ಸ್ಯಾಂಡಲ್ವುಡ್ ಯುವ ನಟ ಸಂತೋಷ್ ಬಾಲರಾಜ್ ನಿಧನರಾಗಿದ್ದಾರೆ. ಹಿರಿಯ ನಿರ್ಮಾಪಕ ಆನೇಕಲ್ ಬಾಲರಾಜ್ ಪುತ್ರ ಸಂತೋಷ ಬಾಲರಾಜ್ ಇಂದು ಬೆಳಗ್ಗೆ 9.45ರ ಸುಮಾರಿಗೆ ನಿಧನ ಹೊಂದಿದ್ದಾರೆ.
ನಟ ಸಂತೋಷ್ ಬಾಲರಾಜ್ ಜಾಂಡೀಸ್ನಿಂದ ಬಳಲುತ್ತಿದ್ದರು. 34 ವರ್ಷ ವಯಸ್ಸಿನ ನಟ ಸಂತೋಷ್ ಬಾಲರಾಜ್ ಅವರನ್ನು ಕುಮಾರಸ್ವಾಮಿ ಲೇಔಟ್ನ ಸಾಗರ್ ಅಫೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ, ಸಂತೋಷ್ ಬಾಲರಾಜ್ ನಿಧನರಾಗಿದ್ದಾರೆ.ಸಂತೋಷ್ ಬಾಲ್ರಾಜ್ ಅವರು ತನ್ನ ತಾಯಿಯ ಜೊತೆ ವಾಸವಾಗಿದ್ದರು. ಸಂತೋಷ್ ಬಾಲರಾಜ್ ತಂದೆ ಅನೇಕಲ್ ಬಾಲರಾಜ್ ದರ್ಶನ್ ನಟನೆಗೆ ಕರಿಯ ಸಿನಿಮಾ ಮಾಡಿದ್ದರು. ಕರಿಯ-2 ಕೆಂಪ, ಗಣಪ, ಬರ್ಕ್ಲಿ, ಸತ್ಯ ಸಿನಿಮಾಗಳಲ್ಲಿ ಸಂತೋಷ್ ನಾಯಕ ನಟನಾಗಿ ಅಭಿನಯಿಸಿದ್ದರು.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ