ದಾಂಪತ್ಯದ ರೋಮಾಂಚನಕ್ಕಾಗಿ ಸಂಗಾತಿಯೊಂದಿಗಿನ ಸಂಬಂಧದಲ್ಲಿ ಹೊಸತನ ತರಲಿಕ್ಕಾಗಿ, ತಾಜಾತನ ಕಾಪಾಡಿಕೊಳ್ಳಲು, ಕಾಮದಾಸೆಯನ್ನು ಹೊಸ ರೀತಿಯಲ್ಲಿ ತೋಡಿಕೊಳ್ಳ ಬೇಕಾದುದು ಏಕೆ ಅತ್ಯವಶ್ಯಕ……?
ಮೊದಲಿನಿಂದಲೂ ಮಾನವ ಸದಾ ಬದಲಾವಣೆಗಾಗಿ ತುಡಿಯುತ್ತಾ ಇರುತ್ತಾನೆ. ಜೀವನದಲ್ಲಿ ಸದಾ ಏಕತಾನತೆ ದಾಂಪತ್ಯದಲ್ಲಿ ಉದಾಸೀನತೆ ಹೆಚ್ಚಿಸುತ್ತದೆ. ಇದಕ್ಕಾಗಿ ಅವನು ಹೊಸ ಹೊಸ ಉಪಾಯ ಹುಡುಕುತ್ತಾನೆ. ದೈನಂದಿನ ಊಟ ತಿಂಡಿ, ಕೆಲಸ ಕಾರ್ಯಗಳ ಏಕತಾನತೆ ನೀರಸತನ ತರುವಂತೆ, ದಾಂಪತ್ಯದ ಸಮಾಗಮ ಬದಲಾವಣೆ ಬೇಡುತ್ತದೆ. ಪ್ರತಿಯೊಬ್ಬರೂ ಈ ಯಾಂತ್ರಿಕ ಕ್ರಿಯೆಯಿಂದ ಹೊರಬರಲು ಯತ್ನಿಸುತ್ತಾರೆ. ಇದಕ್ಕಾಗಿ ಪ್ರತಿಯೊಬ್ಬರೂ ತಮ್ಮದೇ ಆದ ಹೊಸ ಹೊಸ ಉಪಾಯಗಳನ್ನು ಹುಡುಕಿಕೊಳ್ಳುತ್ತಾರೆ.
ಇದೇ ಯಾಂತ್ರಿಕತೆ ಸೆಕ್ಸ್ ಕ್ರಿಯೆಯಲ್ಲೂ ಮುಂದುವರಿದಾಗ, ಜನ ಬಲು ಉದಾಸೀನರಾಗಿ, ಅದರಿಂದ ಹೊರಬರಲು ಯತ್ನಿಸುತ್ತಾರೆ. ಹೆಂಗಸರಂತೂ ಈ ರಗಳೆಯೇ ಬೇಡ ಎಂದು ದಾಂಪತ್ಯ ಸಮಾಗಕ್ಕೆ ಬೈ ಬೈ ಹೇಳಲಿಕ್ಕೂ ಸಿದ್ಧರಾಗುತ್ತಾರೆ. ಈ ಕಾರಣದಿಂದಲೇ ಸಂಗಾತಿಗಳ ಮಧ್ಯೆ ಅಸಹನೆ, ಕಿರಿಕಿರಿ ಹೆಚ್ಚುತ್ತದೆ. ಅವರಿಗೆ ದಾಂಪತ್ಯ ಒಲ್ಲದ ಔತಣವಾಗುತ್ತದೆ. ಈ ಅಂತರ ಹೆಚ್ಚಲು ಬೇರೆ ಏನೇ ಕಾರಣಗಳಿರಲಿ, ಇದಕ್ಕೆ ಮೂಲ ಕಾರಣ ಅದೇ ಯಾಂತ್ರಿಕತೆಯ ನೀರಸ ಭಾವ ಆಗಿರುತ್ತದೆ. ಈ ಅಂತರ ಹೆಚ್ಚುತ್ತಾ ಹೋದರೆ, ಅದು ಗಂಭೀರ ತಿರುವು ಪಡೆದು ವಿಚ್ಛೇದನಕ್ಕೂ ದಾರಿ ಆದೀತು. ಮುಂದಿನ ದಿನಗಳಲ್ಲಿ ವಿಚ್ಛೇದನದ ಸಂಖ್ಯೆ ಅವಿಶ್ವಸನೀಯ ದರದಲ್ಲಿ ಹೆಚ್ಚಲಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದರ ಮುಖ್ಯ ಕಾರಣ ದಾಂಪತ್ಯದಲ್ಲಿನ ಯಾಂತ್ರಿಕತೆ, ನೀರಸತೆ, ಜಡತೆಯ ಭಾವ. ಬೆಡ್ ರೂಮಿನಲ್ಲಿ ಇಂಥ ನೀರಸತೆ ಹೆಚ್ಚಲು ಕಾರಣವೇನು, ಇದರ ನಿವಾರಣೆ ಹೇಗೆ ಎಂಬುದರ ಕುರಿತಾಗಿ ತಜ್ಞರ ಪರಾಮರ್ಶೆಯಿಂದ ಈ ಕುರಿತು ಹೆಚ್ಚಿನ ವಿವರ ತಿಳಿಯೋಣ.
ನೀರಸತೆ ನೀಗಿಸುವುದು ಹೇಗೆ?
ಅಮೆರಿಕಾದ ಪ್ರಸಿದ್ಧ ಲೇಖಕ ಲೂಯಿಸ್ ವರ್ಡ್ಸ್ ವರ್ತ್ ನ ಪ್ರಸಿದ್ಧ `ಎ ಟೆಸ್ಟ್ ಬುಕ್ ಆನ್ ಸೆಕ್ಸಾಲಜಿ’ಯಲ್ಲಿ ತಿಳಿಸಿರುವುದು ಎಂದರೆ, `ಬೆಡ್ ರೂಮಿನ ಯಾಂತ್ರಿಕತೆ, ನೀರಸತೆಗಳಿಂದಾಗಿ ಪಾರಾಗಲು ಸಂಗಾತಿಗಳು ನಿತ್ಯ ಹೊಸ ಹೊಸ ರೂಪಗಳಲ್ಲಿ ದಾಂಪತ್ಯ ಸುಖದ ಕುರಿತು ಚಿಂತಿಸಬೇಕು, ಚಟುವಟಿಕೆಯಿಂದ ಅದರಲ್ಲಿ ಪಾಲ್ಗೊಳ್ಳಬೇಕು. ಹೊಸ ಹೊಸ ಪೋಸ್ ಗಳ ಕುರಿತು ಆಕರ್ಷಿತರಾಗಬೇಕು, ಭಾವಭಂಗಿಗಳು ಬದಲಾಗುತ್ತಿರಬೇಕು. ಸದಾ ಮನೆಯಲ್ಲೇ ಬಂಧಿಗಳಾಗಿರುವ ಬದಲು, ಗಿರಿಧಾಮಗಳಿಗೆ ಹೋಗಿ ಹನಿಮೂನ್ ನೆಪದಲ್ಲಿ ಹೆಚ್ಚಿನ ಏಕಾಂತ ಹೊಂದುವುದು ಒಳ್ಳೆಯ ವಿಷಯ.
“ಹಲವು ವರ್ಷಗಳಾದ ಮೇಲೆ ಇಂಥ ಸ್ಥಳ ಬದಲಾವಣೆ ಸಹ ಏಕತಾನತೆಯ ಮತ್ತೊಂದು ರೂಪ ಎಂದಾಗಿ ಹೋಗುತ್ತದೆ. ಆಗ ಸಂಗಾತಿಗಳು ಅದರಲ್ಲಿಯೂ ಹೊಸ ಹೊಸ ವಿಕಲ್ಪಗಳನ್ನು ಹುಡುಕಬೇಕು. ಇದರಿಂದ ಮನಸ್ಸಿಗೆ ಎಷ್ಟೋ ನೆಮ್ಮದಿ ಸಿಗುತ್ತದೆ. ಇಂಥ ಹೊಸ ಹೊಸ ಐಡಿಯಾಗಳಲ್ಲಿ ಆಧುನಿಕವಾಗಿ ಹೊರಹೊಮ್ಮಿರುವುದೇ `ಸೆಕ್ಸ್ ಫ್ಯಾಂಟಸಿ.’ ಇದಂತೂ ಪಾಶ್ಚಿಮಾತ್ಯ ಯುವ ಜೋಡಿಗಳಲ್ಲಿ ದಿನೇ ದಿನೇ ಹೆಚ್ಚು ಜನಪ್ರಿಯವಾಗುತ್ತಿದೆ. ಇದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವವರ ಸಂಖ್ಯೆ ಇರುವರಷ್ಟೇ ನಕಾರಾತ್ಮಕವಾಗಿ ನೋಡುವವರೂ ಇದ್ದಾರೆ.’
ಇದೇ ವಿಷಯದ ಕುರಿತಾಗಿ ಮುಂಬೈನ ಪ್ರಸಿದ್ಧ ಸೆಕ್ಸ್ ಕೌನ್ಸೆಲರ್ ಡಾ. ರುಸ್ತುಂ ಹೇಳುತ್ತಾರೆ, “ಈ ಕಾನ್ಸೆಪ್ಟ್ ನಿಜಕ್ಕೂ ಚರ್ಚಾಸ್ಪದ ಗಂಭೀರ ವಿಷಯ. ಇದು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುತ್ತದೆ. ನನ್ನ ಬಳಿ ಪರಾಮರ್ಶೆಗಾಗಿ ಬರುವ ಪೇಶೆಂಟ್ಸ್ ಈ ನಿಟ್ಟಿನಲ್ಲಿ ಹೆಚ್ಚುತ್ತಿದ್ದಾರೆ ಎಂದೇ ಹೇಳಬೇಕು. ಇಂದಿನ ಪೀಳಿಗೆಗೆ ಎಲ್ಲ ಇನ್ ಸ್ಟೆಂಟ್ ಆಗಿಹೋಗಬೇಕು. ಅವರಿಗೆ ಫಾಸ್ಟ್ ಫುಡ್ ತರಹ ಎಲ್ಲ ಫಾಸ್ಟ್ ಫಾಸ್ಟೇ ಆಗಬೇಕು, ಪ್ಲೆಶರ್ ಕೂಡ! ಇವರುಗಳಿಗೆ ಸಹನೆ ಇರುವುದಿಲ್ಲ, `ಸೆಕ್ಸ್ ಈಸ್ ಎ ಗೇಮ್ ಆಫ್ ಪೇಶೆನ್ಸ್!”
ಇವರು ಈ ವಿಷಯನ್ನು ಇನ್ನಷ್ಟು ವಿವರಿಸುತ್ತಾ, “ಸೆಕ್ಸ್ ಎಂದರೆ ಕೇವಲ ದೇಹದ ಮಿಡಿತ ಮಾತ್ರ ಎಂದು ತಿಳಿಯಬಾರದು. ಮಾನಸಿಕ ತುಡಿತ ಅಷ್ಟೇ ಮುಖ್ಯ. ಹೀಗಾಗಿ ಸೆಕ್ಸ್ ಪ್ರಕ್ರಿಯೆಗೆ ಮೊದಲು ಮುನ್ನಲಿವು (ಫೋರ್ ಪ್ಲೇ), ಆಲಿಂಗನ, ಚುಂಬನ, ಬಾಹುಬಂಧನ ಇತ್ಯಾದಿಗಳೆಲ್ಲ ಹೆಚ್ಚಿನ ಪ್ರಾಮುಖ್ಯತೆ ವಹಿಸುತ್ತವೆ. ಇಂದಿನ ಯುವ ಪೀಳಿಗೆ ಇದರ ಮಹತ್ವವನ್ನು ನಿರ್ಲಕ್ಷಿಸುತ್ತಿದೆ ಎಂದೇ ಹೇಳಬೇಕು. ಇದು ಅವರ ತಪ್ಪಲ್ಲ. ಇವರ ಮೇಲೆ ಇಂದಿನ ಆಧುನಿಕ ಜೀವನಶೈಲಿಯ ಒತ್ತಡವೇ ಹಾಗಿದೆ, ಹೀಗಾಗಿ ಅವರು ಮಾನಸಿಕವಾಗಿ ಬಲು ಬೇಗ ಸೋಲುತ್ತಾರೆ.
“ಈ ಕಾರಣದಿಂದಾಗಿ ಫೋರ್ ಪ್ಲೇನಲ್ಲಿ ಇವರುಗಳು ಎಷ್ಟು ಇನ್ ವಾಲ್ವ್ ಆಗಬೇಕೋ ಅಷ್ಟು ಪಾಲ್ಗೊಳ್ಳುವುದಿಲ್ಲ ಎಂದೇ ಹೇಳಬೇಕು. ಹೀಗಾಗಿ ಇವರಿಗೆ ಸೆಕ್ಸ್ ಪ್ರಕ್ರಿಯೆಯಲ್ಲಿ ಪರಮಾನಂದ ಯಾ ಆರ್ಗೆಝಮ್ ನ ಪ್ರಾಪ್ತಿ ಆಗುವುದಿಲ್ಲ. ಈ ಕಾರಣದಿಂದಲೇ ಇವರಿಗೆ ಸೆಕ್ಸ್ ಅಂದ್ರೆ ಕ್ರಮೇಣ ಅಲರ್ಜಿ ಶುರವಾಗಿ ಹೋಗುತ್ತದೆ. ನಿಧಾನವಾಗಿ ಇದು ಅತಿ ಹೆಚ್ಚಿನ ನೀರವತೆಗೆ ದಾರಿಯಾಗುತ್ತದೆ. ಈ ಅಂತರ ಹೆಚ್ಚಾತ್ತಾ, ಇತರ ಕಾರಣಗಳೂ ಉತ್ಪ್ರೇಕ್ಷೆಗೊಂಡು ವಿಚ್ಛೇದನಕ್ಕೆ ದಾರಿಯಾಗುತ್ತದೆ.”
ತನುಮನ ಎರಡೂ ಪ್ರಭಾವಿತ
ಇವರ ಪೇಶೆಂಟ್ ಗೌರವ್ ಹಾಗೂ ಅವರ ಪತ್ನಿ ಸ್ನೇಹಾ ಹೇಳುತ್ತಾರೆ, “ಹೌದು, ಅವರು ಹೇಳಿದಂತೆ ನಾವು ಸಹ ನಮ್ಮ ಸೆಕ್ಸ್ ಲೈಫ್ ಕುರಿತಾಗಿ ಬಹಳ ಬೇಸರಗೊಂಡಿದ್ದೆ, ಅದು ನಮ್ಮಲ್ಲಿ ಅಲರ್ಜಿ ಹುಟ್ಟಿಸಿಬಿಟ್ಟಿತ್ತು. ಹೀಗಾಗಿ ಇವರ ಬಳಿ ಬಂದು ಸಲಹೆ ಕೇಳಿದ. “ನಮಗೆ ಮದುವೆ ಆಗಿ ಕೇವಲ 2 ವರ್ಷ ಕಳೆದಿದೆ ಅಷ್ಟೆ. ಆದರೆ ಸೆಕ್ಸ್ ಪ್ರಕ್ರಿಯೆ ಅಂದ್ರೆ ನೋವು ಚಾರ್ಮ್ ಅಂತಾಗಿಬಿಟ್ಟಿದೆ. ಇತರ ಎಲ್ಲಾ ಕೆಲಸಗಳ ತರಹ ಇದು ಒಂದು ಜಡಭರಿತ ಯಾಂತ್ರಿಕ ಕ್ರಿಯೆಯಷ್ಟೇ ಅನಿಸುತ್ತಿದೆ.”
ಗೌರವ್ ಮಾತು ಮುಂದುವರಿಸುತ್ತಾ, “ನಾವು ನಮ್ಮ ಸೆಕ್ಸ್ ಲೈಫ್ ನಲ್ಲಿ ಏನಾದರೂ ರೋಮಾಂಚನ ತರಬೇಕೆಂದು ಏನೇನೋ ಪ್ರಯತ್ನ ನಡೆಸಿದೆ. ವಿಡಿಯೋ ನೋಡಿ ವಾರ್ಮ್ ಅಪ್ ಆಗಿದ್ದೂ ಆಯ್ತು. ಹಲವು ಔಷಧಿಗಳ ಮೊರೆ ಹೋಗಿದ್ದಾಯ್ತು. ವೀಕೆಂಡ್ಸ್ ನಲ್ಲಿ ದೂರದ ರೆಸಾರ್ಟ್ ಗೆ ಹೋಗಿ ಏಕಾಂತ ಹುಡುಕಿದೆ. ಮೊದಲ ಕೆಲವು ದಿನಗಳೇನೋ ಹೊಸ ಹೊಸತು ಎನಿಸಿ ಖುಷಿಯಾಗಿತ್ತು, ಕ್ರಮೇಣ ಅದೂ ಮಾಮೂಲಾಗೆ ಹೋಯಿತು. ಈ ಬದಲಾವಣೆಯಿಂದ ಆನಂದ ಸಿಕ್ಕಿದ್ದು ನಿಜ, ಆದರೆ ಕೆಲವು ದಿನಗಳ ನಂತರ ಅದೇ ಬೋರಿಂಗ್ ಶುರುವಾಯಿತು. ಅಂತಿಮವಾಗಿ ನಾವೀಗ ಇವರ ಬಳಿ ಸಲಹೆಗಾಗಿ ಬಂದಿದ್ದೇವೆ.”
ಆಗ ಸ್ನೇಹಾ ಹೇಳಿದರು, “ಈ ಡಾಕ್ಟರ್ ನಮಗೆ ಅನೇಕ ಸಲಹೆಗಳನ್ನು ನೀಡಿದ್ದಾರೆ. ಅದರಿಂದ ಅನೇಕ ಲಾಭಗಳಾಗಿವೆ!”
ಅವು ಎಂಥ ಟಿಪ್ಸ್? `ಸೆಕ್ಸ್ ಫ್ಯಾಂಟಸಿ!’ ಎಂದು ಹೇಳಿ ಸ್ನೇಹಾ ಸುಮ್ಮನಾದರು.
`ಫ್ಯಾಂಟಸಿ’ ಅಂದ್ರೇನೆ ಕಲ್ಪನಾಲೋಕ. ಬೆಡ್ ರೂಂ ಸೇರಿದ ತಕ್ಷಣ ನಾವಿಬ್ಬರೂ ಕಲ್ಪನಾಲೋಕ ಪ್ರವೇಶಿಸಬೇಕು ಎಂದು ಡಾಕ್ಟರ್ ಹೇಳುತ್ತಾರೆ. ಬೆಡ್ ರೂಂಗೆ ಹೋದ ತಕ್ಷಣ ನಾನು ಪತ್ನಿಯನ್ನು ನನ್ನ ಮೆಚ್ಚಿನ ಹೀರೋಯಿನ್ ಕತ್ರೀನಾ ಕೈಫ್ ಅಂತ್ಲೇ ಭಾವಿಸುತ್ತೇನೆ. ಇವಳು ನನ್ನನ್ನು ಜಾನ್ ಅಬ್ರಹಾಂ ಎಂದೇ ಭಾವಿಸುತ್ತಾಳೆ,” ಗೌರವ್ ಹೇಳಿದಾಗ ಇಬ್ಬರೂ ಜೋರಾಗಿ ನಗತೊಡಗಿದರು.
ಇದೊಂದು ಗಂಭೀರ ವಿಷಯ, ಇದಕ್ಕೆ ಒಂದು ಮನೋವೈಜ್ಞಾನಿಕ ದೃಷ್ಟಿಕೋನ ಇದೆ. ಇದರ ಮನೋವೈಜ್ಞಾನಿಕ ವಿಶ್ಲೇಷಣೆಗಾಗಿ ಪುಣೆ ವಿಶ್ವವಿದ್ಯಾಲಯದ ನಿವೃತ್ತ ಸೈಕಾಲಜಿ ಪ್ರೊಫೆಸರ್ ಕ್ಪೀಶ್ ದೇಸಾಯಿ ಹೇಳುತ್ತಾರೆ, “ಹೌದು, ಇದರ ಒಂದು ಮನೋವೈಜ್ಞಾನಿಕ ಮುಖ ಇದೆ, ಅದು ಬಹಳ ಮಹತ್ವಪೂರ್ಣ ಸಹ. ಮಾನವರ ಮೆದುಳಿನಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ಎಂಬ 2 ಗ್ರಂಥಿಗಳು ಇರುತ್ತವೆ. ಈ ಎರಡು ಗ್ರಂಥಿಗಳೂ 24 ಗಂಟೆ ಸತತ ಕ್ರಿಯಾಶೀಲವಾಗಿ ಇರುತ್ತವೆ. ನಾವು ನಿದ್ದೆ ಮಾಡುತ್ತಿದ್ದರೂ ಸಹ, ಪರೋಕ್ಷ ಗ್ರಂಥಿ ಸಕ್ರಿಯವಾಗಿ ತನ್ನ ಕೆಲಸ ಮಾಡುತ್ತಿರುತ್ತದೆ. ಮನಸ್ಸಿನ ಅಪೂರ್ಣ ಯಾ ಅರ್ಧಂಬರ್ಧ ಆಸೆಗಳನ್ನು ಹಗಲುಗನಸಾಗಿಯೂ ತೋರಿಸುತ್ತದೆ. ಈ ಕಣ್ಣಾಮುಚ್ಚಾಲೆ ಆಟದ ಒಂದು ರೂಪವೇ ಸೆಕ್ಸ್ ಫ್ಯಾಂಟಸಿ!”
ಇವರು ತಮ್ಮ ಮಾತು ವಿವರಿಸುತ್ತಾ, “ಈ ಪ್ರಕ್ರಿಯೆಯಲ್ಲಿ ಭಾಗಿಗಳಾಗುವ ಸಂಗಾತಿಗಳು, ತಮ್ಮ ಕಲ್ಪನೆಗೆ ತಕ್ಕಂತೆ ಯಾರಾದರೂ ಸಂಗಾತಿಯನ್ನು ಊಹಿಸಿಕೊಳ್ಳುತ್ತಾರೆ. ಅದು ಅವರ ಕಾಲೇಜಿನ ಮೊದಲ ಕ್ರಶ್ ಆಗಿರಬಹುದು, ಲವ್ ಅಟ್ ಫಸ್ಟ್ ಸೈಟ್ ಇರಬಹುದು, ಮಾಜಿ ಬಾಯ್ ಫ್ರೆಂಡ್/ ಗರ್ಲ್ ಫ್ರೆಂಡ್ ಯಾರಾದರೂ ಆಗಿರಬಹುದು…. ಒಟ್ಟಾರೆ ಅವರ ಮನ ಮೆಚ್ಚಿದವರಾಗಿರಬೇಕು. ಹೀಗೆ ವಾಸ್ತವದೊಂದಿಗೆ ಕಲ್ಪನೆ ಬೆರೆತಾಗ ಮನಸ್ಸಿಗೆ ಹೊಸ ಥ್ರಿಲ್ ಮೂಡುತ್ತದೆ. ಆದರೆ ಸೈಕಾಜಿಕಲಿ ಇದು ತಪ್ಪು (ಮಾನಸಿಕ ವ್ಯಭಿಚಾರ ಎಂಬ ಗಂಭೀರ ಆರೋಪ ಉಂಟು!) ಯಾವ ವ್ಯಕ್ತಿಯನ್ನು ನೀವು ಬೇರೊಂದು ವ್ಯಕ್ತಿಯ ಕಲ್ಪನೆಯಲ್ಲಿ ಮೂಡಿಸಿಕೊಳ್ಳುತ್ತಿದೀರೋ, ಅಂಥ ವ್ಯಕ್ತಿತ್ವವನ್ನು, ಅವರ ಪರ್ಸನಾಲಿಟಿಯನ್ನು ನೀವು ಕೊಲ್ಲುತ್ತಿದ್ದೀರಿ ಎಂದೇ ಅರ್ಥ. ಇದರಿಂದ ಅವರ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಂತಾಗುತ್ತದೆ. ತಿಳಿದೋ ತಿಳಿಯದೋ ಅವರನ್ನು ಅಪಮಾನ ಮಾಡುತ್ತಿದ್ದೀರಿ. ಸೈಕಾಜಿಸ್ಟ್ ಇದನ್ನು ಮೆಡಿಕಲ್ ಟ್ರೀಟ್ ಮೆಂಟ್ ಎನ್ನಬಹುದು, ಆದರೆ ಅವರು ತಾವಾಗಿ ಇದಕ್ಕೆ ಸಲಹೆ ನೀಡಲು ಹೋಗುವುದಿಲ್ಲ.”
ಇವರ ಈ ವಿವರಣೆ ಎಂಥವರನ್ನೂ ಗೊಂದಲಕ್ಕೆ ಕೆಡವುತ್ತದೆ. ಇದಕ್ಕೆ ಸಮಾಧಾನ ಹುಡುಕುವುದಕ್ಕಾಗಿ ಮುಂಬೈ ಮಾಡ್ ನಲ್ಲಿನ ಗೈನಕಾಲಜಿಸ್ಟ್ ಡಾ. ಅಂಜಲಿಯವರನ್ನು ಸಂಪರ್ಕಿಸಿದ್ದಾಯಿತು. ಆಕೆಯ ಪ್ರಕಾರ, ಸೆಕ್ಸ್ ಪ್ರಕ್ರಿಯೆಯಲ್ಲಿ ದೈಹಿಕ ಸಮಾಗಮ ಮಾತ್ರವಲ್ಲದೆ ಮಾನಸಿಕ ಮಿಲನ ಅತಿ ಮುಖ್ಯ. ಈ ಪ್ರಕ್ರಿಯೆಗಾಗಿ 200 ಕ್ಯಾಲೋರಿ ಬರ್ನ್ ಆಗುತ್ತದೆ. ಸರಳ ಮಾತುಗಳಲ್ಲಿ ತಿಳಿಸುವುದೆಂದರೆ, ಮೆದುಳು ಹಾಗೂ ಪ್ರಜನನ ಅಂಗಗಳ ನಡುವೆ ಒಂದು ಮಧುರ ಮೈತ್ರಿ ಏರ್ಪಡುತ್ತದೆ. ಮೆದುಳಿನ ಬಳಿಯ ಕೆಲವು ಹಾರ್ಮೋನ್ಸ್ ಸಕ್ರಿಯಗೊಳ್ಳುತ್ತವೆ. ಮುಖ್ಯವಾಗಿ ಈಸ್ಟ್ರೋಜನ್, ಪ್ರೊಜೆಸ್ಟರಾನ್, ಟೆಸ್ಟೊಸ್ಟೆರಾನ್ ಹೆಚ್ಚು ಕ್ರಿಯಾಶೀಲವಾಗುತ್ತವೆ. ನಾವು ಸ್ವಸ್ಥ ಫ್ಲೋರ್ ಪ್ಲೇನಲ್ಲಿ ಪಾಲ್ಗೊಂಡಾಗ ಮಾತ್ರ ಇವು ಸ್ರವಿಸಲ್ಪಡುತ್ತವೆ. ಅಂದ್ರೆ ಮೆಡಿಕಲ್ ದೃಷ್ಟಿಕೋನದಿಂದಲೂ ಸೆಕ್ಸ್ ಪ್ರಕ್ರಿಯೆಗಾಗಿ ಫೋರ್ ಪ್ಲೇ ಬಹಳ ಅತ್ಯಗತ್ಯ. ಹೀಗಾಗಿ ಫೋರ್ ಪ್ಲೆಗಾಗಿ, `ಸೆಕ್ಸ್ ಫ್ಯಾಂಟಸಿ’ಯ ಸಹಾಯ ಪಡೆದರೆ ಅದರಲ್ಲಿ ಏನೇನೂ ತಪ್ಪಿಲ್ಲ.
ಮುಕ್ತ ಮನದ ಮಾತುಕಥೆ
“ನಮ್ಮಲ್ಲಿ 90% ಹೆಂಗಸರು ಸೆಕ್ಸ್ ಕುರಿತಾಗಿ ವಿಚಾರ ತಿಳಿಯಲು ಉತ್ಸುಕರೇನೋ ಆಗಿರುತ್ತಾರೆ. ಆದರೆ ಆ ಕುರಿತಾಗಿ ತೆರೆದ ಮನದಿಂದ ಮಾತನಾಡಲು ಬಹಳ ಹಿಂಜರಿಯುತ್ತಾರೆ. ಆದರೆ ಇದೇ ಹೆಂಗಸರು ಸೆಕ್ಸ್ ಕುರಿತಾಗಿ ಗೂಗಲ್ ನಲ್ಲಿ ಬಹಳಷ್ಟು ಸರ್ಚ್ ಮಾಡುತ್ತಾರೆ. ಬಗೆಬಗೆಯ ಪ್ರಶ್ನೆಗಳಿಗೆ ಜವಾಬು ಹುಡುಕುತ್ತಾರೆ. ಒಂದು ಸಮೀಕ್ಷೆ ಪ್ರಕಾರ, 80% ಹುಡುಗಿಯರು ಸೆಕ್ಸ್ ಆರ್ಗೆಝಂ ಕುರಿತಾಗಿ ಸರ್ಚ್ ನಡೆಸಿದರೆ, 55% ಗಂಡಸರು ಮಾತ್ರವೇ ಈ ಕುರಿತಾಗಿ ಸರ್ಚ್ ಮಾಡುತ್ತಾರೆ.
“ಸೆಕ್ಸ್ ಫ್ಯಾಂಟಸಿ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕೆಂಬ ಉತ್ಸಾಹ ಗಂಡಸರಲ್ಲಿಯೂ ಬಹಳ ಇರುತ್ತದೆ. ಆದರೆ ಹೆಂಗಸರು ಇದರ ಬಗ್ಗೆ ಹೆಚ್ಚಿನ ಉತ್ಸಾಹ ತೋರಿಸುವುದೇ ಇಲ್ಲ. ಆದರೆ ಅವರು ಈ ಕುರಿತು ತೆರೆದ ಮನದಿಂದ ಚರ್ಚಿಸುವುದೇ ಸರಿ. ವೈದ್ಯರಿಂದ ಈ ಕುರಿತು ಸಲಹೆ ಪಡೆಯಬೇಕು. ತಪ್ಪಾದ ತಪಾಸಣೆ, ಚಿಕಿತ್ಸೆ, ಔಷಧಿಗಳಿಂದ ಅನಾಹುತ ತಪ್ಪಿದ್ದಲ್ಲ,” ಎಂದು ಡಾ. ಅಂಜಲಿ ವಿವರಿಸುತ್ತಾರೆ.
ಸೆಕ್ಸ್ ಫ್ಯಾಂಟಸಿಯ ಭಾವನಾತ್ಮಕ ಸ್ಥಿತಿಯ ಕುರಿತು ಹೇಳುವುದಾದರೆ, ಆಸೆ ಆಕಾಂಕ್ಷೆಗಳ ನಮ್ಮ ಪಟ್ಟಿ ಎಂದೂ ನಿಲ್ಲುವುದಿಲ್ಲ ಎಂಬುದಂತೂ ಸತ್ಯ. ಈ ಬಿಸಿಲ್ಗುದುರೆಯ ಬೆನ್ನು ಹತ್ತಿ ಮಾನವ ಓಡುತ್ತಲೇ ಇರುತ್ತಾನೆ. ಕೊನೆಯವರೆಗೂ ಈ ಮರೀಚಿಕೆ ಅವನ ಕೈಗೆಟುಕುವುದೇ ಇಲ್ಲ. ಹೀಗಾಗಿ ಈ ಮರೀಚಿಕೆಯ ಹಿಂದೆ ಓಡುವ ಬದಲು, ನಾವು ಇದಕ್ಕೇನಾದರೂ ಉಪಾಯ ಹುಡುಕುವುದೇ ಸರಿ. ನಾವು ಇದಕ್ಕೆ ಅತಿ ಸಹಜವಾದ, ಪಾರಂಪರಿಕ ದಾರಿ ಹುಡುಕಿದಾಗ ಫೋರ್ ಪ್ಲೇ ಒಂದೇ ಸರಿ ಸರಿಯಾದ ಮದ್ದು ಎಂದು ತಿಳಿಯುತ್ತದೆ. ಹಾಗಾದರೆ `ಸೆಕ್ಸ್ ಫ್ಯಾಂಟಸಿ’ ಇದಕ್ಕೆ ಪರಿಹಾರವಾಗದೇ? ಅದರಿಂದ ಸಮಸ್ಯೆ ಸರಿಹೋಗುವುದಾದರೆ ಅದರ ಸಹಾಯ ಪಡೆಯುವುದರಲ್ಲಿ ತಪ್ಪಿಲ್ಲ.
ಆದರೆ ನಮ್ಮ ಸತತ ಪ್ರಯತ್ನಗಳಲ್ಲಿ ಇದು ಕಡೆಯದಾಗಿರಬೇಕು ಎಂಬುದನ್ನು ಮರೆಯಬಾರದು. ಇಲ್ಲಿ ಕೊನೆಯ ಪೂರ್ಣವಿರಾಮ ಬೇಕೇಬೇಕು, ಏಕೆಂದರೆ `ಕಾಮಾತುರಣಾಂ ನ ಭಯಂ…. ನ ಲಜ್ಜಾ’ ಎಂಬಂತೆ, ಕಾಮತೃಷೆಗಾಗಿ ಬಹು ಸಂಗಾತಿಗಳ ಬೇಟೆ, ಇದು ಸಾಲದು, ಇನ್ನೂ ಸಾಲದು ಎಂಬ ಹಪಾಹಪಿ, ಮಾನವನನ್ನು ಪಾತಾಳದ ಅಧಃಪತನಕ್ಕೆ ತಳ್ಳಿಬಿಟ್ಟೀತು! ಆಸೆಗೊಂದು ಮಿತಿ ಇರಲಿ, ಬಾಳಿಗೊಂದು ನೆಲೆ ಇರಲಿ, ಜೀವನದುದ್ದಕ್ಕೂ ಸಂಗಾತಿ ಒಬ್ಬರೇ ಆಗಿರಲಿ!
– ರಾಧಿಕಾ ರಾಜೇಶ್





