ವಿಷ್ಣು ವರ್ಧನ್ ಸ್ಮಾರಕ ಕೆಡವಿದ್ದು, ಅಭಿನಂದನೆಗಳು ಆಕ್ರೋಶಗೊಂಡು ಹೋರಾಟ ಮಾಡಿದ್ದು ಎಲ್ಲವೂ ನಿಮ್ಮ ಕಣ್ಣಿದುರೇ ಇದೆ. ಅಭಿಮಾನ್ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ನಡೆದಿರೋದ್ರಿಂದ ಸ್ಮಾರಕ ಅಲ್ಲಿಯೇ ಇರಬೇಕು ಎಂಬುದು ಅಭಿಮಾನಿಗಳ ಕೋರಿಕೆ. ಇತ್ತೀಚೆಗೆ ವಿಷ್ಣುವರ್ಧನ್ ಅವರ ಆಪ್ತ ಮಿತ್ರ ರಾಜೇಂದ್ರ ಸಿಂಗ್ ಬಾಬು ಸೋಷಿಯಲ್ ಮೀಡಿಯಾದಲ್ಲಿ  ಇದೆಲ್ಲದರ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ..

ಎಸ್.ಜೆ‌.

ಇತ್ತೀಚಿನ ವಿಷ್ಣುವರ್ಧನ್ ಪುಣ್ಯ ಭೂಮಿ ನೆಲಸಮ ಆಗಿದ್ದು ನಮ್ಮ ಹೃದಯಕ್ಕೆ ಚೂರಿ ಮತ್ತು ಕನ್ನಡದ ವಿಷ್ಣುವರ್ಧನ್ ಅಭಿಮಾನಿಗಳಿಗೆ ಆಕಾಶ ಕಳಿಚಿ ಬಿದ್ದಂದಂತಾಗಿದೆ , ಅಂದು ಸರ್ಕಾರ ಬಾಲಣ್ಣ ಅವರಿಗೆ ಭೂಮಿ ನೀಡಿದ್ದು ಸ್ಟುಡಿಯೋ ಆಗ ಬೇಕೆಂದು, ಅದು ಬಾಲಣ್ಣ ಅವರ ಕನಸು, ಆದರೆ ಈಗ ಕೆಲವು ಅಧಿಕಾರಿಗಳು ಮತ್ತು ರಾಜಕಾರಣಿ ಗಳು ಸೇರಿ, ಲಂಚ ತೆಗೆದುಕೊಂಡು, ಈ ಸ್ಟುಡಿಯೋವನ್ನು  ಲೇ ಔಟ್ ಆಗಿಸಿ, ದುಡ್ಡು ಮಾಡಿದ್ದಾರೆ, ಈ ಸಂಧರ್ಭದಲ್ಲಿ ಸರ್ಕಾರ ಒಂದು ಉನ್ನತ ಮಟ್ಟದ ವಿಚಾರಣೆ ಮಾಡಿ, ಸ್ಟುಡಿಯೋ ಗೆ ಕೊಟ್ಟ ಜಾಗ ಹೇಗೆ ಲೇ ಔಟ್ ಆಯಿತು, ಅದು ಸ್ಟುಡಿಯೋನೇ ಇರಬೇಕು, ಕಾನೂನ್ನಲ್ಲಿ ಸರ್ಕಾರ ಮಾರಾಟ ಮಾಡಿಲ್ಲ ಅದು ಲೀಸ್ ಒಪ್ಪಂದ, ನಾನು ಮುಖ್ಯಮಂತ್ರಿ ಯವರ ಬಳಿ ಭೇಟಿ ಮಾಡಿ ಕ್ರಮ ತೆಗೆದುಕೊಳ್ಳುವoತೆ ಮನವಿ ಮಾಡುತ್ತೇನೆ, ಹಾಗೂ ಕೂಡಲೇ ಸರ್ಕಾರ ಆದೇಶ ಮಾಡಿ ಅ ಭೂಮಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡಿಸಿ ವಿಷ್ಣುವರ್ಧನ್ ಪುಣ್ಯ ಭೂಮಿಗೆ ನ್ಯಾಯ ದೊರಕಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡುತ್ತೀನಿ

ರಾಜೇಂದ್ರ ಸಿಂಗ್ ಬಾಬು*

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ