ಯೆಮೆನ್‌ನಲ್ಲಿ ಕೇರಳದ ನರ್ಸ್ ನಿಮಿಷಾ ಪ್ರಿಯಾಳ ಮರಣದಂಡನೆ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದಿದೆ. ನಿಮಿಷಾ ಪ್ರಿಯಾ ಕುಟುಂಬವು ‘ರಕ್ತದ ಹಣ’ ನೀಡುವ ಪ್ರಸ್ತಾಪವನ್ನು ಮೃತನ ಕುಟುಂಬವು ತಿರಸ್ಕರಿಸಿದೆ.

8.60 ಕೋಟಿ:  ನಿಮಿಷಾ ಪ್ರಿಯಾಳನ್ನ ಉಳಿಸಿಕೊಳ್ಳಲು ಆಕೆಯ ಪೋಷಕರು ಸಂತ್ರಸ್ತ ಕುಟುಂಬಕ್ಕೆ 8 ಕೋಟಿ 60 ಲಕ್ಷ ಬ್ಲಡ್​ ಮನಿ ನೀಡಲು ಸಿದ್ಧವಾಗಿದೆ. ಆದರೆ ಅವರು ಅದನ್ನು ಸ್ವೀಕರಿಸುತ್ತಿಲ್ಲ. ಹಣದಿಂದ ರಕ್ತವನ್ನು ಖರೀದಿಸಲು ಸಾಧ್ಯವಿಲ್ಲ ಎಂದು ತಲಾಲ್ ಅಬ್ದೊಲ್ ಮೆಹದಿ ಕುಟುಂಬ ಹೇಳಿದೆ. ಇದರ ಮಧ್ಯೆ ನಿಮಿಷಾ ಪ್ರಿಯಾಳ ಮರಣದಂಡನೆ ಪ್ರಕ್ರಿಯೆಯನ್ನು ಯೆಮೆನ್ ಸರ್ಕಾರ ಮುಂದೂಡಿದೆ.ವಾಸ್ತವವಾಗಿ ನಿನ್ನೆ (ಜುಲೈ 17) ನಿಮಿಷಾ ಪ್ರಿಯಾಳನ್ನು ಗಲ್ಲಿಗೇರಿಸಬೇಕಿತ್ತು. ಕೇರಳದ ಧರ್ಮಗುರು ಅಬು ಬಕರ್ ಅವರ ಮಧ್ಯಸ್ತಿಕೆಯಿಂದ ನೇಣು ಹಾಕುವಿಕೆಯನ್ನು ಮುಂದೂಡಲಾಗಿದೆ. ಯೆಮೆನ್‌ನಲ್ಲಿ ಹೌತಿ ಸರ್ಕಾರದೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಅಬು ಬಕರ್ ಹೇಳಿದ್ದಾರೆ.

ಹಣದಿಂದ ಜೀವವನ್ನು ಕೊಳ್ಳಲಾಗದು: ನಿಮಿಷಾಗೆ ಶಿಕ್ಷೆಯಾಗಬೇಕು ಎಂದು ಮೃತ ತಲಾಲ್ ಆದಿಬ್ ಮೆಹದಿ ಕುಟುಂಬ ಒತ್ತಾಯಿಸುತ್ತಿದೆ. ಮೃತನ ಸಹೋದರ ಅಬ್ದುಲ್ ಫತ್ತಾಹ್ ಮೆಹದಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಆಕೆಯ ಅಪರಾಧಕ್ಕೆ ಕ್ಷಮೆ ಇಲ್ಲ. ಆಕೆಗೆ ಶಿಕ್ಷೆಯಾಗಬೇಕು. ರಕ್ತದ ಹಣವನ್ನು ಸ್ವೀಕರಿಸುವುದಿಲ್ಲ. ನಮಗೆ ನ್ಯಾಯ ಬೇಕು. ಅಪರಾಧಿಯನ್ನು ಬಲಿಪಶು ಎಂದು ಬಿಂಬಿಸಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ಇನ್ನು, ನಿಮಿಷ ಪ್ರಿಯಾ ಇಂಟರ್​​ನ್ಯಾಷನಲ್ ಆಕ್ಷನ್ ಕೌನ್ಸಿಲ್​ ಕೋರ್ ಕಮಿಟಿ ಸದಸ್ಯ ದಿನೇಶ್ ನಾಯರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ನಿಮಿಷಾ ಪ್ರಿಯಾಗೆ ಕ್ಷಮಾದಾನಕ್ಕಾಗಿ ನಮ್ಮ ಮಂಡಳಿ ಅವಿರತವಾಗಿ ಶ್ರಮಿಸುತ್ತಿದೆ. ಸಂತ್ರಸ್ತ ಕುಟುಂಬದ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಕ್ಷಮಾದಾನಕ್ಕಾಗಿ ದೊಡ್ಡ ಪ್ರಮಾಣದ ರಕ್ತದಾನ ವ್ಯವಸ್ಥೆ ಮಾಡಿದ್ದೇವೆ. ಆದರೆ ಸಂತ್ರಸ್ತ ಕುಟುಂಬವು ಅದನ್ನು ಸ್ವೀಕರಿಸಲು ನಿರಾಕರಿಸಿದೆ. ನಮ್ಮ ಪ್ರಯತ್ನ ಮುಂದುವರಿಯಲಿದೆ. ನಿಮಿಷಾ ಪ್ರಿಯಾಳ ಬಿಡುಗಡೆಗಾಗಿ ಸಾಧ್ಯವಾಗುವ ಎಲ್ಲಾ ಮಾರ್ಗಗಳನ್ನು ಹುಡುಕಲಾಗುತ್ತಿದೆ. ಕೇಂದ್ರ ಸರ್ಕಾರ ಕೂಡ ಪ್ರಯತ್ನಕ್ಕೆ ಮುಂದಾಗಿದೆ. ಅದು ಯೆಮೆನ್ ಜೈಲು ಅಧಿಕಾರಿಗಳು ಹಾಗೂ ಪ್ರಾಸಿಕ್ಯೂಷನ್ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಇದನ್ನೇ ಸುಪ್ರೀಂ ಕೋರ್ಟ್‌ಗೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಏನಿದು ಪ್ರಕರಣ?

ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಲ್ಲೆಂಗೋಡ್‌ನ 38 ವರ್ಷದ ನಿಮಿಷಾ ಪ್ರಿಯಾ, 2008 ರಿಂದ ಯೆಮೆನ್‌ನ ಸನಾದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. 2014 ರಲ್ಲಿ ಅವರು ಸ್ಥಳೀಯ ಉದ್ಯಮಿ ತಲಾಲ್ ಅಬ್ದೋ ಮೆಹದಿ ಜೊತೆಗೆ ವೈದ್ಯಕೀಯ ಕ್ಲಿನಿಕ್ ಆರಂಭಿಸಿದ್ದರು. ಆದರೆ, ವ್ಯಾಪಾರ ವಿವಾದದಿಂದ ಉದ್ಭವಿಸಿದ ಘರ್ಷಣೆಯಲ್ಲಿ ತಲಾಲ್​​​ ಜೊತೆ ಜಗಳವಾಗಿ ತನ್ನ ಪಾಸ್‌ಪೋರ್ಟ್‌ ಪಡೆಯಲು ಔಷಧ ನೀಡಿದ್ದರಿಂದ ತಲಾಲ್‌ಗೆ ಮಾರಕ ಡೋಸ್ ಆಗಿತ್ತು ಎಂದು ಆರೋಪಿಸಲಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ