ಸರಸ್ವತಿ*

ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿಯ"ಕೊರಗಜ್ಜ" ಚಿತ್ರದ ಜೀ಼ ಮ್ಯೂಸಿಕ್ ಬಿಡುಗಡೆ ಗೊಳಿಸಿದ್ದ

ಗುಳಿಗಾ...ಗುಳಿಗಾ...ಹಾಡು ದೇಶಾದ್ಯಂತ ಎಬ್ಬಿಸಿದ ಧೂಳು ಇನ್ನೂ ಹಾರಾಡುತ್ತಿರುವಂತೆಯೇ, ಈಗ ಶ್ರೇಯಾ ಘೋಷಾಲ್ ಜೊತೆ ಅರ್ಮಾನ್ ಮಲಿಕ್ ಹಾಡಿರುವ ಅತ್ಯಂತ ಸುಮಧುರ ಮತ್ತು "ರಿಚ್ ಪೊಯೆಟಿಕ್" ಸಾಲುಗಳುಳ್ಳ , ನಿರ್ದೇಶಕ ಸುಧೀರ್ ಅತ್ತಾವರ್ ಬರೆದಿರುವ ಹಾಡು ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ..!

koragajjas 1

ಈ ನಡುವೆ ವಿಶೇಷ ವಿದ್ಯಮಾನವೆಂಬಂತೆ,ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಕವಿ ಸುಧೀರ್ ಅತ್ತಾವರ್ ಬರೆದ ಈ

ಹಾಡಿನ ಕಾವ್ಯಮಯ ಸಾಹಿತ್ಯವನ್ನು ಚಿತ್ರತಂಡವು ಮೊದಲು ಬಿಡುಗಡೆಗೊಳಿಸಿದೆ.

 

ಇಲ್ಲಿದೆ ಈ ಅಪರೂಪದ ಸಾಹಿತ್ಯ...

 

*(ಶ್ರೇಯ ಘೋಷಲ್)*

ಗಾಳಿ ಗಂಧ.....ತೀಡಿ ತಂದಾ.....

ಶಬ್ದವಿರದ ಮಾತೂ.... !

*(ಅರ್ಮಾನ್ ಮಲಿಕ್)*:

ಕೇಳಿದಂತಾ....

ಜೋಡಿಯಿಂದಾ.....

ಮುಗ್ಧ ವಿರಹ ಹಾಡೂ....!!

 

ಗಾಳಿ ಗಂಧ.....ತೀಡಿ ತಂದಾ.....

ಶಬ್ದವಿರದ ಮಾತೂ.... !

*( ಶ್ರೇಯ ಘೋಷಲ್ )*

ಮೂಗುದಾಣ ಹಾಕಲೇನು ಪ್ರೀತಿ.....

ಸಾಕು ಗಿಣಿಯೇ..?

ಮೂರು ದಾರ ಕಟ್ಟಿ ನಾನು ಬಂಧಿ....

ಸಾಕು ಪ್ರಿಯನೇ.....!

 

*(ಅರ್ಮಾನ್ ಮಲಿಕ್)*:

ಕಾಡಿಬಂದ ನಿನ್ನ ನೆನಪು....

ಕಾಡಿನಲ್ಲೆ ಸೆಳೆಯಿತೂ.....!

*( ಶ್ರೇಯ ಘೋಷಲ್)*

ಹೇಳದಂತ ನನ್ನ ಮಾತು....

ಮಾಧುರ್ಯ ತುಂಬಿದಿಂಚರಾ.....!!

ದಾಟಿ ಬಂದ‌ ಮೌನ ಕಲಹ....

ಧಾಟಿ ಯಾಯ್ತು ಕಾವ್ಯಕೇ.....!

 

*(ಅರ್ಮಾನ್ ಮಲಿಕ್)*:

ತಾಳದಂತ ನನ್ನ ಪುಳಕ....

ಮಾರ್ಧನಿಸಿ ನಿಶಾಚರಾ....!!

*( ಶ್ರೇಯ ಘೋಷಲ್ )*

IIಮೂಗು ದಾಣII

 

*(ಅರ್ಮಾನ್ ಮಲಿಕ್)*:

ಮೌನ ಬೇಲಿ ಹಾರಿಬಂದಾ ಮೋಹದಲ್ಲಿ ಸದ್ದೇ...!?

 

*( ಶ್ರೇಯ ಘೋಷಲ್)*

ಮೌನ ಬೇಲಿ ಹಾರಿಬಂದಾ ಮೋಹದಲ್ಲಿ ಸದ್ದೇ...!?

 

*(ಕೋರಸ್)*

ತಾರೆ ತಂತೀಗ ತಂತೀ...

ತಾಳ ಮೇಳಾ...ತಂಪೂ ನಾದಾ...

ಬಾರೆ ಬಂತೀಗ ಬಂತೀ...

ಢಾಳ ಡೋಲೀ...

ಡೌಲು ಡೋಲೂ....

ಸೇರೆ ಸೇವಂತಿ ಸೋನೇ...ಮಳೆಯಲ್ಲೀ...

 

*( ಶ್ರೇಯ ಘೋಷಲ್ )*

IIಮೂಗು ದಾಣII

 

*(ಅರ್ಮಾನ್ ಮಲಿಕ್)*:

ಲಜ್ಜೆ ಸದ್ದು ಕಾನನಕ್ಕೂ....

ಮತ್ತು ತಂತು ತುಸುನಕ್ಕೂ......!

ಕತ್ತಲನ್ನು ಹೊದ್ದು ಮಲಗಿ....

ಕಾಡು ಕೂಡ ಕನಲಿತೂ.....!!

 

*( ಶ್ರೇಯ ಘೋಷಲ್ )*

ಹೆಜ್ಜೆ ಕದ್ದ ಕಾಜಣವೂ...

ಗೆಜ್ಜೆ ಕಟ್ಟಿತು ಹಾಡುತಾ...!

ಮುಗ್ಧ ಪ್ರೀತಿ ಕಂಡು ಹೇಳಿತು..

ಕೆಂಪಾಗದಿರು ಕಾದಂಬಿನಿಯೇ....!!

 

*(ಶ್ರೇಯ ಘೋಷಲ್)*

IIಮೂಗು ದಾಣII

 

*(ಅರ್ಮಾನ್ ಮಲಿಕ್)*

ಜೌಗು ಮನದ ಜಾರೋ ಕನಸು....

ಮೈಯ ಬಿಸಿಗೆ.....ಒದ್ದೇ.....!

 

*( ಶ್ರೇಯ ಘೋಷಲ್)*

ಜೌಗು ಮನದ ಜಾರೋ ಕನಸು....

ಮೈಯ ಬಿಸಿಗೆ.....ಒದ್ದೇ.....!

 

*(ಕೋರಸ್)*

IIತಾರೆ ತಂತೀಗ ತಂತೀ...II

 

ಈ ಅತ್ಯಾಕರ್ಷಕ ನವ್ಯ ಸಾಹಿತ್ಯದ ಸಾಲುಗಳಿಗೆ ದಕ್ಷಿಣಭಾರತದ ಖ್ಯಾತ ಸಂಗೀತ ನಿರ್ದೇಶಕ ಗೋಪಿಸುಂದರ್ ರಾಗ ಕಂಪೋಸ್ ಮಾಡಿದ್ದಾರೆ..!

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ