ಹೆವಿ ಪಶ್ಮೀನಾ ಕಸೂತಿ ವರ್ಕ್‌ ವುಳ್ಳ ಈ ಲೆಹಂಗಾ ಹಾಗೂ ಭಾರತೀಯ ಸಾಂಪ್ರದಾಯಿಕ ತೊನೆದಾಡುವ ಬ್ಲೌಸ್‌, ಇವಳ ರೂಪ ಬೆಳಗಿಸಿ, ಆಧುನಿಕ ಗೆಟಪ್‌ ಎದ್ದು ಕಾಣುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ!

ರಾಜಸ್ಥಾನೀ ಶೈಲಿಯ ಈ ಬ್ಯೂಟಿಫುಲ್ ಲೆಹಂಗಾ ನಾಲ್ವರಲ್ಲಿ ಎದ್ದು ಕಾಣುವಂತಿದೆ. ಇದರ ಮೇಲೆ ಹೆವಿ ಸ್ಟೋನಿನ ಅತ್ಯಾಕರ್ಷಕ ಹ್ಯಾಂಡ್‌ ವರ್ಕ್‌ ಮಾಡಲಾಗಿದೆ. ಮಲ್ಟಿ ಕಲರ್‌ ವರ್ಕಿನ ಈ ಲೆಹಂಗಾ ಜೊತೆ ನೀವು ನೀಟಾಗಿ ಜಡೆ ಹೆಣೆದುಕೊಂಡರೂ ಸಾಕು. ಮ್ಯಾಚಿಂಗ್‌ ಜುಮುಕಿ ಹಾಗೂ ಬೇರೆ ಬೇರೆ ಆ್ಯಕ್ಸಸರೀಸ್‌ ಧರಿಸಿ ಲುಕ್‌ ಕಂಪ್ಲೀಟ್‌ ಮಾಡಿ. ಇದರ ಜೊತೆಗಿನ ಮೇಕಪ್‌ ತುಸು ಬ್ರೈಟ್‌ ಆಗಿರಲಿ. ಇದನ್ನು ಧರಿಸಿ ನೀವು ಯಾವುದೇ ಸಾಂಪ್ರದಾಯಿಕ ಶುಭ ಸಮಾರಂಭಗಳಿಗೂ ಹೋಗಬಹುದು.

Fashion-2

ಮಸ್ಟರ್ಡ್‌ ಕಲರ್‌ ಸ್ಟೋನಿನಿಂದ ಅಲಂಕರಿಸಲ್ಪಟ್ಟ ಡಾರ್ಕ್‌ ಗ್ರೀನ್‌ ಬಣ್ಣದ ಈ ಬ್ಯೂಟಿಪುಲ್ ಲೆಹಂಗಾ, ನಿಮ್ಮ ಆಕರ್ಷಣೆಯನ್ನು ದ್ವಿಗುಣಗೊಳಿಸಬಲ್ಲದು. ಇದರ ಜೊತೆ ಹೆವಿ ಲಟ್ಕನ್‌ ದುಪಟ್ಟಾ, ಈ ಲೆಹಂಗಾಗೆ ಗಾರ್ಜಿಯಸ್‌ ಲುಕ್‌ ನೀಡುತ್ತಿದೆ! ಇದರ ಜೊತೆ ಇವಳ ಓಪನ್‌ ಹೇರ್‌ ಸ್ಟೈಲ್‌, ಮ್ಯಾಚಿಂಗ್‌ ಆ್ಯಕ್ಸೆಸರೀಸ್‌, ಲೈಟ್‌ ಮೇಕಪ್‌ ಇವಳನ್ನು ವನದೇವತೆಯಾಗಿ ಶೋಭಿಸುವಂತೆ ಮಾಡಿದೆ!

ಆ್ಯಪ್ಲಿಕ್‌ ವರ್ಕ್‌ ಆನ್‌ ವೆಲ್ವೆಟ್‌ಡಾರ್ಕ್‌ ವೆಲ್ವೆಟ್‌ ವಿತ್‌ ಬಾಂಧನಿ ಹ್ಯಾಂಡ್‌ ವರ್ಕ್‌ ಇರುವಂಥ ಈ ಲೆಹಂಗಾ ಚೋಲಿ, ಯಾವುದೇ ಸ್ಪೆಷಲ್ ಫಂಕ್ಷನ್‌ ಗೂ ಒಪ್ಪುತ್ತದೆ. ಇದರ ಜೊತೆ ಇವಳ ಓಪನ್‌ ಹೇರ್‌ ಸ್ಟೈಲ್‌, ಹೆವಿ ಜ್ಯೂವೆಲರಿ ಈ ಡ್ರೆಸ್‌ ಗೆ ಅಚ್ಚುಕಟ್ಟಾಗಿ ಹೊಂದುತ್ತಿದೆ.

Fashion-3

ಮೋತಿ ಥ್ರೆಡ್‌ ವರ್ಕ್‌ ನಿಂದ ಸುಸಜ್ಜಿತಗೊಂಡ, ಪೀಕಾಕ್‌ ಬ್ಲೂ ಬಣ್ಣದ ಈ ಲೆಹಂಗಾ, ಇವಳಿಗೆ ಬಲು ಸ್ಟೈಲಿಶ್‌ ಹಾಗೂ ಅತ್ಯಾಕರ್ಷಕ ಲುಕ್ಸ್ ಗಳಿಸಿಕೊಟ್ಟಿದೆ. ಇಂಥದ್ದನ್ನು ಧರಿಸಿದರೆ ನೀವು ಸಹ ರಾಜಕುಮಾರಿಯಂತೆ ಮಿಂಚಬಹುದು!

ಬ್ಲೂ ಬೇಸ್‌ ಹಾಗೂ ಕಲರ್‌ ಫುಲ್ ವರ್ಕ್‌ ವುಳ್ಳ ಈ ಲೆಹಂಗಾ ತನ್ನ ಮಿರರ್‌ ವರ್ಕ್‌ ನಿಂದ ಮಿರಿ ಮಿರಿ ಮಿಂಚುತ್ತಿದೆ! ಇದರ ಜೊತೆ ಬ್ಯೂಟಿಫುಲ್ ದುಪಟ್ಟಾ ಹಾಗೂ ಸ್ಟೈಲಿಶ್‌ ಹಾವಭಾವ ಎಂಥವರನ್ನೂ ಬೆರಗಾಗಿಸುತ್ತದೆ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ