ಮೇಲಿಂದ ಮೇಲೆ ನಿಮ್ಮನ್ನು ಭಾವನಾತ್ಮಕವಾಗಿ ಘಾಸಿಗೊಳಿಸಲಾಗುತ್ತಿದ್ದರೆ, ಅದನ್ನು ಹಗುರವಾಗಿ ಭಾವಿಸಬೇಡಿ. ಸ್ವಲ್ಪ ಗಂಭೀರವಾಗಿ ಈ ಕೆಳಕಂಡ ವಿಧಾನಗಳನ್ನು ಅನುಸರಿಸಿ......!
``ಬೇರೆಯವರ ಮುಂದೆ ಏನು ಮಾತನಾಡಬೇಕು, ಏನು ಮಾತನಾಡಬಾರದು ಎಂದು ನಿನಗೆ ಸ್ವಲ್ಪವೂ ಗೊತ್ತಾಗೋದಿಲ್ಲ. ಯೂ ಆರ್ ಸಿಂಪ್ಲಿ ಸ್ಟುಪಿಡ್ ರೋಹಿತ್!'' ಎಂದು ಸ್ನೇಹಾ ತನ್ನ ಗೆಳತಿಯ ಎದುರೇ ಹೇಳಿದಾಗ, ರೋಹಿತ್ ಗೆ ಒಂದು ರೀತಿಯಲ್ಲಿ ಆಘಾತವೇ ಆಯಿತು. ಇದೇನು ಇವತ್ತಿನ ಮಾತಾಗಿರಲಿಲ್ಲ. ಸ್ನೇಹಾ ಆಗಾಗ ಎಲ್ಲರೆದುರು ತನ್ನ ಗಂಡನನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಳು.
ಗಂಡ ಏನೂ ತಪ್ಪು ಮಾಡಿರದಿದ್ದರೂ ತಪ್ಪುಮಾಡಿದ್ದಾನೆಂಬಂತೆ ಎಲ್ಲರೆದುರು ಅವನ ಜನ್ಮ ಜಾಲಾಡುತ್ತಿದ್ದಳು. ಅವನು ಏನಾದರೂ ಹೇಳಲು ಬಾಯಿ ತೆರೆದರೆ, ನನಗೆಲ್ಲ ಗೊತ್ತು, ನೀನೇನೂ ಹೇಳುವುದು ಬೇಕಿಲ್ಲ ಎಂದು ಅವನ ಬಾಯಿ ಮುಚ್ಚಿಸಿಬಿಡುತ್ತಿದ್ದಳು. ಮಕ್ಕಳಿಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಆಕೆ ಗಂಡನ ಸಲಹೆ ಕೂಡ ಕೇಳುವುದಿಲ್ಲ.
ರೋಹಿತ್ ಅವಳಿಗೆ ನೌಕರಿ ಬಿಟ್ಟು ಮಕ್ಕಳ ಜೊತೆ ಮನೆಯಲ್ಲಿಯೇ ಇರು ಎಂದು ಹೇಳಿದ್ದ. ಆದರೆ ಆಕೆ ಅವನ ಮಾತಿಗೆ ಒಪ್ಪಲಿಲ್ಲ. ತನ್ನ ಸಂಬಳದ ಹಣವನ್ನಷ್ಟೇ ಅಲ್ಲ, ಗಂಡನ ಸಂಬಳದ ಹಣವನ್ನೂ ತನ್ನ ಮನಬಂದಂತೆ ಖರ್ಚು ಮಾಡಿಬಿಡುತ್ತಿದ್ದಳು. ಅವನಿಗೆ ಹೋಗಿ ಬರಲು ಬಸ್ ಚಾರ್ಜ್ ಗಷ್ಟೇ ಹಣ ಕೊಡುತ್ತಿದ್ದಳು.
ರೋಹಿತ್ ಅಷ್ಟು ದುರ್ಬಲ ಸ್ವಭಾವದವನೇನಲ್ಲ. ಆದರೂ ಸ್ನೇಹಾಳ ಅಮಾನವೀಯ ವರ್ತನೆ, ಬೈಗುಳ, ಅಗೌರಯುತ ಶಬ್ದಗಳನ್ನು ಅವನು ಸಹಿಸಿಕೊಳ್ಳಬೇಕಾಗತ್ತಿತ್ತು. ಇನ್ನೊಂದು ಸತ್ಯ ಸಂಗತಿಯೆಂದರೆ, ಅವಳು ಅವನನ್ನು ಮನಸಾರೆ ಒಪ್ಪಿಕೊಂಡಿರಲಿಲ್ಲ.
ಭಾವನತ್ಮಾಕವಾಗಿ ನೋಯಿಸುವುದು
ರೋಹಿತ್ ಭಾವನಾತ್ಮಕವಾಗಿ ದೌರ್ಜನ್ಯಕ್ಕೆ ಒಳಗಾಗಿದ್ದಾನೆ. ಯಾವುದೇ ಒಬ್ಬ ವ್ಯಕ್ತಿ ಭಾವನಾತ್ಮಕವಾಗಿ ನೊಂದಿದ್ದರೆ, ಅದನ್ನು ಕಂಡುಹಿಡಿಯುವುದು ಕಷ್ಟ. ಇಂತಹ ಯಾತನೆಗಳಿಗೆ ಕಾನೂನಿನ ನೆರವು ಪಡೆಯಲು ಆಗದು. ನಿಮ್ಮ ಹೆಂಡತಿ ನಿಮ್ಮ ಹಣದ ಮೇಲೆ ಸಂಪೂರ್ಣ ಹಕ್ಕು ಹೊಂದಿದ್ದಾಳೆ, ಸಣ್ಣಪುಟ್ಟ ಖರ್ಚುಗಳಿಗೂ ಅವಳು ಹಣ ಕೊಡುವುದಿಲ್ಲವೆಂದು ದೂರು ಕೊಡುವುದು ಕಷ್ಟವಾಗುತ್ತದೆ. ಅವಳು ನಿಮ್ಮ ಕುಟುಂಬದವರು, ಸಂಬಂಧಿಕರು, ಸ್ನೇಹಿತರನ್ನು ನಿಮ್ಮಿಂದ ದೂರ ಮಾಡಿದ್ದಾಳೆ. ತನ್ನ ಮಾತನ್ನು ನಿಮ್ಮ ಮೇಲೆ ಹೇರಲು ಪ್ರಯತ್ನಿಸುತ್ತಾಳೆ.
ಪ್ರೀತಿ ವ್ಯಕ್ತಪಡಿಸದಿರುವುದು
ಪ್ರೀತಿ ವ್ಯಕ್ತಪಡಿಸದಿರುವುದು, ಸಂಗಾತಿಯ ಯಾವುದೇ ಮಾತಿಗೆ ಒಪ್ಪಿಗೆ ಕೊಡದಿರುವುದು ಕೂಡ ಮಾನಸಿಕ ದೌರ್ಜನ್ಯವೇ ಆಗಿದೆ. ಇದು ಮಾನಸಿಕ ಯಾತನೆಗಿಂತ ಘೋರವಾಗಿರುತ್ತದೆ. ಅದನ್ನು ಸಹಿಸಿಕೊಳ್ಳುವುದಷ್ಟೇ ಅದನ್ನು ಬಲ್ಲ. ಶೇ.32ರಷ್ಟು ಪುರುಷರು ಈ ತೆರನಾದ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಅವರನ್ನು ಅವರ ಹೆಂಡತಿಯರು ಕೆಟ್ಟದಾಗಿ ನಿಂದಿಸುತ್ತಾರೆ, ಅವಮಾನಿಸುತ್ತಾರೆ, ನಿರ್ಲಕ್ಷಿಸುತ್ತಾರೆ. ಅಷ್ಟೇ ಅಲ್ಲ, ಅವರು ಮೌನವನ್ನು ತಮ್ಮ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಾರೆ. ಸಂಬಂಧವನ್ನು ಉಳಿಸಿಕೊಂಡು ಹೋಗಲು ಯಾವುದೇ ತೆರನಾದ ಪಾಲ್ಗೊಳ್ಳುವಿಕೆಯನ್ನು ನಿರಾಕರಿಸಿಬಿಡುತ್ತಾರೆ. ಅದು ಮನೆ ನಿರ್ವಹಣೆ, ಹಣದ ವ್ಯವಹಾರ ಇಲ್ಲವೇ ಲೈಂಗಿಕ ಸಂಬಂಧವೇ ಆಗಿರಬಹುದು.
ಮಕ್ಕಳನ್ನು ಕೂಡ ಮಾನಸಿಕ ದೌರ್ಜನ್ಯದ ಅಸ್ತ್ರವಾಗಿ ಬಳಸಲಾಗುತ್ತದೆ. ಸಾಮಾನ್ಯವಾಗಿ ಹೆಂಡತಿಯರು, ನಾನು ಮಕ್ಕಳನ್ನು ಕರೆದುಕೊಂಡು ಹೊರಟುಹೋಗುವುದಾಗಿ ಬೆದರಿಕೆ ಹಾಕುತ್ತಿರುತ್ತಾರೆ.
ತಮಾಷೆ ಮಾಡುವುದು





