ಶರತ್ ಚಂದ್ರ

ಬಾಲಿವುಡ್ ನಲ್ಲಿ ಮಾತ್ರವಲ್ಲದೆ ಸೌತ್ ಇಂಡಿಯಾದಲ್ಲಿ ಕೂಡ ಇತ್ತೀಚಿನ ದಿನಗಳಲ್ಲಿ ಅದ್ದೂರಿ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಆ ಚಿತ್ರಗಳು ತಯಾರಾಗಲು ಮೂರರಿಂದ ನಾಲ್ಕು ವರ್ಷ ಹಿಡಿಯುತ್ತಿವೆ . ದಕ್ಷಿಣ ದಲ್ಲಿ    ಕೂಡ ಪ್ಯಾನ್ ಇಂಡಿಯಾ ಹೆಸರಿನಲ್ಲಿ ಒಂದಷ್ಟು ಬಿಗ್ ಬಜೆಟ್ ಫಿಲಂಗಳು ನಿರ್ಮಾಣವಾಗಿ ಜನರಿಗೆ ರುಚಿಸದೆ ಬಾಕ್ಸ್ ಆಫೀಸ್ ನಲ್ಲಿ ನೆಲಕಚ್ಚಿವೆ.

1000613658

ಬಾಲಿವುಡ್ ನಲ್ಲಿ ಕೂಡ ಪರಿಸ್ಥಿತಿ  ಇದಕ್ಕೆ ಹೊರತಾಗಿಲ್ಲ. ಒಂದು ಕಾಲದಲ್ಲಿ ಹಿಂದಿ ಸಿನಿಮಗಳಿಗೆ ವಿಪರೀತ ಕ್ರೇಜ್ ಇರುತ್ತಿತ್ತು. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಸೌತ್ ಸಿನಿಮಗಳ ಮುಂದೆ ಬಾಲಿವುಡ್ ಸಿನಿಮಾ ಗಳು ಮಂಕಾಗಿತ್ತು. ಆಗೊಂದು ಇತ್ತೀಚಿನ ವರ್ಷ ಗಳಲ್ಲಿ   ಆಗೊಂದು  ಈಗೊಂದು ಹಿಟ್ ಚಿತ್ರಗಳನ್ನು ನೀಡುತ್ತಿದ್ದ ಹಿಂದಿ ಚಿತ್ರರಂಗ ಸ್ವಲ್ಪ ಚೇತರಿಸಿಕೊಂಡಿದೆ.

1000613670

ಸತತ ಸೋಲಿನಿಂದ ಕಂಗಾಲಾಗಿದ್ದ ಅಮೀರ್ ಖಾನ್ ನಟಿಸಿ ನಿರ್ಮಿಸಿದ್ದ ಕಡಿಮೆ ಬಂಡವಾಳದ ‘ ಸಿತಾರೇ ಜಮೀನ್ ಪರ್’ ಎಂಬ ಚಿತ್ರ ಇತ್ತೀಚೆಗೆ ಡೀಸೆಂಟ್ ಬುಸಿನೆಸ್ ಮಾಡಿತ್ತು.

1000613676

ಅಲ್ಲಿಗೆ ಪ್ರೇಕ್ಷಕರನ್ನು ಚಿತ್ರ ಮಂದಿರಕ್ಕೆ ಸೆಳೆಯಲು ಬಿಗ್ ಬಜೆಟ್ ಇರೋ ಸಿನಿಮಾ ಅಗತ್ಯವಿಲ್ಲ, ಒಂದು ಒಳ್ಳೆ ಕಂಟೆಂಟ್ ಇದ್ದು ನೀಟಾಗಿ ಮಾಡಿದ ಸಿನಿಮ ಕೂಡ ಉತ್ತಮ ಕಮಾಯಿ ಮಾಡಬಹುದೆಂದು ಇತ್ತೀಚಿಗೆ ಬಿಡುಗಡೆಯಾದ ‘ಸಯ್ಯಾರ ‘ಚಿತ್ರ ಸಾ ಬೀತು ಪಡಿಸಿದೆ.

ಹಲವು ವರ್ಷಗಳಿಂದ ಎಲ್ಲಾ ತರದ ಸಿನಿಮಾಗಳನ್ನು ಮಾಡಿ, ಬಾಲಿವುಡ್ ನ ಪ್ರತಿಷ್ಠಿತ  ಬ್ಯಾನರ್ ಎನಿಸಿಕೊಂಡಿರುವ  ಯಶ್ ರಾಜ್ ಲಾಂಛನದಲ್ಲಿ ನಿರ್ಮಾಣವಾದ ಸಯ್ಯರಾ ಸುಮಾರು 40 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು,ಒಂದೇ ವಾರದಲ್ಲಿ 150 ಕೋಟಿ ಗಳಿಕೆ ಕಂಡಿದೆ.

1000613689

ಜೆಹಾರ್, ವೋಲಮ್ಹೇ ಕಲಿಯುಗ್, ಆಶಿಕಿ 2, ಏಕ್ ವಿಲ್ಲನ್ ಮುಂತಾದ ಕಡಿಮೆ ಬಜೆಟ್ ನ ಪ್ರೇಮಕಥನಗಳನ್ನು ನಿರ್ದೇಶಿಸಿ ಹಿಟ್ ಚಿತ್ರಗಳನ್ನು ನೀಡಿದಂತಹ ಮೋಹಿತ್ ಸೂರಿ ಸಯ್ಯಾರ ಚಿತ್ರವನ್ನು ನಿರ್ದೇಶಿಸಿದ್ದಾರೆ.

1000613693

A moment to remember ಎಂಬ ಕೊರಿಯನ್ ಚಿತ್ರವನ್ನು ಅಧರಿಸಿ ಈ ಚಿತ್ರಕ್ಕೆ ಕಥೆ ಹೆಣೆಯಲಾಗಿದೆ.ಸಂಗೀತಗಾರ ಮತ್ತು ಗೀತೆ ರಚನೆ ಗಾರ್ತಿ ಯ ನಡುವಿನ ಪ್ರೇಮ ಕಥೆ ಜನರಿಗೆ ಇಷ್ಟ ವಾಗಿದೆ.

ಮೋಹಿತ್ ಸೂರಿ ಎಂದರೆ  ಸುಮಧುರ ಹಾಡುಗಳು ಚಿತ್ರದಲ್ಲಿರುತ್ತವೆ. ಹಾಡುಗಳು ಈ ಚಿತ್ರದ ಯಶಸ್ಸಿಗೆ ಕಾರಣವಾಗಿದೆ.

ಚಿತ್ರದ ನಾಯಕ  ಅಹಾನ್ ಪಾಂಡೆ ಮತ್ತು ನಾಯಕಿ ಅನೀತ್ ಪಡ್ಡ ಅವರ ಅಭಿನಯ ಮತ್ತು ಕೆಮಿಸ್ಟ್ರಿ ಚೆನ್ನಾಗಿ ವರ್ಕ್ ಔಟ್ ಆಗಿದೆ. ಈ ಹಿಂದೆ ಬಿಡುಗಡೆಯಾಗಿ ದಾಖಲೆ ಮಾಡಿರುವ ಸ್ಮಾಲ್ ಬಜೆಟಿನ ಚಿತ್ರಗಳ ಸಾಲಿಗೆ ಸಯ್ಯಾರ ಕೂಡ ಸೇರಲಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ