ಇಂದಿನ ಆಧುನಿಕ ದಿನಗಳಲ್ಲಿ ಮೇಕಪ್‌ ಇಲ್ಲದೆ ಯಾರಾದರೂ ಹೆಂಗಸರು ಪಾರ್ಟಿ, ಸಮಾರಂಭಗಳಿಗೆ ಹೋಗುವುದೂ ಉಂಟೇ? ಮೇಕಪ್‌ ಸ್ವಲ್ಪ ಹೊತ್ತಿಗೇ ಮಾಡಿಕೊಂಡಿರಲಿ, ಅದು ಅವರ ಅಂದಚೆಂದ ಹೆಚ್ಚಿಸಿ, ಸಮಾರಂಭದ ಗ್ಲಾಮರ್‌ ಅಟ್ರಾಕ್ಷನ್‌ ಗೆ ದಾರಿಯಾಗುತ್ತದೆ. ಇದು ಹೆಣ್ಣಿನ ಮುಖದಲ್ಲಿನ ಕುಂದುಕೊರತೆ ಮುಚ್ಚಿ ಹಾಕಿ, ಸುಂದರವಾಗಿ ಕಂಗೊಳಿಸುವಂತೆ ಮಾಡುತ್ತದೆ.

ಆದರೆ ಎಷ್ಟೋ ಸಲ ಈ ಬ್ಯೂಟಿ ಪ್ರಾಡಕ್ಟ್ಸ್ ನಮ್ಮ ರೂಪ ಬೆಳಗುವ ಬದಲು, ಅದು ಇರುವ ರೂಪವನ್ನೇ ಹಾಳುಗೆಡಹುವ ಕೆಲಸವನ್ನು ಮಾಡುತ್ತದೆ. ಇದು ನಮಗೆ ಗೊತ್ತಾಗುವಷ್ಟರಲ್ಲಿ ತಡವಾಗಿ ಹೋಗಿರುತ್ತದೆ.

ಹೀಗಾಗಿ ನೀವು ಮೇಕಪ್‌ ಅಲರ್ಜಿ ಮತ್ತು ಈ ಪ್ರಾಡಕ್ಟ್ಸ್ ನ ಯಾವ ಘಟಕಗಳು ನಿಮ್ಮ ಚರ್ಮಕ್ಕೆ ಹಾನಿ ಉಂಟು ಮಾಡುತ್ತವೆ ಎಂದು ಸ್ಪಷ್ಟ ತಿಳಿದಿರಬೇಕು. ಆಗ ಮಾತ್ರ ನೀವು ಮೇಕಪ್‌ ಅಲರ್ಜಿಯಿಂದ ಪಾರಾಗಬಹುದು. ಈ ಕುರಿತಾಗಿ ಸೌಂದರ್ಯ ತಜ್ಞೆಯರ ಸಲಹೆ ಗಮನಿಸೋಣವೇ? :

ಯಾವುದರಿಂದ ಮೇಕಪ್‌ ಅಲರ್ಜಿ? ನಿಮಗೆ ಎಂದಾದರೂ ಹೀಗೆ ಆದದ್ದುಂಟೆ? ನಿಮ್ಮ ಮುಖಕ್ಕೆ ಮೇಕಪ್‌ ಶುರು ಮಾಡಿದ ತಕ್ಷಣ ಮುಖವೆಲ್ಲ ರೆಡ್‌ ರಾಶೆಸ್‌ ಹರಡಿಕೊಂಡಿತೇ? ಅಷ್ಟು ಮಾತ್ರವಲ್ಲದೆ ಉರಿ, ನವೆ, ಕಡಿತ, ಕೆರೆತ, ಊತ, ನೋವು ಇತ್ಯಾದಿ ಹೆಚ್ಚಿ ಅಸಹನೀಯ ಅನಿಸಿದ್ದುಂಟೇ? ಛೇ, ಈ ಮೇಕಪ್‌ ಮಾಡಿಕೊಳ್ಳದಿದ್ದರೆ ಚೆನ್ನಾಗಿತ್ತು ಎನಿಸಿತೇ? ಮುಖದಲ್ಲಿ ಹೀಗೆ ಅಲರ್ಜಿ ಮೂಡಲು ಈ ಪ್ರಾಡಕ್ಟ್ಸ್ ಕಾರಣವಾಗುತ್ತದೆ.

ಫೌಂಡೇಶನ್ಕನ್ಸೀಲರ್‌ : ಫೌಂಡೇಶನ್‌ ನ್ನು ಚರ್ಮದ ಟೋನ್‌ ಸುಧಾರಿಸಲು, ಕಲೆಗುರುತು ಮುಚ್ಚುಹಾಕಲೆಂದೇ ಮುಖ್ಯವಾಗಿ ಬಳಸುತ್ತೇವೆ. ಆದರೆ ಇದರಲ್ಲಿ ಬಳಸಲಾಗುವ ಕೆಮಿಕಲ್ಸ್ ಬಗ್ಗೆ ನಿಮಗೆ ಗೊತ್ತೇ? ತಜ್ಞರು ಅಂಥವನ್ನು ಬಳಸಬಾರದೆಂದೇ ಸಲಹೆ ನೀಡುತ್ತಾರೆ. ಆದರೂ ನೀವು ಇದನ್ನು ಪ್ರತಿನಿತ್ಯ ಬಳಸುವುದರಿಂದ ಸಹಜವಾಗಿಯೇ ಅದರಿಂದ ಅಲರ್ಜಿ ಆಗುತ್ತದೆ. ಮುಖ್ಯವಾಗಿ ಇದರಲ್ಲಿ ಪ್ಯಾರಾಬೇನ್‌, ಸುವಾಸನೆ, ಪ್ರಿಸರ್ ವೇಟಿವ್ಸ್, ಟ್ರಿಕ್ಲೋಸನ್‌, ಸೋಡಿಯಂ ಲಾರೆಥ್‌ ಸಲ್ಫೇಟ್‌, ಛತಹ್‌ ಲಾತೆಸ್‌, ಲೆಡ್ ಇತ್ಯಾದಿ ಕೆಮಿಕಲ್ಸ್ ಬಳಸಲಾಗಿರುತ್ತದೆ. ಈ ಎಲ್ಲಾ ಕೆಮಿಕಲ್ಸ್ ನಮ್ಮ ಫೌಂಡೇಶನ್‌ಕನ್ಸೀಲರ್‌ ನಲ್ಲಿ ಅಡಗಿದ್ದು ಅದರ ಕಲರ್‌, ಶೆಲ್ಫ್ ಲೈಫ್‌, ಸುವಾಸನೆಗಳನ್ನು ಸುಧಾರಿಸಲು ಬಳಸುತ್ತಾರೆ. ಹೀಗಾಗಿ ಇದರಿಂದ ಅಲರ್ಜಿ, ಪೋರ್ಸ್‌ ಕ್ಲೋಸಿಂಗ್‌, ಆ್ಯಕ್ನೆಗೆ ಮೂಲವಾಗಿ, ಕ್ಯಾನ್ಸರ್‌, ಇನ್‌ ಫರ್ಟಿಲಿಟಿಗೂ ಕಾರಣವಾಗುತ್ತದೆ.

ಆದ್ದರಿಂದ ನೀವು ಫೌಂಡೇಶನ್‌ ಕೊಂಡಾಗೆಲ್ಲ ಅದು ಚರ್ಮದ ಆರೋಗ್ಯಕ್ಕೆ ಪೂರಕವಾಗಿರುವ ಘಟಕ ಹೊಂದಿದೆ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ. ಅಂದ್ರೆ ಝಿಂಕ್‌ ಆಕ್ಸೈಡ್‌ ಇತ್ಯಾದಿ. ಈ ಫೌಂಡೇಶನ್‌ ಕ್ರೀಂ ಸೆನ್ಸಿಟಿವ್ ‌ಸ್ಕಿನ್‌ ಗೆ ಬೆಸ್ಟ್ ಎನಿಸಿದೆ. ಜೊತೆಗೆ ಇದು ಸನ್‌ ರೇಸ್‌ ನಿಂದ ಪ್ರೊಟೆಕ್ಷನ್‌ ನೀಡುತ್ತಾ ಏಜಿಂಗ್‌ ಪ್ರೋಸೆಸ್‌ ತಗ್ಗಿಸುತ್ತದೆ.

ಬ್ಲಶ್ಹೈಲೈಟರ್‌ : ಮೇಕಪ್‌ ಪೂರೈಸಿದ ಮೇಲೆ ಅದರಲ್ಲಿ ಬ್ಲಶ್‌ಹೈಲೈಟರ್‌ ಬಳಸದೆ ಇರಲಾದೀತೇ? ಏಕೆಂದರೆ ಬ್ಲಶ್‌ ನಿಂದ ಚೀಕ್‌ ಬೋನ್ಸ್ ನ ಬ್ಯೂಟಿಗೆ ಹೆಚ್ಚಿನ ಹೊಳಪು ಸಿಗುವುದರ ಜೊತೆ, ಮುಖದಲ್ಲಿ ಒಂದು ಅಪೂರ್ವ ಕಳೆಯ ತಾಜಾತನ ಕೂಡುತ್ತದೆ. ಅದೇ ತರಹ ಹೈಲೈಟರ್‌ ನಿಂದ ಕಂಟೂರಿಂಗ್‌ ಶೈನ್‌ ತಂದುಕೊಡುತ್ತದೆ.

ಆದರೆ ಎಷ್ಟೋ ಸಲ ಬ್ಲಶ್‌ ಹೈಲೈಟರ್‌ ನಿಂದ ಮುಖಕ್ಕೆ ಹಾನಿ ಆಗುವುದೂ ಉಂಟು. ಇವುಗಳಿಂದಾಗಿ ಮುಖಕ್ಕೆ ಹೆಚ್ಚು ಡ್ರೈನೆಸ್ ಕೂಡುತ್ತದೆ. ಅದನ್ನು ತೊಲಗಿಸಲು ನೀವು ಯಾವುದೇ ಕೋಲ್ಡ್ ಕ್ರೀಂ, ಮಾಯಿಶ್ಚರೈಸರ್‌ ಹಚ್ಚಿದರೂ ಲಾಭವಿಲ್ಲ. ಏಕೆಂದರೆ ಇದರ 1 ಶೇಡ್‌ ಗಾಗಿ 3-4 ಪಿಗ್ಮೆಂಟ್ಸ್  ಕೆಮಿಕಲ್ಸ್ ಬಳಸಲೇಬೇಕಾಗುತ್ತದೆ. ಯಾವ ಹೆಂಗಸರಿಗೆ ನಿರ್ದಿಷ್ಟ ಕಲರ್‌ ನಿಂದ ಅಲರ್ಜಿ ಎನಿಸುತ್ತದೋ, ಇದರಿಂದ ಖಂಡಿತಾ ಹಾನಿ ತಪ್ಪದು. ಹೀಗಾಗಿ ಬ್ಲಶ್‌ ಬಳಸಿದಾಗೆಲ್ಲ, ನಿಮ್ಮ ಪ್ರಾಡಕ್ಟ್ಸ್ ಆರ್ಗ್ಯಾನಿಕ್‌ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ. ಆದ್ದರಿಂದ ನ್ಯಾಚುರಲ್ ಶೇಡ್ಸ್ ನ್ನು ಮಾತ್ರ ಬಳಸಿರಿ. ಒಂದು ವಿಷಯ ನೆನಪಿರಲಿ, ಬ್ಲಶ್‌ ಹೈಲೈಟರ್ ಗಾಗಿ ಯಾವುದೇ ಬ್ರಶ್‌ ಬಳಸಿದರೂ, ಅದು ಸ್ವಚ್ಛ ಶುಭ್ರವಾಗಿರಬೇಕು. ಏಕೆಂದರೆ ಇದೂ ಸಹ ಅಲರ್ಜಿಗೆ  ಕಾರಣವಾದೀತು.

ಮೇಕಪ್‌ : ಕಂಗಳನ್ನು ಸುಂದರಗೊಳಿಸಲು, ದೊಡ್ಡದಾಗಿಸಲು, ತಿದ್ದಿ ತೀಡಲು ಐ ಲೋಶನ್‌ ಅನಿವಾರ್ಯ. ಇದಕ್ಕಾಗಿ ಕಾಜಲ್, ಲೈನರ್‌, ಮಸ್ಕರಾ, ಐಶ್ಯಾಡೋ, ಐಲ್ಯಾಶ್‌, ಕರ್ಲರ್ಸ್‌ ಬಳಸುತ್ತಾ ನಮಗೆ ಬೇಕಾದ ಗೆಟಪ್‌ ಪಡೆಯಬಹುದು.

ಆದರೆ ಎಷ್ಟೋ ಸಲ ಇದು ಕಂಗಳ ಅಲರ್ಜಿಗೂ ಕಾರಣವಾಗುತ್ತದೆ. ಏಕೆಂದರೆ ಈ ಐ ಮೇಕಪ್‌ ಸಾಮಗ್ರಿಯಲ್ಲಿ ಲೆಡ್‌ ಸಲ್ಫೈಡ್‌, ಕಾರ್ಬನ್‌ ಬ್ಲ್ಯಾಕ್‌, ಎಥನಾಲ್ ಮೈನ್‌, ಬೆಂಝಲ್ಮೋನಿಯಂ ಕ್ಲೋರೈಡ್‌ (ಪ್ರಿಸರ್ ವೇಟಿವ್ಸ್‌), ಪ್ರೈಂ ಯೆಲ್ಲೋ ಕಾರ್ನೊಬಾ ವ್ಯಾಕ್ಸ್ (ವಾಟರ್‌ ಪ್ರೂಫ್‌ ಗಾಗಿ) ಫಾರ್ಮಾಲ್ದಿ ಹೈಡ್‌ ರಿಲೀಸಿಂಗ್‌ ಪ್ರಿಸರ್ ವೇಟಿವ್ಸ್ ಬಳಸಲಾಗಿರುತ್ತದೆ.

ಜೊತೆಗೆ ಹೆವಿ ಮೆಟಲ್ಸ್, ಅಲ್ಯುಮಿನಿಯಂ ಪೌಡರ್‌ ಇತ್ಯಾದಿಗಳಿಂದಾಗಿ ಕ್ಯಾನ್ಸರ್‌, ಕಂಗಳ ಡ್ರೈನೆಸ್‌, ಅಲರ್ಜಿ, ರೆಡ್‌ ನೆಸ್‌ಮುಂತಾದ ಹಿಂಸೆ ನೀಡುತ್ತವೆ. ಹೀಗಾಗಿ ಐ ಮೇಕಪ್‌ ಮಾಡಿಕೊಳ್ಳಬೇಕಾದಾಗ ನೀವು ಅದರಲ್ಲಿನ ಘಟಕಗಳನ್ನು ಪರೀಕ್ಷಿಸಿಯೇ ಅಂಥ ಪ್ರಾಡಕ್ಟ್ಸ್ ಖರೀದಿಸಬೇಕು. ಆದಷ್ಟೂ ವಾಟರ್‌ ಪ್ರೂಫ್‌ ಪ್ರಾಡಕ್ಟ್ಸ್ ಕೊಳ್ಳದಿರಿ, ಏಕೆಂದರೆ ಇದರಿಂದ ಡ್ರೈನೆಸ್‌ ಹೆಚ್ಚುತ್ತದೆ. ಯಾವ ಪ್ರಾಡಕ್ಟ್ಸ್ ನಲ್ಲಿ ಕನಿಷ್ಠ ಕೆಮಿಕಲ್ಸ್ ಇವೆಯೋ ಅಂಥವನ್ನು ಮಾತ್ರ ಖರೀದಿಸಿ.

ಲಿಪ್ಸ್ಟಿಕ್‌ : ಇದಿಲ್ಲದೆ ಮೇಕಪ್‌ ಪೂರ್ಣಗೊಂಡೀತೇ? ಹೀಗಾಗಿ ಇಂದಿನ ಹೆಂಗಸರು ಮನೆ ಹತ್ತಿರದ ತರಕಾರಿ ಅಂಗಡಿಗೆ ಹೋಗುವ ಅಥವಾ ಪಾರ್ಟಿ ಸಮಾರಂಭ, ಬಗೆಬಗೆಯ ಶೇಡ್ಸ್ ಗಳ ಲಿಪ್‌ ಸ್ಟಿಕ್‌ ಇಲ್ಲದೆ ಹೊರಗೆ ಹೆಜ್ಜೆ ಇಡಲಾರರು. ಆದರೆ ಇದರಲ್ಲಿ ಅಡಗಿರುವ ಕೆಮಿಕಲ್ಸ್ ನಿಮ್ಮ ತುಟಿಗಳಿಗೆ ಹಾನಿ ಮಾಡುವುದರ ಜೊತೆ, ತುಟಿಗಳಿಂದ ಹೊಟ್ಟೆ ಸೇರಿ ನಿಮ್ಮ ಅಜೀರ್ಣಕ್ಕೂ ಕಾರಣವಾದೀತು.

ಇದರಲ್ಲಿ ತುಂಬಿರುವ ಮಿಥೈಲೋ ಪ್ಯಾರಾಬೀನ್‌ ಪ್ರಿಸರ್ ವೇಟೀವ್ಸ್ ‌ಆಗಿ ಬಳಸಲ್ಪಟ್ಟಿದ್ದು, ಅದು ನಿಮಗೆ ಅಲರ್ಜಿ ಜೊತೆ ಕ್ಯಾನ್ಸರ್ ಆಗಲಿಕ್ಕೂ ಕಾರಣವಾದೀತು. ಇದರಲ್ಲಿ ಸಿಂಥೆಟಿಕ್‌ ಡ್ರೈ ಸಹ ಬಳಸಲ್ಪಟ್ಟಿದ್ದು, ಪೆಟ್ರೋಲಿಯಂ ಪ್ರಾಡಕ್ಟ್ಸ್ ನ ಮೂಲದ್ದಾಗಿದೆ. ಇದರಿಂದ ಚರ್ಮಕ್ಕೆ ಉರಿ, ಇರಿಟೇಶನ್‌ ತಪ್ಪಿದ್ದಲ್ಲ.

ಹೀಗಾಗಿ ನೀವು ಯಾವಾಗ ಲಿಪ್‌ ಸ್ಟಿಕ್‌, ಲಿಪ್‌ ಗ್ಲಾಸ್‌, ಲಿಪ್‌ ಬಾಮ್, ಲಿಪ್‌ ಡಸ್ಟ್ ಬಳಸಿದರೂ, ಅದರಲ್ಲಿ ನ್ಯಾಚುರಲ್ ಪ್ರಿಸರ್ ವೇಟಿವ್ಸ್ ‌ಜೊತೆಗೆ ಎಸೆನ್ಶಿಯ್‌ ಆಯಿಲ್ಸ್ ಅಡಗಿವೆ ತಾನೇ ಎಂದು ಪರೀಕ್ಷಿಸಿ.

ಬಿಂದಿ ಸಿಂಧೂರ : ಟ್ರೆಡಿಶನ್‌ ಲುಕ್ಸ್ ಬೇಕೆನಿಸಿದಾಗ ಬಿಂದಿ ಸಿಂಧೂರದ ಬಗ್ಗೆ ಹೇಳದಿದ್ದರೆ ಹೇಗೆ? ನೀವು ದೀರ್ಘಬಾಳಿಕೆಯ ಇಂಥದ್ದನ್ನು ಬಳಸುತ್ತಿದ್ದರೆ, ಅದೂ ಅಲರ್ಜಿಗೆ ಕಾರಣವಾದೀತು. ಎಷ್ಟೋ ಸಲ ಬಿಂದಿಗಳ ಗ್ಲೂ ಉತ್ತಮ ಗುಣಮಟ್ಟದ್ದಾಗಿರುವುದಿಲ್ಲ. ಅಭ್ಯಾಸಬಲದಿಂದಾಗಿ, ಒಂದೇ ಬಿಂದಿಯನ್ನು ಕನ್ನಡಿಗೆ ಅಂಟಿಸಿ, ಅದನ್ನೇ ಮತ್ತೆ ಮತ್ತೆ ಬಳಸುತ್ತಿರುತ್ತೇವೆ. ಇದೂ ಸಹ ಅಲರ್ಜಿಗೆ ಕಾರಣ.

ಅದೇ ತರಹ ಎಷ್ಟೋ ಹೆಂಗಸರು ಲಿಪ್‌ ಸ್ಟಿಕ್‌ ನಿಂದಲೇ ಹಣೆಗೆ ಸಿಂಧೂರ ಹಚ್ಚಿಕೊಳ್ಳುವುದುಂಟು. ರೆಗ್ಯುಲರ್‌ ಸಿಂಧೂರದಲ್ಲೂ ರೆಡ್‌ ಲೆಡ್‌ ಬೆರೆತಿದ್ದು, ಮುಂಗುರುಳು ಬೇಗ ಉದುರಲು, ಆ ಭಾಗದಲ್ಲಿ ಡ್ರೈನೆಸ್‌ ಹೆಚ್ಚಲು ಕಾರಣವಾಗುತ್ತದೆ. ಇದು ನಿಮ್ಮ ದೇಹಕ್ಕೆ ಹೆಚ್ಚಿನ ಹಾನಿ ತರುತ್ತದೆ.

ಹೀಗಾಗಿ ಸದಾ ಒಂದೇ ಅಭ್ಯಾಸಕ್ಕೆ ಅಂಟಿಕೊಳ್ಳದಿರಿ. ಬಿಂದಿ ಸಿಂಧೂರ ಸದಾ ಬ್ರಾಂಡೆಡ್‌ ಇರುವುದನ್ನೇ ಖರೀದಿಸಿ. ಈ ರೀತಿ ನಿಮ್ಮ ಶೃಂಗಾರ ಅನಾರೋಗ್ಯ ತರದೆ ಬ್ಯೂಟಿ ಹೆಚ್ಚಿಸುವಂತಾಗಲಿ.

ನೇಲ್ ಪೇಂಟ್‌ : ನೇಲ್ ಪಾಲಿಶ್‌ ಹಚ್ಚದ ಹೆಂಗಸರಾರು? ಇದು ಕೈಕಾಲಿನ ಉಗುರುಗಳ ಅಂದ ಹೆಚ್ಚಿಸುತ್ತದೆ. ಇಂದು ಕೇವಲ ಒಂದೇ ಬಗೆಯ ನೇಲ್ ‌ಪೇಂಟ್‌ ನಿಂದ ಉಗುರಿನ ಶೃಂಗಾರ ಆಗದು. ಇದು ಮುಂದುರಿದು ನೇಲ್ ಆರ್ಟ್‌ ಗೆ ದಾರಿ ಮಾಡಿಕೊಟ್ಟಿದೆ.

ಆದರೆ ಸತತ ನೇಲ್ ‌ಪಾಲಿಶ್‌/ ರಿಮೂವರ್‌ ಬಳಕೆಯ ಕಾರಣ ಉಗುರು ದುರ್ಬಲ, ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದರಿಂದಾಗಿ ಪ್ರತಿ ಸಲ ನೇಲ್ ‌ಪೇಂಟ್‌ ಬಳಸುವುದು ಅನಿವಾರ್ಯ ಆಗಿಹೋಗುತ್ತದೆ. ಇದು ಬಂಜೆತನಕ್ಕೆ ದಾರಿಯಾದೀತು. ಹಾಗೆಯೇ ಪಾಲಿಶ್‌ ರಿಮೂವರ್‌ ನಲ್ಲಿನ ಅಸೆಟೋನ್‌, ಟೇಲ್ಯೂರ್ನ್‌, ಮೆಥೆನಾಲ್ ‌ನಂಥ ಕೆಮಿಕಲ್ಸ್ ನಿಮಗೆ ಮುಂದೆ ಕ್ಯಾನ್ಸರ್‌, ಸ್ಕಿನ್ ಅಲರ್ಜಿ, ತೀವ್ರ ತಲೆನೋವಿಗೂ ಕಾರಣವಾದೀತು.

ಹೀಗಾಗಿ ಸದಾ ಕೆಮಿಕಲ್ಸ್ ಫ್ರೀ ನೇಲ್ ‌ಪಾಲಿಶ್‌/ ರಿಮೂವರ್‌ ಮಾತ್ರ ಬಳಸಿರಿ. ನೀವು ಯಾವಾಗ ಇವನ್ನು ಬಳಸಿದರೂ, ಅದಕ್ಕೆ ಮೊದಲು ಬೇಸ್‌ ಕೋಟ್‌ ಹಚ್ಚಲು ಮರೆಯದಿರಿ. ಅದು ರಕ್ಷಣಾ ಪದರವಾಗಿ ಕೆಲಸ ಮಾಡುತ್ತದೆ.

ಬಹಳಷ್ಟು ಫೇಸ್‌ ಮೇಕಪ್ ಅಲರ್ಜಿಗೆ ಮೂಲವಾದೀತು. ಏಕೆಂದರೆ ಅದರಲ್ಲಿನ ಕೆಮಿಕಲ್ಸ್ ಒಂದು ಕಾರಣವಾದರೆ, ಮತ್ತೊಂದು ನೀವು ನಿಮ್ಮ ಸ್ಕಿನ್‌ ಟೈಪ್‌ ಗಮನಿಸದೆ ಬಳಸಿದ್ದಾದರೆ, ಅದು ಆ್ಯಕ್ನೆ, ಪೋರ್ಸ್‌ ಕ್ಲೋಸ್‌ ಮಾಡಿ ಹಿಂಸೆ ನೀಡುತ್ತದೆ, ಅದರಿಂದಾಗಿ ಟಾಕ್ಸಿನ್‌ ಪದಾರ್ಥ ಚರ್ಮದಿಂದ ಹೊರಹೋಗಲಾಗದೆ ಆ್ಯಕ್ನೆ, ಮೊಡವೆ ಹೆಚ್ಚಿಸುತ್ತವೆ. ಪ್ಯಾರಾಬೀನ್‌ ನ ಬಳಕೆ ಅಲರ್ಜಿ ಜೊತೆ ಹಾರ್ಮೋನ್‌ ಇಂಬ್ಯಾಲೆನ್ಸ್ ಗೂ ಕಾರಣವಾಗುತ್ತದೆ.

ಪರಿಮಳಾ ಭಟ್

ಇದಕ್ಕೇನು ಚಿಕಿತ್ಸೆ?

ಮೇಕಪ್‌ ನಂತರ ನಿಮ್ಮನ್ನು ಅಲರ್ಜಿ ಕಾಡಿದರೆ, ನೀವು ಎಲ್ಲಕ್ಕೂ ಮೊದಲು ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಮುಖವನ್ನು ಐಸ್‌ ಕ್ಯೂಬ್ಸ್ ನಿಂದ ಮಸಾಜ್‌ ಮಾಡಿ, ಆಗ ಸ್ಕಿನ್‌ ರಿಲ್ಯಾಕ್ಸ್ ಆಗುತ್ತದೆ. ಆಗಲೂ ಹಿತಕರ ಎನಿಸದಿದ್ದರೆ, ತಕ್ಷಣ ಆ್ಯಂಟಿ ಅಲರ್ಜಿಕಲ್ ಮೆಡಿಸಿನ್‌ ಸೇವಿಸಿ. ಜೊತೆಗೆ 1% ಹೈಡ್ರೋಕಾರ್ಟಿಸೋನ್‌ ಕ್ರೀಂ ಹಚ್ಚಿರಿ. 2-3 ದಿನ ಕಳೆದರೂ ಗುಣ ಕಾಣದಿದ್ದರೆ, ಚರ್ಮ ತಜ್ಞರನ್ನು ಅಗತ್ಯ ಭೇಟಿ ಮಾಡಿ.

ತಜ್ಞರು ನಿಮಗೆ ಮೈಲ್ಡ್ ಮಾಯಿಶ್ಚರೈಸರ್‌ ಬಳಸಲು ಹೇಳುತ್ತಾರೆ.

ಟ್ರಾಪಿಕ್‌ ಸ್ಟೆರಾಯಿಡ್ಸ್ ಕ್ರೀಂ ಸಹ ಹೇಳಬಹುದು. ಆದರೆ ವೈದ್ಯರ ಸಲಹೆ ನಂತರವೇ ಇದನ್ನು ಬಳಸಬೇಕು.

ಅವರು ಆ್ಯಂಟಿ ಅಲರ್ಜಿ ಟ್ಯಾಬ್ಲೆಟ್ಸ್ ನೀಡಬಹುದು.

ಕೆಲವು ದಿನಗಳು ಕೆಮಿಕಲ್ಸ್, ಫೇಶಿಯಲ್ಸ್, ಬ್ಲೀಚ್‌ ನಿಂದ ದೂರವಿರಲು ಸೂಚಿಸುತ್ತಾರೆ.

ಕಾಸ್ಮೆಟಿಕ್‌ ಸೀರೀಸ್‌ ನ ಪ್ಯಾಚ್‌ ಟೆಸ್ಟ್ ಮಾಡಿಸಬಹುದು, ಇದರಿಂದ ಬ್ಯೂಟಿ ಪ್ರಾಡಕ್ಟ್ ನ ಯಾವ ಘಟಕದಿಂದ ಹೀಗಾಗಿದೆ ಎಂದು ತಿಳಿಯುತ್ತದೆ.

ಅಲರ್ಜಿ ಕಾರಣ ತುಟಿ, ಚರ್ಮದ ಮೇಲೆ ಆಗುವ ಪಿಗ್ಮೆಂಟೇಶನ್‌ ಕಡಿಮೆಗೊಳಿಸಲು ಟೈರೋಸಿನೆಸ್‌ ಇನ್‌ ಹಿಬಿಟರ್ಸ್‌ನೀಡಲಾಗುತ್ತದೆ.

ಅಲರ್ಜಿ ಸರಿಯಾದ ಮೇಲೂ ಕೆಲವು ವಿಶಿಷ್ಟ ಸ್ಕಿನ್‌ ಕೇರ್‌ ಪ್ರಾಡಕ್ಟ್ಸ್ ಬಳಸಲು ಸೂಚಿಸುವರು.

ಈ ಚಿಕಿತ್ಸೆಯನ್ನು ಮಧ್ಯದಲ್ಲೇ ಬಿಟ್ಟು ಬಿಡಬಾರದು.

ಸಲಹೆ ಅನುಸರಿಸಿ

ಎಷ್ಟು ಸಾಧ್ಯವೇ ಮೇಕಪ್‌ ಫ್ರೀ ಆಗಿರಿ.

ಬಹಳಷ್ಟು ಘಟಕಗಳು ಅಡಗಿರುವ ಬದಲು ಕೇವಲ 5-6 ಮಾತ್ರ ಇರುವಂಥ ಬ್ಯೂಟಿ ಪ್ರಾಡಕ್ಟ್ಸ್ ನ್ನೇ ಬಳಸಿರಿ. ಏಕೆಂದರೆ ಘಟಕಗಳು ಜಾಸ್ತಿ ಇದ್ದಷ್ಟೂ ಅಲರ್ಜಿ ಅಷ್ಟೇ ಜಾಸ್ತಿ ಆಗುತ್ತದೆ. ಕಡಿಮೆ ಘಟಕಗಳಿಂದಾಗಿ ಅಲರ್ಜಿಯನ್ನು ಪತ್ತೆ ಹಚ್ಚುವುದೂ ಸುಲಭ.

ಫ್ರಾಗ್ರೆನ್ಸ್ ಪ್ಯಾರಾಬೀನ್‌ ಫ್ರೀ ಬ್ಯೂಟಿ ಪ್ರಾಡಕ್ಟ್ಸ್ ನ್ನು ಮಾತ್ರ ಖರೀದಿಸಿ.

ಯಾವಾಗ ಹೊಸ ಪ್ರಾಡಕ್ಟ್ ಟ್ರೈ ಮಾಡಿದರೂ, ಎಲ್ಲಕ್ಕೂ ಮೊದಲು ಅದನ್ನು ಮೊಣಕೈ ಹತ್ತಿರ ಹಚ್ಚಿ 2-3 ದಿನ ಟೆಸ್ಟ್ ಮಾಡಿ. ಇದರಿಂದ ನಿಮಗೆ ಅಲರ್ಜಿ ಆಗುತ್ತದೆಯೋ ಇಲ್ಲವೋ ತಿಳಿಯುತ್ತದೆ.

ಅಲರ್ಜಿಯಿಂದ ಪಾರಾಗಲು, ಸದಾ ಮೈಲ್ಡ್ ಕ್ಲೆನ್ಸರ್‌ ನಿಂದ ಮೇಕಪ್‌ ರಿಮೂವ್ ‌ಮಾಡಿ. ಎಂದೂ ಮೇಕಸ್‌ ಸಹಿತ ನಿದ್ರಿಸದಿರಿ. ಇದರಿಂದ ಸ್ಕಿನ್‌ ಪೋರ್ಸ್‌ ಕ್ಲೋಸ್‌ ಆಗುವ ಜೊತೆಗೆ, ಅಲರ್ಜಿಯ ಕಾಟ ತಪ್ಪಿದ್ದಲ್ಲ.

ಎಕ್ಸ್ ಪೈರಿ ಡೇಟ್ಸ್ ಗಮನಿಸಿಕೊಂಡೇ ಕಾಸ್ಮೆಟಿಕ್ಸ್ ಬಳಸಬೇಕು. ಜಿಪುಣತನಕ್ಕೆ ಗಂಟುಬಿದ್ದು ಹಳೆಯದನ್ನೇ ಬಳಸುತ್ತಿರಬೇಡಿ.

ನಿಮ್ಮ ಸ್ಕಿನ್‌ ಬಹಳ ಸೆನ್ಸಿಟಿವ್ ‌ಆಗಿದ್ದರೆ, ನೀವು ಚರ್ಮ ತಜ್ಞರನ್ನು ವಿಚಾರಿಸಿ, ಮುಂದೆ ಬ್ಯೂಟಿ ಪ್ರಾಡಕ್ಟ್ಸ್ ಬಳಸಿರಿ. ಅವರು ಹೇಳುವರೆಗೂ ಖಂಡಿತಾ ಅದರ ಬಳಕೆ ಬೇಡ!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ