ಶರತ್ ಚಂದ್ರ
ಇತ್ತೀಚೆಗೆ ಸಿನಿಮಾದಲ್ಲಿ ನಟಿಸಿದರೆ ಅಷ್ಟೇ ಸಾಲದು, ಸಿನಿಮಾ ಬಿಡುಗಡೆಗೆ ಮುಂಚೆ ಮತ್ತು ನಂತರ ಚಿತ್ರ ತಂಡ, ಅದರಲ್ಲೂ ವಿಶೇಷವಾಗಿ ಚಿತ್ರದ ನಾಯಕರು ಮತ್ತು ನಾಯಕಿಯಾರು ಜನರನ್ನು ತಲುಪಲು ಏನೆಲ್ಲಾ ಸರ್ಕಸ್ ಮಾಡುತ್ತಿದ್ದಾರೆ.
ಚಿತ್ರಮಂದಿರವಲ್ಲದೆ ಕಾಲೇಜು, ಮೆಟ್ರೋ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿ ಪ್ರಚಾರ ಮಾಡುವುದನ್ನು ನಾವು ನೋಡಿದ್ದೇವೆ.
ಕಳೆದ ಶುಕ್ರವಾರ ಅಕ್ಷಯ್ ಕುಮಾರ್ ನಾಯಕ ನಟನಾಗಿ ಅಭಿನಯಿಸಿದ ‘ ಹೌಸ್ ಫುಲ್ 5 ‘ಬಿಡುಗಡೆ ಯಾಗಿತ್ತು. ಅಕ್ಷಯ್ ಕುಮಾರ್ ಸಿಂಗಲ್ ಚಿತ್ರಮಂದಿರವೊಂದಕ್ಕೆ ಭೇಟಿ ನೀಡಿ ಯೂಟ್ಯೂಬ್ ಮತ್ತು ಸ್ಯಾಟ್ ಲೈಟ್ ಚಾನೆಲ್ ವರದಿಗಾರರಂತೆ ಕಾಲರ್ ಮೈಕ್ ಹಿಡಿದು ಪ್ರೇಕ್ಷಕರ ಅಭಿಪ್ರಾಯ ತಿಳಿಯುವ ಪ್ರಯತ್ನ ಮಾಡಿದ್ದಾರೆ.ಹೌಸ್ ಫುಲ್ 5 ರ ಸನ್ನಿವೇಶ ದಲ್ಲಿ ಬರುವ ಮಾಸ್ಕ್ ಧರಿಸಿದ್ದರಿಂದ ಅಲ್ಲಿ ಬಂದ ಪ್ರೇಕ್ಷಕ ರಿಗೆ ಅದು ಅಕ್ಷಯ್ ಕುಮಾರ್ ಎಂದು ಗೊತ್ತಾಗಿಲ್ಲ.
ಎಷ್ಟೋ ಪ್ರೇಕ್ಷಕರು ಅಕ್ಷಯ್ ಕುಮಾರ್ ಸಿನಿಮಾ ಬಗ್ಗೆ ಕೇಳಿದಾಗ ಅವರನ್ನು ಬೇರೆ ವರದಿಗಾರರನ್ನು ಅವಾಯ್ಡ್ ಮಾಡುವ ರೀತಿಯಲ್ಲಿ ಓಡಿ ಹೋಗಿದ್ದಾರೆ.
ಪ್ರೇಕ್ಷಕ ಪ್ರಭು ಗಳು ನೀಡಿದ ಎಲ್ಲಾ ವಿಮರ್ಶೆ ಗಳನ್ನು ಎಡಿಟ್ ಮಾಡದೆ ಹಾಗೆ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಹಂಚಿಕೊಂಡಿದ್ದಾರೆ.ಕೊನೆ ತನಕ ಮಾಸ್ಕ್ ತೆಗೆಯದೆ ಮಾತನಾಡಿ ರುವುದರಿಂದ ಯಾರಿಗೂ ಅದು ಅಕ್ಷಯ್ ಕುಮಾರ್ ಅಂತ ಗೊತ್ತಾಗಿಲ್ಲ.
ಹೌಸ್ ಫುಲ್ ಚಿತ್ರದ ಎಲ್ಲಾ ಭಾಗಗಳಲ್ಲೂ ಅಭಿನಯಿಸಿದ್ದ ಅಕ್ಷಯ್ ಕುಮಾರ್ ಅವರು ಹಿಟ್ ಚಿತ್ರ ನೀಡಿ ತುಂಬಾ ವರ್ಷಗಳಾಗಿವೆ. ಈ ಹಿಂದೆ ಬಂದ ಎಲ್ಲಾ ಹೌಸಫುಲ್ ಫ್ರ್ಯಾಂಚಿಸೀ ಗಳು ಹಿಟ್ ಆಗಿವೆ. ಈ ಒಂದು ಉದ್ದೇಶದಿಂದ ಅಕ್ಷಯ್ ಕುಮಾರ್ ಪ್ರೇಕ್ಷಕರ ನಾಡಿಮಿಡಿತ ತಿಳಿಯಲು ಚಿತ್ರಮಂದಿರಕ್ಕೆ ವಿಶೇಷ ಮಾಸ್ಕ್ ಧರಿಸಿ ತೆಗೆದ ವಿಡಿಯೋ ಈಗ ವೈರಲ್ ಆಗಿದೆ