ಸ್ಟೈಲಿಶ್ ಹೇರ್ ಕಟ್‌ಹೇರ್ ಕಲರ್ ಮಾಡಿಸುವುದು ಇಂದಿನ ತರುಣಿಯರ ಹೊಸ ಟ್ರೆಂಡ್ ಆಗಿದೆ. ಬ್ರೌನ್, ರೆಡ್, ಬ್ಲಾಂಡ್ ಸದಾ ಟ್ರೆಂಡ್ ನಲ್ಲಿ ಇದ್ದೇ ಇರುತ್ತವೆ, ಆದರೆ ಇದೀಗ ಈ ಟ್ರೆಂಡ್ ಪ್ರತಿ ವರ್ಷ ಬದಲಾಗುತ್ತಿದೆ. ಈ ಡಿಮ್ಯಾಂಡ್ ಗಮನಿಸಿಕೊಂಡೇ ಇಂದಿನ ಹೇರ್ ಸ್ಟೈಲಿಸ್ಟ್ ಹೊಸ ಹೊಸ ಹೇರ್ ಟ್ರೆಂಡ್ಸ್ ನ್ನು ಚಲಾವಣೆಗೆ ತಂದಿದ್ದಾರೆ. ಹೇರ್ ಕಲರ್ ಟ್ರೆಂಡಿ ಆಗಲು ಮತ್ತೊಂದು ಕಾರಣವೆಂದರೆ, ಇದು ಪರ್ಸನಾಲಿಟಿ ಬದಲಾಯಿಸುವುದಲ್ಲದೆ, ಹೆಚ್ಚಿನ ಆತ್ಮವಿಶ್ವಾಸವನ್ನೂ ಗಳಿಸಿಕೊಡುತ್ತದೆ.
ಆಯಾ ಸಂದರ್ಭ, ಋತು, ಪಾರ್ಟಿಗಳಿಗೆ ತಕ್ಕಂತೆ ಹೇರ್ ಕಲರಿಂಗ್ ಮಾಡಿಸಬೇಕು. ನಿಮ್ಮ ಹೇರ್ ಕಲರ್ ಗಮನಿಸಿಯೇ, ನೀವು ಎಂಥ ಮನೋಭಾವದವರು ಎಂದು ಅರಿಯಬಹುದಾಗಿದೆ. ಸಮರ್ಪಕ ಹೇರ್ ಕಲರ್ ಪಡೆಯಲು ನೀವು ಹೇರ್ ಎಕ್ಸ್ ಪರ್ಟ್ ರ ಸಲಹೆ ಪಡೆಯುವುದು ಉತ್ತಮ. ಇದರಿಂದ ನಿಮ್ಮ ಹೇರ್ ಕಲರ್ ನಿಮಗೆ ಎಂದೂ ಡಿಸಾಸ್ಟರ್ ಆಗದು.
ಕಲರಿಂಗ್ ಟ್ರೆಂಡ್ ಫಾಲೋ ಮಾಡುವುದು ತುಸು ಕಷ್ಟವೇ ಸರಿ. ಹೀಗಾಗಿ ಇಂದಿನ ತರುಣಿಯರು ಪ್ರಸ್ತುತ ಕಾಲದ ಅಗತ್ಯ ಗಮನಿಸಬೇಕು. ಹೆಂಗಸರು ಹೆಚ್ಚಾಗಿ ಅಡುಗೆಮನೆಗೆ ಅಂಟಿಕೊಳ್ಳುತ್ತಾರೆ. ಯಾವುದೇ ವ್ಯಂಜನ ಹೆಚ್ಚು ರುಚಿಕರ ಎನಿಸಲು ಹೊಸ ಹೊಸ ಗರಂಮಸಾಲ ಬಳಸುತ್ತಿರುತ್ತಾರೆ. ಅದೇ ರೀತಿ ಹೇರ್ ಕಲರ್ ಸಹ ಮಸಾಲೆಗಳ ರೀತಿ ಬೇರೆ ಬೇರೆ ಬಣ್ಣಗಳದ್ದಾಗಿರುತ್ತದೆ, ನೋಡುಗರಿಗೆ ವೈವಿಧ್ಯಯ ಲುಕ್ಸ್ ಒದಗಿಸುತ್ತವೆ.
ಬ್ಯಾಲೆನ್ಸ್ಡ್ ಹೇರ್ ಕಲರ್
ಕೆಲವರು ತಮ್ಮ ಹೇರ್ ಕಲರ್ ಬ್ಯಾಲೆನ್ಸ್ಡ್ ಆಗಿರಬೇಕೆಂದು ಬಯಸುತ್ತಾರೆ. ಕೆಲವರಿಗೆ ಹೆಚ್ಚು ಥಳುಕುಬಳುಕಿನ ಗಾಡಿ ಕಲರ್ಸ್‌ಪ್ರಿಯವಾದರೆ, ಹಲವರು ಲೈಟ್ ಕಲರ್ಸ್ ಬಯಸುತ್ತಾರೆ. ದಾಲ್ಚಿನ್ನಿ, ಜಾಯಿಕಾಯಿ ಇತ್ಯಾದಿಗಳಿಂದ ಹಿಡಿದು ಕೇಸರಿ, ಸಾಸುವೆ, ಕೋಕಂವರೆಗೂ ಎಲ್ಲಾ ಬಗೆಯ ಹೇರ್ ಕಲರ್ಸ್ ಟ್ರೆಂಡ್ ನಲ್ಲಿವೆ.
ಕೂದಲು ನೆರೆತು ಬೆಳ್ಳಗಾದ ಹೆಂಗಸರು ಸಹ ಅತಿ ಸುಲಭವಾಗಿ ಇಂಥ ಕಲರ್ಸ್ ಬಳಸಿಕೊಂಡು, ಗಾರ್ಜಿಯಸ್ ಲುಕ್ಸ್ ಪಡೆಯಬಹುದು. ಇಡೀ ಕೂದಲಿಗೆ ಬಣ್ಣ ಹಚ್ಚಲೇಬೇಕು ಅಂತೇನಿಲ್ಲ. ಉದ್ದನೆ ಸ್ಟ್ರಿಪ್ಸ್ ಗ್ರೇ ಕೂದಲಿಗೆ ಚೆನ್ನಾಗಿ ಒಪ್ಪುತ್ತದೆ. ಜಾಯಿಕಾಯಿ ಬಣ್ಣ ಗ್ರೇ ಕೂದಲಿಗೆ ಹಚ್ಚುವುದರಿಂದ ಅದು ಮುಂದೆ ಬ್ರೌನ್‌ಲೈಟ್ ಬ್ರೌನ್ ಆಗಿ ಬಲು ಸುಂದರವಾಗಿ ಕಾಣುತ್ತದೆ. ರೆಡ್ ಕಲರಿನ ತೆಳು ಸ್ಟ್ರಿಪ್ಸ್ ಮಾಡಿ, ಅದನ್ನು ಬೀಡ್ಸ್ ನಿಂದ ಅಲಂಕರಿಸಬಹುದು. ಇದು ಗಾರ್ಜಿಯಸ್ ಲುಕ್ಸ್ ಒದಗಿಸುತ್ತದೆ.
ಹೇರ್ ಕಲರ್ ನ ಸ್ಟೈಲಿಂಗ್
ಇಂಡಿಯನ್ ಲುಕ್ಸ್ ನಲ್ಲಿ ಕಾಪರ್ ಕಲರ್ ಅತಿ ಉತ್ತಮ ಎಂದು ಪರಿಗಣಿಸಿಲ್ಲ, ಏಕೆಂದರೆ ಇದು ವಾರ್ಮ್ ಕಲರ್. ಆದರೆ ಇದನ್ನು ಹೈಲೈಟ್ ಆಗಿ ಬಳಸುವುದರಿಂದ, ಇದರ ಲುಕ್ಸ್ ಬ್ಯೂಟಿಫುಲ್ ಎನಿಸುತ್ತದೆ. ಗೋಲ್ಡ್ ಕಲರ್ ಸಹ ಹೆಚ್ಚು ಜನಪ್ರಿಯ. ಇದು 16-36ನ ಎಲ್ಲಾ ಯುವತಿಯರಿಗೂ ಒಪ್ಪುತ್ತದೆ. ಗೋಲ್ಡ್ ನ್ನು ಜಡೆಗೆ ಬಳಸಿಕೊಳ್ಳುವುದರಿಂದ ಎಲಿಗೆಂಟ್ ಲುಕ್ಸ್ ಬರುತ್ತದೆ. ಇದನ್ನು ಎಲ್ಲಾ ಹೆಂಗಸರೂ ಸುಲಭವಾಗಿ ಫಾಲೋ ಮಾಡಬಹುದು. ಓಪನ್ ಹೇರ್, ಜಡೆ, ಮೆಸ್ಸಿ ಬನ್, ಕೊಂಡೆ…. ಇತ್ಯಾದಿ ಯಾವುದೇ ಹೇರ್ ಸ್ಟೈಲ್ ಗೂ, ಹೇರ್ ಕಲರ್ಸ್ ನೀಟಾಗಿ ಕಾಣುತ್ತವೆ. ಹೇರ್ ಕಲರಿಂಗ್ ಗಾಗಿ ಸೆಲೂನಿಗೆ ಹೋಗಬೇಕಾಗುತ್ತದೆ, ಆದರೆ ಸ್ಟೈಲಿಂಗ್ ನ್ನು ಮನೆಯಲ್ಲೇ ಮಾಡಿಕೊಳ್ಳಬಹುದು. 3-4 ತಿಂಗಳಿಗೂ ಅಧಿಕ ಬಾಳಿಕೆ ಬರುವ ಇದರ ಲುಕ್ಸ್ ಸುಪರ್ಬ್!
– ಜಿ. ಸುಮಾ
ವಯಸ್ಸಿಗೆ ತಕ್ಕಂತೆ ಹೇರ್ ಕಲರ್
ಕಾಲೇಜು ಕಿಶೋರಿಯರಿಗಾಗಿ ರೆಡ್‌ಗೋಲ್ಡ್ ಹೆಚ್ಚು ಸುಂದರ ಎನಿಸುತ್ತದೆ. ಇದನ್ನು ಹೈಲೈಟ್ಸ್ ಯಾವು ಯಾವುದೋ ರೂಪದಲ್ಲಾದರೂ ಬಳಸಬಹುದು. ಮಧ್ಯ ವಯಸ್ಕರರಿಗಾಗಿ ರೆಡ್, ಬ್ಲಾಂಡ್ಸ್, ಕಾಪರ್ ಚೆನ್ನಾಗಿ ಒಪ್ಪುತ್ತದೆ. ತರುಣಿಯರು ತಮ್ಮ ಗ್ರೇ ಹೇರ್ ಮರೆಮಾಚಲು, ಕೋಕಂ ಚಾಕಲೇಟ್ ಎರಡೂ ಕಲರ್ಸ್ ಬಳಸಿಕೊಳ್ಳಬಹುದು. ಇದು ಬಿಳಿ ಕೂದಲನ್ನು ಕವರ್ ಮಾಡಿ, ಉಳಿದನ್ನು ಹೈಲೈಟ್ ಮಾಡುತ್ತದೆ.