ಮಳೆ, ಚಳಿಗಾಲದಲ್ಲಿ ಅತಿ ಶೀತದ ಗಾಳಿಯಿಂದ ಹಾಗೂ ತಾಪಮಾನ ತಗ್ಗುವುದರಿಂದ, ವಾತಾವರಣದ ಹ್ಯುಮಿಡಿಟಿಯಲ್ಲಿ ಬಲು ಬೇಗ ಏರುಪೇರು ಕಾಣುವುದರಿಂದಲೂ, ಚರ್ಮಕ್ಕೆ ಸೂಕ್ತ ಹೈಡ್ರೇಶನ್‌ ದೊರಕುವುದಿಲ್ಲ. ಅಂದ್ರೆ ಚರ್ಮಕ್ಕೆ ಸೂಕ್ತ ಹೈಡ್ರೇಶನ್‌ಮೇಂಟೇನ್‌ ಮಾಡಲಾಗದು. ಇದರಿಂದಾಗಿ ಮುಖದ ಚರ್ಮ ಅಂದಗೆಡುವುದಲ್ಲದೆ, ಕೈಕಾಲುಗಳ ಚರ್ಮ ಸಹ ಒಡೆಯುವುದು, ನವೆ, ಕಡಿತ, ಪದರ ಬಿಡುವುದು ಇತ್ಯಾದಿಗಳ ಸಮಸ್ಯೆಗೆ ತುತ್ತಾಗುತ್ತದೆ. ಇದು ಚರ್ಮದ ಸುಸ್ಥಿತಿಯನ್ನು ತೀರಾ ಹಾಳು ಮಾಡುತ್ತದೆ. ಚರ್ಮಕ್ಕೆ ಇಂಥ ಸಮಸ್ಯೆ ಎದುರಾದಾಗ ಇದರ ನಿವಾರಣೆ ಹೇಗೆ? ಚರ್ಮತಜ್ಞರ ಸಲಹೆ ಹೀಗಿದೆ.

ಅತಿ ಬಿಸಿ ನೀರು ಬೇಡ

ಚಳಿಗಾಲದಲ್ಲಿ ಬಿಸಿ ನೀರಿಲ್ಲದೆ ಸ್ನಾನ ಮಾಡೋರುಂಟೇ? ಆದರೆ ಈ ಉಷ್ಣತೆ ನಿಮಗೆ ಸ್ವಲ್ಪ ಹೊತ್ತು ಹಿತಕರ ಎನಿಸಬಹುದು, ಆದರೆ ಇದರ ಬಿಸಿ ಅತಿ ಆದಾಗ, ಚರ್ಮದ ನ್ಯಾಚುರಲ್ ಆಯಿಲ್ ‌ತಾನಾಗಿ ಡ್ರೈ ಆಗುತ್ತದೆ. ಇದನ್ನು ಸರಿಪಡಿಸಲು ನಮಗೆ ವಿಂಟರ್‌ ಮಾಯಿಶ್ಚರೈಸರ್‌ ಅತ್ಯಗತ್ಯ ಬೇಕು.

ಹೀಗಾಗಿ ಅತಿಯಾದ ಬಿಸಿ ನೀರನ್ನು ಬಳಸುವುದೇ ಬೇಡ. ಇದರ ವಿರುದ್ಧವಾಗಿ ನೀವು ಯಾವುದೇ ಕ್ರೀಂ ಯಾ ಮಾಯಿಶ್ಚರೈಸರ್ ಬಳಸಿದರೂ, ಸುಲಭಕ್ಕೆ ಈ ಸಮಸ್ಯೆ ದೂರಾಗದು. ಹೀಗಾಗಿ ಅತಿಯಾದ ಹಾಟ್‌ ವಾಟರ್‌ ಬದಲು, ಲೈಟ್‌ ವಾರ್ಮ್ ವಾಟರ್ ಸಾಕು. 10-12 ನಿಮಿಷಕ್ಕಿಂತ ಬಿಸಿ ಶವರ್‌ ಕೆಳಗೆ ನಿಲ್ಲಬೇಡಿ. ವಿಂಟರ್‌ ನ ಈ ಡ್ರೈ ಸ್ಕಿನ್‌ ಸಮಸ್ಯೆ ದೂರವಾಗಿಸಲು ಈ ಸಲಹೆಗಳನ್ನು ಅನುಸರಿಸಿ :

ಹಾಟ್ಹ್ಯಾಂಡ್ಡ್ರೈಯರ್ಬಳಸುವ ಅಗತ್ಯವಿಲ್ಲ : ಸಾಮಾನ್ಯವಾಗಿ ಈ ತುಂತುರು ಹನಿ ಸದಾ ಬೀಳುತ್ತಿದ್ದರೆ, ಥಂಡಿ ಗಾಳಿ ಬೀಸುತ್ತಿದ್ದರೆ, ನಮಗೆ ತಣ್ಣೀರು ಮುಟ್ಟಿ ಕೆಲಸ ಮಾಡಲು ಮನಸ್ಸೇ ಬಾರದು. ಹೀಗಾಗಿ ತಣ್ಣೀರು ಮುಟ್ಟಿದ ನಂತರ, ಮನೆಯಲ್ಲೇ ಅಳವಡಿಸಲಾಗಿರುವ ಹಾಟ್‌ ಹ್ಯಾಂಡ್‌ ಡ್ರೈಯರ್‌ ಬಳಸಿ, ತೇವಾಂಶ ಇಲ್ಲದಂತೆ ಮಾಡಿಕೊಳ್ಳುತ್ತೇವೆ. ಸ್ವಲ್ಪ ಹೊತ್ತಿಗೆ ಈ ಡ್ರೈನೆಸ್ ನಿಮಗೆ ಹಿತ ಎನಿಸಬಹುದು, ಆದರೆ ಪ್ರತಿದಿನ ಇದನ್ನು ಬಳಸುತ್ತಿದ್ದರೆ, ನಿಮ್ಮ ಕೈ ಎಷ್ಟು ಹೆಚ್ಚು ಡ್ರೈ ಆದೀತು ಎಂದು ಯೋಚಿಸಿದ್ದೀರಾ? ಏಕೆಂದರೆ ಇದರ ಬಿಸಿ ಗಾಳಿ, ನಮ್ಮ ಕೈಗಳ ಚರ್ಮದ ನ್ಯಾಚುರಲ್ ಮಾಯಿಶ್ಚರ್‌ ಖಾಲಿ ಮಾಡಿ, ಶುಷ್ಕಗೊಳಿಸುತ್ತದೆ. ಇದರ ಅತಿ ಹೆಚ್ಚಿನ ಬಳಕೆಯಿಂದಾಗಿ, ಚರ್ಮ ಪದರಗಳಾಗಿ ಎದ್ದು, ಉದುರಲೂಬಹುದು.

ಆದ್ದರಿಂದ ಇದರ ಸಹವಾಸ ಬಿಟ್ಟು, ನಿಮ್ಮ ಒದ್ದೆ ಕೈಗಳನ್ನು ಟವೆಲ್ ಅಥವಾ ಪೇಪರ್‌ ನ್ಯಾಪ್‌ ಕಿನ್‌ ನಿಂದ ಒರೆಸಿರಿ. ಇದರಿಂದ ಕೈ ಒಣಗುತ್ತದೆ, ಅದರ ಆರ್ದ್ರತೆಯೂ ಉಳಿಯುತ್ತದೆ.

ಕೈಕಾಲುಗಳಿಗೆ ಅಗತ್ಯವಾಗಿ ಪ್ರತಿದಿನ ಮಾಯಿಶ್ಚರೈಸರ್ಹಚ್ಚಿಕೊಳ್ಳಿ : ಮಳೆ, ಚಳಿಗಾಲದಲ್ಲಿ ಕೇವಲ ಒಂದು ಸಲ ಕೈಕಾಲಿಗೆ ಮಾಯಿಶ್ಚರೈಸರ್‌ ಹಚ್ಚಿಕೊಳ್ಳುವುದರಿಂದ ಸಾಕಾಗುವುದಿಲ್ಲ. ಇದರ ಬದಲಿಗೆ ನಿಮಗೆ ನಿಮ್ಮ ಸ್ಕಿನ್‌ ಡ್ರೈ ಎನಿಸಿದಾಗೆಲ್ಲ ಅಥವಾ ಕೈಕಾಲು ತೊಳೆದಾಗ, ಪ್ರತಿ ಸಾರಿಯೂ ಮಾಯಿಶ್ಚರೈಸರ್‌ ಹಚ್ಚಿಕೊಳ್ಳಿ. ನಿಮಗೆ ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಸ್ಕಿನ್ ಕೈಕಾಲು ಹೈಡ್ರೇಟ್‌ ಗೊಳಿಸುವ ಮಾಯಿಶ್ಚರೈಸರ್‌ ಗಳು ಸಿಗಬಹುದು.

ಆದರೆ ಅದರಲ್ಲಿ ನಿಮ್ಮ ಚರ್ಮಕ್ಕೆ ಸೂಕ್ತವಾಗಿ ಮ್ಯಾಚ್‌ ಆಗಬಲ್ಲದ್ದನ್ನೇ ಆರಿಸಬೇಕು. ಅಂದರೆ ಅದರ ಹೀಲಿಂಗ್‌ ಘಟಕಗಳಲ್ಲಿ ಯೂರಿಯಾ, ಕೆರಾಮೈಡ್ಸ್, ಫ್ಯಾಟಿ ಆ್ಯಸಿಡ್ಸ್, ಗ್ಲಿಸರಿನ್‌, ಶಿಯಾ ಬಟರ್‌, ಕೋಕೋಬಟರ್‌ ಮುಂತಾದವು ಧಾರಾಳ ಇರಬೇಕು. ಏಕೆಂದರೆ ಇವು ಚರ್ಮವನ್ನು ಹೀಲ್ ನರಿಶ್‌ ಮಾಡಿ ಚರ್ಮದ ರಫ್‌ ನೆಸ್‌, ಡ್ರೈನೆಸ್‌ ಹಾಗೂ ಡೆಡ್‌ ಸ್ಕಿನ್‌ ತೊಲಗಿಸುತ್ತದೆ. ಅದಕ್ಕೆ ಹೆಚ್ಚಿನ ಮೃದುತ್ವ, ಕೋಮಲತೆ ಒದಗಿಸುತ್ತದೆ.

ಸನ್ಪ್ರೊಟೆಕ್ಷನ್ಸಹ ಅತ್ಯಗತ್ಯ : ನಾವು ಅಗತ್ಯಕ್ಕಿಂತ ಹೆಚ್ಚಾಗಿ ಬಿಸಿಲಲ್ಲಿ ಕೂತರೆ, ಬಿಸಿಲಲ್ಲಿ ತಿರುಗಾಡಿದರೆ, ಅದರಿಂದಲೂ ಚರ್ಮದ ಸಮಸ್ಯೆ ಹೆಚ್ಚುತ್ತದೆ. ಅದರಲ್ಲೂ ಡ್ರೈ ಸ್ಕಿನ್‌ ವುಳ್ಳವರಿಗೆ ಇದು ದುಪ್ಪಟ್ಟಾಗುತ್ತದೆ. ಅವರ ಚರ್ಮ ಇತರರಿಗಿಂತ ಹೆಚ್ಚು ಸೆನ್ಸಿಟಿವ್. ಹೀಗಾಗಿ ಅವರು ಬೇಗ ಟ್ಯಾನ್‌, ಬರ್ನ್ಸ್ ಗೆ ತುತ್ತಾಗುತ್ತಾರೆ. ಇದರಿಂದ ಅವರ ಡ್ರೈನೆಸ್‌ ಸಮಸ್ಯೆ ಮತ್ತಷ್ಟು ಹೆಚ್ಚುತ್ತದೆ. ಹೀಗಾಗಿ ಮಳೆ, ಚಳಿಗಾಲದಲ್ಲಿ ಹೊರಗೆ ಹೋದಾಗಲೂ ಉತ್ತಮ ಬ್ರಾಂಡಿನ ಸನ್‌ ಸ್ಕ್ರೀನ್‌ ಲೋಶನ್‌ ಹಚ್ಚಿಕೊಳ್ಳಲು ಮರೆಯದಿರಿ.

ಇದರಲ್ಲಿ 30-40 SPF ಅಂಶ ಇರಲೇಬೇಕು. ಜೊತೆಗೆ ಅಂಟಂಟಾಗದೆ, ಕ್ರೀಮೀ ಎಫೆಕ್ಟ್ ಇರಬೇಕು. ಈ ರೀತಿ 2 ಇನ್‌ 1 ಆಗಿರಬೇಕು. ಇದರಿಂದ ನಿಮ್ಮ ಚರ್ಮ ಹೆಚ್ಚು ಸಲ ಸೂರ್ಯ ರಶ್ಮಿಗೆ ಒಡ್ಡಿಕೊಂಡಾಗಲೂ ಹೆಚ್ಚಿನ ತೊಂದರೆ ಇರುವುದಿಲ್ಲ. ಏಕೆಂದರೆ ಅದಕ್ಕೆ ಪೋಷಣೆ ದೊರಕಿರುತ್ತದೆ. ಇದರಲ್ಲಿ ತುಸು ಹ್ಯಾಲೂರೋನಿಕ್‌ ಆ್ಯಸಿಡ್‌, ಆ್ಯಲೋವೇರಾ ಅಂಶಗಳೂ ಬರೆತಿದ್ದರೆ ಇನ್ನೂ ಬೆಸ್ಟ್! ಬಿಸಿಲಲ್ಲಿ ಓಡಾಡುವಾಗ ದೇಹದ ಇತರ ಭಾಗಗಳು ಸೂರ್ಯ ಕಿರಣಕ್ಕೆ ತುತ್ತಾದರೂ, ಮುಖ ಆಗದಂತೆ ದುಪಟ್ಟಾದಿಂದ ಕವರ್‌ಮಾಡಿಕೊಳ್ಳಿ. ಹೀಗಾಗಿ ಸದಾ ಜೊತೆಯಲ್ಲೊಂದು ಛತ್ರಿ ಇರಲಿ. ಇಲ್ಲದಿದ್ದರೆ ಚರ್ಮ ನಿಧಾನವಾಗಿ ಟ್ಯಾನ್ ಆಗುತ್ತಾ ಆಗುತ್ತಾ, ಗಂಭೀರ ಸ್ಕಿನ್‌ ಪ್ರಾಬ್ಲಂ ಎದುರಾದೀತು.

ಆ್ಯಲೋವೇರಾ ಬಳಕೆ ಅತಿ ಮುಖ್ಯ : ಸ್ಕಿನ್‌ ಕೇರ್‌ ಪ್ರಾಡಕ್ಟ್ಸ್ ಕುರಿತು ಮಾತನಾಡುವಾಗ, ಅದರಲ್ಲಿ ಆ್ಯಲೋವೇರಾ ಬಗ್ಗೆ ಹೇಳದಿದ್ದರೆ ಹೇಗೆ? ಏಕೆಂದರೆ ಇದರಲ್ಲಿ ಆ್ಯಂಟಿಬಯೋಟಿಕ್‌ಆ್ಯಂಟಿ ಇನ್‌ ಫ್ಲಮೆಟರಿ ಗುಣಗಳಿದ್ದು, ಯಾವುದೇ ಸೈಡ್‌ ಎಫೆಕ್ಟ್ ಮಾಡದೆ, ಇದು ಚರ್ಮವನ್ನು ಮಾಯಿಶ್ಚರೈಸ್‌ ಗೊಳಿಸುವ ಕೆಲಸ ಮಾಡುತ್ತದೆ. ನಿಮಗೆ ಸ್ಕಿನ್‌ ಪ್ರಾಬ್ಲಂ ಇರಲಿ ಬಿಡಲಿ, ಇದನ್ನು ಬಳಸುವುದನ್ನು ನಿಲ್ಲಿಸಬೇಡಿ.

ಓವರ್ನೈಟ್ಟ್ರೀಟ್ಮೆಂಟ್ನಿಂದ ಉತ್ತಮ ಪರಿಣಾಮ : ಮಳೆ, ಚಳಿಗಾಲದಲ್ಲಿ ಈ ಡ್ರೈನೆಸ್‌ ಸಮಸ್ಯೆ ಬೇಡ ಎನಿಸಿದರೆ, ನೀವು ಡೇ ಟ್ರೀಟ್‌ ಮೆಂಟ್‌ ಜೊತೆಗೆ ಓವರ್‌ ನೈಟ್‌ ಟ್ರೀಟ್‌ ಮೆಂಟ್‌ ಕಡೆಯೂ ಗಮನ ಹರಿಸಬೇಕು. ಇದರಿಂದ ಕ್ರೀಂ ಮಾಯಿಶ್ಚರೈಸರ್ ಎರಡೂ ಚರ್ಮದೊಳಗೆ ಆಳವಾಗಿ ಇಳಿಯಲು ಸಹಾಯವಾಗುತ್ತದೆ. ಇದಕ್ಕಾಗಿ ರಾತ್ರಿ ಮಲಗುವ ಮುನ್ನ, ಉತ್ತಮ ಗುಣಮಟ್ಟದ ಲೋಶನ್‌, ಮಾಯಿಶ್ಚರೈಸರ್‌ ಹಚ್ಚಿಕೊಂಡು ಮಲಗಿರಿ, ಸಾಕ್ಸ್ ಧರಿಸಿ ಅದನ್ನು ಕವರ್‌ ಮಾಡಿ.

ಕೆಲವು ವಾರಗಳ ಕಾಲ ಇದನ್ನು ಸತತ ಫಾಲೋ ಮಾಡಿದರೆ, ನಿಮ್ಮ ಮುಖ, ಕೈಕಾಲುಗಳ ಚರ್ಮ ಎಷ್ಟೋ ಸುಧಾರಿಸುತ್ತದೆ. ಇದರಿಂದ ಸಹಜವಾಗಿಯೇ ನೀವು ಓವರ್‌ ನೈಟ್‌ ಟ್ರೀಟ್‌ ಮೆಂಟ್‌ ಬಿಡದೆ ಮುಂದುವರಿಸುವಿರಿ.

ಪ್ರತಿನಿಧಿ 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ