– ರಾಘವೇಂದ್ರ ಅಡಿಗ ಎಚ್ಚೆನ್.
ಲವ್ ಸ್ಟೋರಿಗಳು ಸದಾ ಕಾಡುವಂತೆ ಹಾರಾರ್ ಸ್ಟೋರಿಗಳನ್ನು ಇಷ್ಟಪಡುವವರ ಸಂಖ್ಯೆ ಸ್ವಲ್ಪ ಜಾಸ್ತಿಯೇ ಇದೆ. ಹಾರಾರ್ ಎಂದಾಕ್ಷಣಾ ಒಂದೇ ರೀತಿಯ ಹಾರಾರ್ ಸಿನಿಮಾ ಕೊಟ್ಟರೆ ಜನಕ್ಕೆ ಅಷ್ಟಾಗಿ ಇಷ್ಟ ಆಗೋದು ಕಷ್ಟ. ಆದರೆ ಅದರಲ್ಲಿಯೇ ಕಥೆಯನ್ನ ವಿಭಿನ್ನವಾಗಿ ಎಣೆಯಬೇಕು. ಆ ಕೆಲಸವನ್ನ ವೈಭವ್ ಎಸ್ ಸಂತೋಷ್ ಅವರು ಮಾಡಿದ್ದಾರೆ. ಅವರದ್ದೇ ನಿರ್ದೇಶನದ ಒಮೆನ್ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಹಾರಾರ್ ಅಂದ್ರು ಡೋಂಟ್ ಕೇರ್, ನನಗೆ ಧೈರ್ಯ ಜಾಸ್ತಿ ಅನ್ನೋರು ಕೂಡ ಈ ಟ್ರೇಲರ್ ನೋಡಿ. ಎದೆ ನಡುಗಲಿಲ್ಲ ಅಂದ್ರೆ ಕೇಳಿ.
ಒಮೆನ್ ಸಿನಿಮಾದ ಟ್ರೇಲರ್ ರಿಲೀಸ್ ಬಳಿಕ ಮಾತನಾಡಿದ ನಿರ್ದೇಶಕ ವೈಭವ್ ಸಂತೋಷ್, ಒಮೆನ್ ಅಂದ್ರೆ ಶಕುನಾ ಎಂದು ಅರ್ಥ ಬರುತ್ತೆ. ಭಯಾನಕವಾದ ಸಿನಿಮಾವನ್ನ ಇನ್ನು ಭಯಾನಕವಾಗಿ ಮಾಡಬೇಕೆಂಬ ಉದ್ದೇಶದಿಂದಾನೇ ಒಮೆನ್ ಮಾಡಿದ್ದು. ಫೌಂಡ್ ಫುಟೇಜ್ ಅಂದ್ರೆ ಸುಮಾರು ಜನ ಒಪ್ಪಲ್ಲ. ಹೀರೋನೆ ಕ್ಯಾಮೆರಾ ಇಟ್ಕೊಂಡು ಮಾಡೋ ರಿಸ್ಕ್ ಯಾಕೆ ಅಂತ ಸುಮ್ನಾಗ್ತಾರೆ. ಆದ್ರೆ ನಮ್ಮ ಹೀರೋ ಅಜಯ್ ಕುಮಾರ್ ತುಂಬಾ ಸಪೋರ್ಟ್ ಮಾಡಿದ್ರು. ಮ್ಯೂಸಿಕ್ ಕೂಡ ನಮ್ಮ ಸಿನಿಮಾದಲ್ಲಿ ಬಹಳ ಮುಖ್ಯ ಪಾತ್ರ ವಹಿಸಿದೆ. ನಮ್ಮ ಪ್ರೊಡ್ಯೂಸರ್ ಮಿರುನಳಿನಿ ಬೆಂಬಲ ಜಾಸ್ತಿ ಇದೆ ಎಂದಿದ್ದಾರೆ.
ನಟ ಅಜಯ್ ಕುಮಾರ್ ಮಾತನಾಡಿ, ಈ ಸಿನಿಮಾಗೆ ನಾಯಕ ಅಂತ ಹೇಳ್ಕೊಳೋಕೆ ತುಂಬಾ ಖುಷಿ ಪಡ್ತೀನಿ. ಆದ್ರೆ ನಿರ್ಮಾಪಕ ಅಂತ ಹೇಳಿಕೊಳ್ಳೋದಕ್ಕೆ ಭಯ. ಅದು ತುಂಬಾ ದೊಡ್ಡ ಪದ. ಇಂಡಸ್ಟ್ರಿಗೆ ನಮ್ಮ ಕಡೆಯಿಂದ ಏನಾದ್ರು ಕೊಡುಗೆ ಕೊಡಬೇಕು. ಇದು ಕಂಪ್ಲೀಟ್ ಹೊಸಬರ ಸಿನಿಮಾ ಅನ್ನೋದಕ್ಕಿಂತ ಈ ತಂಡದಲ್ಲಿರುವವರು ಸಿನಿಮಾದ ಹಿರಿಯರ ಜೊತೆಗೆ ಕೆಲಸ ಮಾಡಿ ಅನುಭವವಿದೆ ಎಂದಿದ್ದಾರೆ.
ಈ ಸಿನಿಮಾವನ್ನು ವಿತರಣೆ ಮಾಡ್ತಾ ಇರೋದು ವಿಜಯ್ ಸಿನಿಮಾಸ್. ಒಮೆನ್ ಬಗ್ಗೆ ಮಾತನಾಡಿದ ವಿಜಯ್ ಅವರು,ಒಮೆನ್ ಅತಿ ಶೀಘ್ರದಲ್ಲಿ ರಿಲೀಸ್ ಆಗ್ತಾ ಇದೆ. ಅಜಯ್ ಅವರು ನಮ್ಮ ಕ್ರ್ಯಾಕ್ ಸಿನಿಮಾದಲ್ಲಿ ವರ್ಕ್ ಮಾಡ್ತಾ ಇದ್ರು. ಅದನ್ನ ಬಿಟ್ರೆ ಆಮೇಲೆ ಕಾಂಟ್ಯಾಕ್ಟ್ ಇರಲಿಲ್ಲ. ಆದರೆ ಇತ್ತೀಚೆಗೆ ಬಂದು ನಮ್ಮದೊಂದು ಸಿನಿಮಾ ಬರ್ತಾ ಇದೆ. ಸಪೋರ್ಟ್ ಮಾಡಿ ಅಂದ್ರು ಅದಕ್ಕೆ ಜೊತೆಗೆ ನಿಂತಿದ್ದೀನಿ ಅಂದ್ರು.
ಶೀಘ್ರದಲ್ಲಿಯೇ ಒಮೆನ್ ಸಿನಿಮಾ ರಿಲೀಸ್ ಆಗ್ತಾ ಇದೆ. ವೈಭವ್ ಸಂತೋಷ್ ಸಿನಿಮಾಗೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಎಡಿಟಿಂಗ್ ಕೆಲಸವನ್ನು ಮಾಡಿದ್ದಾರೆ. ಇನ್ನು ಅಜಯ್ ಕುಮಾರ್ ನಟನೆ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ನಿಶ್ಮಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಭುವನ್ ಶಂಕರ್, ಸಂಸ್ಕಾರ್ ಮ್ಯೂಸಿಕ್ ನೀಡಿದ್ದಾರೆ.