ಮುಂಬೈನ ಐಕಾನಿಕ್ ರಾಯಲ್ ಒಪೆರಾ ಹೌಸ್‌ನಲ್ಲಿ ಡಿಸೆಂಬರ್ 13ರಿಂದ 24ರವರೆಗೆ ಮೊದಲ ಬಾರಿಗೆ ಭಾರತದಲ್ಲಿ ನಡೆಯಲಿರುವ ಗ್ಲೋಬಲ್ ಚೆಸ್ ಲೀಗ್ ಗಾಗಿಅಲ್ಪೈನ್ SG ಪೈಪರ್ಸ್ ತಂಡ ಉದಯೋನ್ಮುಖ ಪ್ರತಿಭೆಗಳ ಮೂಲಕ ಸೀಸನ್ 3ಕ್ಕೆ ಕಾಲಿಡುತ್ತಿದೆ. ಇದರಲ್ಲಿ ಅಂತರರಾಷ್ಟ್ರೀಯ ಆಟಗಾರರಾದ 31 ವರ್ಷದ ಡಚ್ ಗ್ರಾಂಡ್‌ಮಾಸ್ಟರ್ ಅನೀಶ್ ಗಿರಿ ಪಾಲ್ಗೊಳ್ಳುತ್ತಿದ್ದಾರೆ.

ಭಾರತಕ್ಕೆ ಮರಳುತ್ತಿರುವ ಬಗ್ಗೆ ಮಾತನಾಡಿದ ಅನೀಶ್, 'ಭಾರತದಲ್ಲಿ ಹಲವಾರು ಚೆಸ್ ಟೂರ್ನಿಗಳು ಆಯೋಜಿಸುತ್ತಿದ್ದು ಭಾರತಕ್ಕೆ ಮರಳಲು ಸಂತಸವಾಗುತ್ತಿದೆ. ಚೆಸ್ ಮೇಲಿನ ಒಲವು ಹಾಗು ಅಭಿಮಾನಿಗಳ ಸಮ್ಮುಖದಲ್ಲಿ ಆಡಲು ನಾನು ಕಾತುರನಾಗಿದ್ದೇನೆ ಎಂದಿದ್ದಾರೆ.

ಪ್ರಸ್ತುತ ಕ್ಲಾಸಿಕಲ್ ಫಾರ್ಮಾಟ್‌ನ ವಿಶ್ವ ರ‍್ಯಾಂಕಿಂಗ್ 8ರಲ್ಲಿರುವ ಅನೀಶ್ ಗಿರಿ, ಗ್ಲೋಬಲ್ ಚೆಸ್ ಲೀಗ್‌ನ ವೇಗದ ಫಾರ್ಮಾಟ್ ನೀಡುವ ಸವಾಲಿನಲ್ಲಿ ಹಿಂದೆ ಯಶಸ್ವಿಯಾಗಿದ್ದಾರೆ.

ಅನೀಶ್ ಗಿರಿಯ ಜೊತೆಗೆ ಅಲ್ಪೈನ್ SG ಪೈಪರ್ಸ್ ತಂಡದಲ್ಲಿ ವಿಶ್ವ ನಂ. 3 ಬಿಯಾನೋ ಕರುನಾ ಮತ್ತು ಹೊ ಯಿಫಾನ್ ಸೇರಿದಂತೆ ಉನ್ನತ ಅಂತರರಾಷ್ಟ್ರೀಯ ಆಟಗಾರರು ಇದ್ದಾರೆ. ಜೊತೆಗೆ ಭಾರತದ ಪ್ರಮುಖ ಚದುರಂಗ ಪ್ರತಿಭೆಗಳಾದ ಆರ್. ಪ್ರಗ್ನಾನಂದ ಮತ್ತು ಲಿಯೋನ್ ಲೂಕ್ ಮೆಂಡೋಂಸಾ ತಂಡವನ್ನು ಇನ್ನಷ್ಟು ಬಲಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅನೀಶ್, ನಮ್ಮ ತಂಡ ಅತ್ಯಂತ ಶಕ್ತಿಶಾಲಿ ಹಾಗೂ ಸಮತೋಲನ ಹೊಂದಿದ್ದು, ತಂಡದ ಜೊತೆಗೆ ಆಡುವುದು ಮತ್ತಷ್ಟು ಉತ್ಸಾಹವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ