ಬೇಸಿಗೆಯಿಂದ ಮಳೆಗಾಲಕ್ಕೆ ಬದಲಾದ ದಿನಗಳಲ್ಲಿ ಸ್ಕಿನ್ಅಲರ್ಜಿಯ ಸಮಸ್ಯೆಯಿಂದ ದೂರವಾಗಬೇಕಾದರೆ ಅಗತ್ಯವಾಗಿ ಸಲಹೆಗಳನ್ನು ಅನುಸರಿಸಿ…..!

24 ವರ್ಷಗಳ ಅಂಜಲಿ ಬಹಳ ಬಿಂದಾಸ್‌ ಸ್ವಭಾವದ ಹುಡುಗಿ. ಅವಳಿಗೆ ಟೂರಿಂಗ್‌, ಫ್ಯಾಷನ್‌, ಬ್ಯೂಟಿ, ಗ್ಲಾಮರ್‌ ಎಂದರೆ ಪಂಚಪ್ರಾಣ. 100% ಮೇಕಪ್‌ ಇಲ್ಲದೆ ಅವಳು ಹೊರಗೆ ಹೊರಡುವವಳೇ ಅಲ್ಲ! ಆದರೆ ದಿಢೀರ್‌ ಎಂದು ಸೀಸನ್‌ ಚೇಂಜ್‌ ಆದಾಗ, ಬೆವರುಸಾಲೆ, ತುರಿಕೆ, ಹಿಂಸೆ ಎನಿಸತೊಡಗಿತು.

ಕಳೆದ ವಾರ ಅವಳು ಒಂದು ಪಾರ್ಟಿಗೆ ಹೋಗಿದ್ದಾಗ, ಅವಳನ್ನು ಕಂಡು ಎಲ್ಲರೂ ಅಚ್ಚರಿಪಟ್ಟರು. ಸ್ಟೈಲಿಶ್‌ ಒನ್‌ ಪೀಸ್‌ ಡ್ರೆಸ್ ಓಪನ್‌ ಹೇರ್‌ ನಲ್ಲಿ ಅವಳು ಗ್ಲಾಮರಸ್‌ ಆಗಿ ಮಿಂಚುತ್ತಿದ್ದಳು. ಆದರೆ ಸಂಜೆ ಆಗುತ್ತಿದ್ದಂತೆ ಅವಳ ಬೆನ್ನು, ಕುತ್ತಿಗೆಯ ಕೆಳಭಾಗದಲ್ಲಿ ನವೆ, ತುರಿಕೆಯ ಕಡಿತ ಹೆಚ್ಚಾಯಿತು. ಈ ತುರಿಕೆಯಿಂದ ಆ ಭಾಗವನ್ನು ಕೆರೆದೂ ಕೆರೆದೂ ಅಲ್ಲೆಲ್ಲ ಕೆಂಪು ಗುಳ್ಳೆ, ದದ್ದುಗಳು ಮೂಡಿದವು. ಆಗ ಗೆಳತಿ ಸೂಚಿಸಿದಂತೆ ಅವಳು ಅಲರ್ಜಿಗೆ ಔಷಧಿ ಪಡೆದಳು, ತಕ್ಷಣ ಅಲ್ಲೇ ಬೆಚ್ಚಗಿನ ನೀರಲ್ಲಿ ಸ್ನಾನ ಸಹ ಮಾಡಿದಳು. ನಂತರ ಅವಳ ಸ್ವಚ್ಛ, ಶುಭ್ರ ಕಾಟನ್‌ ಉಡುಗೆ ಧರಿಸಿದಳು. ಜೊತೆಗೆ ಗಂಧಿ ಹೆಚ್ಟಾಗಿದ್ದ ಕಡೆ ಆ್ಯಲೋವೇರಾ ಜೆಲ್ ‌ಸಹ ಹೆಚ್ಚಿದಳು. ಕ್ರಮೇಣ ಅವಳ ಸಮಸ್ಯೆ ತಗ್ಗಿತು.

ಬೇಸಿಗೆಯಲ್ಲಿ ಈ ಬೆವರುಸಾಲೆ, ದದ್ದು, ಗಂಧೆ ಮುಂತಾದ ಚರ್ಮದ ಸಮಸ್ಯೆ ಹೆಚ್ಚಾಗಿರುತ್ತದೆ. ಅದನ್ನು ನಿರ್ಲಕ್ಷ್ಯ ಮಾಡಿದರೆ ರೋಗ ಗಂಭೀರ ಆಗುತ್ತದೆ. ಕ್ರಮೇಣ ಮಳೆಗಾಲದ ದಿನಗಳು ಶುರುವಾದಂತೆ ಈ ಸ್ಕಿನ್‌ ಅಲರ್ಜಿ ಪ್ರಕೋಪಕ್ಕೆ ತಿರುಗುತ್ತದೆ. ಅಲ್ಲಲ್ಲಿ ಕೆಂಪು ಗುಳ್ಳೆ, ಗಂಧೆಗಳು ಹೆಚ್ಚಾಗಿ ವಿಪರೀತ ನವೆ, ತುರಿಕೆ, ಉರಿ ಕಾಡತೊಡಗುತ್ತದೆ. ಈ ಸ್ಥಿತಿಯಲ್ಲಿ ಬೆವರು ಹೆಚ್ಚಾಗುವ ಕಡೆ, ಸಿಂಥೆಟಿಕ್‌ ಉಡುಗೆಗಳು ಉಜ್ಜಾಡುವ ಕಡೆ ಈ ಹಿಂಸೆ ಹೆಚ್ಚುತ್ತದೆ.

ಅತಿ ಬಿಗಿಯಾದ ಉಡುಗೆ ಧರಿಸಿದಾಗಲೂ ಈ ಕಾಟ ತಪ್ಪಿದ್ದಲ್ಲ. ಇದರಿಂದ ಪಾರಾಗಲು, ಮಳೆಗಾಲವಾದರೂ ಸರಿ, ನೇರ ಬಿಸಿಲಿಗೆ ಮೈ ಒಡ್ಡದಿರಿ. ಹೊರಗೆ ಹೋಗುವುದು ಅನಿವಾರ್ಯವಾದರೆ ಸ್ಕಾರ್ಪ್‌ ಅಥವಾ ಕ್ಯಾಪ್‌ ಬಳಸಿರಿ. ಕೊಡೆ ಅಂತೂ ಮರೆಯುವ ಹಾಗೇ ಇಲ್ಲ. ಜೊತೆಗೆ ಮಳೆಗಾಲದಲ್ಲೂ ಸಹ 30 ಯಾವ 45 SPF ನ ಸನ್‌ ಸ್ಕ್ರೀನ್‌ ಹಚ್ಚಿಕೊಳ್ಳಲು ಮರೆಯದಿರಿ. ಸಿಂಥೆಟಿಕ್‌ ಡ್ರೆಸ್‌ ಗಳಾದ ನೈಲಾನ್‌, ಜಾರ್ಜೆಟ್‌, ಪಾಲಿಯೆಸ್ಟರ್‌ ನಂಥ ಫ್ಯಾಬ್ರಿಕ್ಸ್ ಬೇಡವೇ ಬೇಡ, ಸದಾ ಕಾಟನ್‌ ಇರಲಿ.

ನಮ್ಮ ಚರ್ಮ ಯಾವುದೇ ಒಂದು ವಿಶೇಷ ವಸ್ತುವಿನ ಕಡೆ ಅತಿ ಸಂವೇದನಾಶೀಲ ಗುಣ ತೋರುತ್ತದೋ ಆಗ, ಚರ್ಮದ ಮೇಲೆ ಅದರ ದುಷ್ಪ್ರಭಾವ ಉಂಟಾಗಿ ಕೆಂಪು ದದ್ದು, ಗುಳ್ಳೆ, ಗಂಧೆಗಳು ಏಳುತ್ತವೆ. ಇಂಥ ಸ್ಕಿನ್‌ ಅಲರ್ಜಿಗೆ ಅನೇಕ ಕಾರಣಗಳಿರಬಹುದು.

ಕೆಲವರಿಗೆ ಕೆಲವು ಬಗೆಯ ಆಹಾರದ ಅಲರ್ಜಿ, ಅಂಥ ಆಹಾರ ತಿಂದ ತಕ್ಷಣ ತುರಿಕೆ, ನವೆ ಕಾಡುತ್ತದೆ.

ಕೆಲವರಿಗೆ ಇಂಗ್ಲಿಷ್‌ ಅಲೋಪಥಿಕ್‌ ಔಷಧಿಗಳ ಸೈಡ್‌ ಎಫೆಕ್ಟ್ಸ್ ತಪ್ಪಿದ್ದಲ್ಲ. ಇದರಿಂದಲೂ ಅಲರ್ಜಿ ಕಾಡಬಹುದು.

ಕೆಮಿಕಲ್ಸ್ ಯುಕ್ತ ಮೇಕಪ್‌, ಕಾಸ್ಮೆಟಿಕ್ಸ್ ಬಳಕೆಯಿಂದಲೂ ಈ ತೊಂದರೆ ಆಗಬಹುದು. ಹೇರ್‌ ಡೈ, ಹೇರ್‌ ಕಲರ್‌ ಬಳಕೆಯಿಂದ ಇವು ಶುರುವಾಗುತ್ತವೆ. ಕೆಲವರಿಗೆ ಫೌಂಡೇಶನ್‌ ಕ್ರೀಂ, ಹಲವರಿಗೆ ಫೇಸ್‌ ಕ್ರೀಂನಿಂದಲೂ ಈ ಕಷ್ಟ ಬರಬಹುದು.

ಕೆಲವು ಹೆಂಗಸರ ಚರ್ಮ ಒಡವೆಗಳತ್ತ ಅಲರ್ಜಿ ತೋರುತ್ತವೆ. ಇಂಥ ಸಂವೇದನಾಶೀಲ ಚರ್ಮದವರು ಯಾವುದೇ ಬಗೆಯ ಲೋಹದ ಒಡವೆ ಧರಿಸಿದರೂ ಅವರಿಗೆ ಅಲರ್ಜಿ ತಪ್ಪಿದ್ದಲ್ಲ. ಬೆವರು ಈ ಒಡವೆಗಳೊಂದಿಗೆ ಘರ್ಷಿದಷ್ಟೂ ಈ ಹಿಂಸೆ ಹೆಚ್ಚುತ್ತದೆ.

ಸಿಂಥೆಟಿಕ್‌ ಡ್ರೆಸ್‌ ಗಳಿಂದ ಈ ಕಷ್ಟ ತಪ್ಪಿದ್ದಲ್ಲ.

ಸಾಕುಪ್ರಾಣಿಗಳ ನಿಕಟ ಸಂಪರ್ಕ, ಹಾರ್ಶ್‌ ಸೋಪುಗಳ ಬಳಕೆ, ಗಡಸು ನೀರಿನ ಸತತ ಉಪಯೋಗ ಸಹ ಅಲರ್ಜಿಗೆ ಆಹ್ವಾನ ನೀಡುತ್ತವೆ.

ಕಿಡ್ನಿ ಥೈರಾಯಿಡ್‌ ಸಮಸ್ಯೆಗೆ ಔಷಧಿ ಸೇವಿಸುತ್ತಿರುವವರಿಗೆ ಈ ಸ್ಕಿನ್‌ ಅಲರ್ಜಿ ಕಟ್ಟಿಟ್ಟ ಬುತ್ತಿ.

ಡ್ರೈ ಸ್ಕಿನ್‌ ಪ್ರಾಬ್ಲಮ್ಸ್ ಸಹ ಇದಕ್ಕೆ ಇನ್ನೊಂದು ಕಾರಣ. ಹೆಚ್ಚು ಶೀತ, ಉಷ್ಣತೆಯ ವಾತಾವರಣ ಇದನ್ನು ಹೆಚ್ಚಿಸುತ್ತದೆ. ಹೀಗಾದಾಗ ತಪ್ಪದೆ ಮಾಯಿಶ್ಚರೈಸರ್‌ ಬಳಸುತ್ತಿರಿ.

ಕ್ರಿಮಿ ಕೀಟಗಳ ಕಡಿತ ಸಹ ಮತ್ತೊಂದು ಕಾರಣ. ಹೆಚ್ಚು ಶೀತ, ಉಷ್ಣತೆಯ ವಾತಾವರಣ ಇದನ್ನು ಹೆಚ್ಚಿಸುತ್ತದೆ. ಹೀಗಾದಾಗ ತಪ್ಪದೆ ಮಾಯಿಶ್ಚರೈಸರ್‌ ಬಳಸುತ್ತಿರಿ.

ಕ್ರಿಮಿಕೀಟಗಳ ಕಡಿತ ಸಹ ಮತ್ತೊಂದು ಕಾರಣ.

ಫಂಗಲ್ ಇನ್‌ ಫೆಕ್ಷನ್‌ ಮತ್ತೊಂದು ಶತ್ರು.

ಮಧುಮೇಹ, ಹೈ ಬಿಪಿ/ಶುಗರ್‌ ಇದ್ದರೂ ಇದು ತಪ್ಪದು.

ವುಲ್ಲನ್‌ ಡ್ರೆಸ್‌ ಧರಿಸಿದಾಗ, ತಕ್ಷಣ ಅಲ್ಲದಿದ್ದರೂ ಕ್ರಮೇಣ ಅದು ಇಂಥ ಕಾಟ ಕೊಡಬಹುದು.ಅತ್ಯಧಿಕ ಪಿತ್ತ, ಚಿಕನ್‌ ಪಾಕ್ಸ್ ಕಾರಣದಿಂದಲೂ ಅಲರ್ಜಿ ಉಂಟಾಗಬಹುದು.

ಕೆಲವರಿಗೆ ಪರ್ಫ್ಯೂಮ್, ಸೆಂಟುಗಳಿಂದಲೂ ಅಲರ್ಜಿ ತಪ್ಪಿದ್ದಲ್ಲ. 1-2 ಸಲ ಪ್ರಯೋಗಿಸಿ ಹಿಂಸೆ ಎನಿಸಿದಾಗ, ಅಂಥವನ್ನು ತ್ಯಜಿಸಿರಿ.

ಸ್ಕಿನ್‌ ಅಲರ್ಜಿಯ ಬಗೆಗಳು ಈ ಅಲರ್ಜಿ ನಮಗೆ ಫಂಗಸ್‌ ಕಾರಣ ಆಗುತ್ತದೆ. ಇದು ಮುಖ, ಕೈಕಾಲುಗಳ ಚರ್ಮ, ದೇಹದ ನಾನಾ ಭಾಗಗಳಲ್ಲೂ ಕಾಣಿಸಲು ಸಾಧ್ಯ. ಈ ಅಲರ್ಜಿಯಿಂದ ಚರ್ಮದ ಭಾಗಗಳಲ್ಲಿ ನವೆ, ತುರಿಕೆ, ಕಡಿತ ತಪ್ಪಿದ್ದಲ್ಲ. ಈ ಸೋಂಕು ಚರ್ಮದಲ್ಲಿ ಆರ್ದ್ರತೆ ಕೂಡುವ ಕಡೆ ಹಿಂಸೆ ನೀಡುವುದೇ ಹೆಚ್ಚು. ಉದಾ : ಕಂಕುಳು, ತೊಡೆ ಸಂದು, ಕಾಲು ಬೆರಳಿನ ನಡುವೆ, ಸೊಂಟದ ಪದರ ಇತ್ಯಾದಿ. ಸ್ತನಗಳ ಬಳಿ ಈ ಕಾಟ ಕಾಣಿಸಿದಾಗ ತಕ್ಷಣ ಸ್ಕಿನ್‌ ಸ್ಪೆಷಲಿಸ್ಟ್ ರನ್ನು ಭೇಟಿಯಾಗಿ.

Tea-Tree-Oil

ಲೈಕೆನ್ಪ್ಲಾನಸ್‌ : ಇದು ಒಂದು ಬಗೆಯ ಸ್ಕಿನ್‌ ಅಲರ್ಜಿ ಆಗಿದ್ದು, 30+ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಇದು ಕೆಂಪು ಪದರಗಳು ಚರ್ಮ ಬಿಟ್ಟೇಳುವ ಪ್ರಕ್ರಿಯೆ ಆಗಿದ್ದು, ದೇಹದ ಯಾವುದೇ ಭಾಗದಲ್ಲಾದರೂ ಕಾಡಬಹುದು. ಮುಖ್ಯ ಮೊಣಕೈ, ಮಂಡಿ, ಪಾದಗಳ ಒಡೆತ, ಬೆನ್ನು, ಕುತ್ತಿಗೆ ಬಳಿ ಕಾಣಿಸುತ್ತವೆ. ಇದು ಆನುವಂಶಿಕ ಹೌದು.

ಎಗ್ಸಿಮಾ : ಈ ಕಾರಣ ದೇಹದ ನಿರ್ದಿಷ್ಟ ಭಾಗ ಅಪಾರ ತುರಿಕೆಗೆ ಗುರಿಯಾಗಿ, ಪರಚಿ ಹಾಕೋಣ ಎನಿಸುತ್ತದೆ, ಆ ಭಾಗ ಮತ್ತಷ್ಟು ಡ್ರೈ ಆಗಿಬಿಡುತ್ತದೆ. ಕೆಲವರಿಗಂತೂ ಇದಕ್ಕಾಗಿ ದೀರ್ಘಕಾಲದ ಚಿಕಿತ್ಸೆ ಅತ್ಯಗತ್ಯ. ಸೀಸನ್‌ ಬದಲಾದಂತೆ ಈ ಕಾಟ ಕ್ರಮೇಣ ಕಾಣಿಸುತ್ತದೆ. ಕೆಲವರಿಗೆ ರಕ್ತ ತೊಟ್ಟಿಕ್ಕಿದರೂ ಆಶ್ಚರ್ಯವಿಲ್ಲ. ಇದು ವಯೋವೃದ್ಧರನ್ನು ಹೆಚ್ಚು ಕಾಡುತ್ತದೆ.

ಹೊಪ್ಪಳೆ : ಇದರಿಂದ ಚರ್ಮದ ಡ್ರೈನೆಸ್‌ ಹೆಚ್ಚಿ, ಚರ್ಮ ಬಿರುಕು ಬಿಟ್ಟು, ತೆಳು ಹಾಳೆಗಳಂತೆ ಅದರ ಪದರ ಕಿತ್ತು ಬರುತ್ತದೆ. ಇದರಿಂದ ಹೆಚ್ಚಿನ ತುರಿಕೆ, ಕಡಿತ ಉಂಟಾಗುತ್ತದೆ. ಕೆರೆದಷ್ಟೂ ಆ ಭಾಗ ಹೀಗೆ ಹೆಚ್ಚಿನ ಸಮಸ್ಯೆ ನೀಡುತ್ತದೆ. ಮುಂದೆ ತಾನೇ ಸರಿಹೋಗುತ್ತದೆ, ಚಿಕಿತ್ಸೆ ನೀಡಿದರೆ ಬೇಗ ಗುಣವಾಗುತ್ತದೆ.

IB187455_187455132317857_SM89587

ಸ್ಕಿನ್ಅಲರ್ಜಿಗಾಗಿ ಮನೆಮದ್ದು

ಟೀ ಟ್ರೀ ಆಯಿಲ್ :  ಇದು ಸ್ಕಿನ್‌ ಅಲರ್ಜಿಗೆ ಬಹಳ ಉಪಕಾರಿ. ಇದರಲ್ಲಿ ಆ್ಯಂಟಿಮೈಕ್ರೋಬಿಯಲ್ ಆ್ಯಂಟಿ ಇನ್‌ ಫ್ಲಮೇಟರಿ ಗುಣಗಳಿದ್ದು, ಹಲವು ಬಗೆಯ ಸ್ಕಿನ್‌ ಅಲರ್ಜಿಗಳಿಂದ ಮುಕ್ತಿ ಕೊಡಿಸುತ್ತದೆ. ಚರ್ಮದ ಕೆಂಪು, ದದ್ದು, ಗಂಧೆಗಳ ನಿವಾರಣೆಗೂ ಇದು ಬೇಕು.

ತುಳಸಿ : ಇದು ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳ ಗಣಿಯೇ ಸರಿ. ನಿಮ್ಮ ಚರ್ಮ ಸೋಂಕಿಗೆ ಈಡಾಗಿದ್ದರೆ ರಾಮಬಾಣವಾಗಿ ನೆರವಾಗುತ್ತದೆ. ಜೊತೆಗೆ ಇದರ ಆ್ಯಂಟಿ ಫಂಗಲ್ ಆ್ಯಂಟಿ ಇನ್‌ ಫ್ಲಮೇಟರಿ ಗುಣಗಳಿಂದಾಗಿ ಸ್ಕಿನ್‌ ಅಲರ್ಜಿಯ ಕಾರಣದಿಂದ ಮೂಡಿದ ಕೆಂಪು, ಬಾವು, ತುರಿಕೆ, ಕಡಿತಗಳನ್ನು ಓಡಿಸುತ್ತದೆ. ಇದನ್ನು ಶುಚಿಗೊಳಿಸಿ, ಪೇಸ್ಟ್ ಮಾಡಿ, ಅಲರ್ಜಿ ಇರುವ ಭಾಗಕ್ಕೆ ಹಚ್ಚಿರಿ, 30 ನಿಮಿಷ ಬಿಟ್ಟು ತೊಳೆಯಿರಿ, ಆ್ಯಂಟಿ ಅಲರ್ಜಿಕ್‌ ಪೌಡರ್‌ ಉದುರಿಸಿ.

ಆ್ಯಪ್ವಿನಿಗರ್‌ : ಇದರಲ್ಲಿ ಆ್ಯಂಟಿ ಇನ್‌ ಫ್ಲಮೇಟರಿ  ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳಿದ್ದು, ಅಲರ್ಜಿ ಆದ ಭಾಗಕ್ಕೆ ಇದನ್ನು ಹಚ್ಚುವುದರಿಂದ ಕ್ರಮೇಣ ಅದು ದೂರವಾಗುತ್ತದೆ, ಮತ್ತೆ ಸೋಂಕು ಹೆಚ್ಚುವುದಿಲ್ಲ.

ಅರ್ಧ ಕಪ್‌ ನೀರು ಬಿಸಿ ಮಾಡಿ, ಅದಕ್ಕೆ ಆ್ಯಪಲ್ ವಿನಿಗರ್‌ ಬೆರೆಸಿರಿ. ಇದು ಕುದ್ದಾಗ ಕೆಳಗಿಳಿಸಿ. ತುಸು ಬೆಚ್ಚಗಾದಾಗ, ಅದರಲ್ಲಿ  ಹತ್ತಿ ಅದ್ದಿ, ಅಲರ್ಜಿಯ ಭಾಗಕ್ಕೆ ಸವರಬೇಕು. 15-20 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.

ಆ್ಯಲೋವೇರಾ : ಇದು ತನ್ನ ಹೀಲಿಂಗ್‌ ಗುಣಗಳಿಂದ ಖ್ಯಾತಿವೆತ್ತಿದೆ. ಇದರ ಆ್ಯಂಟಿ ಇನ್‌ ಫ್ಲಮೇಟರಿ ಗುಣ ತುರಿಕೆ, ನವೆ, ಕಡಿತ, ಕೆಂಪು ಗಂಧೆ ದೂರ ಮಾಡಿ ಹಿತಾನುಭವ ನೀಡುತ್ತದೆ. ತಾಜಾ ಆ್ಯಲೋವೆರಾ ಜೆಲ್ ‌ನ್ನು ಅಲರ್ಜಿ ಭಾಗಕ್ಕೆ ಹಚ್ಚಿ, ಅರ್ಧ ಗಂಟೆ ಹಾಗೇ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ.

ಕೊಬ್ಬರಿ ಎಣ್ಣೆ : ಇದು ಭೂಲೋಕದ ವರಪ್ರಸಾದವೇ ಸರಿ. ಮಾನವರಿಗೆ ಅಷ್ಟು ಉಪಕಾರಿ. ಅಡುಗೆ, ತಲೆಗೂದಲು, ಕಾಸ್ಮೆಟಿಕ್ಸ್ ಅಲ್ಲದೇ ಔಷಧೀಯ ಗುಣಗಳ ಭಂಡಾರವಾಗಿದೆ. ಇದರ ಎನಾಮಲ್ ‌ಜೇಸಿಕ್‌ಆ್ಯಂಟಿ ಇನ್‌ ಫ್ಲಮೇಟರಿ ಗುಣಗಳು ಅಲರ್ಜಿಯ ಕಾಟಗಳಾದ ಕೆಂಪು, ತುರಿಕೆ, ನವೆ, ಕಡಿತಗಳಿಂದ ಮುಕ್ತಿ ಕೊಡಿಸುತ್ತದೆ. ಇದರ ಬಳಕೆಗಾಗಿ, ಕೊಬ್ಬರಿ ಎಣ್ಣೆಯನ್ನು ತುಸು ಮಾತ್ರ ಬಿಸಿ ಮಾಡಿ, ಕೈಗಳಿಗೆ ಹಚ್ಚಿಕೊಂಡು, ಅದನ್ನು ಅಲರ್ಜಿ ಭಾಗಕ್ಕೆ ಸರಿ ಮೆಲ್ಲಗೆ ಮಸಾಜ್‌ ಮಾಡಿ. ಅರ್ಧ ಗಂಟೆ ಬಿಟ್ಟು ತುಸು ಬೆಚ್ಚಗಿನ ನೀರಿನಿಂದ ತೊಳೆಯಿರಿ, ಹಾಗೇ ಬಿಟ್ಟರೂ ಗಾಳಿಗೆ ಆರುತ್ತದೆ.

ಬೇವು : ಇದರ ಆ್ಯಂಟಿ ಇನ್‌ ಫ್ಲಮೇಟರಿ, ಆ್ಯಂಟಿಬ್ಯಾಕ್ಟೀರಿಯಲ್ ಹಾಗೂ ಆ್ಯಂಟಿಫಂಗ್‌ ಗುಣಗಳು ಸ್ಮಾಲ್ ಪಾಕ್ಸ್ ನಂಥ ರೋಗಕ್ಕೆ ರಾಮಬಾಣ. ತೀವ್ರ ಜ್ವರವಾದಾಗ, ಚರ್ಮದಲ್ಲಿ ಅಲ್ಲಲ್ಲಿ ಕಾಣಿಸು ಈ ಸಣ್ಣ ಗುಳ್ಳೆಗಳಿಗೆ, ಅರಿಶಿನ ಬೆರೆತ ಬೇವಿನ ಪೇಸ್ಟ್  ಹಚ್ಚಿ, ಬೇವಿನ ಸೊಪ್ಪಿನಿಂದ ಗಾಳಿ ಬೀಸಿದರೆ, ಬಲು ಹಿತಕಾರಿ. 1 ಗಂಟೆ ಕಾಲ ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆಯಿರಿ. 1 ವಾರ ಹೀಗೆ ಮಾಡಿದರೆ ತಾನಾಗಿ ಕಾಟ ತಪ್ಪುತ್ತದೆ.

ಪ್ರತಿನಿಧಿ

ಅಲರ್ಜಿ ಓಡಿಸುವ ಉಪಾಯ

ತಣ್ಣಗಿನ ಒದ್ದೆ ಬಟ್ಟೆಯನ್ನು ಆಗಾಗ ಅಲರ್ಜಿ ಭಾಗಕ್ಕೆ ಸುತ್ತಿರಿ. ನಿಮ್ಮ ಚರ್ಮಕ್ಕೆ ಕೋಲ್ಡ್ ಕ್ರೀಂ ಹಚ್ಚಿಕೊಳ್ಳಿ. ಸ್ವಲ್ಪ ಹೊತ್ತು ಬಿಟ್ಟು ಈ ಭಾಗಕ್ಕೆ ಮಾಯಿಶ್ಚರೈಸರ್‌ ಯಾ ಬಾಡಿ ಲೋಶನ್‌ ಹಚ್ಚಿರಿ. ಆಗಾಗ ಅಲರ್ಜಿಕ್‌ ಕ್ರೀಂ ಹಚ್ಚಿ ನೋಡಿ. ತೀರಾ ಬಿಸಿ ಅಥವಾ ತಣ್ಣಗಿಲ್ಲದ ಬೆಚ್ಚನೆ ನೀರಿನಿಂದ ಮಾತ್ರ ಸ್ನಾನ ಮಾಡಿ. ಚರ್ಮಕ್ಕೆ ಹಾನಿಕಾರಕ ಎನ್ನುವಂಥ ಪದಾರ್ಥಗಳನ್ನು ಬಳಸಲೇಬೇಡಿ. ಅಂಥ ವಸ್ತ್ರ ಒಡವೆ ಧರಿಸಲೇಬೇಡಿ. ಚರ್ಮ ತಜ್ಞರ ಸಲಹೆ ಪಡೆದು, ಆ್ಯಂಟಿ ಅಲರ್ಜಿಕ್‌ಔಷಧಿ ಸೇವಿಸಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ