ಮಳೆ, ಚಳಿಗಾಲದಲ್ಲಿ ಅತಿ ಶೀತದ ಗಾಳಿಯಿಂದ ಹಾಗೂ ತಾಪಮಾನ ತಗ್ಗುವುದರಿಂದ, ವಾತಾವರಣದ ಹ್ಯುಮಿಡಿಟಿಯಲ್ಲಿ ಬಲು ಬೇಗ ಏರುಪೇರು ಕಾಣುವುದರಿಂದಲೂ, ಚರ್ಮಕ್ಕೆ ಸೂಕ್ತ ಹೈಡ್ರೇಶನ್ ದೊರಕುವುದಿಲ್ಲ. ಅಂದ್ರೆ ಚರ್ಮಕ್ಕೆ ಸೂಕ್ತ ಹೈಡ್ರೇಶನ್‌ಮೇಂಟೇನ್ ಮಾಡಲಾಗದು. ಇದರಿಂದಾಗಿ ಮುಖದ ಚರ್ಮ ಅಂದಗೆಡುವುದಲ್ಲದೆ, ಕೈಕಾಲುಗಳ ಚರ್ಮ ಸಹ ಒಡೆಯುವುದು, ನವೆ, ಕಡಿತ, ಪದರ ಬಿಡುವುದು ಇತ್ಯಾದಿಗಳ ಸಮಸ್ಯೆಗೆ ತುತ್ತಾಗುತ್ತದೆ. ಇದು ಚರ್ಮದ ಸುಸ್ಥಿತಿಯನ್ನು ತೀರಾ ಹಾಳು ಮಾಡುತ್ತದೆ. ಚರ್ಮಕ್ಕೆ ಇಂಥ ಸಮಸ್ಯೆ ಎದುರಾದಾಗ ಇದರ ನಿವಾರಣೆ ಹೇಗೆ? ಚರ್ಮತಜ್ಞರ ಸಲಹೆ ಹೀಗಿದೆ.
ಅತಿ ಬಿಸಿ ನೀರು ಬೇಡ
ಚಳಿಗಾಲದಲ್ಲಿ ಬಿಸಿ ನೀರಿಲ್ಲದೆ ಸ್ನಾನ ಮಾಡೋರುಂಟೇ? ಆದರೆ ಈ ಉಷ್ಣತೆ ನಿಮಗೆ ಸ್ವಲ್ಪ ಹೊತ್ತು ಹಿತಕರ ಎನಿಸಬಹುದು, ಆದರೆ ಇದರ ಬಿಸಿ ಅತಿ ಆದಾಗ, ಚರ್ಮದ ನ್ಯಾಚುರಲ್ ಆಯಿಲ್ ತಾನಾಗಿ ಡ್ರೈ ಆಗುತ್ತದೆ. ಇದನ್ನು ಸರಿಪಡಿಸಲು ನಮಗೆ ವಿಂಟರ್ ಮಾಯಿಶ್ಚರೈಸರ್ ಅತ್ಯಗತ್ಯ ಬೇಕು.
ಹೀಗಾಗಿ ಅತಿಯಾದ ಬಿಸಿ ನೀರನ್ನು ಬಳಸುವುದೇ ಬೇಡ. ಇದರ ವಿರುದ್ಧವಾಗಿ ನೀವು ಯಾವುದೇ ಕ್ರೀಂ ಯಾ ಮಾಯಿಶ್ಚರೈಸರ್ ಬಳಸಿದರೂ, ಸುಲಭಕ್ಕೆ ಈ ಸಮಸ್ಯೆ ದೂರಾಗದು. ಹೀಗಾಗಿ ಅತಿಯಾದ ಹಾಟ್ ವಾಟರ್ ಬದಲು, ಲೈಟ್ ವಾರ್ಮ್ ವಾಟರ್ ಸಾಕು. 10-12 ನಿಮಿಷಕ್ಕಿಂತ ಬಿಸಿ ಶವರ್ ಕೆಳಗೆ ನಿಲ್ಲಬೇಡಿ. ವಿಂಟರ್ ನ ಈ ಡ್ರೈ ಸ್ಕಿನ್ ಸಮಸ್ಯೆ ದೂರವಾಗಿಸಲು ಈ ಸಲಹೆಗಳನ್ನು ಅನುಸರಿಸಿ :
ಹಾಟ್ ಹ್ಯಾಂಡ್ ಡ್ರೈಯರ್ ಬಳಸುವ ಅಗತ್ಯವಿಲ್ಲ : ಸಾಮಾನ್ಯವಾಗಿ ಈ ತುಂತುರು ಹನಿ ಸದಾ ಬೀಳುತ್ತಿದ್ದರೆ, ಥಂಡಿ ಗಾಳಿ ಬೀಸುತ್ತಿದ್ದರೆ, ನಮಗೆ ತಣ್ಣೀರು ಮುಟ್ಟಿ ಕೆಲಸ ಮಾಡಲು ಮನಸ್ಸೇ ಬಾರದು. ಹೀಗಾಗಿ ತಣ್ಣೀರು ಮುಟ್ಟಿದ ನಂತರ, ಮನೆಯಲ್ಲೇ ಅಳವಡಿಸಲಾಗಿರುವ ಹಾಟ್ ಹ್ಯಾಂಡ್ ಡ್ರೈಯರ್ ಬಳಸಿ, ತೇವಾಂಶ ಇಲ್ಲದಂತೆ ಮಾಡಿಕೊಳ್ಳುತ್ತೇವೆ. ಸ್ವಲ್ಪ ಹೊತ್ತಿಗೆ ಈ ಡ್ರೈನೆಸ್ ನಿಮಗೆ ಹಿತ ಎನಿಸಬಹುದು, ಆದರೆ ಪ್ರತಿದಿನ ಇದನ್ನು ಬಳಸುತ್ತಿದ್ದರೆ, ನಿಮ್ಮ ಕೈ ಎಷ್ಟು ಹೆಚ್ಚು ಡ್ರೈ ಆದೀತು ಎಂದು ಯೋಚಿಸಿದ್ದೀರಾ? ಏಕೆಂದರೆ ಇದರ ಬಿಸಿ ಗಾಳಿ, ನಮ್ಮ ಕೈಗಳ ಚರ್ಮದ ನ್ಯಾಚುರಲ್ ಮಾಯಿಶ್ಚರ್ ಖಾಲಿ ಮಾಡಿ, ಶುಷ್ಕಗೊಳಿಸುತ್ತದೆ. ಇದರ ಅತಿ ಹೆಚ್ಚಿನ ಬಳಕೆಯಿಂದಾಗಿ, ಚರ್ಮ ಪದರಗಳಾಗಿ ಎದ್ದು, ಉದುರಲೂಬಹುದು.
ಆದ್ದರಿಂದ ಇದರ ಸಹವಾಸ ಬಿಟ್ಟು, ನಿಮ್ಮ ಒದ್ದೆ ಕೈಗಳನ್ನು ಟವೆಲ್ ಅಥವಾ ಪೇಪರ್ ನ್ಯಾಪ್ ಕಿನ್ ನಿಂದ ಒರೆಸಿರಿ. ಇದರಿಂದ ಕೈ ಒಣಗುತ್ತದೆ, ಅದರ ಆರ್ದ್ರತೆಯೂ ಉಳಿಯುತ್ತದೆ.
ಕೈಕಾಲುಗಳಿಗೆ ಅಗತ್ಯವಾಗಿ ಪ್ರತಿದಿನ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ : ಮಳೆ, ಚಳಿಗಾಲದಲ್ಲಿ ಕೇವಲ ಒಂದು ಸಲ ಕೈಕಾಲಿಗೆ ಮಾಯಿಶ್ಚರೈಸರ್ ಹಚ್ಚಿಕೊಳ್ಳುವುದರಿಂದ ಸಾಕಾಗುವುದಿಲ್ಲ. ಇದರ ಬದಲಿಗೆ ನಿಮಗೆ ನಿಮ್ಮ ಸ್ಕಿನ್ ಡ್ರೈ ಎನಿಸಿದಾಗೆಲ್ಲ ಅಥವಾ ಕೈಕಾಲು ತೊಳೆದಾಗ, ಪ್ರತಿ ಸಾರಿಯೂ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ. ನಿಮಗೆ ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಸ್ಕಿನ್ ಕೈಕಾಲು ಹೈಡ್ರೇಟ್ ಗೊಳಿಸುವ ಮಾಯಿಶ್ಚರೈಸರ್ ಗಳು ಸಿಗಬಹುದು.