ಗೃಹಶೋಭಾ ಮಹಿಳಾ ಓದುಗರ ವಿಶೇಷ ಅಭಿವೃದ್ಧಿ ವ್ಯಕ್ತಿತ್ವ ವಿಕಾಸ, ಏಳಿಗೆಗಾಗಿ ಎಂದೇ, ಡೆಲ್ಲಿ ಪ್ರೆಸ್‌ ಪ್ರಕಟಣಾ ತಂಡ, ಗೃಹಶೋಭಾ ಮಾಸಪತ್ರಿಕೆಯ ವತಿಯಿಂದ `ಎಂಪವರ್‌ ಹರ್‌’ ಇವೆಂಟ್‌ ನ್ನು ಇತ್ತೀಚೆಗೆ ಬಲು ಅದ್ಧೂರಿಯಾಗಿ ಏರ್ಪಡಿಸಲಾಗಿತ್ತು. ಪ್ರಮುಖ ಪ್ರಾಯೋಜಕರು ಎಂದರೆ ಫೈನಾನ್ಶಿಯಲ್ ಎಜುಕೇಶನ್‌ ಪಾರ್ಟ್‌ನರ್‌ HDFC, ಸಿಲ್ಕ್ ಪ್ಯೂರಿಟಿ ಪಾರ್ಟ್‌ನರ್‌ ಸಿಲ್ಕ್ ಮಾರ್ಕ್‌, ಜ್ಯೂವೆಲರಿ ಪಾರ್ಟ್‌ನರ್‌ GRT ಜ್ಯೂವೆಲರ್ಸ್‌, ಬ್ಯೂಟಿ ಪಾರ್ಟ್‌ನರ್‌ ಗ್ರೀನ್‌ ಲೀಫ್‌, ಅಸೋಸಿಯೇಟ್‌ ಸ್ಪಾನ್ಸರರ್‌ ನಂದಿನಿ, ಮೀಡಿಯಾ ಪಾರ್ಟ್‌ನರ್ಸ್‌ ಪ್ರಜಾಪ್ರಗತಿ  ಪ್ರಗತಿ TV.

DSC_7475

ಕಳೆದ ತಿಂಗಳು ಜೂನ್‌ 22 ರಂದು ಈ ಕಾರ್ಯಕ್ರಮವನ್ನು ಬೆಂಗಳೂರಿನ ರಾಜಭವನ ರಸ್ತೆಯ ದಿ ಕ್ಯಾಪಿಟಲ್ ಹೋಟೆಲ್ ‌ನಲ್ಲಿ  ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಇಡೀ ಫೋಕಸ್‌ ಮಹಿಳಾ ಸಬಲೀಕರಣ (ವಿಮನ್‌ ಎಂಪವರ್‌ ಮೆಂಟ್‌)ದ ಕುರಿತಾಗಿತ್ತು. ಈ ಕಾರ್ಯಕ್ರಮಕ್ಕಾಗಿ ನಗರದ ನೂರಾರು ಮಹಿಳೆಯರು ಅತಿ ಉತ್ಸಾಹದಿಂದ ತಮ್ಮ ಸ್ಕಿನ್‌ ಕೇರ್‌, ಆರೋಗ್ಯ, ಹಣಕಾಸು, ಸಿಲ್ಕ್ ಮಾರ್ಕ್‌ ವಿಚಾರಗಳ ಮಾಹಿತಿ, ಹೆಚ್ಚಿನ ಮನರಂಜನೆ ಇತ್ಯಾದಿಗಳಿಗಾಗಿ ಇಲ್ಲಿ ಸೇರಿದ್ದರು.

Dr.-Bhavana-Prasad-

ಮಾನಸಿಕ ಆರೋಗ್ಯದ ಸೆಷನ್

ಡಾ. ಭಾವನಾ ಪ್ರಸಾದ್‌, ತುಮಕೂರಿನ ಕನ್ಸಲ್ಟೆಂಟ್‌ ನ್ಯೂರೋಸೈಕ್ರಿಯಾಟಿಸ್ಟ್ ಆಗಿದ್ದು, ಚೈಲ್ಡ್ ಸೈಕಿಯಾಟ್ರಿಯಲ್ಲಿ ಸ್ಪೆಷಲಿಸ್ಟ್ ಹಾಗೂ ಪ್ರಸಿದ್ಧ ಡೀಅಡಿಕ್ಷನ್‌ ಮೋಟಿವೇಶನ್‌ ಸ್ಪೀಕರ್‌. ಸಾಮಾನ್ಯವಾಗಿ ಹೆಣ್ಣುಮಕ್ಕಳು ಇಡೀ ದಿನದ ಮನೆಗೆಲಸ, ಗಂಡ, ಮಕ್ಕಳು, ಹಿರಿಯರ ಮೇಲ್ವಿಚಾರಣೆ, ಹೊರಗಿನ ಓಡಾಟ, ಉದ್ಯೋಗದಲ್ಲಿದ್ದರೆ ಆಫೀಸ್‌, ಮನೆಗೆ ಬಂದು ರೆಗ್ಯುಲರ್‌ ಕೆಲಸ ಇತ್ಯಾದಿಗಳಿಂದ ಮಾನಸಿಕ ಒತ್ತಡಕ್ಕೆ ಸಿಲುಕುವುದು ಹೆಚ್ಚು. ಹೆಣ್ಣು ಕ್ರಮೇಣ ಬಾಲ್ಯದಿಂದ ಋತುಮತಿಯಾಗಿ, ಯೌವನಕ್ಕೆ ಕಾಲಿಟ್ಟು, ಮದುವೆ, ಗರ್ಭಾವಸ್ಥೆ, ಬಾಣಂತನ, ವೃದ್ಧಾಪ್ಯ ಇತ್ಯಾದಿಗಳ ನಾನಾ ಅವಸ್ಥೆಗಳಲ್ಲಿ ಯಾವಾಗ ಬೇಕಾದರೂ ಈ ಸ್ಥಿತಿಗೆ ಬರಬಹುದು. ಸೂಕ್ತ ಮಾನಸಿಕ ಆರೋಗ್ಯ, ತಜ್ಞರನ್ನು ಕಂಡು ಮಾಮೂಲಿ ರೋಗಗಳಿಗೆ ಚಿಕಿತ್ಸೆ ಪಡೆಯುವಂತೆಯೇ ಇದಕ್ಕೂ ಚಿಕಿತ್ಸೆ ಪಡೆಯಬೇಕು ಎಂದು ಮನವರಿಕೆ ಮಾಡಿಕೊಟ್ಟರು. ಇಂಥವರ ಬಳಿ ಹೋದ ಮಾತ್ರಕ್ಕೆ ಹುಡುಗಿಗೆ `ಹುಚ್ಚು’ ಎಂದು ಲೇಬಲ್ ಅಂಟಿಸುವ ನಮ್ಮ ಸಮಾಜದ ಟ್ಯಾಬೂ ಬಗ್ಗೆ ಖೇದ ವ್ಯಕ್ತಪಡಿಸುತ್ತಾ, ಇಂಥ ಮೂಢನಂಬಿಕೆಗಳಿಂದ ಹೊರಬರಬೇಕು ಎಂದು ಕರೆಕೊಟ್ಟರು. ಮಕ್ಕಳಲ್ಲಿ ಬೆಡ್‌ ವೆಟಿಂಗ್‌, ಬಾಣಂತಿ ಆದಾಗ `ಸನ್ನಿ’ ಸಮಸ್ಯೆ, ಅಡೋಲೆಸೆಂಟ್‌ ಡಿಪ್ರೆಶನ್ಸ್ ಇತ್ಯಾದಿಗಳ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಿ ಪ್ರೇಕ್ಷಕರ ನೂರಾರು ಸಂದೇಹಗಳನ್ನು ಪರಿಹರಿಸಿದರು.

Girija-Rani

SIP ಸಹೇಲಿ ಸೆಷನ್

ಗಿರಿಜಾರಾಣಿ ಕಾವಡಪು HDFC AMC ಲಿ.ನ ಜಾಯಿಂಟ್‌ AVP ಆಗಿದ್ದು ಫೈನಾನ್ಸ್ ಫೀಲ್ಡ್ ನಲ್ಲಿ 20ಕ್ಕೂ ಅಧಿಕ ವರ್ಷದ  ಅನುಭವ ಹೊಂದಿದ್ದಾರೆ. ಮೋರ್ಗನ್‌ ಅಸೆಟ್ಸ್ ಕೋಟಕ್‌ ಮ್ಯೂಚುಯೆಲ್ ‌ಫಂಡ್ಸ್ ನಲ್ಲೂ ಕೆಲಸದಲ್ಲಿದ್ದ ಇವರು, ಕಬ್ಬಿಣದ ಕಡಲೆ ಎಂದೇ ಭಾವಿಸಲಾಗಿರುವ ಫೈನಾನ್ಸ್ ಕುರಿತು ಸಭಿಕರಿಗೆ ವಿವರವಾಗಿ ತಿಳಿಸಿಕೊಟ್ಟರು. ಮ್ಯೂಚುಯೆಲ್ ‌ಫಂಡ್ಸ್ ನ ಬೇಸಿಕ್‌ ಕಾನ್ಸೆಪ್ಟ್, ಹೆಂಗಸರು ಇದರಲ್ಲಿ ಏಕೆ ತೊಡಗಬೇಕು, ಬ್ಯಾಂಕಿನ SB, RD ಖಾತೆಗಳಿಗಿಂತ ಇದರಿಂದ ಹೇಗೆ ಹೆಚ್ಚಿನ ಲಾಭ ಗಳಿಸಬಹುದು, SIP ಮೂಲಕ ಇನ್‌ ವೆಸ್ಟ್ ಮೆಂಟ್‌ ಮಾಡುವುದರಿಂದ ಎಷ್ಟು ಬೇಗ ಹೆಚ್ಚಿನ ಮೊತ್ತದಲ್ಲಿ ಹಣದ ಬೆಳವಣಿಗೆ ಆಗುತ್ತದೆ ಎಂದು ವಿವರವಾಗಿ ತಿಳಿಸಿಕೊಟ್ಟರು. ಮ್ಯೂಚುಯೆಲ್ ‌ಫಂಡ್‌ ನ ವಿಧಗಳು, ಅದರಲ್ಲಿ ಮಹಿಳೆಯ ಭಾಗವಹಿಸುವಿಕೆ ಮುಂತಾದ ಇವರ ಮಾತುಕಥೆಯ ಪ್ರಮುಖ ಅಂಶವಾಗಿತ್ತು.

Beautician-Anitha-sharley-1

ಸ್ಕಿನ್ಕೇರ್ಬ್ಯೂಟಿ ಸೆಷನ್

ಅನಿತಾ ಶರ್ಲಿ, ಅಖಿಲ ಕರ್ನಾಟಕ ಬ್ಯೂಟಿಷಿಯನ್‌ ಅಸೋಸಿಯೇಶನ್ನಿನ ಅಧ್ಯಕ್ಷರಾಗಿದ್ದು, ಪ್ರಖ್ಯಾತ ಮೇಕಪ್‌ ಆರ್ಟಿಸ್ಟ್ ಹಾಗೂ ಶರ್ಲಿ ಬ್ಯೂಟಿ ಟ್ರೇನಿಂಗ್‌ ಅಕಾಡೆಮಿಯ ಸೀನಿಯರ್‌ ಬ್ಯೂಟಿಷಿಯನ್‌ ಆಗಿದ್ದಾರೆ. ಸೌಂದರ್ಯ ಸಂವರ್ಧನೆಯಲ್ಲಿ ಮೇಕಪ್‌ ಪಾತ್ರ, ಈ ಮೇಕಪ್‌ ಹೆಣ್ಣುಮಕ್ಕಳಿಗೆ ಎಷ್ಟು ಆತ್ಮವಿಶ್ವಾಸ ತುಂಬುತ್ತದೆ, ಈ ಮೇಕಪ್‌ ಇಂದಿನ ಅಧುನಿಕ ಹೆಂಗಸರಿಗೂ ಎಷ್ಟು ಅತ್ಯಗತ್ಯ, ಮೇಕಪ್‌ ಮಾಡಿಕೊಳ್ಳುವಾಗ ವಹಿಸಬೇಕಾದ ಎಚ್ಚರಿಕೆಗಳು, ಎರರ್ಸ್‌ ಇದ್ದಾಗ ಅದನ್ನು ಸರಿಪಡಿಸುವ ಬಗೆ, ಇತ್ಯಾದಿಗಳನ್ನು ಮಾಡೆಲ್ ‌ಸಮೇತ ಪ್ರದರ್ಶಿಸಿದರು.

Sandeep

ಸಿಲ್ಕ್ ಮಾರ್ಕ್ಸೆಷನ್

ಸೆಂಟ್ರಲ್ ಸಿಲ್ಕ್ ಬೋರ್ಡ್‌ ನ ಅಸಿಸ್ಟೆಂಟ್‌ ಡೈರೆಕ್ಟರ್‌ (ಇನ್‌ ಸ್ಪೆಕ್ಷನ್) ಡಿ.ಎನ್‌. ಸಂದೀಪ್‌ ಸಿಲ್ಕ್ ಮಾರ್ಕ್‌ ಆರ್ಗನೈಸೇಶನ್‌ ಆಫ್‌ ಇಂಡಿಯಾ, ಯಾವ ರೀತಿ ರೇಷ್ಮೆಯ ಪರಿಶುದ್ಧತೆಯ ಬಗ್ಗೆ ಕೆಲಸ ಮಾಡುತ್ತದೆ, ಅದು ಹೇಗೆ ಗ್ರಾಹಕರು ಕೊಳ್ಳುವ ರೇಷ್ಮೆ ಸೀರೆಗಳ ಪರಿಶುದ್ಧತೆಯ ಬಗ್ಗೆ ಖಚಿತತೆ ಒದಗಿಸುತ್ತದೆ ಎಂದು ವಿವರವಾಗಿ ತಿಳಿಸಿಕೊಟ್ಟರು. ರೇಷ್ಮೆ ಎಂದರೇನು, ಅದರ ತಯಾರಿ, ಇತಿಹಾಸ, 4 ಬಗೆಯ ಅಂದ್ರೆ ಮಲ್ಬರಿ, ಟಸರ್‌, ಎರೀ, ಮುಗಾಗಳ ಕುರಿತ ವಿವರಣೆ, ಕಕೂನ್ಸ್, ವನ್ಯ ಸಿಲ್ಕ್, ಫ್ಲೇಮ್ ಟೆಸ್ಟ್, ವಾಶಿಂಗ್‌ ಕೇರ್‌, ಸಿಲ್ಕ್ ಸ್ಟೋರೇಜ್‌, ಕೆಮಿಕಲ್ ಟೆಸ್ಟ್ ಹಾಗೂ ಮುಖ್ಯವಾಗಿ ಸಿಲ್ಕ್ ಮಾರ್ಕ್‌ ಲೇಬಲ್ ಇರುವ ಮಳಿಗೆಗಳಿಂದಲೇ ಸಿಲ್ಕ್ ಸೀರೆ ಕೊಳ್ಳಬೇಕು, ಅದೇಕೆ ಮುಖ್ಯ, ರೇಷ್ಮೆ ಸೀರೆಗಳ ಸುದೀರ್ಘ ಬಾಳಿಕೆ ಇತ್ಯಾದಿಗಳ ಕುರಿತು ವಿವರ ಒದಗಿಸಿದರು.

Social-media-Influencer-Asha-Somanath

ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸೆಷನ್

ಆಶಾ ಸೋಮನಾಥ್‌ ನಗರದ ಖ್ಯಾತ ಪಾಕ ಪ್ರವೀಣೆಯಾಗಿ, ಹಲವು ಟಿವಿ ಚಾನೆಲ್ ‌ಮೂಲಕ ಹೆಸರು ಗಳಿಸಿದ್ದಾರೆ. ಹೆಣ್ಣು ಮನಸ್ಸು ಮಾಡಿದರೆ ತನ್ನ ಹವ್ಯಾಸ, ಪ್ಯಾಶನ್‌ ಇತ್ಯಾದಿಗಳನ್ನು ಹೇಗೆ ಅಭಿವೃದ್ಧಿಪಡಿಸಿಕೊಂಡು, ಆತ್ಮ ವಿಶ್ವಾಸದಿಂದ ಮುಂದುವರಿದು ಮುಂದೆ ಸೆಲೆಬ್ರೆಟಿಯಾಗಿ ಮಿಂಚಬಹುದು ಎಂದು ಅನೇಕ ಉದಾಹರಣೆಗಳೊಂದಿಗೆ ನೆರೆದಿದ್ದ ಸಭಿಕರನ್ನು ಮೋಟಿವೇಟ್‌ ಮಾಡಿದರು.

DSC_7434

ಗೇಮಿಂಗ್ಸೆಷನ್

ಇಡೀ ಕಾರ್ಯಕ್ರಮದ ನಿರೂಪಣೆ ನೀಡುತ್ತಾ ಆ್ಯಂಕರ್‌ ಸಮೈರಾ, ಕಾರ್ಯಕ್ರಮಕ್ಕೆ ಬಂದಿದ್ದ ಮಹಿಳಾಮಣಿಗಳಿಗೆ ಅತ್ಯಂತ ರೋಚಕ ಮನರಂಜನೆ ಒದಗಿಸಿದರು. ಬಗೆಬಗೆಯ ಹಾಡು, ನೃತ್ಯಗಳಲ್ಲಿ ಪಾಲ್ಗೊಂಡ ಹೆಂಗಸರು ಉತ್ಸಾಹದಿಂದ ನಕ್ಕು ನಲಿದಾಡಿದರು. ಪ್ರತಿಯೊಂದು ಸೆಷನ್‌ ನಡೆಯುತ್ತಿದ್ದಂತೆ, ಅದಕ್ಕೆ ಸಂಬಂಧಿಸಿದಂತೆ ಹಾಗೂ ಮನರಂಜನೆ ಕುರಿತಾದ ಅನೇಕ ರಸಪ್ರಶ್ನೆಗಳನ್ನು ಸಭಿಕರಿಗೆ ಕೇಳಿದರು. ಸೂಕ್ತವಾಗಿ ಬೇಗ ಉತ್ತರಿಸಿದ ಅನೇಕ ಹೆಂಗಸರಿಗೆ ಅತ್ಯಾಕರ್ಷಕ ಬಹುಮಾನಗಳನ್ನು ಗೃಹಶೋಭಾ ಸಿಬ್ಬಂದಿ ಆನ್‌ ದಿ ಸ್ಪಾಟ್‌ ವಿತರಿಸಿದರು.

ಪ್ರತಿನಿಧಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ