಾಗಿಣಿ ದ್ವಿವೇದಿ ಅವರು ‘ಸರ್ಕಾರಿ ನ್ಯಾಯಬೆಲೆ ಅಂಗಡಿʼ ಸಿನಿಮಾದಲ್ಲಿ ಪಕ್ಕಾ ಹಳ್ಳಿ ಹುಡುಗಿಯಾಗಿ ನಟಿಸಲಿದ್ದಾರೆ. ಇದಾಗಲೇ ಚಿತ್ರದ ಆಡಿಯೋ ಪೂಜೆ ನೆರವೇರಿಸಿದ್ದ ತಂಡ ಈಗ ಶೂಟಿಂಗ್ ಮುಹೂರ್ತ ಸಹ ನಡೆಸಿದೆ.
ಚಿತ್ರಕ್ಕೆ ಅನಂತ್‌ ಆರ್ಯನ್‌ ಸಂಗೀತ ನಿಡುತ್ತಿದ್ದು ತೇಜು ಮೂರ್ತಿ, ಎಸ್‌. ಪದ್ಮಾವತಿ ಚಂದ್ರಶೇಖರ್‌ ‘ಜಯಶಂಕರ ಟಾಕೀಸ್‌ʼ ಮೂಲಕ ‘ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.
ಬಿ. ರಾಮಮೂರ್ತಿ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಸಾತ್ವಿಕ್‌ ಪವನ್ ಕುಮಾರ್‌ ಅವರು ಛಾಯಾಗ್ರಹಣ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ