ಜರ್ಮನಿ ಪ್ರವಾಸದಲ್ಲಿರುವ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ನೇತೃತ್ವದ ನಿಯೋಗದೊಂದಿಗೆ ಜಿಟಿಟಿಸಿಯ ಹಳೆಯ ವಿದ್ಯಾರ್ಥಿಗಳ ನಿಯೋಗ ಸಮಾಲೋಚನೆ ನಡೆಸಿತು.
ಜರ್ಮನ್ ಕಾನ್ಸುಲೇಟ್ ಫ್ರಾಂಕ್‌ಫರ್ಟ್‌ನಲ್ಲಿ ಆಯೋಜಿಸಿದ್ಧ ವಿಶೇಷ ಕಾರ್ಯಕ್ರಮದಲ್ಲಿ ಜಿಟಿಟಿಸಿಯ ಹಳೆಯ ವಿದ್ಯಾರ್ಥಿಗಳು ಸಂಸ್ಥೆಯನ್ನು ಪ್ರತಿನಿಧಿಸಿ ಸಚಿವರೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಜಿಟಿಟಿಸಿಯ ಹಳೆಯ ವಿದ್ಯಾರ್ಥಿಗಳು ಜರ್ಮನಿಯಲ್ಲಿ ತಮ್ಮ ವೃತ್ತಿಪರ ಸಾಧನೆಗಳು ಮತ್ತು ಇತರ ಅನುಭವಗಳನ್ನು ಸಚಿವರಿಗೆ ವಿವರಿಸಿದರು
ಈ ಸಂದರ್ಭ ಮಾತನಾಡಿದ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಕರ್ನಾಟಕ ಕಾಂಗ್ರೆಸ್ ಈಗ ಜಿಟಿಟಿಸಿಯಲ್ಲಿ ಹಲವಾರು ನೂತನ ಹಾಗೂ ಕ್ರಿಯಾಶೀಲ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ ಕಾರ್ಯಕ್ರಮಗಳನ್ನು ಸಂಯೋಜಿಸುವುದು ಮತ್ತು ಉತ್ತಮ ಅಭ್ಯಾಸಗಳಿಗೆ ಒಡ್ಡಿಕೊಳ್ಳುವ ವೇದಿಕೆ ಸೃಷ್ಟಿಸುವುದು ಸೇರಿದಂತೆ ಇತರೆ ವಿಷಯಗಳ ಬಗ್ಗೆಯೂ ಸಚಿವರು ತಿಳಿಸಿದರು.
ಜಿಟಿಟಿಸಿಯಲ್ಲಿ ಜರ್ಮನ್ ಭಾಷಾ ಪ್ರಯೋಗಾಲಯಗಳ ಸ್ಥಾಪನೆ, ಮಾಡಲಾಗಿದೆ. ಜಾಗತಿಕ ಕಾರ್ಯಪಡೆಯ ಚಲನಶೀಲತೆ, ಕೌಶಲ್ಯ, ಉನ್ನತ ಶಿಕ್ಷಣ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸಲಾಗಿದೆ ಎಂದು ಹಳೆಯ ವಿಧ್ಯಾರ್ಥಿಗಳಿಗೆ ವಿವರಿಸಿದರು.
ಕರ್ನಾಟಕ ಮತ್ತು ಜರ್ಮನಿಯ ನಡುವಿನ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸಲು ರಾಜ್ಯ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಡಾ. ಪಾಟೀಲ್ ಸ್ಪಷ್ಟಪಡಿಸಿದರು.
ಈ ಸಂದರ್ಭ ಕರ್ನಾಟಕದ ಕೌಶಲ್ಯ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಜರ್ಮನ್ ವಾಣಿಜ್ಯ ಮಂಡಳಿ ಜೊತೆ ಸಮಾಲೋಚನೆ ನಡೆಸಿದರು.
ಕಂಪನಿಗಳು, ಕೈಗಾರಿಕೆ, ಕೌಶಲ್ಯ ಕಾರ್ಯಕ್ರಮಗಳು, ವೃತ್ತಿಪರ ತರಬೇತಿ ಸಂಸ್ಥೆಗಳು, ಶಿಕ್ಷಣ ಮತ್ತು ಅಂತಾರಾಷ್ಟ್ರೀಯ ಕಾರ್ಯಪಡೆಯೊಂದಿಗೆ ಸಹಯೋಗ ವೃದ್ಧಿಸುವ ಕುರಿತು ಚರ್ಚೆ ನಡೆಸಿದರು.