– ರಾಘವೇಂದ್ರ ಅಡಿಗ ಎಚ್ಚೆನ್.
ಟಾಕ್ಸಿಕ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ಗಡಿಯಾಚೆಗಿನ ಪ್ರದೇಶಗಳಲ್ಲೂ ಹಾರಿಸಬೇಕೆಂದು ಪಣ ತೊಟ್ಟಿರುವ ರಾಕಿಂಗ್ ಸ್ಟಾರ್ ಯಶ್ ಅವರ ನ್ಯೂ ಲುಕ್ ಪೋಸ್ಟರ್ ಅನಾವರಣಗೊಂಡಿದೆ. ಈ ಪೋಸ್ಟರ್ ನೋಡಿದ ಅಭಿಮಾನಿಗಳ ಕುತೂಹಲ ಕೆರಳಿದೆ. ಸಿನಿಮಾ ಅದ್ಯಾವ ಮಟ್ಟದಲ್ಲಿ ಮೂಡಿ ಬರಬಹುದು ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ.
ಹೌದು, ಈಗಾಗಲೇ ವಿಳಂಬ ಎದುರಿಸಿರುವ ‘ಟಾಕ್ಸಿಕ್: ದಿ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಬಿಡುಗಡೆಗೆ ಇನ್ನು ಸರಿಯಾಗಿ 100 ದಿನಗಳು ಬಾಕಿ ಇವೆ. 3 ತಿಂಗಳ ನಂತರ ತೆರೆಗಪ್ಪಳಿಸಿರುವ ಚಿತ್ರದ ಹೊಸ ಪೋಸ್ಟರ್ ಇಂದು
ಯಶ್ ಅವರ ಬ್ಯಾಕ್ ಲುಕ್ ಪೋಸ್ಟರ್ ಹಂಚಿಕೊಂಡ ತಂಡ, ‘ದಿ ಪೇರಿಟೇಲ್ ಅನ್ಫೋಲ್ಡ್ಸ್ ಇನ್ 100 ಡೇಸ್, ಟಾಕ್ಸಿಕ್’ ಎಂಬ ಕ್ಯಾಪ್ಷನ್ ಕೊಡಲಾಗಿದೆ. ಗೀತು ಮೋಹನ್ದಾಸ್ ನಿರ್ದೇಶನದ ಈ ಬಹುನಿರೀಕ್ಷಿತ ಚಿತ್ರ 2026ರ ಮಾರ್ಚ್ 19ಕ್ಕೆ ಅದ್ಧೂರಿಯಾಗಿ ವಿಶ್ವಾದ್ಯಂತ ತೆರೆಕಾಣಲಿದೆ.
ಪೋಸ್ಟರ್‌ನಲ್ಲಿ ಯಶ್ ಬೆನ್ನು ತೋರಿಸಲಾಗಿದ್ದು, ಅವರ ಒಂದು ತೋಳಿನಿಂದ ಇನ್ನೊಂದು ತೋಳಿನವರೆಗೆ ಟ್ಯಾಟೂ (ಹಚ್ಚೆ) ಹಾಕಿಸಿಕೊಂಡಿರೋದನ್ನು ಕಾಣಬಹುದು. ಡ್ರಾಮ್ಯಾಟಿಕ್ ಪೋಸ್ಟರ್ ಸಿನಿಮಾ ಸುತ್ತಲಿನ ಕುತೂಹಲ ಹೆಚ್ಚಿಸಿದೆ.
ಹೊಸ ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ 2026ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಟಾಕ್ಸಿಕ್ಗೆ ಫೈನಲಿ ಕೌಂಟ್ಡೌನ್ ಆರಂಭವಾಗಿದೆ. ಅಭಿಮಾನಿಗಳ ಉತ್ಸಾಹ ಹೆಚ್ಚಿಸಲು ಈ ಒಂದು ಪೋಸ್ಟರ್ ಸಾಕಾಗಿತ್ತು. ನಿರೀಕ್ಷೆಯಂತೆ ಅಭಿಮಾನಿಗಳು, ಸಿನಿಪ್ರಿಯರು ಕಾಮೆಂಟ್ ಸೆಕ್ಷನ್ನಲ್ಲಿ ಫೈಯರ್, ಹಾರ್ಟ್ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸುತ್ತಿದ್ದಾರೆ.





