– ರಾಘವೇಂದ್ರ ಅಡಿಗ ಎಚ್ಚೆನ್.
ನಾಡಹಬ್ಬ ‘ಮೈಸೂರು ದಸರಾ’ವನ್ನು ಅದ್ಧೂರಿಯಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. 11 ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿವೆ. ಮಹೋತ್ಸವದ ಅಂಗವಾಗಿ ‘ದಸರಾ ಚಲನಚಿತ್ರೋತ್ಸವ’ ಉಪಸಮಿತಿ ವತಿಯಿಂದ ಕಿರುಚಿತ್ರ ಸ್ಪರ್ಧೆ ನಡೆಯಲಿದೆ. ಕಿರುಚಿತ್ರಗಳ ನಿರ್ಮಾಣವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕಿರುಚಿತ್ರ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
10 ನಿಮಿಷಗಳ ಅವಧಿಗೆ ಸೀಮಿತವಾಗಿ ನಿರ್ಮಿಸಿರುವ ಕಿರುಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುತ್ತದೆ. ಅತ್ಯುತ್ತಮ 3 ಕಿರುಚಿತ್ರಗಳಿಗೆ ಪ್ರಮಾಣ ಪತ್ರ ಹಾಗೂ ಪ್ರಶಸ್ತಿ ಜೊತೆಗೆ ನಗದು ಬಹುಮಾನ ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಆಗಸ್ಟ್ 26ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗೆ 7411564510 ಮೊಬೈಲ್ ನಂಬರ್ಗೆ ಸಂಪರ್ಕಿಸಲು ಕೋರಲಾಗಿದೆ. ಹಾಗು ಇನ್‌ಸ್ಟಾಗ್ರಾಮ್, ವಾಟ್ಸ್‌ಆ್ಯಪ್ ಪೇಜ್ ಫಾಲೋ ಮಾಡುವಂತೆ ತಿಳಿಸಲಾಗಿದೆ.
ನಿಯಮ ಹಾಗೂ ಷರತ್ತುಗಳು:
• ಕಿರುಚಿತ್ರದ ಅವಧಿ 10 ನಿಮಿಷ ಮೀರಬಾರದು. ಶೀರ್ಷಿಕೆ ಒಳಗೊಂಡಂತೆ ಕಿರುಚಿತ್ರ ಯಾವುದೇ ಆನ್‌ಲೈನ್ ಮೀಡಿಯಾದಲ್ಲಿ ಬಿಡುಗಡೆಯಾಗಿರಬಾರದು. (ಉದಾ:ಯೂಟ್ಯೂಬ್, ಫೇಸ್ಬುಕ್, ಇನ್‌ಸ್ಟಾಗ್ರಾಮ್ ಖಾತೆ ಇತರೆ)
• ಕಿರುಚಿತ್ರವು 01-11-2024ರಿಂದ 25-08-2025ರ ಅವಧಿಯೊಳಗೆ ನಿರ್ಮಾಣವಾಗಿರಬೇಕು.
• ಕಿರುಚಿತ್ರವನ್ನು (MP4 ಫಾರ್ಮ್ಯಾಟ್) ಗೂಗಲ್ ಡ್ರೈವ್‌ನಲ್ಲಿ ಅಪ್ಲೋಡ್ ಮಾಡಿ, ಆ ಲಿಂಕ್ ಅನ್ನು ಅರ್ಜಿಯಲ್ಲಿ ನಮೂದಿಸಬೇಕು.
• ತೀರ್ಪುಗಾರರ ತೀರ್ಮಾನವೇ ಅಂತಿಮ.
• ಯಾವುದೇ ಭಾಷೆಯ ಕಿರುಚಿತ್ರವನ್ನು ಸ್ಪರ್ಧೆಗೆ ಸಲ್ಲಿಸಬಹುದು.
• ಸ್ಪರ್ಧೆಗೆ ಭಾಗವಹಿಸುವ ಎಲ್ಲಾ ಕಿರುಚಿತ್ರಗಳಿಗೆ ಪ್ರಮಾಣಪತ್ರ ನೀಡಲಾಗುತ್ತದೆ.
• ಆಯ್ಕೆಯಾಗುವ ವಿಜೇತ ಹಾಗೂ ಅತ್ಯುತ್ತಮ ಕಿರುಚಿತ್ರಗಳನ್ನು ಐನಾಕ್ಸ್ ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡಲಾಗುವುದು.
• ಆಯ್ಕೆಯಾಗುವ ಕಿರುಚಿತ್ರವನ್ನು ಮಾತ್ರ ಡಿ.ಸಿ.ಪಿ ಫಾರ್ಮ್ಯಾಟ್ನಲ್ಲಿ ನೀಡಬೇಕಾಗುತ್ತದೆ.
• ಕಿರುಚಿತ್ರಕ್ಕೆ ಉಪ ಶೀರ್ಷಿಕೆ (ಸಬ್ ಟೈಟಲ್) ಕಡ್ಡಾಯ.
• ಕಿರುಚಿತ್ರಕ್ಕೆ ಅತ್ಯುತ್ತಮ ಚಿತ್ರ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಹಾಗೂ ಅತ್ಯುತ್ತಮ ಸಂಕಲನ ಮತ್ತು ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಮತ್ತು ನಗದು ಬಹುಮಾನ ನೀಡಲಾಗುತ್ತದೆ.
ಈ ಮೇಲಿನ ಷರತ್ತುಗಳಂತೆ ಸಲ್ಲಿಕೆಯಾಗದಿರುವ ಕಿರುಚಿತ್ರಗಳನ್ನು ತಿರಸ್ಕರಿಸುವ ಅಧಿಕಾರ ಸಮಿತಿಗೆ ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸೆ.22ರಿಂದ ದಸರಾ ಆರಂಭವಾಗಲಿದೆ.