ನೀವು ನಾನ್ವೆಜ್‌, ಸೇವಿಸಿಯೂ ಕೂಡ ವೆಜಿಟೇರಿಯನ್ಆಗಿರಬಹುದಾಗಿದೆ. ಅದೂ ಕೂಡ ರುಚಿ ಹಾಗೂ ಎಲ್ಲವೂ ವಿಶೇಷತೆಗಳೊಂದಿಗೆ…..

ನೀವು ನಾನ್‌ ವೆಜ್‌ ತೊರೆದು ಸಸ್ಯಾಹಾರಿ ಆಗಲು ಬಯಸಿದರೆ, ರುಚಿಗೆ ಒಗ್ಗಿದ ನಾಲಿಗೆ ಅದಕ್ಕೆ ಅವಕಾಶ ಕೊಡಲಾರದೇನೊ! ಅದಕ್ಕಾಗಿ ನೀವು ವ್ಯಥೆ ಪಡಬೇಕಾಗಿಲ್ಲ. ಏಕೆಂದರೆ ಈಗ ನಿಮ್ಮ ಸಸ್ಯಾಹಾರಿ ಪ್ಲೇಟ್‌ ನಲ್ಲಿ ಫಿಶ್‌ ಮತ್ತು ಚಿಕನ್‌ ಕೂಡ ಲಭಿಸುತ್ತದೆ. ನಿಮ್ಮ ಚಪಲದ ನಾಲಿಗೆ ನೀವು ವೆಜ್‌ ಸೇವಿಸಿದ್ದೀರೊ ಅಥವಾ ನಾನ್‌ ವೆಜ್‌ ಸೇವಿಸಿದ್ದೀರೊ ಎಂಬುದನ್ನು ಗುರುತಿಸದು.

ಮೀನು ಹಾಗೂ ಮೊಟ್ಟೆ ಪ್ರೋಟೀನ್‌ ನ ಮುಖ್ಯ ಮೂಲಗಳಾಗಿವೆ ಹಾಗೂ ಆರೋಗ್ಯಕ್ಕೆ ಬಹಳ ನೆರವಾಗುತ್ತವೆ. ರಕ್ತಹೀನತೆ ಅಥವಾ ದೇಹದಲ್ಲಿ ರಕ್ತದ ಕೊರತೆ ಇದ್ದಾಗ ವೈದ್ಯರು ನಾನ್‌ ವೆಜ್‌ ತಿನ್ನಲು ಸಲಹೆ ನೀಡುತ್ತಾರೆ. ರಕ್ತಹೀನತೆಯ ರೋಗಿಗಳಿಗೆ ವೈದ್ಯರು ಲಿವರ್‌ ತಿನ್ನಲು ಸಲಹೆ ನೀಡುತ್ತಾರೆ. ಆದರೆ ಸಮಸ್ಯೆ ಉಂಟಾಗುವುದು ಆ ವ್ಯಕ್ತಿ ಪಕ್ಕಾ ಸಸ್ಯಾಹಾರಿಯಾಗಿದ್ದಾಗ, ಆಗ ನಾನ್‌ ವೆಜ್‌ ತಿನ್ನುವುದು ದೂರ ಉಳಿಯಿತು, ಅದನ್ನು ಮುಟ್ಟಲು ಸಹ ಇಷ್ಟಪಡುವುದಿಲ್ಲ. ಆದರೆ ಆರೋಗ್ಯದ ದೃಷ್ಟಿಯಿಂದ ಇದು ನಿಮ್ಮನ್ನು ಧರ್ಮ ಸಂಕಟಕ್ಕೆ ದೂಡಬಹುದು.

ಆದರೆ ನೀವೀಗ ಚಿಂತೆ ಮಾಡುವ ಅಗತ್ಯವೇನಿಲ್ಲ. ಏಕೆಂದರೆ ನಿಮ್ಮ ಈ ಧರ್ಮ ಸಂಕಟಕ್ಕೆ ಐಐಟಿ ದೆಹಲಿಯ ತಜ್ಞರು ಪರಿಹಾರ ಕಂಡುಹಿಡಿದಿದ್ದಾರೆ. ಅವರು ಸಸ್ಯಾಹಾರಿಗಳನ್ನು ಗಮನದಲ್ಲಿಟ್ಟುಕೊಂಡು `ಮಾಕ್‌ ಮೀಟ್‌’ ಸಿದ್ಧಪಡಿಸಿದ್ದಾರೆ. ಅದು ರುಚಿ, ವಾಸನೆ ಹಾಗೂ ವಿಶೇಷತೆಗಳಲ್ಲಿ ಅಸಲಿ ಮಾಂಸವನ್ನೇ ಹೋಲುತ್ತದೆ. ಆದರೆ ಅದು ಪರಿಪೂರ್ಣ ವೆಜಿಟೇರಿಯನ್‌ ಆಗಿರುತ್ತದೆ. ಅಷ್ಟೇ ಅಲ್ಲ, ಅವರು ತಯಾರಿಸಿರುವ ಮೀನು ಸಂಪೂರ್ಣವಾಗಿ ಸಸ್ಯಾಹಾರಿಯಾಗಿದೆ. ಅದನ್ನು ಸಸ್ಯಾಹಾರಿಗಳು ಯಾವುದೇ ಹಿಂಜರಿಕೆಯಿಲ್ಲದೆ ಸೇವಿಸಬಹುದಾಗಿದೆ.

ಏನಿದು ಮಾಕ್ಮೀಟ್‌?

ಈ ಮಾಕ್‌ ಮೀಟ್‌ ನ್ನು ಐಐಟಿ ದೆಹಲಿಯ `ಸೆಂಟರ್‌ ಫಾರ್‌ ರೂರಲ್ ಡೆವಲಪ್‌ ಮೆಂಟ್‌ ಅಂಡ್‌ ಟೆಕ್ನಾಲಜಿ’ಯು ಸಿದ್ಧಪಡಿಸಿದೆ. ಐಐಟಿ ದೆಹಲಿಯಲ್ಲಿ ಸುಮಾರು 2 ವರ್ಷಗಳಿಂದ ಪೋಷಕಾಂಶ ಮತ್ತು ಸುರಕ್ಷಿತ ಪ್ರೋಟೀನ್‌ ಪ್ರಾಡಕ್ಟ್ ಕುರಿತಂತೆ ಕೆಲಸಗಳು ನಡೆದಿವೆ. ಈ ಪ್ರಾಜೆಕ್ಟ್ ನಲ್ಲಿ ಕಾವ್ಯಾ ದಶೋರಾ ಹಾಗೂ ಅವರ ತಂಡದವರು ಮಗ್ನರಾಗಿದ್ದಾರೆ. ಅದಕ್ಕೂ ಮುಂಚೆ ಈ ತಂಡದವರು `ಮಾಕ್‌ ಎಗ್‌’ ಕೂಡ ತಯಾರಿಸಿದ್ದರು. ಅದು ವೆಜಿಟೇರಿಯನ್‌ ಮೊಟ್ಟೆಯಾಗಿದ್ದು, ಅದನ್ನು ಬೇಯಿಸಿ ಸೇವಿಸಬಹುದು.

ಪ್ರೊ. ಕಾವ್ಯಾರನ್ನು ಈ ಹೊಸ ಆವಿಷ್ಕಾರಕ್ಕೆ `ಯುನೈಟೆಡ್‌ ನೇಶನ್ಸ್ ಡೆವಲಪ್‌ ಮೆಂಟ್‌ ಪ್ರೋಗ್ರಾಂ’ ಪುರಸ್ಕಾರ ನೀಡಿ ಗೌರವಿಸಿತ್ತು. ಈಗ ಅದೇ ತಂಡ ಸಸ್ಯಾಹಾರಿ ಮಾಂಸ ಹಾಗೂ ಮೀನು ತಯಾರಿಸಿ, ಸಸ್ಯಾಹಾರಿಗಳ ರುಚಿಯನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ.

ದೆಹಲಿ ಐಐಟಿಯ ಟೀಮ್ ಈ ಸಸ್ಯಾಹಾರಿ ಮಾಂಸವನ್ನು ಹಣ್ಣುಗಳು ಹಾಗೂ ತರಕಾರಿಗಳಿಂದ ಸಿದ್ಧಪಡಿಸಿದೆ. ಅದರ ಪ್ರಕಾರ, ಎಲ್ಲಕ್ಕೂ ಮುಂಚೆ ಹಣ್ಣುಗಳ ಹಾಗೂ ತರಕಾರಿಗಳಲ್ಲಿ ಪ್ರೋಟೀನ್‌ ನ್ನು ಕಂಡುಕೊಳ್ಳಲಾಯಿತು. ಆ ಬಳಿಕ ಫ್ಲೇವರ್‌ ಬಗ್ಗೆ ಕೆಲಸ ಮುಂದುವರಿಸಲಾಯಿತು. ಈ ಮೀಟ್‌ ನ್ನು ಭಾರತೀಯರ ಮಸಾಲೆ ಹಾಗೂ ಒಗ್ಗರಣೆಯ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಲಾಗಿದೆ.

ಪ್ರೊ. ಕಾವ್ಯಾ ಹೇಳುತ್ತಾರೆ, ಈಗ ಸಸ್ಯಾಹಾರಿಗಳು ರೋಗನ್‌ ಜೋಶ್‌, ಕಢಾಯಿ ಚಿಕನ್‌, ಮಟನ್‌ ಬಿರಿಯಾನಿ, ಚಿಕನ್‌ ಪ್ಯಾಟಿಸ್, ಫಿಶ್‌ ಫ್ರೈ ಮತ್ತು ಆಮ್ಲೆಟ್‌ ಸೇವಿಸಬಹುದು. ಈ ಟೀಮ್ ತಯಾರಿಸಿದ ಸಸ್ಯಾಹಾರಿ ಮೀನಿನ ರುಚಿ ಹೇಗಿತ್ತೆಂದರೆ, ಬಂಗಾಲಿ ಹಾಗೂ ಪೂರ್ವಾಂಚಲದ ಮಾಂಸಾಹಾರಿಗಳು ಇದನ್ನು ತಿಂದು, ಅಸಲಿ ನಕಲಿಯಲ್ಲಿ ವ್ಯತ್ಯಾಸ ಗುರುತಿಸಲಿಲ್ಲ.

ಆಹಾರದ ಟ್ರಯಲ್ ನ ಸಂದರ್ಭದಲ್ಲಿ ಮೀನು ಸೇವಿಸುವ ಜನರಿಗೆ ನೀವು ತಿಂದದ್ದು ನಿಜವಾದ ಮೀನಲ್ಲ, ಮಾಕ್‌ ಫಿಶ್‌ ಎಂದು ಹೇಳಿದಾಗ, ಅವರಿಗೆ ಅದನ್ನು ನಂಬಲು ಆಗಲಿಲ್ಲ.

ಪ್ರೊ. ಕಾವ್ಯಾ ಹೇಳುವ ಪ್ರಕಾರ, ಮೀಟ್‌ ಪ್ರೋಟೀನ್‌ ಬೇಳೆಯಲ್ಲಿರುವ ಪ್ರೋಟೀನ್‌ ಗಳಿಗಿಂತ ಅತ್ಯುತ್ತಮ. ಆದರೆ ಅದರ ಉತ್ಪಾದನೆಗಾಗಿ ಹಾರ್ಮೋನುಗಳನ್ನು ಬಳಸಲಾಗುತ್ತಿರುವುದರಿಂದ ಈಗ ಅದು ಸುರಕ್ಷಿತವಾಗಿ ಉಳಿದಿಲ್ಲ. ಅಧ್ಯಯನದಲ್ಲಿ ಕಂಡುಕೊಂಡ ಪ್ರಕಾರ, ಕೆಲವು ಧಾನ್ಯಗಳಲ್ಲಿನ ಪ್ರೋಟೀನ್‌ ಮೀಟ್‌ ಪ್ರೋಟೀನ್‌ ನಲ್ಲಿರುವಷ್ಟೇ ಇರುತ್ತದೆ. ಅನಿಮಲ್ ಪ್ರೋಟೀನ್ ನಲ್ಲಿ ಬೈಟ್‌ ಸೈಜ್‌ ಹಾಗೂ ಮೌತ್‌ ಫೀಲ್ ‌ಚೆನ್ನಾಗಿರುತ್ತದೆ.

ಮಾಕ್‌ ಮೀಟ್‌ ಒಂದೆಡೆ ಸಸ್ಯಾಹಾರಿ ಜನರ ಮೆನುಗಳ ಡಿಶೆಸ್‌ ನಲ್ಲಿ ಹೆಚ್ಚಳವನ್ನುಂಟು ಮಾಡಿದರೆ, ಇನ್ನೊಂದೆಡೆ, ಮಾಂಸಾಹಾರಿಗಳು ತಮ್ಮ ಆರೋಗ್ಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಾಣಿಗಳ ಮಾಂಸ ತಿನ್ನುವುದನ್ನು ಬಿಟ್ಟುಬಿಡುತ್ತಾರೆ. ಆದರೆ ಈಗ ಅವರಿಗೆ ಸಸ್ಯಾಹಾರಿ ಮೀಟ್‌ ಒಂದು ಉತ್ತಮ ಪರ್ಯಾಯವಾಗಲಿದ್ದು, ಅದು ಅದರ ರುಚಿಯನ್ನು ಹಾಳಗೆಡಹುವುದಿಲ್ಲ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ