ಮುಲ್ತಾನಿ ಮಿಟ್ಟಿಯ ಅದ್ಭುತ ಕಾಸ್ಮೆಟಿಕ್ಗುಣಗಳ ಬಗ್ಗೆ ವಿವರವಾಗಿ ತಿಳಿಯೋಣವೇ……?

ಮುಲ್ತಾನಿ ಮಿಟ್ಟಿ ಎಂಬುದನ್ನು ಚೌಳು ಮಣ್ಣು, ಪಲರ್‌ ಅರ್ಥ್‌ ಎಂದೂ ಕರೆಯುತ್ತಾರೆ. ಇದರಿಂದ ನಮಗೆ ಸಿಗುವ ಲಾಭ ಅನೇಕ. ಇದು ನಿಜಕ್ಕೂ ಮ್ಯಾಜಿಕ್‌ ಕಾಸ್ಮೆಟಿಕ್ಸ್ ಪ್ರಾಡಕ್ಟ್ ಎಂದೇ ಹೇಳಬೇಕು. ಇದು ನಿಮ್ಮ ಚರ್ಮದಿದ ಹಿಡಿದು ಕೂದಲವರೆಗೂ ಅದ್ಭುತ ಕೆಲಸ ಮಾಡಬಲ್ಲದು. ಈ ನೈಸರ್ಗಿಕ ಹಾಗೂ ಕೈಗೆಟುಕು ಬೆಲೆಯ ಬ್ಯೂಟಿ ಪ್ರಾಡಕ್ಟ್, ದಶಕಗಳಿಂದ ಜನಪ್ರಿಯ.

ಹೀಗಾಗಿ ದಶಕಗಳಿಂದಲೂ ನಮ್ಮ ತಾಯಿ, ಅಜ್ಜಿಯರ ಪೆಟ್ಟಿಗೆಯಲ್ಲಿ ಭದ್ರವಾಗಿ ಉಳಿದುಬಂದ ಈ ಮುಲ್ತಾನಿ ಮಿಟ್ಟಿ ಭಾರತೀಯ ಕಾಸ್ಮೆಟಿಕ್ಸ್ ನಲ್ಲಿ ಅಗ್ರಗಣ್ಯ ಸ್ಥಾನ ಹೊಂದಿದೆ. ಇದರ ಲಾಭಗಳು ಅನೇಕ. ಇದರಲ್ಲಿನ ಪ್ರಮುಖ ಲಾಭಗಳ ಬಗ್ಗೆ ನಾವೀಗ ತಿಳಿದುಕೊಳ್ಳೋಣ. ಇದು ನಮ್ಮ ಚರ್ಮಕ್ಕೆ ಎಷ್ಟು ಪೂರಕ ತಿಳಿಯೋಣ.

ಡ್ರೈ ಎಕ್ಸ್ ಫಾಲಿಯೇಟಿಂಗ್ಬಾಡಿ ಸ್ಕ್ರಬ್

ಮುಲ್ತಾನಿ ಮಿಟ್ಟಿ ತನ್ನ ಕ್ಲೆನ್ಸಿಂಗ್‌ ಗುಣಗಳಿಂದಾಗಿ ಪ್ರಸಿದ್ಧವಾಗಿದೆ. ನ್ಯಾಚುರಲ್ ಬಾಡಿ ಸ್ಕ್ರಬ್‌ ಆಗಿಸಲು ಇದನ್ನು ಬ್ರೋಕನ್‌ ವೀಟ್ ಜೊತೆ ಬೆರೆಸಿ ಪೇಸ್ಟ್ ಮಾಡಿಕೊಂಡು, ಇದನ್ನು ನಿಮ್ಮ ದೇಹಾದ್ಯಂತ ಹಚ್ಚಿಕೊಳ್ಳಿ. ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ. ದಿನ ಬಿಟ್ಟು ದಿನ ತಿಂಗಳು ಪೂರ್ತಿ ಮಾಡಿದಾಗ, ನಿಮ್ಮ ಚರ್ಮದಲ್ಲಿ ಮೃದುತ್ವ, ಕಾಂತಿ ಗೋಚರಿಸುತ್ತದೆ.

ಆಯ್ಲಿ ಸ್ಕಿನ್ಗೆ ಗಿಫ್ಟ್

ನೀವು ಸಹ ನಿಮ್ಮ ಮೂಗು, ಟೀ ಝೋನ್‌ ಸುತ್ತಮುತ್ತಲೂ ಜಿನುಗುವ ಜಿಡ್ಡಿನಿಂದ ಬೇಸರಗೊಂಡಿರುವಿರಾ? ಇದಕ್ಕೆ ಮುಲ್ತಾನಿ ಮಿಟ್ಟಿ ಉತ್ತಮ ಪರಿಹಾರ. ಟೊಮೇಟೊ ಪೇಸ್ಟ್ ಗೆ ಇದನ್ನು ಬೆರೆಸಿ ನುಣ್ಣಗೆ ಮಾಡಿ. ಇದನ್ನು ನೀಟಾಗಿ ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷ ಹಾಗೇ ಇರಿ. ನಂತರ ತಣ್ಣೀರಿನಿಂದ ತೊಳೆಯಿರಿ. ಖಂಡಿತಾ ಉತ್ತಮ ಪರಿಣಾಮ ಕಾಣಿಸುತ್ತದೆ. ಟೊಮೇಟೊ ನೈಸರ್ಗಿಕ ಆ್ಯಸ್ಟ್ರಿಜೆಂಟ್‌ ಆಗಿ ಕಾರ್ಯ ನಿರ್ವಹಿಸಿದರೆ, ಮುಲ್ತಾನಿ ಮಿಟ್ಟಿ ಹೆಚ್ಚುವರಿ ತೈಲಾಂಶ ತೆಗೆದುಬಿಡುತ್ತದೆ.

ಚರ್ಮದ ಡಾಕ್ಟರ್‌ ಇದು ಒಂದು ಅಮೂಲ್ಯ ನೈಸರ್ಗಿಕ ಕಾಸ್ಮೆಟಿಕ್‌ ಮೂಲವಾಗಿದ್ದು, ವಿಶಿಷ್ಟ ಅಂಶಗಳನ್ನು ಒಳಗೊಂಡಿದೆ. ಇದು ನಿಮ್ಮ ಆ್ಯಕ್ನೆ, ಮೊಡವೆ, ಪಿಗ್ಮೆಂಟೇಶನ್‌, ಚರ್ಮದ ಉರಿಗಳಿಂದ ಕಾಪಾಡುತ್ತದೆ. ಇಂದು ಇದು ಮಾರುಕಟ್ಟೆಯಲ್ಲಿ ಅನೇಕ ಬ್ರಾಂಡ್‌ ಗಳಲ್ಲಿ ಲಭ್ಯ. ಯಾವುದರಲ್ಲಿ ಅಗ್ಗದ ಮಾಲು ಬೆರೆತಿಲ್ಲವೋ ಅಂಥ ಉತ್ತಮ ಬ್ರಾಂಡನ್ನೇ ಖರೀದಿಸಿ. ಆದಷ್ಟೂ ಇದನ್ನು ಪೌಡರ್‌ ರೂಪದಲ್ಲೇ ಖರೀದಿಸಿ. ಇದರಿಂದ ನಿಮ್ಮ ಶ್ರಮ, ಸಮಯ ಉಳಿಯುತ್ತದೆ. ನಿಮ್ಮ ಇಷ್ಟದ ಇತರ ಮನೆ ಮದ್ದಿನ ಜೊತೆ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಬಹುದು. ಅದು ನಿಮ್ಮ ಚರ್ಮಕ್ಕೆ ಅನುಗುಣವಾಗಿ ಇರಬೇಕಷ್ಟೆ.

ಬೇಸಿಗೆಗೆ ವರದಾನ

ಇದರ ಸದುಪಯೋಗ ನಿಮ್ಮ ಮುಖಕ್ಕೆ ಅಪೂರ್ವ ಕಾಂತಿ ತಂದುಕೊಡಬಲ್ಲದು, ಬೇಸಿಗೆಯಲ್ಲಂತೂ ಇನ್ನೂ ಒಳ್ಳೆಯದು. ಇದನ್ನು ಒಂದು ಬಟ್ಟಲಿಗೆ ಹಾಕಿಕೊಳ್ಳಿ, ಇದಕ್ಕೆ ಗುಲಾಬಿ ಜಲ ಬೆರೆಸಿಕೊಳ್ಳಿ. ಈ ಪೇಸ್ಟ್ ನ್ನು ನಿಮ್ಮ ಮುಖ, ಕುತ್ತಿಗೆಗೆ ನೀಟಾಗಿ ಸವರಿಕೊಳ್ಳಿ. ಇವೆರಡರ ಕಾಂಬಿನೇಶನ್‌ ನಿಮ್ಮ ಚರ್ಮಕ್ಕೆ ಬಹಳ ಲಾಭಕಾರಿ. ಇದರಿಂದ ಉತ್ತಮ ಪರಿಣಾಮ ಸಿಗುತ್ತದೆ. 15 ನಿಮಿಷ ಬಿಟ್ಟು ಮುಖ ತೊಳೆಯಿರಿ. ನಿಮ್ಮ ಚರ್ಮ ಮಿನುಗುತ್ತದೆ.

ಈ ನೈಸರ್ಗಿಕ ಮಣ್ಣು ಮ್ಯಾಜಿಕ್‌ ಗುಣ ಹೊಂದಿದೆ. ಜನ ಸ್ಕಿನ್‌ ಕೇರ್‌ ಗಾಗಿ ಬಹಳ ಕಾಸ್ಮೆಟಿಕ್ಸ್ ಕೊಂಡು ದುಡ್ಡು ದಂಡ ಮಾಡುತ್ತಾರೆ. ಅದರ ಬದಲು ಅಗ್ಗದ, ಸುಲಭ ಲಭ್ಯವಿರುವ ಮುಲ್ತಾನಿ ಮಿಟ್ಟಿಯಿಂದ ನಿಮ್ಮ ಚರ್ಮದ ಸೌಂದರ್ಯ ಸಂರಕ್ಷಣೆ ಮಾಡಿಕೊಳ್ಳಿ.

ಪ್ರತಿನಿಧಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ