ಜಾಗೀರ್ದಾರ್*

ಮಯೂರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಮಂಜುನಾಥ್ ದಾಸೇಗೌಡ ಹಾಗೂ ಗಿರೀಶ್ ಕುಮಾರ್ ನಿರ್ಮಿಸಿದ್ದ ಹಾಗೂ ದೀಪಕ್ ಮಧುವನಹಳ್ಳಿ ನಿರ್ದೇಶನದ “ಅನ್ ಲಾಕ್ ರಾಘವ” ಚಿತ್ರದ ಮೂಲಕ ಮಿಲಿಂದ್ ನವ ನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ಈ ಚಿತ್ರದಲ್ಲಿ ನಟನೆ ಹಾಗೂ ನೃತ್ಯದ ಮೂಲಕ ಮಿಲಿಂದ್ ನಾಡಿನ ಜನರ ಮನ ಗೆದ್ದರು. “ಅನ್ ಲಾಕ್ ರಾಘವ” ಚಿತ್ರ ನೋಡಿದ ಅಭಿಮಾನಿಗಳು ಕನ್ನಡಕ್ಕೆ ಮತ್ತೊಬ್ಬ ಸುರದ್ರೂಪಿ ನಟ ಸಿಕ್ಕ ಎಂಬ ಮೆಚ್ಚುಗೆಯ ಮಾತುಗಳನ್ನೂ ಆಡಿದರು.

milind 1

ವರಮಹಾಲಕ್ಷ್ಮೀ ಹಬ್ಬದ ಶುಭ ಸಂದರ್ಭದಲ್ಲಿ ಮಿಲಿಂದ್,‌ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

“ಅನ್ ಲಾಕ್ ರಾಘವ” ಚಿತ್ರದ ನಂತರ ಸಾಕಷ್ಟು ಚಿತ್ರಗಳ ಕಥೆ ಕೇಳಿದೆ. ಅದರಲ್ಲಿ ನಾಲ್ಕು ಕಥೆಗಳು ಬಹಳ ಇಷ್ಟವಾಗಿದೆ. ಈ ನಾಲ್ಕು ಚಿತ್ರಗಳು ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರಗಳಾಗಿರುತ್ತದೆ‌. ನಾಲ್ಕು ಬೇರೆ ಬೇರೆ ನಿರ್ಮಾಣ ಸಂಸ್ಥೆಗಳು ನಿರ್ಮಿಸುತ್ತಿರುವ ಈ ಚಿತ್ರಗಳನ್ನು ನಾಲ್ಕು ಜನ ನಿರ್ದೇಶಕರು ನಿರ್ದೇಶಿಸಲಿದ್ದಾರೆ. ಈ ಚಿತ್ರಗಳ ಕುರಿತು ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುತ್ತೇನೆ. ನನಗೆ ಮೊದಲಿನಿಂದಲೂ ತಾವು ನೀಡುತ್ತಿರುವ ಪ್ರೀತಿ ಹಾಗೂ ಸಹಕಾರ ಮುಂದೆಯೂ ಹೀಗೆ ಮುಂದುವರೆಯಲಿ ಎಂದು ಮಿಲಿಂದ್ ತಿಳಿಸಿದ್ದಾರೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ